ತಾಯಿಯಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡಿದ ರೇವತಿ ಅವರು..

0 views

ಮೊನ್ನೆಮೊನ್ನೆಯಷ್ಟೇ ನಿಖಿಲ್ ರೇವತಿ ದಂಪತಿಗಳ ಬಾಳಲ್ಲಿ ಹೊಸ ಫ್ಯಾಮಿಲಿ ಮೆಂಬರ್ ಆಗಮನದ ಸಂತೋಷ ಸಂಭ್ರಮವನ್ನು ತಂದಿತ್ತು.. ಹೌದು ಮೊನ್ನೆಯಷ್ಟೇ ರೇವತಿ ಅವರ ಹುಟ್ಟುಹಬ್ಬದ ದಿನವೇ ದೊಡ್ಡ ಗೌಡರ ಮನೆಗೆ ಮರಿ ಮಗುವಿನ ಆಗಮನದ ಸಂತೋಷವನ್ನು ಮಾದ್ಯಮದವರ ಜೊತೆ ಹಂಚಿಕೊಂಡಿದ್ದ ಕುಮಾರಸ್ವಾಮಿ ಅವರು ತಾವು ತಾತನಾಗುತ್ತಿರುವ ಸಂಭ್ರಮದಲ್ಲಿದ್ದರು..ಇನ್ನು ಇತ್ತ ರೇವತಿ ಅವರು ಇದೀಗ ಐದು ತಿಂಗಳ ಗರ್ಭಿಣಿಯಾಗಿದ್ದು ಇನ್ನು ನಾಲ್ಕು ತಿಂಗಳಿನಲ್ಲಿ ನೂತನ ಅತಿಥಿಯ ಆಗಮನವಾಗಲಿದೆ.. ಇನ್ನು ತಂದೆ ಆಗುತ್ತಿರುವ ಸಂತೀಷದಲ್ಲಿರುವ ನಿಖಿಲ್ ಅವರು ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ..

ಹೌದು ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಹಾಗೂ ರೇವತಿ ಅವರು ಜನರ ನಡುವೆ ಅದ್ಧೂರಿಯಾಗಿ ಮದುವೆಯಾಗಬೇಕೆಂಬ ಕನಸು ನನಸಾಗದೇ ರಾಮನಗರದ ಕೇತಗಾನಹಳ್ಳಿಯ ತೋಟದಲ್ಲಿ ಸರಳವಾಗಿ ಕುಟುಂಬಸ್ಥರ ನಡುವೆ ಸಪ್ತಪದಿ ತುಳಿದಿದ್ದರು.. ಇನ್ನು ಮದುವೆಯಾದ ಬಳಿಕ ಬಿಡದಿಯ ತೋಟದಲ್ಲಿಯೇ ಸೆಟಲ್ ಆದ ನಿಖಿಲ್ ರೇವತಿ ಜೋಡಿ ಕೃಷಿ ಕೆಲಸದಲ್ಲೊ ತೊಡಗಿಸಿಕೊಂಡಿದ್ದರು.. ಇನ್ನು ನೋಡು ನೋಡುತ್ತಿದ್ದಂತೆ ವರ್ಷವೇ ಕಳೆದುಹೋಯಿತು.. ಇನ್ನು ಸಿಹಿ ಸುದ್ದಿ ಯಾವಗಾ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಾಗುತ್ತಿದ್ದ ನಿಖಿಲ್ ಅವರು ತಮ್ಮ ಮೊದಲನೇ ವರ್ಷದ ಮದುವೆ ವಾರ್ಷಿಕೋತ್ಸವದಲ್ಲಿ ತಾವು ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನು ವಿಶೇಷವಾಗಿ ಹಂಚಿಕೊಳ್ಳಬೇಕೆಂದುಕೊಂಡಿದ್ದರು..

ಆದರೆ ಕಳೆದ ಏಪ್ರಿಲ್ ಹದಿನೇಳರಂದು ನಿಖಿಲ್ ರೇವತಿ ಅವರ ಮದುವೆ ವಾರ್ಷಿಕೋತ್ಸವದ ದಿನದಂದೆ ಇಬ್ಬರಿಗೂ ಕೊರೊನಾ ಪಾಸಿಟಿವ್ ಆಗಿದ್ದು ಅದಾಗಲೇ ಗರ್ಭಿಣಿಯಾಗಿದ್ದ ರೇವತಿ ಅವರಿಗೂ ಸಹ ಸೋಂಕು ತಗುಲಿದ್ದು ಆತಂಕವನ್ನುಂಟು ಮಾಡಿತ್ತು.. ಅದೇ ಕಾರಣಕ್ಕೆ ತಮ್ಮ ಸಂತೋಷ ಹಂಚಿಕೊಳ್ಳಲು ಸರಿಯಾದ ಸನಯವಲ್ಲವೆಂದು ಸುಮ್ಮನಾಗಿ ಇದೀಗ ಮೊನ್ನೆ ರೇವತಿ ಅವರ ಹುಟ್ಟು ಹಬ್ಬದ ದಿನ ತಾವು ತಂದೆಯಾಗುತ್ತಿರುವ ಸಂತೋಷವನ್ನು ಹಂಚಿಕೊಂಡಿದ್ದಾರೆ.. ಸಿಹಿ ಸುದ್ದಿ ಕೇಳಿದ ಅಭಿಮಾನಿಗಳು ಸ್ನೇಹಿತರು ಎಲ್ಲರೂ ಸಹ ಶುಭ ಹಾರೈಸಿ ರೇವತಿ ಅವರ ಆರೋಗ್ಯ ಚೆನ್ನಾಗಿರಲೆಂದು ಹರಸಿದರು..

