ಕೊರೊನಾ ಸೊಂಕಿತ ಮಾವನನ್ನು ಬೆನ್ನ ಮೇಲೆಯೇ ಹೊತ್ತುಕೊಂಡು ಹೋದ ಸೊಸೆ ಮಾಡಿದ್ದೇನು ಗೊತ್ತಾ? ಈಕೆ ನಿಜಕ್ಕೂ ಯಾರು ಗೊತ್ತಾ?

0 views

ಎಲ್ಲೆಲ್ಲೂ ಕೊರೊನಾ ಎರಡನೆ ಅಲೆ.. ಜನ ಜೀವನ ಕಳೆದ ವರ್ಷಕ್ಕಿಂತ ಈ ವರ್ಷ ಅತಿ ಹೆಚ್ಚು ನೋವು ಪಟ್ಟರು.. ಕಳೆದ ವರ್ಷ ಸಹಾಯ ಮಾಡುವ ಕೈಗಳು ಹೆಚ್ಚಿದ್ದವು.. ಆದರೆ ಈ ವರ್ಷ ಸಹಾಯ ಮಾಡುವ ಕೈಗಳು ಸಹ ಕಡಿಮೆ.. ಇತ್ತ ಕೊರೊನಾದಿಂದ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿ ಜನರು ತಮ್ಮ ಕುಟುಂಬದವರನ್ನು ಕಳೆದುಕೊಂಡು ನೋವು ಅನುಭವಿಸುವಂತಾಗಿದೆ.. ಅದರಲ್ಲೂ ಅನೇಕ ಕುಟುಂಬಗಳಲ್ಲಿ ಸಂಪೂರ್ಣವಾಗಿ ಎಲ್ಲರಿಗೂ ಕೊರೊನಾ ಸೋಂಕು ಕಾಣಿಸಿಕೊಂಡು ಪರದಾಡುತ್ತಿರುವ ಸ್ಥಿತಿ ನಿಜಕ್ಕೂ ಮನಕಲಕುವಂತಿದೆ..

ಆದರೆ ಇಲ್ಲೊಂದು ಘಟನೆ ನಿಜಕ್ಕೂ ಮನಮಿಡಿಯುವಂತಿದ್ದು ಸೊಸೆ ಕೊರೊನಾ ಸೋಂಕಿತರಾದ ತನ್ನ ಮಾವನನ್ನು ತನ್ನ ಹೆಗಲ ಮೇಲೆಯೇ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿರುವ ಘಟನೆ ನಡೆದಿದೆ.. ಹೌದು ಬಹಳಷ್ಟು ಕಡೆ ಕೊರೊನಾ ಸೋಂಕಿಗೆ ಹೆದರಿ ಕುಟುಂಬದವರೇ ತನ್ನ ಅಪ್ಪ ಅಮ್ಮ ಅಣ್ಣ ತಮ್ಮ ಹೀಗೆ ಎಲ್ಲರನ್ನೂ ದೂರ ಇಟ್ಟ ಸುದ್ದಿಗಳನ್ನು ನೋಡಿದೆವು.. ಅಲ್ಲೆಲ್ಲೋ ಹೊರದೇಶದಿಂದ ಬಂದ ಗಂಡನಿಗೆ ಕೊರೊನಾ ಸೋಂಕು ಇರಬಹುದು ಎಂದು ಪತ್ನಿ ಮನೆ ಒಳಗೇ ಸೇರಿಸಿಕೊಳ್ಳಲಿಲ್ಲ.. ಗೇಟ್ ಬಾಗಿಲನ್ನೇ ತೆಗೆಯಲಿಲ್ಲ.. ಗೇಟ್ ನಲ್ಲಿಯೇ ನಿಂತು ಗಂಡ ಕೂಗಿ ಕೂಗಿ ತನಗೆ ಕೊರೊನಾ ಸೋಂಕು ಇಲ್ಲ ಎಂದು ಕರೆದರೂ ಸಹ ಆಕೆ ಬಾಗಿಲು ತೆಗೆಯಲಿಲ್ಲ.. ಇನ್ನು ಇತ್ತ ಚಾಮರಾಜನಗರದಲ್ಲಿ ಸೋಂಕಿನಿಂದ ಗುಣಮುಖಳಾದ ತಾಯಿಯನ್ನು ಮನೆಗೆ ಸೇರಿಸದ ಮಗ.. ಮನನೊಂದ ತಾಯಿ ಕೆರೆಯೊಂದಕ್ಕೆ ಹಾರಿ ಬಾರದ ಲೋಕಕ್ಕೆ ಹೋಗಿಬಿಟ್ಟಳು..

