ಪ್ರಣಿತಾ ಮದುವೆಯಾದ ಕೋಟ್ಯಾಧಿಪತಿ ನಿತಿನ್‌ ರಾಜ್‌ ನಿಜಕ್ಕೂ ಯಾರು ಗೊತ್ತಾ? ಮದುವೆಯಾದ ಒಂದೇ ದಿನಕ್ಕೆ ಏನಾಗಿದೆ ನೋಡಿ..

0 views

ಸ್ಯಾಂಡಲ್ವುಡ್ ಹಾಗೂ ತಮಿಳು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತಿ ಗಳಿಸಿರುವ ನಟಿ ಪ್ರಣಿತಾ ಇದೀಗ ಇದ್ದಕ್ಕಿದ್ದ ಹಾಗೆ ಸದ್ದಿಲ್ಲದೇ ಮದುವೆಯಾಗಿ ಸುದ್ದಿಯಾಗಿದ್ದಾರೆ.. ಹೌದು ನಿನ್ನೆಯಷ್ಟೇ ಪ್ರಣಿತಾ ಕೋಟ್ಯಾಧಿಪತಿ ನಿತಿನ್ ರಾಜ್ ಅವರ ಜೊತೆ ರೆಸಾರ್ಟ್ ಒಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇದೀಗ ಒಂದೇ ದಿನಕ್ಕೆ ಪ್ರಣಿತಾ ಕ್ಷಮೆ ಕೇಳುವಂತಾಗಿದೆ.. ಹೌದು ಪ್ರಣಿತಾ ಪೊರ್ಕಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಕಾಲಿಟ್ಟರು.. ಮೊದಲ ಸಿನಿಮಾದಲ್ಲಿಯೇ ದರ್ಶನ್ ಅವರಿಗೆ ನಾಯಕಿಯಾಗುವ ಅವಕಾಶ ಸಿಕ್ಕ ಕಾರಣ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದರು.. ನಂತರ ತಮಿಳು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿಯೂ ಪ್ರಣಿತಾ ಬ್ಯುಸಿಯಾದರು.. ಸಧ್ಯ ಬಾಲಿವುಡ್ ಗೂ ಕಾಲಿಡುತ್ತಿದ್ದು ಅಲ್ಲಿಯೂ ಅವಕಾಶ ಪಡೆದಿದ್ದಾರೆ.‌.

ಇನ್ನೂ ನಟನೆ ಮಾತ್ರವಲ್ಲದೇ ಪ್ರಣಿತಾ ತಮ್ಮ ಸಮಾಜ ಮುಖಿ ಕಾರ್ಯದಿಂದಲೂ ಜನರಿಗೆ ಹೆಚ್ಚು ಇಷ್ಟ ವಾಗ್ತಾರೆ.. ಹೌದು ಪ್ರಣಿತಾ ನಟನೆ ಮಾತ್ರವಲ್ಲದೇ ಸಮಾಜ ಮುಖಿ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಕಷ್ಟದಲ್ಲಿರುವ ಸಾಕಷ್ಟು ಜನರಿಗೆ ನೆರವಾಗಿದ್ದಾರೆ.. ಇನ್ನು ಸಧ್ಯ ನಿನ್ನೆ ಇದ್ದಕ್ಕಿದ್ದ ಹಾಗೆ ಯಾರಿಗೂ ತಿಳಿಸದೇ ಮದುವೆಯಾಗಿರುವ ಪ್ರಣಿತಾ ಅವರು ಇಂದು ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರೊಬ್ಬರು ಮದುವೆಯ ಫೋಟೋ ಹಂಚಿಕೊಂಡ ನಂತರವಷ್ಟೇ ಜನರಿಗೆ ವಿಚಾರ ತಿಳಿದಿದೆ.. ಸಾಮಾಜಿಕ ಜಾಲತಾಣದಲ್ಲಾಗಲಿ ಅಥವಾ ಮಾದ್ಯಮದ ಜೊತೆಯಾಗಲಿ ಎಲ್ಲಿಯೂ ತಮ್ಮ ಮದುವೆ ವಿಚಾರವನ್ನು ಹೇಳಿಕೊಂಡಿರಲಿಲ್ಲ..

ಆದರೀಗ ಪ್ರಣಿತಾ ಅವರು ಮದುವೆಯಾಗಿರುವ ಹುಡುಗ ನಿತಿನ್ ರಾಜ್ ಅವರ ಬಗ್ಗೆ ಸಾಕಷ್ಟು ಕುತೂಹಲ ಮೂಡಿದ್ದು ಅವರು ನಿಜಕ್ಕೂ ಯಾರು ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ.. ನಿತಿನ್ ರಾಜ್ ಅವರಿಗೂ ಹಾಗೂ ಪ್ರಣಿತಾ ಅವರಿಗೂ ಕಾಮನ್ ಸ್ನೇಹಿತರೊಬ್ಬರು ಇದ್ದರು.. ಅವರ ಮೂಲಕ ಈ ಇಬ್ಬರಿಗೂ ಕೆಲ ವರ್ಷಗಳ ಹಿಂದೆ ಪರಿಚಯವಾಗಿದೆ.. ನಂತರ ಇಬ್ಬರೂ ಸಹ ಆಪ್ತ ಸ್ನೇಹಿತರಾಗಿದ್ದು ಆತ್ಮೀಯರಾಗಿದ್ದಾರೆ.. ನಂತರ ಸ್ನೇಹ ಪ್ರೀತಿಯಾಗಿದ್ದು ಇದೀಗ ಆ ಪ್ರೀತಿಗೆ ಒಂದು ಅರ್ಥ ನೀಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..

ಇನ್ನು‌ ನಿತಿನ್ ರಾಜ್ ಅವರು ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಪದವಿ‌ ಮಾಡಿದ್ದು ಕಳೆದ ನಾಲ್ಕು ವರ್ಷದಿಂದ ಪ್ರತಿಷ್ಠಿತ ಬ್ಲೂ ಹಾರಿಜನ್ ಹೊಟೆಲ್ ಗ್ರೂಪ್ ನ ನಿರ್ದೇಶಕರಾಗಿದ್ದಾರೆ.. ಅಷ್ಟೇ ಅಲ್ಲದೇ ಇನ್ನೂ ಕೆಲ ಕಂಪನಿಗಳ ನಿರ್ದೇಶಕ ರಾಗಿದ್ದು.. ಇವರು ಕಲೇದ ಹತ್ತು ವರ್ಷದ ಹಿಂದೆ ತಮ್ಮದೇ ಆದ ಸ್ವಂತ ಕಂಪನಿಯೊಂದನ್ನೂ ಸಹ ತೆರೆದಿದ್ದು ನೂರಾರು ಜನರಿಗೆ ಕೆಲಸ ನೀಡಿದ್ದಾರೆ.. ಅಭಿವೃದ್ಧಿ ಪಥದತ್ತ ನಿತಿನ್ ರಾಜ್ ಅವರ ಕಂಪನಿ ಸಾಗುತ್ತಿದ್ದು ಯಶಸ್ವಿ ಉದ್ಯಮಿಯಾಗಿ ಹೆಸರು ಮಾಡಿದ್ದಾರೆ.. ಸಧ್ಯ ಪ್ರಣಿತಾ ಅವರ ಜೊತೆ ನಿನ್ನೆ ಕನಕಪುರ ರಸ್ತೆಯಲ್ಲಿನ ಖಾಸಗಿ ರೆಸಾರ್ಟ್ ಒಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇದೀಗ ಪ್ರೀತಿಸಿದ ಹುಡುಗಿಯೊಟ್ಟಿಗೆ ಹೊಸ ಜೀವನ ಆರಂಭಿಸಿದ್ದಾರೆ.. ಇನ್ನು ಇಂದು ಮದುವೆಯಾದ ಒಂದೇ ದಿನಕ್ಕೆ ಪ್ರಣಿತಾ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳುವಂತಾಗಿದೆ..

ಹೌದು “ದಯವಿಟ್ಟು ಎಲ್ಲರಲ್ಲಿಯೂ ಕ್ಷಮೆ ಕೇಳುತ್ತಿರುವೆ.. ನಿನ್ನೆಯಷ್ಟೇ ನಾವು ಮದುವೆಯಾಗಿದ್ದೇವೆ ಎಂಬ ವಿಚಾರವನ್ನು ತಿಳಿಸಲು ಇಷ್ಟ ಪಡುತ್ತಿದ್ದೇನೆ.. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಯಾರನ್ನೂ ಸಹ ಮದುವೆಗೆ ಆಮಂತ್ರಿಸಲು ಸಾಧ್ಯವಾಗಲಿಲ್ಲ.. ನಿಮ್ಮಲ್ಲರ ಆಶೀರ್ವಾದ ಪಡೆದೇ ಮದುವೆಯಾಗಬೇಕೆಂಬ ಆಸೆ ಇತ್ತು.. ಆದರೆ ಸಧ್ಯದ ಕೊರೊನಾ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗದ ಕಾರಣ ಮದುವೆ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿದೆ.. ಮದುವೆ ದಿನಾಂಕವನ್ನು ತಿಳಿಸಿ ನಿಮಗೆಲ್ಲರಿಗೂ ತೊಂದರೆ ಕೊಡುವ ಮನಸ್ಸು ಇರಲಿಲ್ಲ.. ಅದೇ ಕಾರಣಕ್ಕೆ ವಿಚಾರ ತಿಳಿಸಿರಲಿಲ್ಲ.. ದಯವಿಟ್ಟು ನಮ್ಮ ಕ್ಷಮೆಯನ್ನು ಒಪ್ಪಿಕೊಳ್ಳಿ.. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ” ಎಂದು ಬರೆದು ಪೋಸ್ಟ್ ಮಾಡಿದ್ದು ಸಧ್ಯ ಅಭಿಮಾನಿಗಳು ಸ್ನೇಹಿತರು ಆಪ್ತರು ಸಿನಿಮಾ ಸ್ನೇಹಿತರು ನೂತನ ಜೋಡಿಗೆ ಶುಭಾಶಯ ತಿಳಿಸಿ ಶುಭ ಹಾರೈಸಿದ್ದಾರೆ..