ನಿಖಿಲ್ ರೇವತಿಗೆ ಯಾವ ಮಗು ಆಗೋದು ಅಂತ ಕುಮಾರಸ್ವಾಮಿ ಅವರಿಗೆ ತಿಳಿಸಿದ ವಿನಯ್ ಗುರೂಜಿ‌.. ಯಾವ ಮಗು ಗೊತ್ತಾ.. ನಿಜಕ್ಕೂ ವಿನಯ್‌ ಗುರೂಜಿ ಹೇಳಿದ್ದೇ ಬೇರೆ..

0 views

ಸ್ಯಾಂಡಲ್ವುಡ್ ನ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರು ತಂದೆಯಾಗುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಹೌದು ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಹಾಗೂ ರೇವತಿ ಜೋಡಿಗೆ ಸಧ್ಯದಲ್ಲಿಯೇ ಮಗು ಆಗಮನವಾಗುತ್ತಿದ್ದು ಈ ಬಗ್ಗೆ ಕಳೆದ ವಾರವಷ್ಟೇ ಸಾಕಷ್ಟು ಸುದ್ದಿಯಾಗಿತ್ತು.. ಕುಮಾರಸ್ವಾಮಿ ಅವರು ಹಾಗೂ ನಿಖಿಲ್ ಅವರಿಬ್ಬರೂ ಸಹ ಸಂತೋಷ ಹಂಚಿಕೊಂಡಿದ್ದರು.. ಆದರೀಗ ನಿಖಿಲ್ ಅವರಿಗೆ ಯಾವ ಮಗು ಆಗುತ್ತದೆ ಎಂದು ವಿನಯ್ ಗುರೂಜಿ ಅವರು ಭವಿಷ್ಯ ನುಡಿದಿದ್ದಾರೆ.. ಹೌದು ನಿಖಿಲ್ ರೇವತಿ ಅವರು ಕಳೆದ ವರ್ಷ ಏಪ್ರಿಲ್ ಹದಿನೇಳರಂದು ಸರಳವಾಗಿ ತಮ್ಮ ರಾಮನಗರದ ಕೇತಗಾನಹಳ್ಳಿಯ ತೋಟದಲ್ಲಿ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು..

ಸಾವಿರಾರು ಜನರ ನಡುವೆ ಅದ್ಧೂರಿಯಾಗಿ ಮದುವೆಯಾಗಬೇಕು ಎಂಬ ಕನದಿಗೆ ಕೊರೊನಾ ಕಾರಣದಿಂದ ಬ್ರೇಕ್ ಬಿದ್ದಿತ್ತು.. ಮದುವೆಗಾಗಿ ಸಕಲ ತಯಾರಿಯೂ ಆರಂಭವಾಗಿ ಸಾಕಷ್ಟು ಖರ್ಚನ್ನು ಸಹ ಮಾಡಿದ್ದರು.. ಆದರೆ ಕೊರೊನಾ ಲಾಕ್ ಡೌನ್ ಆದ ಕಾರಣ ಮದುವೆ ದಿನಾಂಕ ಮುಂದೂಡುವುದು ಬೇಡವೆಂದು ಸರಳವಾಗಿ ಕುಟುಂಬದವರ ಹಾಜರಿಯಲ್ಲಿ ಸಪ್ತಪದಿ ತುಳಿದರು.. ಇನ್ನು ನಂತರದ ದಿನಗಳಲ್ಲಿ ಬಿಡದಿಯ ತಮ್ಮ ತೋಟದಲ್ಲಿಯೇ ಉಳಿದ ನಿಖಿಲ್ ಹಾಗೂ ರೇವತಿ ಅವರು ಹೊಸ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಸಹ ನೆರವೇರಿಸಿದ್ದರು.. ಇನ್ನು ಈ ವರ್ಷ ನಿಖಿಲ್ ಏಪ್ರಿಲ್ ತಿಂಗಳಿನಲ್ಲಿಯೇ ತಾವು ತಂದೆಯಾಗುತ್ತಿರುವ ವಿಚಾರ ತಿಳಿದ ನಿಖಿಲ್ ಅವರು ಹೊರಗೆ ಎಲ್ಲಿಯೂ ಸಂತೋಷ ಹಂಚಿಕೊಂಡಿರಲಿಲ್ಲ..

