ಮಗಳ ಮದುವೆಯಂದು ಭಾವುಕರಾದ ನಟ ರಮೇಶ್ ಅವರು ಮಾಡಿರುವ ಕೆಲಸ ನೋಡಿ..

0 views

ಇಂದು ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಸ್ಟಾರ್ ಕುಟುಂಬದ ಮದುವೆ ಸಮಾರಂಭ ನೆರವೇರಿದ್ದು ದಕ್ಷಿಣ ಭಾರತದ ಖ್ಯಾತ ನಟ ನಿರ್ದೇಶಕ ರಮೇಶ್ ಅರವಿಂದ್ ಅವರ ಮಗಳು ನಿಹಾರಿಕಾ ರಮೇಶ್ ಅವರ ಮದುವೆ ಸಮಾರಂಭ ಇಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಸರಳವಾಗಿ ನೆರವೇರಿದೆ.. ಹೌದು ರಮೇಶ್ ಹಾಗೂ ಅರ್ಚನಾ ದಂಪತಿ ಪುತ್ರಿ ನಿಹಾರಿಕಾ ಅವರು ತಮ್ಮ ಸಹೋದ್ಯೋಗಿ ಸ್ನೇಹಿತ ಅಕ್ಷಯ್ ಅವರೊಟ್ಟಿಗೆ ಇಂದು ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.. ನಿಹಾರಿಕಾ ಹಾಗೂ ಅಕ್ಷಯ್ ಒಂದೇ ಸಂಸ್ಥೆಯಲ್ಲಿ‌ ಕೆಲಸ ಮಾಡುತ್ತಿದ್ದು ಮನೆಯವರೊಂದಿಗೆ ಮಾತನಾಡಿ ಮದುವೆಯಾಗುವ ನಿರ್ಧಾರ ಮಾಡಿದ್ದು ಇಂದು ಸಂಪ್ರದಾಯ ಬದ್ಧವಾಗಿ ವಿವಾಹ ಮಹೋತ್ಸವ ನೆರವೇರಿಸಿದ್ದಾರೆ..

ಕುಟುಂಬಸ್ಥರು.. ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನೂ ಸೇರಿದಂತೆ ಸಿನಿಮಾ ಇಂಡಸ್ಟ್ರಿಯ ಕೆಲವೇ ಕೆಲ ಆಪ್ತರು ಮಾತ್ರ ಭಾಗಿಯಾಗಿದ್ದು ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.. ರಮೇಶ್ ಅವರು ಸಂಪೂರ್ಣ ದಕ್ಷಿಣ ಭಾರತದಲ್ಲಿ ಹೆಸರು ಮಾಡಿರುವ ನಟನಾಗಿರುವುದರಿಂದ ಚಿತ್ರರಂಗದಲ್ಲಿ ದೊಡ್ಡ ಸ್ನೇಹಿತರ ಬಳಗವೇ ಇದೆ.. ಇನ್ನು ರಮೇಶ್ ಅವರ ಮನೆಯಲ್ಲಿ‌ ಇದೇ ಮೊದಲ ಮದುವೆಯಾದ್ದರಿಂದ ಎಲ್ಲರಿಗೂ ಆಮಂತ್ರಣ ನೀಡಲೇಬೇಕಿತ್ತು.. ಆದರೆ ಕೊರೊನಾ ನಿಯಮಾನುಸಾರ ಮದುವೆಗೆ ಇಂತಿಷ್ಟೇ ಜನರನ್ನು ಆಹ್ವಾನಿಸುವ ನಿಯಮ ಇರುವುದರಿಂದ ಕೆಲವೇ ಕೆಲ ಆಪ್ತರ ಸಮ್ಮುಖದಲ್ಲಿ ಮದುವೆ ನೆರವೇರಿದೆ..

