ಈ ವಾರ ಮನೆಯಿಂದ ನಿರ್ಮಲಾ ಹೊರಕ್ಕೆ? ನಿರ್ಮಲಾ ಕುರಿತು ನೋವು ಹಂಚಿಕೊಂಡ ನಿರ್ಮಲಾ ಪತಿ ನಟ ಸತ್ಯ..

0 views

ಬಿಗ್ ಬಾಸ್ ಸೀಸನ್ ಎಂಟು ನೋಡುನೋಡುತ್ತಿದ್ದಂತೆ ಎರಡು ವಾರಗಳು ಕಳೆದು ಹೋಗಿವೆ.. ಅದಾಗಲೇ ಮೊದಲ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಧನುಶ್ರೀ ಮನೆಯಿಂದ ಹೊರ ಬಂದಿದ್ದು ಎರಡನೇ ವಾರ ಮನೆಯಿಂದ ಹೊರ ಬರಲು ಬರೋಬ್ಬರಿ ಎಂಟು ಮಂದಿ ನಾಮಿನೇಟ್ ಆಗಿದ್ದಾರೆ.. ಪ್ರಶಾಂತ್ ಸಂಬರ್ಗಿ.. ವಿಶ್ವನಾಥ್.. ಶುಭ ಪೂಂಜಾ.. ನಿರ್ಮಲಾ.. ಚಂದ್ರಕಲಾ.. ನಿಧಿ ಸುಬ್ಬಯ್ಯ.. ದಿವ್ಯಾ ಸುರೇಶ್.. ಗೀತಾ.. ನಾಮಿನೇಟ್ ಆಗಿದ್ದು ಈ ವಾರ ಒಬ್ಬ ಸದಸ್ಯ ಮನೆಯಿಂದ ಹೊರಬರಲಿದ್ದಾರೆ.. ಲೆಕ್ಕಾಚಾರದ ಪ್ರಕಾರ ನಟಿ ಗೀತಾ ಅಥವಾ ನಿರ್ಮಲಾ ಅವರು ಮನೆಯಿಂದ ಹೊರಬರಲಿದ್ದಾರೆ ಎನ್ನಲಾಗುತ್ತಿದೆ.. ಆದರೆ

ಆದರೆ ಈ ನಡುವೆ ನಿರ್ಮಲಾ ಅವರ ಪತಿ ನಟ ಸತ್ಯ.. ನಿರ್ಮಲಾ ಅವರ ಕುರಿತು ನೋವಿನ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಕೆಲ ದಿನಗಳ ಹಿಂದೆ ನಿರ್ಮಲಾ ಅವರು ಮಧ್ಯ ರಾತ್ರಿಯಲ್ಲಿ ನಡೆದುಕೊಂಡ ರೀತಿ ಬಹಳ ವಿಚಿತ್ರ ಎನಿಸಿತ್ತು.. ಜೊತೆಗೆ ಬರುಬರುತ್ತಾ ನಿರ್ಮಲಾ ಅವರು ಮಾನಸಿಕವಾಗಿ ಸ್ವಲ್ಪ ಕುಗ್ಗಿದ್ದಾರಾ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿತ್ತು.. ಆದರೀಗ ನಿರ್ಮಲಾ ನಡೆದುಕೊಂಡ ರೀತಿಯ ಹಿಂದೆ ಇದ್ದ ನೋವಿನ ಘಟನೆಯನ್ನು ನಿರ್ಮಲಾ ಅವರ ಗಂಡ ಸತ್ಯ ಅವರು ಹಂಚಿಕೊಂಡಿದ್ದಾರೆ..

ಹೌದು ನಿರ್ಮಲಾ ಅವರು ಮಧ್ಯ ರಾತ್ರಿ ಸೀರೆ ಏಕೆ ಉಟ್ಟರು.. ನಿರ್ಮಲಾ ಅವರು ಆ ರೀತಿ ಆಡಲು ನಿಜವಾದ ಕಾರಣ ಏನು ಎಲ್ಲಾ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.. ಹೌದು ಆ ಸೀರೆ ಹಾಗೂ ಮೂಗುತ್ತಿ ನಿರ್ಮಲಾ ಅವರ ಅಜ್ಜಿಯದ್ದು.. ಬಿಗ್ ಬಾಸ್ ಮನೆಯೊಳಗೆ ಬರುವ ಮುನ್ನ ಎಲ್ಲಾ ಸ್ಪರ್ಧಿಗಳನ್ನು ಹದಿನಾಲ್ಕು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.. ಆದರೆ ಕ್ವಾರಂಟೈನ್ ಗೂ ಹೋಗುವ ಹತ್ತು ದಿನಗಳ ಮುನ್ನ ನಿರ್ಮಲಾ ಅವರ ಅಜ್ಜಿ ತೀರಿಕೊಂಡಿದ್ದರು.. ನಿರ್ಮಲಾರನ್ನು ಸಾಕಿದ್ದು ಅದೇ ಅಜ್ಜಿಯಾದ್ದರಿಂದ ನಿರ್ಮಲಾರಿಗೆ ಅಜ್ಜಿ ಕಂಡರೆ ಬಹಳ ಪ್ರೀತಿ.. ಅಜ್ಜಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ನಿರ್ಮಲಾರಿಗೆ ಬಿಗ್ ಬಾಸ್ ಕಾರ್ಯಕ್ರಮ ಶುರುವಾದ ದಿನ ಅಜ್ಜಿಯ ಸೀರೆ ಮತ್ತು ಮೂಗುತಿಯನ್ನು ನೀಡಿದ್ವಿ..