ಇನ್ನು ಮಂಡ್ಯದಲ್ಲಿ ಹೆಣ್ಣು ಕೊಟ್ಟ ಅತ್ತೆಯನ್ನೇ ಮನೆಗೆ ಸೇರಿಸದ ಅಳಿಯ.. ಹೀಗೆ ಒಂದಲ್ಲಾ ಒಂದು ಘಟನೆಗಳು ಮನುಷ್ಯನಲ್ಲಿ ಮಾನವೀಯತೆ ಮರೆಯಾಗಿ ಹೋಯ್ತಾ ಎಂಬ ಪ್ರಶ್ನೆಯನ್ನು ಹುಟ್ಟಿಹಾಕುತ್ತದೆ.. ಆದರೆ ಇಲ್ಲೊಂದು ಘಟನೆ ಮನಸನ್ನು ಕರಗಿಸುತ್ತಿದೆ.. ಹೌದು ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ತನ್ನ ಮಾವನನ್ನು ಸೊಸೆಯೇ ತನ್ನ ಬೆನ್ನ ಮೇಲೆ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ ಘಟನೆ ನಡೆದಿದ್ದು ಸೊಸೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.. ಹೌದು ಈಕೆಯ ಹೆಸರು ನಿಹಾರಿಕಾ.. ಈಕೆ ಸೂರಜ್ ಎಂಬುವವರನ್ನು ಮದುವೆಯಾಗಿ ಭುವನೇಶ್ವರದಲ್ಲಿ ವಾಸವಾಗಿದ್ದರು.. ಇವರ ಜೊತೆ ಸೂರಜ್ ನ ತಂದೆ ಎಪ್ಪತ್ತೈದು ವರ್ಷದ ತುಳೇಶ್ವರ ದಾಸ್ ಕೂಡ ವಾಸವಾಗಿದ್ದರು.. ಇನ್ನು ಸಧ್ಯ ಸೂರಜ್ ಕೆಲಸದ ನಿಮಿತ್ತ ಬೇರೆ ಊರಿನಲ್ಲಿದ್ದರು..

ಮಾವನನ್ನು ನೋಡಿಕೊಂಡು ಸೊಸೆ ನಿಹಾರಿಕಾ ಅವರೇ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು.. ಇನ್ನು ಮಾವನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತು.. ಆರೋಗ್ಯದ ಸ್ಥಿತಿ ಹದಗೆಡುತ್ತಿದ್ದಂತೆ ನಿಹಾರಿಕಾ ಬೇರೆ ಸಹಾಯ ಸಿಗದ ಕಾರಣ ಮಾವನನ್ನು ಹೆಗಲ ಮೇಲೆಯೇ ಹೊತ್ತುಕೊಂಡು ಕೋವಿಡ್ ಕೇರ್ ಗೆ ಕರೆದುಕೊಂಡು ಹೋಗಿದ್ದಾರೆ.. ಆ ಸಮಯದಲ್ಲಿ ಮಾವನನ್ನು ಆಸ್ಪತ್ರೆಯಲ್ಲಿ ದಾಖಲಿಸಿ ನಿಹಾರಿಕಾಳನ್ನು ಮನೆಯಲ್ಲಿ ಪ್ರತ್ಯೇಕವಾಗಿ ಇರಲು ವೈದ್ಯರು ತಿಳಿಸಿದ್ದಾರೆ.. ಆದರೆ ಮಾವ ಒಬ್ಬರನ್ನೇ ಆಸ್ಪತ್ರೆಯಲ್ಲಿ ಬಿಡಲು ಒಪ್ಪದ ಸೊಸೆ ನಿಹಾರಿಕಾ ಮಾವನ ಜೊತೆಯೇ ಇರುವುದಾಗಿ ವೈದ್ಯರನ್ನು ಮನವಿ ಮಾಡಿದ್ದಾಳೆ.. ಆ ಸನಯದಲ್ಲಿ ವೈದ್ಯರು ನಿಹಾರಿಕಾರ ಮನವಿಗೆ ಸ್ಪಂದಿಸಿ ಮಾವನ ಜೊತೆಯೇ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ..

ಒಟ್ಟಿನಲ್ಲಿ ಹೆತ್ತವರನ್ನೇ ನೋಡಿಕೊಳ್ಳಲು ಹಿಂಜರಿಯುತ್ತಿರುವವರ ಕೆಲ ಕೆಳ ಮನಸ್ಸಿನ ಮಕ್ಕಳ ನಡುವೆ ಸೊಸೆಯೊಬ್ಬಳು ಮಾವನನ್ನು ಮಗುವಿನಂತೆ ನೋಡಿಕೊಂಡ ರೀತಿ ಸಂಬಂಧಗಳ ಮೌಲ್ಯವನ್ನು ಎತ್ತಿ ತೋರುತ್ತಿದೆ.. ದೂರದಲ್ಲಿ‌ ನಿಂತ ಯಾರೋ ಒಬ್ಬರು ನಿಹಾರಿಕಾ ತನ್ನ ಮಾವನ್ನು ಹೊತ್ತೊಯ್ಯುತ್ತಿರುವ ಫೋಟೋವನ್ನು ತೆಗೆದಿದ್ದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ನಿಹಾರಿಕಾರ ಈ ಗುಣಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..