ಆದರೆ 2021 ರ ಜನವರಿ ಹದಿನಾರರಂದು ಚಿತ್ರರಂಗದ ಸ್ನೇಹಿತರಿಗಾಗಿ ಅರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ..ಇನ್ನು ಕಳೆದ ಎರಡು ದಿನಗಳಿಂದ ರೆಸಾರ್ಟ್ ನಲ್ಲಿ ಮದುವೆಯ ವಿವಿಧ ಸಮಾರಂಭಗಳು ನೆರವೇರಿದ್ದು ನಿನ್ನೆ ಸಂಗೀತ್ ಕಾರ್ಯಕ್ರಮವನ್ನು‌ ನೆರವೇರಿಸಿ ಕುಟುಂಬದ ಸದಸ್ಯರು ಹಾಗೂ ಮಗಳ ಜೊತೆ ರಮೇಶ್ ಅರವಿಂದ್ ಅವರು ಡ್ಯಾನ್ಸ್ ಮಾಡಿ ಸಂತೋಷ ಪಟ್ಟಿದ್ದಾರೆ.. ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು “ಹೆಣ್ಣು ಮಕ್ಕಳ‌ ಮದುವೆ ಮಾಡುವಲ್ಲಿ ಅಪ್ಪ ಅಮ್ಮ ಪಡುವ ಖುಷಿಗೆ ಪಾರವೆಲ್ಲಿ.. ಈಕೆ ನಿಹಾರಿಕೆ..

ರಮೇಶ್ ಅರ್ಚನಾರ ಮುದ್ದಿನ ಮಗಳು.. ಇಂದು ಅಕ್ಷಯ್ ನನ್ನು ವರಿಸಿದಳು.. ಮದುಮಕ್ಕಳ ಬಾಳಿ ಬೆಳಗಲಿ” ಎಂದು ಬರೆದು ಶುಭ ಹಾರೈಸಿದ್ದಾರೆ.‌ ಇನ್ನು ಇಂದು ರಮೇಶ್ ಅವರು ತಮ್ಮ ಮಗಳು ನಿಹಾರಿಕಾರನ್ನು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಕ್ಷಯ್ ಅವರಿಗೆ ಧಾರೆ ಎರೆದು ಕೊಟ್ಟು ಎಲ್ಲಾ ಸಂಪ್ರದಾಯ ನೆರವೇರಿಸಿ ಭಾವುಕರಾಗಿದ್ದಾರೆ.. ಹೌದು ಸಾಮಾನ್ಯನಾಗಲಿ ಸ್ಟಾರ್ ಆಗಲಿ ಅಪ್ಪನಿಗೆ ಮಗಳೆಂದರೆ ಒಂದು ಕೈ ಹೆಚ್ಚು ಪ್ರೀತಿ ಎನ್ನಬಹುದು.. ಇದಕ್ಕೆ ರಮೇಶ್ ಅರವಿಂದ್ ಅವರು ಹೊರತಾಗಿಲ್ಲ.. ಮಗಳ ಮದುವೆಯ ದಿನದಂದು ಭಾವುಕರಾದ ರಮೇಶ್ ಅರವಿಂದ್ ಅವರು ಸಂಜೆ ಸಾಮಾಜಿಕ ಜಾಲತಾಣದಲ್ಲಿ ಮಗಳು ಅಳಿಯನ ಫೋಟೋ ಹಂಚಿಕೊಂಡು ಮಗಳ

ಮಗಳ ಹೊಸ ಜೀವನಕ್ಕೆ ಎಲ್ಲರ ಆಶೀರ್ವಾದ ಮುಖ್ಯ ಅವಳ ಜೀವನ ಚೆನ್ನಾಗಿರಲಿ ಎಂಬ ಕಾರಣಕ್ಕೆ ಇಂದು ನನ್ನ ಮಗಳು‌ ನಿಹಾರಿಕಾ ಹಾಗೂ ಅಕ್ಷಯ್ ರ ವಿವಾಹ ನೆರವೇರಿದೆ.. ಎಲ್ಲರೂ ನನ್ನ ಮಗಳು ಅಳಿಯನಿಗೆ ಹಾರೈಸಿ ಎಂದು ಮನವಿ ಮಾಡಿಕೊಂಡಿದ್ದಾರೆ.. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಕ್ಷಯ್ ಹಾಗೂ ನಿಹಾರಿಕಾರ ಮದುವೆ ಫೋಟೋಗಳು ವೈರಕ್ ಆಗಿದ್ದು ಅಭಿಮಾನಿಗಳು ಹಾಗೂ ಸ್ನೇಹಿತರು ನೂತನ ಜೋಡಿಗೆ ಶುಭ ಹಾರೈಸಿದ್ದಾರೆ..