ಆದರೆ ನಿರ್ಮಲಾ ನೇರವಾಗಿ ನಾಮಿನೇಟ್ ಆದ ಕಾರಣ ನಿರ್ಮಲಾರ ಸೂಟ್ ಕೇಸ್ ಅನ್ನು ವಾಪಸ್ ಪಡೆಯಲಾಗಿತ್ತು.. ನಂತರ ಪ್ರಶಾಂತ್ ಸಂಬರ್ಗಿ ಅವರಿಂದ ಸೂಟ್ ಕೇಸ್ ಮರಳಿ ನಿರ್ಮಲಾರ ಕೈ ಸೇರಿತು.. ಅದೇ ದಿನ ರಾತ್ರಿ ಅಜ್ಜಿಯನ್ನು ನೆನಪಿಸಿಕೊಂಡು ಹಳದಿ ಸೀರೆ ಮತ್ತು ಮೂಗುತಿಯನ್ನು ಹಾಕಿಕೊಂಡಿದ್ದಾರೆ.. ಅವಳೇನು ಅಂತ ನನಗೆ ಗೊತ್ತು..

ಆದರೆ ಕೆಲವರು ನಿರ್ಮಲಾರಿಗೆ ಆರೋಗ್ಯ ಸರಿ ಇಲ್ಲ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.. ಅದೆಲ್ಲಾ ಏನೂ ಇಲ್ಲ ಎಂದಿದ್ದಾರೆ.. ನಿರ್ಮಲಾ ಭಾವನೆಗಳ ಬಗ್ಗೆ ಯಾರೂ ಯೋಚನೆಯೇ ಮಾಡಲಿಲ್ಲ.. ಬದಲಿಗೆ ಬಹಳ ಟ್ರೋಲ್ ಮಾಡಿದ್ರು..

ಒಂದು ಹೆಣ್ಣು ರಾತ್ರಿ ಸೀರೆ ಉಟ್ಟುಕೊಂಡರೆ ಅದರಿಂದ ಬೇರೆ ರೀತಿಗ ಗಾಸಿಪ್ ಕ್ರಿಯೇಟ್ ಮಾಡಿದ್ರು.. “ನಿರ್ಮಲಾಳ ಮನಸ್ಸಿನಲ್ಲಿ ಏನೇನು ಯೋಚನೆಗಳು ಬಂದವು ಅನ್ನೋದು ನನಗೆ ಗೊತ್ತಾಗುತ್ತಿತ್ತು.. ಆದರೆ ಅಷ್ಟರಲ್ಲಿ ಅದು ತುಂಬಾ ಟ್ರೋಲ್ ಆಗೋಯ್ತು.. ಅದಕ್ಕಾಗಿಯೇ ಸತ್ಯವನ್ನ ಈಗ ಹೇಳುತ್ತಿದ್ದೇನೆ.. ನೀವೆಲ್ಲ ನನಗೆ ಅನ್ನ ಕೊಟ್ಟಿದ್ದೀರಾ.. ನಾನು ನಿಜ ಹೇಳುತ್ತಿದ್ದೇನೆ.. ಅದು ನಿರ್ಮಲಾ ರವರ ಅಜ್ಜಿ ಸೀರೆ.. ಅಜ್ಜಿಯ ನೆನಪಿನಲ್ಲಿ ಅವರು ಅವತ್ತು ರಾತ್ರಿ ಸೀರೆ ಹಾಕಿಕೊಂಡಿದ್ದಾರೆ.. ಸೀರೆ ಹೆಣ್ಣಿನ ಸಂಸ್ಕೃತಿ.. ಸೀರೆ ಭಾರತದ ಸಂಸ್ಕೃತಿ ಹೌದೋ, ಅಲ್ವೋ.. ಎಂದು ನೋವಿನಿಂದಲೇ ಮಾತನಾಡಿದ್ದಾರೆ..