ಇನ್ನು ಏಪ್ರಿಲ್ ಹದಿನೇಳರಂದು ತಮ್ಮ ವಿವಾಹ ವಾರ್ಷಿಕೋತ್ಸವದ ದಿನವೇ ನಿಖಿಲ್ ಹಾಗೂ ರೇವತಿ ಇಬ್ಬರಿಗೂ ಸಹ ಕೊರೊನಾ ಪಾಸಿಟಿವ್ ಆದ ವಿಚಾರ ತಿಳಿದಿದ್ದು ರೇವತಿ ಅವರು ಗರ್ಭಿಣಿ ಆದ ಕಾರಣ ಕೊಂಚ ಆತಂಕದಲ್ಲಿದ್ದರು.. ಕೊನೆಗೆ ಅದೆಲ್ಲಾ ಕಷ್ಟಗಳಿಂದ ಹೊರ ಬಂದು ರೇವತಿ ಹಾಗೂ ನಿಖಿಲ್ ಅವರು ತಮ್ಮ ಮಗುವಿನ ಆಗಮನದ ಸಂತೋಷದಲ್ಲಿದ್ದರು.. ಇನ್ನು ಮೊನ್ನೆ ಮೊನ್ನೆಯಷ್ಟೇ ಜೂನ್ ಇಪ್ಪತ್ತೊಂದರಂದು ರೇವತಿ ಅವರ ಹುಟ್ಟುಹಬ್ಬವನ್ನು ವಿಶೇಷ ಚೇತನರಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ಮಡದಿಯ ಹುಟ್ಟುಹಬ್ಬವನ್ನು ಆಚರಿಸಿದ್ದರು.. ಇನ್ನು ಅದೇ ದಿನ ರೇವತಿ ಅವರು ಗರ್ಭಿಣಿ ಎಂಬ ವಿಚಾರ ಸಹ ಹೊರ ಬಂತು.. ಆದರೆ ನಿಖಿಲ್ ಅವರು ಮಾತ್ರ ಆಗಲೂ ಈ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ..

ಆದರೆ ಕುಮಾರಸ್ವಾಮಿ ಅವರು ಈ ಬಗ್ಗೆ ಮಾದ್ಯಮ ವೊಂದಕ್ಕೆ ಪ್ರತಿಕ್ರಿಯೆ ನೀಡಿ ಹೌದು ನಮ್ಮ ಕುಟುಂಬಕ್ಕೆ ಮಗು ಆಗಮನವಾಗುತ್ತಿರುವುದು ಸತ್ಯ.. ನನ್ನ ಸೊಸೆ ರೇವತಿ ಐದು ತಿಂಗಳ ಗರ್ಭಿಣಿ.. ಸಧ್ಯದಲ್ಲಿಯೇ ತಾತನಾಗುತ್ತಿದ್ದೇನೆ ಎಂದು ಸಂತೋಷ ಹಂಚಿಕೊಂಡಿದ್ದರು.. ಆದರೆ ನಿಖಿಲ್ ಅವರು ಆಗಲೂ ಸಹ ಹೊರಗೆಲ್ಲೂ ಹೇಳಿಕೊಳ್ಳದೆ ಸುಮ್ಮನಿದ್ದರು.. ಇನ್ನು ಅದಾದ ಕೆಲ ದಿನಗಳ ಬಳಿಕ ರಾಜಕೀಯ ವಿಚಾರವಾಗಿ ಮಾದ್ಯಮದ ಮುಂದೆ ಬಂದ ನಿಖಿಲ್ ಅವರನ್ನು ಈ ಬಗ್ಗೆ ಪ್ರಶ್ನಿಸಲಾಗಿ ಅದು ವ್ಯಯಕ್ತಿಕ ವಿಚಾರ.. ನಾನು ವ್ಯಯಕ್ತಿಕ ವಿಚಾರಗಳನ್ನು ಹೆಚ್ಚು ಎಲ್ಲಿಯೂ ಹೇಳಿಕೊಳ್ಳಲು ಇಷ್ಟ ಪಡುವುದಿಲ್ಲ.. ಆದರೂ ನಾವು ಸಾರ್ವಜನಿಕ ಜೀವನದಲ್ಲಿ ಇರೋದ್ರಿಂದ ಹೇಳುತ್ತಿದ್ದೇನೆ.. ನೀವೆಲ್ಲಾ ಎನು ವಿಚಾರ ಕೇಳಿದ್ದೀರೋ ಅದು ಸತ್ಯ.. ನಾವು ಸಧ್ಯದಲ್ಲಿಯೇ ಎಕ್ಸ್ಪೆಕ್ಟ್ ಮಾಡ್ತಾ ಇದ್ದೀವಿ.. ತಂದೆ ಆಗ್ತಾ ಇದ್ದೀನಿ.. ಎಂದಿದ್ದರು.. ವಿಚಾರ ತಿಳಿದು ಅಭಿಮಾನಿಗಳು ಸ್ನೇಹಿತರು ನಿಖಿಲ್ ಅವರಿಗೆ ಶುಭ ಕೋರಿದ್ದರು..