ಇನ್ನು ಇದೀಗ ನಿಖಿಲ್ ಹಾಗೂ ರೇವತಿ ಅವರ ಇಬ್ಬರ ಕಡೆಯಿಂದಲೂ ಮತ್ತೊಂದು ಸಿಹಿ ಸುದ್ದಿ ಹೊರ ಬಂದಿದೆ.. ಹೌದು ಸದ್ಯ ಇಷ್ಟು ದಿನ ಕೃಷಿ ತೋಟ ಕುಟುಣ್ಬ ಅಂತ ಸಮಯ ಮೀಸಲಿಟ್ಟಿದ್ದ ನಿಖಿಲ್ ಕುಮಾರಸ್ವಾಮಿ ಅವರು ಇದೀಗ ತಮ್ಮ ಸಿನಿಮಾ ವೃತ್ತಿಯ ಹೊಸ ಆರಂಭ ಮಾಡಿದ್ದು ಹೊಸ ಸಿನಿಮಾವೊಂದನ್ನು ಅನೌನ್ಸ್ ಮಾಡಿದ್ದಾರೆ.. ಅದರಲ್ಲಿಯೂ ಸಿಂಪಲ್ ಸುನಿ ನಿರ್ದೇಶನದ ಸಿನಿಮಾದಲ್ಲಿ ನಿಖಿಲ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ಕುತೂಹಲ ಹೆಚ್ಚಾಗಿಯೇ ಇದ್ದು ಸದ್ಯದಲ್ಲಿಯೇ ಸಿನಿಮಾದ ಹೆಸರು ಹಾಗೂ ಮೊದಲ ಲುಕ್ ಅನ್ನು ಬಿಡುಗಡೆ ಮಾಡಲಿದ್ದಾರೆ.. ಇನ್ನು ಇತ್ತ ರೇವತಿ ಅವರ ಕಡೆಯಿಂದಲೂ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ..

ಹೌದು ರೇವತಿ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿರುವ ಕಾರಣ ಕಳೆದ ವರ್ಷ ಬಿಡದಿಯ ತೋಟದಲ್ಲಿಯೇ ಹೊಸ ಮನೆಯೊಂದನ್ನು ಅದರಲ್ಲಿಯೂ ಪರಿಸರ ಸ್ನೇಹಿ ಮನೆಯೊಂದನ್ನು ನಿರ್ಮಾಣ ಮಾಡುವ ಕನಸೊತ್ತು ಭೂಮಿ ಪೂಜೆ ನೆರವೇರಿಸಿದ್ದರು.. ಇದೀಗ ಆ ಮನೆಯ ಕೆಲಸ ಕೊನೆಯ ಹಂತಕ್ಕೆ ಬಂದಿದ್ದು ಮಗುವಿನ ಆಗಮನದ ಸ್ವಾಗತದ ಸಮಯದಲ್ಲಿ ರೇವತಿ ಅವರ ಹೊಸ ಪರಿಸರ ಸ್ನೇಹಿ ಮನೆಯೂ ಸಹ ತಯಾರಾಗಿರಲಿದೆ.. ಒಟ್ಟಿನಲ್ಲಿ ದುಡ್ಡಿದೆ ನಾವ್ಯಾಕೆ ಕೆಲಸ ಮಾಡಬೇಕು ಎಂದು ಅಹಂಕಾರ ತೋರಿಸಿಕೊಳ್ಳದೇ ಕೇವಲ ಸಂತೋಷವಾಗಿ ಬದುಕುವುದ ಮಾತ್ರ ನೋಡದೇ ನಿಖಿಲ್ ಹಾಗೂ ರೇವತಿ ಇಬ್ಬರೂ ಸಹ ತಮ್ಮ ತಮ್ಮ ವೃತ್ತಿ ಬದುಕಿನಲ್ಲಿ‌ ತೊಡಗಿಸಿಕೊಳ್ಳುತ್ತಿರುವ ರೀತಿ ನಿಜಕ್ಕೂ ಮೆಚ್ಚುವಂತದ್ದು..