ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡ ನಿಖಿಲ್ ರೇವತಿ ದಂಪತಿ.. ಶುಭ ಹಾರೈಸಿದ ಅಭಿಮಾನಿಗಳು..

0 views

ನಿಖಿಲ್ ಕುಮಾರ್.. ಸ್ಯಾಂಡಲ್ವುಡ್ ನ ಯುವರಾಜ ಸಧ್ಯ ಸಿನಿಮಾ ರಾಜಕೀಯ ಎಲ್ಲದರಲ್ಲೂ ಬ್ಯುಸಿಯಾಗಿದ್ದು ಇದೆಲ್ಲದರ ನಡುವೆಯೂ ಸಧ್ಯ ತಮ್ಮ ಕುಟುಂಬಕ್ಕೆ ಮಗನ ಆಗಮನದ ಸಂತೋಷದಲ್ಲಿರುವ ದೊಡ್ಡ ಗೌಡರ ಮನೆಯ ಯುವರಾಜ ಇದೀಗ ಬಹಳಷ್ಟು ದಿನಗಳ ಬಳಿಕ ತಮ್ಮ ಪತ್ನಿ ಜೊತೆಗೆ ಡ್ಯಾನ್ಸ್ ಮಾಡುವ ಮೂಲಕ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.. ಹೌದು ನಿಖಿಲ್ ಹಾಗೂ ರೇವತಿ ಅವರ ಸಖತ್ ಡ್ಯಾನ್ಸ್ ವೀಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನಿಖಿಲ್ ಅವರಿಗೆ ಶುಭ ಕೋರಿದ್ದಾರೆ ಅಭಿಮಾನಿಗಳು..

ಹೌದು ಎಲ್ಲರಿಗೂ ತಿಳಿದಿರುವಂತೆ ನಿಖಿಲ್ ಹಾಗೂ ರೇವತಿ ಅವರು ಕಳೆದ ವರ್ಷ ಏಪ್ರಿಲ್ ನಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಆ ಬಳಿಕ ಲಾಕ್ ಡೌನ್ ಅದು ಇದು ಅಂತ ಹೊರಗೆಲ್ಲೂ ಹೋಗಲು ಸಾಧ್ಯವಾಗದಿದ್ದರೂ ಬಿಡದಿಯ ತೋಟದಲ್ಲಿಯೇ ನೆಲೆಸಿದ ನಿಖಿಲ್ ರೇವತಿ ಅವರು ಪರಸ್ಪರ ಸಮಯ ನೀಡುವಂತಾಗಿತ್ತು.. ಇನ್ನು ರಾಜಕೀಯ ಸಿನಿಮಾ ಎಲ್ಲಾ ಕೆಲಸಗಳು ನಿಂತಾಗ ಕೃಷಿ ಕಾಯಕದಲ್ಲಿಯೂ ತೊಡಗಿಕೊಂಡಿದ್ದ ಜೋಡಿ ಲಾಕ್ ಡೌನ್ ಎಲ್ಲವೂ ಮುಗಿದ ಬಳಿಕ ತಮ್ಮ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು.. ಅತ್ತ ರೇವತಿ ಅವರು ಆರ್ಕಿಟೆಕ್ಟ್ ಆದ ಕಾರಣ ಅವರೂ ಸಹ ಬಿಡದಿಯಲ್ಲಿಯೇ ಹೊಸದೊಂದು ಪರಿಸರ ಸ್ನೇಹಿ ಮನೆ ನಿರ್ಮಾಣದ ಕೆಲಸಕ್ಕೆ ಕೈ ಹಾಕಿದ್ದರು.. ಇತ್ತ ನಿಖಿಲ್ ಅವರು ರಾಜಕೀಯದ ಜೊತೆಗೆ ರೈಡರ್ ಹಾಗೂ ಇನ್ನೂ ಕೆಲ ಸಿನಿನಾಗಳ ಕೆಲಸಗಳಲ್ಲಿ ತೊಡಗಿಕೊಂಡಿದ್ದರು..

