ಗಂಡು ಮಗುವಿಗೆ ಜನ್ಮ ನೀಡಿದ ರೇವತಿ.. ಮಗನನ್ನು ಮುದ್ದಾಡಿದ ನಿಖಿಲ್..

0 views

ಸ್ಯಾಂಡಲ್ವುಡ್ ನ ಯುವರಾಜ ನಿಖಿಲ್ ಕುಮಾರಸ್ವಾಮಿ ಸದ್ಯ ತಂದೆಯಾದ ಸಂಭ್ರಮದಲ್ಲಿದ್ದು ಸಂತೋಷ ಹಂಚಿಕೊಂಡಿದ್ದಾರೆ.. ಹೌದು ನಿಖಿಲ್ ಅವರ ಪತ್ನಿ ರೇವತಿ ಅವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ದೊಡ್ಡ ಗೌಡರ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ.. ಹೌದು ಕೆಲ ದಿನಗಳ ಹಿಂದಷ್ಟೇ ರೇವತಿ ಅವರಿಗೆ ಎಂಟು ತಿಂಗಳು ತುಂಬಿದ ನಂತರ ಮಡದಿಯ ಆಸೆಯಂತೆ ನಿಖಿಲ್ ಅದ್ಧೂರಿಯಾಗಿ ಸೀಮಂತ ಶಾಸ್ತ್ರವನ್ನು ನೆರವೇರಿಸಿದ್ದರು.. ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿನ ಕನ್ವೆನ್ಷನ್ ಹಾಲ್ ಒಂದರಲ್ಲಿ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದು ಸಿನಿಮಾ ಮಂದಿ ರಾಜಕೀಯ ಮುಖಂಡರು ಸ್ನೇಹಿತರು ಆಪ್ತರು ಎಲ್ಲರೂ ಆಗಮಿಸಿ ರೇವತಿ ಹಾಗೂ ಮಗುವಿಗೆ ಶುಭ ಹಾರೈಸಿದ್ದರು.

ಇದೀಗ ಇಂದು ಸೆಪ್ಟೆಂಬರ್ ಇಪ್ಪತ್ತ ನಾಲ್ಕರಂದು ರೇವತಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಇಂದು ಹನ್ನೆರೆಡು ಗಂಟೆ ಸಮಯದಲ್ಲಿ ರೇವತಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು ನಿಖಿಲ್ ಅವರು ಖುದ್ದು ರೇವತಿ ಅವರ ಪಕ್ಕದಲ್ಲಿಯೇ ಇದ್ದು ಮಗುವಿನ ಮುಖವನ್ನು ಮೊದಲು ನೋಡಿದ್ದಾರೆ.. ಹೌದು ಕಳೆದ ವರ್ಷ ಏಪ್ರಿಲ್ ಹದಿನೇಳರಂದು ಸರಳವಾಗಿ ರಾಮನಗರದ ತೋಟದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಿಖಿಲ್ ಹಾಗೂ ರೇವತಿ ಜೋಡಿ ಕೊರೊನಾ ಕಾರಣದಿಂದಾಗಿ ಮದುವೆಯಾ ಯಾವ ಸಮಾರಂಭವನ್ನೂ ಸಹ ಅದ್ಧೂರಿಯಾಗಿ ಮಾಡಲಾಗಲಿಲ್ಲ.. ಎಲ್ಲಾ ಶಾಸ್ತ್ರ ಸಂಪ್ರದಾಯಗಳನ್ನು ಸರಳವಾಗಿ ನೆರವೇರಿಸಿದ್ದರು.. ನಂತರದ ದಿನಗಳಲ್ಲಿ ಬಿಡದಿಯ ತೋಟದಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದ ಜೋಡಿ ಕೃಷಿ ಕಾಯಕದಲ್ಲಿಯೂ ತೊಡಗಿಕೊಂಡಿದ್ದರು..

