ಪ್ರೀತಿಸಿ ಮದುವೆಯಾದ ಒಂದೇ ವರ್ಷಕ್ಕೆ ಈಕೆಯ ಸ್ಥಿತಿ ಏನಾಗಿದೆ ನೋಡಿ.. ಮಗಳನ್ನು ಆ‌ ಸ್ಥಿತಿಯಲ್ಲಿ ಕಂಡು ಬೆಚ್ಚಿಬಿದ್ದ ಹೆತ್ತವರು..

0 views

ಪ್ರೀತಿ ಪ್ರೇಮ ಎಲ್ಲವೂ ಸರಿಯಿದ್ದರೇ ಜೀವನ ಸುಖಮಯ.. ಆದರೆ ಅದೇ ಪ್ರೀತಿ ಪ್ರೇಮ ಏರು ಪೇರಾಯಿತೋ ಜೀವನ ನಿಜಕ್ಕೂ ಯಾರಿಗೂ ಬೇಡವೆನ್ನುವಂತಾಗಿ ಹೋಗುತ್ತದೆ.. ಆದರೆ ಇಲ್ಲೊಬ್ಬ ಹೆಣ್ಣು ಮಗಳು ಪ್ರೀತಿಸಿ ಮನೆಯವರು ಎಷ್ಟೇ ಬೇಡವೆಂದರೂ ಸಹ ಮನೆಯವರನ್ನು ಬಿಟ್ಟು ಪ್ರೀತಿಸಿದವನ‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು.. ಮದುವೆಯ ನಂತರ ಬದುಕು ಸುಂದರ ಎಂದುಕೊಂಡ ಆ ಜೀವ ಮದುವೆಯಾದ ಒಂದೇ ವರ್ಷಕ್ಕೆ ಏನಾಗಿ ಹೋಗಿದೆ ನೋಡಿ.. ಈಗ ಮಗಳ ಸ್ಥಿತಿ ಕಂಡು ಹೆತ್ತವರು ಕುಸಿದು ಬಿದ್ದಿದ್ದಾರೆ..

ಹೌದು ಈ ಹೆಣ್ಣು ಮಗಳ ಹೆಸರು ಅನುಪಮಾ.. ವಯಸ್ಸು ಕೇವಲ ಇಪ್ಪತ್ತು.. ಬದುಕಿ ಬಾಳಬೇಕಾದ ಹೆಣ್ಣು ಮಗಳು.. ಆದರೆ ಆಗಿದ್ದೇ ಬೇರೆ.. ಹೌದು ಅನುಪಮಾ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬೇಳೂರು ಗ್ರಾಮದ ನಿವಾಸಿ.. ಅನುಪಮಾ ಕಳೆದ ಒಂದೂವರೆ ವರ್ಷದ ಹಿಂದೆ ಅದೇ ಗ್ರಾಮದ ನಿತೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು.. ಇತ್ತ ಅನುಪಮಾ ಅವರ ಮನೆಗೆ ಮಗಳ ಪ್ರೀತಿಯ ವಿಚಾರ ತಿಳಿದು ಅವನು ನಿನಗೆ ತಕ್ಕವನಲ್ಲ ಎಂದು ಮದುವೆಗೆ ವಿರೋಧ ವ್ಯಕ್ತ ಪಡಿಸಿದರು.. ಆದರೆ ಅನುಪಮಾ ಮಾತ್ರ ನಿತೇಶನೇ ಬೇಕು ಎಂದು ಹಟ ಮಾಡಿ ಮನೆಯವರ ಬಿಟ್ಟು ನಿತೇಶನನ್ನೇ ಮದುವೆಯಾದಳು..

ಆದರೆ ಮದುವೆಯಾದ ತಿಂಗಳಲ್ಲಿಯೇ ಜೀವನ ಬದಲಾಗಿ ಹೋಯ್ತು.. ಹೌದು ನೂರಾರು ಕನಸು ಕಂಡು ನಿತೇಶನನ್ನು ಅನುಪಮಾ ಕೈ ಹಿಡಿದಳು.. ಮದುವೆಯ ನಂತರ ಹಾಗಿರಬೇಕು ಹೀಗಿರಬೇಕು ಎಂದು ಸಾಕಷ್ಟು ಕನಸು ಕಂಡಿದ್ದಳಂತೆ.. ಆದರೆ ಮದುವೆಯಾದ ಒಂದೇ ತಿಂಗಳಿಗೆ ಕೆಲಸಕ್ಕೆ ಹೋಗು ಎಂದು ಅನುಪಮಾಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದನಂತೆ ಪತಿ ನಿತೇಶ್.. ಇತ್ತ ಆಗಿದ್ದು ಆಗಿ ಹೋಯ್ತು ಎಂದು ಮಗಳನ್ನು ಕ್ಷಮಿಸಿ ಅನುಪಮಾಳ ಹೆತ್ತವರು‌ ಮಗಳನ್ನು ಭೇಟಿ ಮಾಡಿ ಆಗಾಗ ಮಾತನಾಡಿಸಿ ಅವಳ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದರಂತೆ.. ಆ ಸಮಯದಲ್ಲಿ ಆಕೆ ತನ್ನ ತಾಯಿಯ ಜೊತೆ ಕೆಲಸಕ್ಕೆ ಹೋಗೋದು ಇಷ್ಟವಿಲ್ಲ ಎಂದರೂ ಸಹ ಕೆಲಸಕ್ಕೆ ಕಳುಹಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಳಂತೆ..

