ಅದ್ಧೂರಿಯಾಗಿ ನೆರವೇರಿತು ಲಕ್ಷ್ಮೀ ಬಾರಮ್ಮ‌ ಧಾರಾವಾಹಿಯ ನಟಿ ಲಚ್ಚಿಯ ನಿಶ್ಚಿತಾರ್ಥ.. ಹುಡುಗ ಯಾರು ಗೊತ್ತಾ..

0 views

ಕನ್ನಡ ಕಿರುತೆರೆಯಲ್ಲಿ ಸಾಲು ಸಾಲು ವಿವಾಹ ಸಮಾರಂಭಗಳು ನಡೆಯುತ್ತಿದ್ದು ಇದೀಗ ಕಿರುತೆರೆಯ ಮತ್ತೊಬ್ಬ ಖ್ಯಾತ ನಟಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. ಹೌದು ಕಳೆದ ಎರಡು ವರ್ಷಗಳಿಂದ ಸಾಲು ಸಾಲು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು.. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿಯಾಗಿ ಅಭಿನಯಿಸಿದ ನಟಿ ರಶ್ಮೀ ಪ್ರಭಾಕರ್ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿದೆ..

ಹೌದು ಕಳೆದ ಕೆಲ ತಿಂಗಳ ಹಿಂದಷ್ಟೇ ಅದೇ ಧಾರಾವಾಹಿಯಲ್ಲಿ ಮೊದಲಿಗೆ ಲಕ್ಷ್ಮಿ ಪಾತ್ರ ಮಾಡಿದ್ದ ನಟಿ ಕವಿತಾ ಗೌಡ ನಟ ಚಂದನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಇದೀಗ ಮತ್ತೊಬ್ಬ ಲಕ್ಷ್ಮೀ ಸಹ ನೂತನ ಜೀವನ ಆರಂಭಿಸುತ್ತಿದ್ದು ಅಭಿಮಾನಿಗಳು ಶುಭ ಕೋರಿದ್ದಾರೆ.. ಹೌದು ಕಳೆದ ಎಂಟು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಆಗಿನ ಸಮಯಕ್ಕೆ ನಂಬರ್ ಒನ್ ಧಾರಾವಾಹಿಯಾಗಿತ್ತು.. ಸತತ ಎಂಟು ರಿಂದ ಒಂಭತ್ತು ವರ್ಷಗಳ ಕಾಲ ಜನರನ್ನು ಮನರಂಜಿಸಿದ ಧಾರಾವಾಹಿ ಕಳೆದ ಎರಡು ವರ್ಷದ ಹಿಂದಷ್ಟೇ ಮುಕ್ತಾಯಗೊಂಡಿತ್ತು..

ಎಂಟು ವರ್ಷದ ಜರ್ನಿಯಲ್ಲಿ ಅನೇಕ ಪಾತ್ರದ ಸಾಕಷ್ಟು ಕಲಾವಿದರು ಬದಲಾಗಿದ್ದರು.. ಮೊದಲಿಗೆ ಚಂದನ್ ಧಾರಾವಾಹಿ ಬಿಟ್ಟು ಸಿನಿಮಾ ದಾರಿ ಹಿಡಿದರು.. ಆದರೆ ಸಿನಿಮಾ ಅಷ್ಟಾಗಿ ಕೈ ಹಿಡಿಯದ ಕಾರಣ ಇದೀಗ ಮತ್ತೆ ಕಿರುತೆರೆಯಲ್ಲಿ ಎರಡು ಭಾಷೆಗಳ ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.. ಅಷ್ಟೇ ಅಲ್ಲದೇ ಹೊಟೆಲ್ ಉದ್ಯಮವನ್ನೂ ಸಹ ಶುರು ಮಾಡಿಕೊಂಡಿದ್ದಾರೆ.. ಇನ್ನು ಇತ್ತ ಚಂದನ್ ಪಾತ್ರಕ್ಕೆ ನಂತರ ಶೈನ್ ಶೆಟ್ಟಿ ಆಗಮಿಸಿ ಎರಡು ವರ್ಷ ಧಾರಾವಾಹಿಯ ಜರ್ನಿಯಲ್ಲಿದ್ದು ನಂತರ ಅವರೂ ಸಹ ಧಾರಾವಾಹಿ ಬಿಟ್ಟರು ಆ ಬಳಿಕ ಚಂದು ಗೌಡ ಧಾರಾವಾಹಿ ಮುಗಿಯುವವರೆಗೂ ಚಂದು ಪಾತ್ರ ನಿರ್ವಹಿಸಿದರು..

ಇನ್ನು‌ ಇತ್ತ ಚಂದು ಪಾತ್ರದಷ್ಟೇ ಚಿನ್ನು ಹಾಗೂ ಗೊಂಬೆ ಪಾತ್ರ ಸಹ ಅಷ್ಟೇ ಹೆಸರು ಮಾಡಿತ್ತು.. ಗೊಂಬೆ ಪಾತ್ರವನ್ನು ನೇಹಾ ಗೌಡ ಸಂಪೂರ್ಣವಾಗಿ ಎಂಟು ವರ್ಷಗಳ ಕಾಲ ನಿಭಾಯಿಸಿದರೆ ಚಿನ್ನು ಲಕ್ಷ್ಮೀ ಪಾತ್ರಕ್ಕೆ ಮೂವರು ಕಲಾವಿದೆಯರು ಆಗಮಿಸಿದರು..‌ ಮೊದಲನೇ ಲಕ್ಷ್ಮಿ ಕೆಲ ದಿನಗಳಷ್ಟೇ ಇದ್ದರೆ ನಂತರ ಬಂದ ಕವಿತಾ ಗೌಡ ಸಾಕಷ್ಟು ವರ್ಷಗಳ ಕಾಲ ಇದ್ದು ಅವರೂ ಸಹ ಸಿನಿಮಾ ಹಾದಿ ಹಿಡಿದರು.. ನಂತರ ಬಂದವರೆ ರಶ್ಮೀ ಪ್ರಭಾಕರ್.. ಧಾರಾವಾಹಿ ಮುಗಿಯುವವರೆಗೂ ಲಕ್ಷ್ಮೀ ಪಾತ್ರದಲ್ಲಿ ಅಭಿನಯಿಸಿದರು.. ಜನರ ಮನಸ್ಸಿನಲ್ಲಿ ಉಳಿಯುವಲ್ಲಿ ಯಶಸ್ವಿಯಾಗಿ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದರು.. ಈಗಲೂ ಸಹ ಧಾರಾವಾಹಿಗಳಲ್ಲಿ ಬ್ಯುಸಿ ಆಗಿದ್ದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ..

ಹೌದು ರಶ್ಮೀ ಪ್ರಭಾಕರ್ ಅವರು ನಿಖಿಲ್ ಭಾರ್ಗವ್ ಎಂಬುವವರ ಜೊತೆ ನೂತನ ಜೀವನಕ್ಕೆ ಕಾಲಿಡುತ್ತಿದ್ದು ಇಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.. ನಿಖಿಲ್ ಭಾರ್ಗವ್ ಹಾಗೂ ರಶ್ಮಿ ಪ್ರಭಾಕರ್ ಕೆಲ ವರ್ಷಗಳಿಂದ ಸ್ನೇಹಿತರಾಗಿದ್ದು ಇದೀಗ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರ ಮಾಡಿದ್ದಾರೆ.. ಇನ್ನು ಈ ಬಗ್ಗೆ ರಶ್ಮಿ ಪ್ರಭಾಕರ್ ಸಾಮಾಜಿಕ‌ ಜಾಲತಾಣದಲ್ಲಿ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡು ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಕೆಲವೊಂದು ಪ್ರಮಾಣಗಳು ಎಂದೂ ಸಹ ಮುರಿಯುವುದಿಲ್ಲ.. ನನ್ನ ಜೀವನದ ರಾಜನಿವನು.. ನನ್ನಲ್ಲಿಯೇ ಆತ ಪ್ರಪಂಚವನ್ನು ಕಂಡ.. ನನಗೀಗ ಆತನೇ ಪ್ರಪಂಚ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ನಿಖಿಲ್ ಭಾರ್ಗವ್ ಅವರು ಬೆಂಗಳೂರು ಮೂಲದವರಾಗಿದ್ದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.. ಇನ್ನು ಸಧ್ಯ ಹೊಸ ಜೀವನಕ್ಕೆ ಕಾಲಿಡಲು ನಿಶ್ಚಿತಾರ್ಥದ ಮೂಲಕ ಮುನ್ನುಡಿ ಬರೆದಿರುವ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಭಾರ್ಗವ್ ಅವರಿಗೆ ಸ್ನೇಹಿತರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿ ಶುಭ ಹಾರೈಸಿದ್ದಾರೆ..