ನಂತರ ಸಿನಿಮಾ ಹಾಗೂ ರಾಜಕೀಯದ ಕೆಲಸಗಳಲ್ಲಿ ಬ್ಯುಸಿ ಆದ ನಿಖಿಲ್ ಮಡದಿಗಾಗಿ ಸಮಯ ನೀಡುವುದ ಮರೆಯುತ್ತಿರಲಿಲ್ಲ.. ಸಾಮಾಜಿಕ ಜಾಲತಾಣದಲ್ಲಿ ರೇವತಿ ಅವರೊಟ್ಟಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾ ಮದುವೆಯ ನಂತರ ಕವಿಯಾಗಿಬಿಟ್ಟಿದ್ದರು.. ಇನ್ನು ಈ ವರ್ಷ ಜೂನ್ ತಿಂಗಳಿನಲ್ಲಿ ರೇವತಿ ಅವರ ಹುಟ್ಟುಹಬ್ಬದ ದಿನದಂದು ರೇವತಿ ಅವರು ಗರ್ಭಿಣಿಯಾಗಿದ್ದು ನಿಖಿಲ್ ತಂದೆಯಾಗುತ್ತಿರುವ ವಿಚಾರ ಹೊರ ಬಂದಿತ್ತು.. ಕುಮಾರಸ್ವಾಮಿ ಅವರು ನಮ್ಮ ಸೊಸೆ ರೇವತಿ ಗರ್ಭಿಣಿ ಆಗಿದ್ದು ಸಧ್ಯದಲ್ಲಿಯೇ ಮೊಮ್ಮಗುವಿನ ಆಗಮನವಾಗಲಿದೆ ಎಂದಿದ್ದರು..

ಇನ್ನು ನಿಖಿಲ್ ಅವರೂ ಸಹ ಕೆಲ ದಿನಗಳ ನಂತರ ಈ ಬಗ್ಗೆ ಮಾತನಾಡಿ ಹೌದು ಸದ್ಯದಲ್ಲಿಯೇ ಮಗುವನ್ನು ನಿರೀಕ್ಷೆ ಮಾಡುತ್ತಿದ್ದೇವೆ ಎಂದಿದ್ದರು.. ಅದರಂತೆ ರೇವತಿ ಅವರು ಗರ್ಭಿಣಿ ಆದಾಗಿನಿಂದ ಮಡದಿಯ ಜೊತೆಯೇ ಹೆಚ್ಚು ಸಮಯ ಕಳೆಯುತ್ತಿದ್ದ ನಿಖಿಲ್ ಅವರು ರೇವತಿ ಅವರ ಪ್ರತಿಯೊಂದು ಆಸೆಯನ್ನು ನೆರವೇರಿಸುತ್ತಾ ಬಂದರು.. ಕೆಲ ದಿನಗಳ ಹಿಂದಷ್ಟೇ ರೇವತಿ ಅವರ ಆಸೆಯಂತೆಯೇ ಸೀಮಂತ ಶಾಸ್ತ್ರವೂ ನೆರವೇರಿತ್ತು..

ಇದೀಗ ರೇವತಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು ತಂದೆಯಾದ ಸಂತೋಷದಲ್ಲಿದ್ದಾರೆ.. ಮಗುವನ್ನು ಮೊದಲು ಎತ್ತಿಕೊಂಡು ಸಂತೋಷಕ್ಕೆ ಕಣ್ಣಲ್ಲಿ ನೀರು ಬಂದಿದ್ದು ಮಗುವಿಗೆ ಮುತ್ತನಿಟ್ಟು ಮುದ್ದಿಸಿದ್ದಾರೆ.. ಇನ್ನು ರೇವತಿ ಅವರಿಗೆ ನಾರ್ಮಲ್ ಹೆರಿಗೆಯಾಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.. ತಾಯಿ ಮಗು ಇಬ್ಬರೂ ಸಹ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದು ರೇವತಿ ಕುಟುಂಬ ಹಾಗೂ ದೊಡ್ಡ ಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.. ಇತ್ತ ವಿಚಾರ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶುಭಾಶಯ ತಿಳಿಸುವ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ..