ಮುನಿರತ್ನ ಪರವಾಗಿ ದರ್ಶನ್ ನಿಂತಿದ್ದಕ್ಕೆ ನಿಖಿಲ್ ಹೇಳಿರುವ ಮಾತೇನು ಗೊತ್ತಾ?

0 views

ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.. ರಾಜರಾಜೇಶ್ವರಿ‌ ನಗರ ಹಾಗೂ ಶಿರಾ ಕ್ಷೇತ್ರ ಎರಡರಲ್ಲಿಯೂ ಮೂರು ಪಕ್ಷಗಳ ಅಭ್ಯರ್ಥಿಗಳು ಭರ್ಜರಿಯಾಗಿಯೇ ಪ್ರಚಾರ ಮಾಡಿದ್ದಾರೆ.. ಇನ್ನು ಮೊನ್ನೆ ದರ್ಶನ್ ಅವರು ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಅವರ ಪರವಾಗಿ ಪ್ರಚಾರ ನಡೆಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ನಿಖಿಲ್ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ..

ಹೌದು ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಹಾಗೂ ಸುಮಲತಾ ಅವರ ಹೈ ವೋಲ್ಟೇಜ್ ಕಣದಲ್ಲಿ ದರ್ಶನ್ ಹಾಗೂ ಯಶ್ ಸುಮಲತಾ ಅವರ ಪರ ನಿಂತು ಅವರ ಗೆಲುವಿಗೆ ಪ್ರಮುಖ ಕಾರಣರಾಗಿದ್ದು ಎಲ್ಲರಿಗೂ ತಿಳಿದೇ ಇದೆ.. ಆ ಸಮಯದಲ್ಲಿ ನಿಖಿಲ್ ಹಾಗೂ ದರ್ಶನ್ ಯಶ್ ನಡುವೆ ಕೆಲ ಮಾತಿನ ವಾಗ್ವಾದಗಳು ನಡೆದಿದ್ದವು.. ಅವೆಲ್ಲವೂ ಚುನಾವಣಾ ಸಮಯದಲ್ಲಿ ಸಂಧರ್ಭಕ್ಕನುಗುಣವಾಗಿ ಬಂದ ಮಾತುಗಳಾಗಿದ್ದವು.. ಆನಂತರ ಅವೆಲ್ಲವನ್ನು‌ ಮರೆತು ನಿಖಿಲ್ ಹಾಗೂ ಅಭಿಷೇಕ್ ಅಂಬರೀಶ್ ಇಬ್ಬರೂ ಸಹ ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರು ಸಿನಿಮಾ ವಿಚಾರಕ್ಕೆ ಶುಭ ಕೋರಿದ್ದರು.

ಇನ್ನು‌ ಇದೀಗ ದರ್ಶನ್ ಅವರು ಮತ್ತೆ ಚುನಾವಣಾ ಅಖಾಡಕ್ಕೆ ಇಳಿದಿದ್ದರಿಂದ ಮತ್ತೆ ನಿಖಿಲ್ ಹಾಗೂ ದರ್ಶನ್ ಅವರ ವಿಚಾರ ಬಂದಿದೆ.. ಅದರಲ್ಲೂ ನಿನ್ನೆ ಮಾದ್ಯಮದವರೊಬ್ಬರು ಇದೇ ವಿಚಾರವನ್ನು ದರ್ಶನ್ ಅವರ ಬಳಿ ಕೇಳಿ ಸರಿಯಾಗಿ ಗ್ರಹಚಾರ ಬಿಡಿಸಿಕೊಂಡಿದ್ದೂ ಇದೆ.. ಇದೀಗ ನಿಖಿಲ್ ಕೂಡ ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ.