ಇನ್ನು ಪ್ರೀತಿಸಿ ಆಗಿರುವ ಮದುವೆ.. ಈಗ ಹೆತ್ತವರ ಮನೆಗೆ ಹೋದರೆ ಗೌರವ ಇರುವುದಿಲ್ಲ ಎಂದು ಅನುಪಮಾ ಸಾಕಷ್ಟು ನೋವಿದ್ದರೂ ನಿತೇಶನ ಜೊತೆಯೇ ಜೀವನ ಮಾಡುತ್ತಿದ್ದಳಂತೆ.. ಆದರೆ ಈಗ ಮದುವೆಯಾಗಿ ಒಂದು ವರ್ಷ ಕಳೆಯುತ್ತಿದ್ದಂತೆ ಅನುಪಮಾ ಇದ್ದಕಿದ್ದ ಹಾಗೆ ಜೀವ ಕಳೆದುಕೊಂಡ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ.. ಹೌದು ಮದುವೆಯ ನಂತರ ನಿತೇಶ ಹಾಗೂ ಕುಟುಂಬಸ್ಥರು ಅನುಪಮಾಳನ್ನು ಚೆನ್ನಾಗಿ ನೋಡಿಕೊಳ್ಳದೇ ಹಿಂಸೆ ನೀಡುತ್ತಿದ್ದರು ಎಂದು ಅನುಪಮಾಳ ಹೆತ್ತವರು ತಿಳಿಸಿದ್ದಾರೆ.. ಅಷ್ಟಕ್ಕೂ ಇದ್ದಕಿದ್ದ ಹಾಗೆ ಏನಾಯಿತು.. ಹೌದು ನಿನ್ನೆ ಏಪ್ರಿಲ್ ಇಪ್ಪತ್ತೇಳರಂದು ಮಧ್ಯಾಹ್ನ ಹನ್ನೆರೆಡು ಮೂವತ್ತಕ್ಕೆ ಅನುಪಮಾಳನ್ನು ನಿತೇಶ್ ತನ್ನ ಸಂಬಂಧಿಕ ದಿನೇಶ್ ಎಂಬುವವರ ಮನೆಗೆ ಕರೆದುಕೊಂಡು ಹೋಗಿದ್ದಾನೆ..

ಆ ಸಮಯದಲ್ಲಿ ಇದ್ದಕಿದ್ದ ಹಾಗೆ ಕುಸಿದು ಬಿದ್ದಿದ್ದಾಳೆ ಎಂದಿದ್ದು ಆಕೆಯನ್ನು ಬಾಳಲೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.. ಆದರೆ ಆಸ್ಪತ್ರೆಗೆ ಬರುವ ಮುನ್ನವೇ ಅನುಪಮಾ ಕೊನೆಯುಸಿರೆಳೆದು ಬಿಟ್ಟಿದ್ದಳು.. ನಂತರ ಈ ವಿಚಾರವನ್ನು ನಿತೀಶ್ ಅನುಪಮಾಳ ಹೆತ್ತವರಿಗೆ ತಿಳಿಸಿದ್ದು ತಕ್ಷಣ ಆಸ್ಪತ್ರೆಗೆ ಓಡಿ ಬಂದ ಅನುಪಮಾಳ ಹೆತ್ತವರು ಮಗಳನ್ನು ನೋಡಿದಾಗ ಅವಳು ಇದ್ದ ಸ್ಥಿತಿ ನೋಡಿ ಅವರಿಗೆ ಅನುಮಾನ ಉಂಟಾಗಿದೆ.. ಅನುಮಾನಾಸ್ಪದ ರೀತಿಯಲ್ಲಿ ಮಗಳು ಜೀವ ಕಳೆದುಕೊಂಡಿದ್ದನ್ನು ಗಮನಿಸಿದ ಪೋಷಕರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.. ಇನ್ನು ಇತ್ತ ಅನುಪಮಾಳ ಗಂಡ ನಿತೇಶ ಹೇಳುವ ಕತೆಯೇ ಬೇರೆಯಾಗಿದೆ.. ಹೌದು ಅನುಪಮಾ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು.. ಅವಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಮಾಡಿಸಿದ್ದೆವು.. ಆದರೆ ಅದು ಫಲಕಾರಿಯಾಗದೇ ಅವಳು ಕೊನೆಯುಸಿರೆಳೆದಿದ್ದಾಳೆ ಎಂದಿದ್ದಾನೆ..

ಸಧ್ಯ ಪೊನ್ನಂಪೇಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.. ಹದಿನೆಂಟು ವರ್ಷಗಳ ಕಾಲ ಚೆನ್ನಾಗಿದ್ದ ಮಗಳು.. ಮನೆಯಲ್ಲಿ ಸಂತೋಷದಿಂದ ಬೆಳೆದ ಮಗಳು ಕೇವಲ‌ ಒಂದೂವರೆ ವರ್ಷದಲ್ಲಿ ಯಾರನ್ನೋ ಪ್ರೀತಿಸಿ ಮದುವೆಯಾಗಿ ಈಗ ಈ ರೀತಿ ಕಾರಣವೇ ತಿಳಿಯದಂತೆ ಜೀವ ಕಳೆದುಕೊಂಡು ಬಿದ್ದಿರುವ ಸ್ಥಿತಿ ಕಂಡು ಆಕೆಯ ಹೆತ್ತವರು ಕುಸಿದು ಬಿದ್ದಿದ್ದಾರೆ.. ಒಂದೂ ವರೆ ವರ್ಷದಲ್ಲಿ ನಡೆದ ಘಟನೆಗಳಿಂದಾಗಿ ಎದೆ ಎತ್ತರಕ್ಕೆ ಬೆಳೆದ ಮಗಳೇ ಇಲ್ಲವಾಗಿ ಹೋದಳು.. ಇದಕ್ಕೆಲ್ಲಾ ಕಾರಣನಾದವನಿಗೆ ಸರಿಯಾದ ಶಿಕ್ಷೆಯಾಗಬೇಕು..

ಯಾವ ಹೆಣ್ಣು ಮಕ್ಕಳೂ ಸಹ ಪ್ರೀತಿ ಪ್ರೇಮ ಅಂತ ಹೆತ್ತವರ ಬಿಟ್ಟು ಹೋಗಿ ಕೊನೆಗೆ ದಿಕ್ಕಿಲ್ಲದಂತೆ ಈ ರೀತಿ ಆಗಬೇಡಿ ಎಂದು ಆಕೆಯ ಹೆತ್ತವರು ಅಳಲು ತೋಡಿಕೊಂಡಿದ್ದು ಮಗಳನ್ನು ಕಳೆದುಕೊಂಡ ಅವರ ಆಕ್ರಂದನ‌ ಮುಗಿಲು ಮುಟ್ಟಿತ್ತು.. ಪ್ರೀತಿ ಪ್ರೇಮ ಯಾವುದೂ ತಪ್ಪಿಲ್ಲ ನಿಜ.. ಆದರೆ ಅದು ಸರಿಯಾದವರ ಜೊತೆಯಾದರೆ ಮಾತ್ರ.. ಅದಕ್ಕೂ ಮೀರಿ ಜೀವನದಲ್ಲಿ ತಿಳುವಳಿಕೆ ಬರುವ ಮುನ್ನವೇ ಸಣ್ಣ ಸಣ್ಣ ವಯಸ್ಸಿನಲ್ಲಿ ಆಗುವ ಆಕರ್ಷಣೆಗಳನ್ನೇ ಪ್ರೀತಿ ಎಂದುಕೊಂಡು ದುಡುಕಿ ಅಪ್ಪ ಅಮ್ಮನನ್ನು ಬಿಟ್ಟು ಪ್ರೀತಿಸಿದವನ ಹಿಂದೆ ಹೋಗಿ ಅತ್ತ ಬದುಕಲೂ ಆಗದೇ ಮರಳಿ‌ ಹೆತ್ತವರ ಮಡಿಲು ಸೇರಲಾಗದೇ ಈ ರೀತಿ ದಿಕ್ಕಿಲದ ಹಾಗೆ ಆಗುವುದು ಬೇಡ.. ಅನುಪಮಾಳ ಹೆತ್ತವರಿಗೆ ಈ ನೋವು ತಡೆಯುವ ಶಕ್ತಿ ನೀಡಲಿ ಆ ದೇವರು..