ರಾ ರಾ ರಕ್ಕಮ್ಮ ಹಾಡಿಗೆ ಕುಣಿಯಲು ಹೋದ ನಿವೇದಿತಾ.. ಆದರೆ ಆಗಿದ್ದೇ ಬೇರೆ..

0 views

ಈಗೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಹೆಚ್ಚಾಗಿದೆ. ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ, ಇತ್ತೀಚೆಗೆ ತೆರೆಕಂಡ ಆರ್.ಆರ್.ಆರ್ ಮತ್ತು ಕೆಜಿಎಫ್2 ಸಿನಿಮಾಗಳು ಭಾರತಾದ್ಯಂತ ಎಷ್ಟರ ಮಟ್ಟದಲ್ಲಿ ಸದ್ದು ಮಾಡಿದೆ ಎನ್ನುವುದನ್ನು ಈಗಾಗಲೇ ನೋಡಿದ್ದೇವೆ. ಇದೀಗ ಇದೇ ಸಾಲಿಗೆ ಸೇರುತ್ತಿರವುದು ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ. ರಂಗಿತರಂಗ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಕಿಚ್ಚ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಈಗಾಗಲೇ ಟೀಸರ್ ಮೂಲಕ ಸುದೀಪ್ ಅವರ ಅಭಿಮಾನಿಗಳಿಗೆ ಕ್ರೇಜ್ ಹೆಚ್ಚಿಸಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ಜುಲೈ 28 ರಂದು, ಪ್ರಪಂಚಾದ್ಯಂತ ಅಬ್ಬರಿಸಲಿದ್ದಾನೆ ವಿಕ್ರಾಂತ್ ರೋಣ..

ಸಿನಿಮಾದ ಪ್ರೊಮೋಷನ್ ಈಗಾಗಲೇ ಶುರುವಾಗಿದ್ದು, ಇತ್ತೀಚೆಗೆ ರಾ ರಾ ರಕ್ಕಮ್ಮ ಹಾಡನ್ನು ಬಿಡುಗಡೆ ಮಾಡಿ, ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ ವಿಕ್ರಾಂತ್ ರೋಣ ಚಿತ್ರರಂಗದ. ಹಾಡಿಗೆ ನೀಡಿರುವ ಸಂಗೀತ, ಹಾಡಿನ ಸಾಹಿತ್ಯ, ಅದರಲ್ಲಿ ಕಿಚ್ಚ ಸುದೀಪ್ ಅವರು ಮತ್ತು ಶ್ರೀಲಂಕಾ ಬ್ಯೂಟಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸ್ಟೆಪ್ ಹಾಕಿರುವ ರೀತಿಗೆ ವೀಕ್ಷಕರು ಫಿದಾ ಆಗಿದ್ದು, ಹಾಡನ್ನು ಪದೇ ಪದೇ ಕೇಳಿ ಗುನುಗುತ್ತಿದ್ದಾರೆ. ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎಂದು ದಿನಗಳನ್ನು ಎಣಿಸುತ್ತಿದ್ದಾರೆ ಕಿಚ್ಚನ ಅಭಿಮಾನಿಗಳು. 10 ಭಾಷೆಗಳಲ್ಲಿ ಬಿಡುಗಡೆ ಆಗುವ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ದಿನ ಥಿಯೇಟರ್ ನಲ್ಲಿ ಹಬ್ಬ ಮಾಡುವುದಂತೂ ಖಂಡಿತ.