ಹೌದು ನಿನ್ನೆ ದರ್ಶನ್ ಅವರ ಬಳಿ “ನಿಖಿಲ್ ಅವರು ಸಹ ರಾಜರಾಜೇಶ್ವರಿ‌ ನಗರದಲ್ಲಿ ಪ್ರಚಾರ ಮಾಡಿದ್ದಾರೆ.. ನೀವೀಗ ಅವರ ವಿರುದ್ಧ ಪ್ರಚಾರ ಮಾಡ್ತಿದ್ದೀರಾ.. ಲೋಕಸಭೆಯಲ್ಲೂ ಅವರ ವಿರುದ್ಧ ಪ್ರಚಾರ ಮಾಡಿದ್ರಿ.. ಏನ್ ಕಾರಣ ಎಂದು ಕೇಳಿದ್ದರು.. ತಕ್ಷಣ ಪ್ರತಿಕ್ರಿಯೆ ನೀಡಿದ ದರ್ಶನ್ ಅವರು ” ಏನ್ ತಂದಿಕ್ಕಿ ತಮಾಷೆ ನೋಡಕ್ಕಾ? ಅದೇ ಬೇರೆ ಇದೇ ಬೇರೆ..‌ ನನ್ನ ಅವರ ನಡುವೆ ಏನೂ ಇಲ್ಲ.. ನೀವ್ ಇಲ್ದೇ ಇರೋದನ್ನ ಯಾಕ್ ತೆಗಿತೀರಾ? ಏನ್ ಟಿ ಆರ್ ಪಿ ಗಾ? ಎಂದು ಸರಿಯಾಗಿ ಗ್ರಹಚಾರ ಬಿಡಿಸಿದ್ದರು..

ಇದೀಗ ನಿಖಿಲ್ ಅವರ ಬಳಿಯೂ ದರ್ಶನ್ ಅವರ ಬಗ್ಗೆ ಪ್ರಶ್ನಿಸಿದ್ದು ನಿಮ್ಮ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದಾರೆ ಏನ್ ಹೇಳ್ತೀರಾ ಎಂದಿದ್ದಾರೆ.. ಇದಕ್ಕೆ ಪ್ರತಿಕ್ರಿಯೆ ನೀಡಿ ನಿಖಿಲ್ ಮಾತನಾಡಿದ್ದಾರೆ..”

ಹೌದು ಇಂದು ಶಿರಾ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ನಿಖಿಲ್ ಅವರು ದರ್ಶನ್ ಅವರ ಬಗ್ಗೆ ಮಾತನಾಡಿ “ನನ್ನ ನಿಖಿಲ್ ಮಧ್ಯ ಏನೂ ಇಲ್ಲ ಅಂತ ದರ್ಶನ್ ಅವರೇ ಸ್ಪಷ್ಟ ಪಡಿಸಿದ್ದಾರೆ.. ಮಾದ್ಯಮದವರು ಪದೇ ಪದೇ ಈ ಪ್ರಶ್ನೆ ಕೇಳಬೇಡಿ.. ದರ್ಶನ್ ಅವರು ಸ್ವತಂತ್ರರು.. ಅವರು ಆರ್ ಆರ್ ನಗರದಲ್ಲಿ ವ್ಯಕ್ತಿ ಪರವಾಗಿ ಪ್ರಚಾರಕ್ಕೆ ಬಂದಿದ್ದಾರೆ.. ಅಲ್ಲಿ ದರ್ಶನ್ ಅವರ ಮೇಲಿನ ಅಭಿಮಾನ ಮತವಾಗಿ ಪರಿವರ್ತನೆಯಾಗುವುದಾ ಅಂತ ಕಾದು ನೋಡಬೇಕು.. ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಪಕ್ಷಕ್ಕೂ ಮತದಾರರಿದ್ದಾರೆ.. ಶಿರಾ ದಲ್ಲಿ ನಮ್ಮ ಪಕ್ಷದ ಮೇಕೆ ಜನರು ಇಟ್ಟಿರುವ ನಂಬಿಕೆ ಪ್ರೀತಿ ನೋಡಿ ಬಹಳ ಸಂತೋಷವಾಗಿದೆ ಎಂದರು..