ಅದ್ಧೂರಿಯಾಗಿ ನೆರವೇರಿತು ರಮೇಶ್ ಅರವಿಂದ್ ಮಗಳ ಅರತಕ್ಷತೆ.. ಯಶ್ ರಾಧಿಕಾ ಸಖತ್ ಡ್ಯಾನ್ಸ್.. ಫೋಟೋ ಗ್ಯಾಲರಿ ನೋಡಿ‌‌..

0 views

ಸ್ಯಾಂಡಲ್ವುಡ್ ಹಾಗೂ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ನಟ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ತಮ್ಮದೇ ಆದ ಹೆಸರು‌ ಮಾಡಿರುವ ನಟ ರಮೇಶ್ ಅವರ ಮಗಳು ನಿಹಾರಿಕಾ ರಮೇಶ್ ಅವರ ಅರತಕ್ಷತೆ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನೆರವೇರಿದ್ದು ಸ್ನೇಹಿತರು ಕುಟುಂಬದವರು ಸಿನಿಮಾ ಮಂದಿ ರಾಜಕೀಯ ಗಣ್ಯರು ಎಲ್ಲರೂ ಆಗಮಿಸಿ ಶುಭ ಹಾರೈಸಿದ್ದಾರೆ..

ಹೌದು ಕಳೆದ ಡಿಸೆಂಬರ್ 28 ರಂದು ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಖಾಸಗಿ ರೆಸಾರ್ಟ್ ಒಂದರಲ್ಲಿ ಸರಳವಾಗಿ ಕುಟುಂಬದವರ ಸಮ್ಮುಖದಲ್ಲಿ ರಮೇಶ್ ಅರವಿಂದ್ ಅವರ ಮಗಳು ನಿಹಾರಿಕಾ ಅವರ ಮದುವೆ ಸಮಾರಂಭ ನೆರವೇರಿದ್ದು ನಿಹಾರಿಕಾ ಅವರು ಸಹೋದ್ಯೋಗಿ ಅಕ್ಷಯ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಕೊರೊನಾ ಕಾರಣದಿಂದಾಗಿ ಮದುವೆ ಸಮಾರಂಭವನ್ನು ಸರಳವಾಗಿ ನೆರವೇರಿಸಿ ಎಲ್ಲಾ ಶಾಸ್ತ್ರಗಳನ್ನು ಸಂಪ್ರದಾಯ ಬದ್ಧವಾಗಿ ನೆರವೇರಿಸಿದ್ದರು..

ಇನ್ನು ಇದೀಗ ಹದಿನೈದು ದಿನಗಳ ಬಳಿಕ ಇಂದು ಅದ್ಧೂರಿಯಾಗಿ ಅರತಕ್ಷತೆ ಕಾರ್ಯಕ್ರಮ ನೆರವೇರಿದ್ದು ಸ್ಯಾಂಡಲ್ವುಡ್ ಸೇರಿದಂತೆ ಬಹಳಷ್ಟು ಕಲಾವಿದರು ರಾಜಕೀಯ ನಾಯಕರು ಆಗಮಿಸಿ ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.. ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಜೋಡಿ.. ಕಿಚ್ಚ ಸುದೀಪ್ ಪ್ರಿಯಾ ಸುದೀಪ್ ಜೋಡಿ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಅವರು.. ಸುಮಲತಾ ಅಂಬರೀಶ್ ಅವರು.. ಹರ್ಷಿಕಾ ಪೊಣಚ್ಚ.. ವಿಜಯ್ ಪ್ರಕಾಶ್.. ಜೀ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರು.. ಶಿವಣ್ಣ.. ಪುನೀತ್ ರಾಜ್ ಕುಮಾರ್ ಕುಟುಂಬ.. ರಾಘವೇಂದ್ರ ರಾಜ್ ಕುಮಾರ್ ಅವರು.. ರವಿಚಂದ್ರನ್ ಅವರ ಕುಟುಂಬ..‌ ಮುನಿರತ್ನ.. ತೇಜಸ್ವಿ ಸೂರ್ಯ.. ಸಿದ್ದರಾಮಯ್ಯನವರು.. ಆರ್ ಅಶೋಕ್ ಅವರು ಸೇರಿದಂತೆ ಬಹಳಷ್ಟು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷ..

ಇನ್ನು ಸ್ಯಾಂಡಲ್ವುಡ್ ನ ರಾಕಿಂಗ್ ಕಪಲ್ ಯಶ್ ಹಾಗೂ ರಾಧಿಕಾ ಅವರು ವೇದಿಕೆ ಮೇಲೆ ಸಖತ್ ಸ್ಟೆಪ್ ಹಾಕಿದ್ದು ವೀಡಿಯೋ ವೈರಲ್ ಆಗಿದೆ.. ಹೌದು ಸುದೀಪ್ ಅವರು ಯಶ್ ಅವರು ರಾಧಿಕಾ ಅವರು.. ರಮೇಶ್ ಹಾಗೂ ಮಗಳು ಅಳಿಯ ಎಲ್ಲರೂ ಸಹ ರಾಕಿಂಗ್ ಸ್ಟಾರ್ ಯಶ್ ಅವರ ಗೂಗ್ಲಿ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ್ದು ಎಂಜಾಯ್ ಮಾಡಿದ್ದಾರೆ..

ಎಷ್ಟೇ ದೊಡ್ಡ ಸ್ಟಾರ್ ಗಳಾದರೂ ಅವರೂ ಸಹ ಮನುಷ್ಯರೇ.. ಅವರುಗಳಿಗೂ ಮನರಂಜನೆ ಅನ್ನೋದು ಬಹಳ ಮುಖ್ಯ ಎನ್ನುವಂತೆ ಅವರುಗಳನ್ನು ನೋಡಿ ಹತ್ತಿರ ಇದ್ದವರಿಗೆ ಭಾಸವಾಯಿತು.. ಎಲ್ಲಾ ಚಿಂತೆಗಳನ್ನು ಮರೆತು ಸ್ನೇಹಿತರೊಡನೆ ಹಾಡಿ ಕುಣಿದು ಆ ಕ್ಷಣವನ್ನು ಸವಿದಿದ್ದಾರೆ.. ಅಷ್ಟೇ ಅಲ್ಲದೇ ನೂತನ ಜೋಡಿ ನಿಹಾರಿಕಾ ಹಾಗೂ ಅಕ್ಷಯ್ ಅವರನ್ನೂ ಸಹ ಕರೆತಂದು ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ..

ಇನ್ನು ಸ್ಯಾಂಡಲ್ವುಡ್ ನ ಆಲ್ ಟೈಮ್ ಫೇವರಿಟ್ ನಟ ರಮೇಶ್ ಅರವಿಂದ್ ಅವರು ಅಳಿಯನ ಜೊತೆ ಸಖತ್ ಫೋಟೋ ಚಿತ್ರೀಕರಣ ಮಾಡಿಸಿದ್ದು ಜೀ ಕನ್ನಡ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರು ಸ್ನೇಹಿತರಂತೆ ಇರುವ ಮಾವ ಅಳಿಯನ ಫೋಟೋ ಹಂಚಿಕೊಂಡು ಶುಭ ಕೋರಿದ್ದಾರೆ..