ಇನ್ನು ಈ ವರ್ಷ ಜೀನ್ ತಿಂಗಳಿನಲ್ಲಿ ರೇವತಿ ಅವರ ಹುಟ್ಟುಹಬ್ಬದ ದಿನ ಮಗುವಿನ ಆಗಮನದ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದ ನಿಖಿಲ್ ತಂದೆಯಾಗುವ ಸಂಭ್ರಮದಲ್ಲಿದ್ದರು.. ಇನ್ನು ಮಡದಿಯ ಕನಸಿನಂತೆ ಅದ್ಧೂರಿಯಾಗಿ ಬೆಂಗಳೂರಿನ ಐಶಾರಾಮ ಕನ್ವೆನ್ಷನ್ ಹಾಲ್ ಒಂದರಲ್ಲಿ ಮಡದಿಯ ಸೀಮಂತ ಶಾಸ್ತ್ರವನ್ನು ನೆರವೇರಿಸಿದ್ದರು.. ಇತ್ತ ಸ್ನೇಹಿತರು ಸಂಬಂಧಿಕರು ರಾಜಕೀಯದವರು ಎಲ್ಲರನ್ನೂ ಆಹ್ವಾನಿಸಿ ಅದ್ಧೂರಿಯಾಗಿ ಸೀಮಂತ ಮಾಡಿ ಮಡದಿಯನ್ನು ಸಂತೋಷ ಪಡಿಸಿದ್ದರು.. ಇನ್ನು ಅಂದುಕೊಂಡಂತೆ ಎಲ್ಲವೂ ಆಗಿ ರೇವತಿ ಅವರು ಕೆಲ ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮವನ್ನೂ ಸಹ ನೀಡಿದರು..

ಹೌದು ಕಳೆದ ಸೆಪ್ಟೆಂಬರ್ ಇಪ್ಪತ್ತನಾಲ್ಕರಂದು ರೇವತಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ಕುಮಾರಸ್ವಾಮಿ ಅವರ ಕುಟುಂಬಕ್ಕೆ ವಾರಸ್ದಾರನ ಆಗಮನವಾಗಿತ್ತು.. ಇನ್ನು ತಂದೆಯಾದ ಸಂಭ್ರಮದಲ್ಲಿದ್ದ ನಿಖಿಲ್ ಅವರು ಇತ್ತ ನನ್ನ ಮಗ ಸಾಮಾನ್ಯನಾಗಿ ಬೆಳಿಬೇಕು.. ಹೊರಗೆ ಆತನನ್ನು ಆತನ ವಿಚಾರಗಳನ್ನು ತೋರಿಸಿಕೊಳ್ಳೋದು ಇಷ್ಟವಿಲ್ಲವೆಂದಿದ್ದರು.. ಹೌದು ನಾವುಗಳೆಲ್ಲಾ ಮಧ್ಯಮ ವರ್ಗದ ಕುಟುಂಬದ ಮಕ್ಕಳ ಜೊತೆಯೇ ಬೆಳೆದಿದ್ದು.. ಸಾಮಾನ್ಯರಾಗಿಯೇ ಬೆಳೆದಾಗ ಎಲ್ಲಾ ಕಷ್ಟ ಸುಖಗಳು ಅರ್ಥವಾಗೋದು.. ಆಗ ಮಾತ್ರವೇ ನಿಜವಾದ ಜೀವನದ ಅರ್ಥ ತಿಳಿಯೋದು ನನ್ನ ಮಗನೂ ಸಹ ಹಾಗೆಯೇ ಬೆಳಿಬೇಕು ಎಂದಿದ್ದರು..