ಇನ್ನು ಇದೀಗ ನಿಖಿಲ್ ಹಾಗೂ ರೇವತಿ ಅವರಿಗೆ ಯಾವ ಮಗು ಆಗಲಿದೆ ಎಂದು ಅವಧೂತ ವಿನಯ್ ಗುರೂಜಿ ಅವರು ಭವಿಷ್ಯ ನುಡಿದಿದ್ದಾರೆ… ಹೌದು ಬೆಂಗಳೂರಿನಲ್ಲಿ ಶರವಣ ಅವರ ಮನೆಗೆ ಆಗಮಿಸಿದ ವಿನಯ್ ಗುರೂಜಿ ಅವರನ್ನು ಕುಮಾರಸ್ವಾಮಿ ಅವರು ಭೇಟಿ ಮಾಡಿದ್ದರು.. ಅದೇ ಸಮಯದಲ್ಲಿ ಮಗುವಿನ ಬಗ್ಗೆ ಪ್ರಶ್ನೆ ಮಾಡಲಾಗಿ.. ನಿಖಿಲ್ ಅವರಿಗೆ ಗಂಡು ಮಗು ಆಗಲಿದೆ.. ಅವರ ಭವಿಷ್ಯ ಚೆನ್ನಾಗಿದೆ.. ಅವರಿಗೆ ಶಾಸಕನಾಗುವ ಯೋಗವಿದೆ.. ರಾಜಕೀಯ ಜೀವನ ಮುಂದಿನ ದಿನಗಳಲ್ಲಿ ಚೆನ್ನಾಗಿರಲಿದೆ.. ಮಗು ಆಗಮನದ ನಂತರ ಎಲ್ಲವೂ ಶುಭವಾಗಲಿದೆ ಎಂದು ತಿಳಿಸಿದ್ದಾರೆ.. ಅಷ್ಟೇ ಅಲ್ಲದೆ ಕುಮಾರಸ್ವಾಮಿ ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದೀರಿ ಎಂದಿದ್ದಾರೆ ವಿನಯ್‌ ಗುರೂಜಿ.. ಇನ್ನು ಈ ಎಲ್ಲಾ ಶುಭ ಸಮಾಚಾರಗಳನ್ನು ಕೇಳಿದ ಕುಮಾರಸ್ವಾಮಿ ಅವರು ಸಂತೋಷ ಪಟ್ಟಿದ್ದು ವಿನಯ್‌ ಗುರೂಜಿ ಅವರ ಆಶೀರ್ವಾದ ಪಡೆದಿದ್ದಾರೆ ಎನ್ನಲಾಗಿದೆ..