ಇನ್ನು ರಾ ರಾ ರಕ್ಕಮ್ಮ ಹಾಡು ಎಲ್ಲರಿಗೂ ಒಂದು ರೀತಿಯ ಅಡಿಕ್ಷನ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ, ಯೂಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆಯುತ್ತಿದೆ. ರಾ ರಾ ರಕ್ಕಮ್ಮ ಹಾಡಿನ ಹವಾ ಹೇಗಿದೆ ಅಂದ್ರೆ, ಸಾಕಷ್ಟು ಸೆಲೆಬ್ರಿಟಿಗಳಿಗೂ ಸಹ ಈ ಹಾಡು ತುಂಬಾ ಇಷ್ಟವಾಗಿದ್ದು, ಎಲ್ಲರು ರಕ್ಕಮ್ಮ ಹಾಡಿಗೆ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡಿ ಸೊಂಟ ಬಳುಕಿಸಿದ್ದಾರೆ. ಸ್ವತಃ ಸುದೀಪ್ ಅವರು ಸಹ ಮೊದಲ ಬಾರಿಗೆ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿ, ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಇಂದಲೇ ಫೇಮಸ್ ಆಗಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿ ಸಹ ರಕ್ಕಮ್ಮ ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ.

ನಿವೇದಿತಾ ಮತ್ತು ಚಂದನ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಜೋಡಿ, ಟ್ರೆಂಡ್ ಆಗುವ ಹಾಡುಗಳಿಗೆ ಆಗಾಗ ಸ್ಟೆಪ್ ಹಾಕುತ್ತಾರೆ. ವಿವಿಧವಾದ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿ, ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಇದೀಗ ವೈರಲ್ ಆಗಿರುವ ರಾ ರಾ ರಕ್ಕಮ್ಮ ಹಾಡಿಗೆ ಚಂದನ್ ನಿವೇದಿತಾ ಜೋಡಿ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಕಪ್ಪು ಬಣ್ಣದ ಡ್ರೆಸ್ ನಲ್ಲಿ ನಿವೇದಿತಾ, ಕಪ್ಪು ಮತ್ತು ಕೆಂಪು ಬಣ್ಣ ಧರಿಸಿರುವ ಚಂದನ್ ಶೆಟ್ಟಿ, ಇಬ್ಬರು ಸಹ ಸ್ಟೈಲಿಶ್ ಆಗಿ ಸ್ಟೆಪ್ಸ್ ಹಾಕಿದ್ದು ಇವರಿಬ್ಬರ ರೀಲ್ಸ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಮೆಂಟ್ಸ್ ಬರೆಯುತ್ತಿದ್ದಾರೆ.

ಮೊದಲು ಸಹ ಹೀಗೆ ರೀಲ್ಸ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು ನಿವೇದಿತಾ ಗೌಡ. ತಾವು ಅಪ್ಲೋಡ್ ಮಾಡುವ ಫೋಟೋಗಳಿಂದಲೂ ಸಹ ಆಗಾಗ ಟ್ರೋಲ್ ಆಗುತ್ತಾರೆ. ಈಗ ರಾ ರಾ ರಕ್ಕಮ್ಮ ಹಾಡಿಗೆ ಸ್ಟೆಪ್ ಹಾಕಿ ಕೂಡ ಟ್ರೋಲ್ ಆಗಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ, ಈ ಹಾಡು ನಿನಗೆ ಯಾಕಮ್ಮ ಬೇಕು ಎನ್ನುತ್ತಿದ್ದಾರೆ. ಆದರೆ ವಿಡಿಯೋ ವೈರಲ್ ಆಗಿರುವುದಂತೂ ಸತ್ಯ. ಇನ್ನು ಈ ಹಾಡಿನಲ್ಲಿ ಸ್ಟೆಪ್ ಹಾಕಿರುವ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಕಿಚ್ಚ ಸುದೀಪ್ ಅವರು ಕನ್ನಡ ಕಲಿಸಿದ್ದು, ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಪಟ್ಟಿದ್ದಾರೆ ಜಾಕ್ವೆಲಿನ್. ವಿಕ್ರಾಂತ್ ರೋಣ ಸಿನಿಮಾ ಎಲ್ಲಾ ಭಾಷೆಗಳಲ್ಲೂ ಹೆಸರು ಮಾಡಲಿ ಎಂದು ಹಾರೈಸೋಣ.