ಸ್ಯಾಂಡಲ್ವುಡ್ ನ ಖ್ಯಾತ ನಟಿ ಸಂಜನಾ ಗರ್ಲಾನಿ ಅವರ ತಂಗಿ ಸೌತ್ ಇಂಡಿಯಾದ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟಿ ನಿಕ್ಕಿ ಗರ್ಲಾನಿ ಅವರು ಸದ್ಯ ಬೆಂಗಳೂರಿನ ಅಮೃತಳ್ಳಿ ಪೊಲೀಸ್ ಠಾಣೆಯಲ್ಲಿ ತಾವು ಮೋಸ ಹೋದ ಕುರಿತು ದೂರು ನೀಡಿದ್ದಾರೆ..
ಹೌದು ಸಾಮಾನ್ಯವಾಗಿ ಸಾಮಾನ್ಯ ಜನರು ಮೋಸ ಹೋಗುವ ಘಟನೆಗಳ ಬಗ್ಗೆ ಆಗಾಗ ಸುದ್ದಿ ನೋಡುತ್ತಲೇ ಇರುತ್ತೇವೆ.. ಆದರೆ ಸೆಲಿಬ್ರೆಟಿಗಳು ಖ್ಯಾತ ನಾಮರು ಸಹ ಅದೆಷ್ಟೋ ಬಾರಿ ಮೋಸ ಹೋದ ಉದಾಹರಣೆಗಳು ಇವೆ.. ಆದರೆ ವಿಚಾರವನ್ನು ದೊಡ್ದದು ಮಾಡಿದರೆ ದೊಡ್ಡ ಸುದ್ದಿಯಾಗಿಬಿಡುವುದು ಎಂಬ ಕಾರಣಕ್ಕೆ ಅದೆಷ್ಟೋ ಸೆಲಿಬ್ರೆಟಿಗಳು ತಾವು ಮೋಸ ಹೋದರೂ ಸಹ ಸುಮ್ಮನಾಗಿಬಿಡುತ್ತಾರೆ.. ಅದೇ ರೀತಿ ಸ್ಯಾಂಡಲ್ವುಡ್ ನಟಿ ಸಂಜನಾ ತಂಗಿ ನಟಿ ನಿಕ್ಕಿ ಗರ್ಲಾನಿ ಕೂಡ ಇದೇ ರೀತಿ ಹಣದ ವಿಚಾರವಾಗಿ ಮೋಸ ಹೋಗಿದ್ದು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ..

ಹೌದು 2016 ರಲ್ಲಿ ಕೋರಮಂಗಲದ ಕೆಫೆ ಒಂದರಲ್ಲಿ ಐವತ್ತು ಲಕ್ಷ ರೂಪಾಯಿ ಹಣವನ್ನು ನಟಿ ನಿಕ್ಕಿ ಗರ್ಲಾನಿ ಹೂಡಿಕೆ ಮಾಡಿರುತ್ತಾರೆ.. ಆ ಕೆಫೆಯ ಮಾಲಿಕ ನಿಖಿಲ್ ಹೆಗ್ಡೆ ಅವರು ನಿಕ್ಕಿ ಗರ್ಲಾನಿ ಅವರನ್ನು ಸಂಪರ್ಕಿಸಿ ಈ ಬಗ್ಗೆ ತಿಳಿಸಿ ಹೂಡಿಕೆ ಮಾಡುವಂತೆ ಹೇಳಿರುತ್ತಾರೆ.. ನೀವು ಐವತ್ತು ಲಕ್ಷ ಹಣವನ್ನು ನಮ್ಮ ಕೆಫೆ ಮೇಲೆ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ನಾವು ಒಂದು ಲಕ್ಷ ಹಣವನ್ನು ಲಾಭವಾಗಿ ನಿಮಗೆ ನೀಡುತ್ತೇವೆ ಎಂದಿರುತ್ತಾರೆ.. ಜೊತೆಗೆ ಇದರಲ್ಲಿ ಶೇರ್ ಅನ್ನು ಸಹ ನೀಡುತ್ತೇವೆ ಎಂದಿರುತ್ತಾರೆ.. ಅದರಂತೆ ನಿಖಿಲ್ ಅವರ ಮಾತಿನ ಪ್ರಕಾರ ನಿಕಿ ಗರ್ಲಾನಿ ಅವರು ಐವತ್ತು ಲಕ್ಷ ಹಣವನ್ನು ನೀಡಿರುತ್ತಾರೆ.. ಆದರೆ ಹಣ ಕೊಟ್ಟು ನಾಲ್ಕು ವರ್ಷ ಕಳೆದರೂ ಸಹ ಯಾವುದೇ ಲಾಭವಾಗಲಿ ಅಥವಾ ಐವತ್ತು ಲಕ್ಷ ಹಣವನ್ನಾಗಲಿ ನಿಖಿಲ್ ಮರು ಪಾವತಿ ಮಾಡಿಲ್ಲ..

ಇದೇ ಕಾರಣಕ್ಕೆ ಮೋಸ ಹೋದ ನಟಿ ನಿಕ್ಕಿ ಗರ್ಲಾನಿ ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ನಿಖಿಲ್ ಹೆಗ್ಡೆ ವಿರುದ್ಧ ದೂರು ದಾಖಲಿಸಿದ್ದಾರೆ.. ನಿಖಿಲ್ ಹೆಗ್ಡೆ ಹೇಳಿದ ಪ್ರಕಾರ ಐವತ್ತು ಲಕ್ಷ ಹಣವನ್ನು ಆತನ ಕೆಫೆಗೆ ಹೂಡಿಕೆ ಮಾಡಿದ್ದು ಈವರೆಗೂ ಲಾಭವಾಗಲಿ ಅಥವಾ ನಾನು ಹೂಡಿಕೆ ಮಾಡಿದ ಹಣವಾಗಲಿ ನನ್ನ ಕೈ ಸೇರಿಲ್ಲ ಎಂದು ದೂರಿನಲ್ಲೊ ತಿಳಿಸಿದ್ದಾರೆ.. ಇನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು ನಿಖಿಲ್ ಹೆಗ್ಡೆ ಗೆ ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ..

ಆದರೆ ಇದುವರೆಗೂ ಈ ಪ್ರಕರಣದ ಕುರಿತು ಕೆಫೆ ಮಾಲಿಕರಾದ ನಿಖಿಲ್ ಹೆಗ್ಡೆ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ.. ಇತ್ತ ನಟಿ ನಿಕ್ಕಿ ಗರ್ಲಾನಿ ಕೂಡ ಈ ಬಗ್ಗೆ ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದು ತಾವು ಹೂಡಿಕೆ ಮಾಡಿದ ಹಣವನ್ನು ಕಾನೂನು ಪ್ರಕಾರ ಮರಳಿ ಪಡೆಯುವ ಪ್ರಯತ್ನದಲ್ಲಿದ್ದಾರೆ.. ಅಲ್ಪ ಸ್ವಲ್ಪ ಹೆಸರು ಮಾಡಿ ಸೆಲಿಬ್ರೆಟಿ ಅನಿಸಿಕೊಂಡವರಿಗೇ ಈರೀತಿಯಾದರೆ ಇನ್ನು ಸಾಮಾನ್ಯ ಜನರ ಪಾಡೇನು ಎನ್ನುವಂತಾಗಿದೆ ಸಂದರ್ಭ..