ಇನ್ನು ಮಗುವಿನ ಹೆಸರಿನ ಬಗ್ಗೆಯೂ ಮಾತನಾಡಿ ಅವನು ಯಾವ ಯುವರಾಜನೂ ಅಲ್ಲ.. ನಾನು ಯಾವ ಯುವರಾಜನೂ ಅಲ್ಲ.. ನಾವು ಸಾಮಾನ್ಯರಷ್ಟೇ.. ಮನೆಯಲ್ಲಿ ಎಲ್ಲರೂ ಒಂದೊಂದು ಹೆಸರನ್ನು ಹೇಳುತ್ತಿದ್ದಾರೆ.. ಒಂಭತ್ತನೇ ತಿಂಗಳಿನಲ್ಲಿ ಯಾವುದಾದರೂ ಒಂದು ಹೆಸರನ್ನು ಆಯ್ಕೆ ಮಾಡಿ ನಾಮಕರಣ ಮಾಡುವೆವು ಎಂದಿದ್ದರು.. ಇನ್ನು ನನ್ನ ಮಗ ದೇವರು ನನಗೆ ಕೊಟ್ಟ ಅತಿ ದೊಡ್ಡ ಉಡುಗೊರೆ ಎಂದಿದ್ದರು.. ಇನ್ನು ಮದುವೆಯಾದ ಹೊಸತರಲ್ಲಿ ಪತ್ನಿಯೊಟ್ಟಿಗೆ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ನಿಖಿಲ್ ಮಡದಿಗಾಗಿ ಕವಿಯೂ ಸಹ ಆಗಿಬಿಟ್ಟಿದ್ದರು.. ಆದರೆ ಮಗುವಾದ ನಂತರ ಪತ್ನಿ ಜೊತೆಗಿನ ಯಾವುದೇ ಫೋಟೋ ಹಂಚಿಕೊಳ್ಳದ ನಿಖಿಲ್ ಸಧ್ಯ ರೇವತಿಯವರೊಟ್ಟಿಗೆ ಡ್ಯಾನ್ಸ್ ಮಾಡುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹೊಸದೊಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ..

ಹೌದು ನಿಖಿಲ್ ರಾಜಕೀಯವನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಸಿನಿಮಾವನ್ನೂ ಸಹ ಪ್ರೀತಿಸುವರು.. ಅದೇ ಕಾರಣಕ್ಕೆ ಸಕ್ರೀಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದರೂ ಸಹ ಸಿನಿಮಾದಿಂದ ದೂರ ಹೋಗಲಿಲ್ಲ.. ಸಿನಿಮಾನೇ ನನ್ನ ಮೊದಲ ಐಡೆಂಟಿಟಿ.. ಸಿನಿಮಾಗೆ ಬರಲು ನಾನು ಸಾಕಷ್ಟು ಪರಿಶ್ರಮ ಪಟ್ಟು ಸಾಕಷ್ಟು ತಯಾರಿ ಮಾಡಿಕೊಂಡು ಬಂದಿದ್ದೇನೆ.. ಈಗ ನನ್ನ ಕನಸು ರೈಡರ್ ಸಿನಿಮಾ ಇದೇ ಡಿಸೆಂಬರ್ ಇಪ್ಪತ್ತನಾಲ್ಕರಂದು ಬಿಡುಗಡೆಯಾಗುತ್ತಿದೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದಿದ್ದಾರೆ.. ಇತ್ತ ಪತ್ನಿ ರೇವತಿ ಅವರೂ ಸಹ ಗಂಡನ ಸಿನಿಮಾ ಬಿಡುಗಡೆಗೆ ಶುಭ ಹಾರೈಸುವ ಸಲುವಾಗಿ ಸಾಕಷ್ಟ್ಷ್ಟೇಔ ದಿನಗಳ ಬಳಿಕ ಡ್ಯಾನ್ಸ್ ಮೂಲಕ ಶುಭ ಕೋರಿದ್ದಾರೆ.. ಹೌದು ಅದೇ ಸಿನಿಮಾದ ಡವಾ ಡವಾ ಹಾಡಿಗೆ ಪತ್ನಿ ರೇವತಿ ಅವರ ಜೊತೆ ಹೆಜ್ಜೆ ಹಾಕಿದ್ದು ಬಹಳಷ್ಟು ತಿಂಗಳ ಬಳಿಕ ಮತ್ತೆ ಇಬ್ಬರು ಒಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಶುಭ ಹಾರೈಸಿದ್ದಾರೆ..