ರಾಜ್ಯದಲ್ಲಿ ಇಬ್ಬರಲ್ಲಿ ಓಮ್ರಿಕಾನ್ ಪತ್ತೆ.. ಆದರೆ ಆ ಇಬ್ಬರು ನಿಜಕ್ಕೂ ಯಾರು ಗೊತ್ತಾ.. ನಿಜಕ್ಕೂ ಶಾಕಿಂಗ್..

0 views

ಅದಾಗಲೇ ಕೊರೊನಾ ಕೊಟ್ಟ ಪೆಟ್ಟನ್ನೇ ನಾವುಗಳು ಇನ್ನೂ ಸಹ ಸುಧಾರಿಸಿಕೊಳ್ಳಲು ಆಗುತ್ತಿಲ್ಲ.. ಎರಡು ವರ್ಷ ಆಗುತ್ತಾ ಬಂದರು ಜನ ಜೀವನ ಮೊದಲಿನಂತೆ ಆಗಲಿಲ್ಲ.. ಮಧ್ಯಮ ವರ್ಗದವರ ಪಾಡು ಭಗವಂತನಿಗೇ ಪ್ರೀತಿ.. ಸಾಲಗಳನ್ನು ತೀರಿಸಲಾಗುತ್ತಿಲ್ಲ.. ಆದರೆ ಕೆಲ ತಿಂಗಳಿನಿಂದ ಕೊಂಚ ನಿಟ್ಟುಸಿರು ಬಿಡುವಂತಾಗಿತ್ತು.. ದುಡಿಯಲು ದಾರಿಗಳು ತೆರೆದವು ಎಂದುಕೊಂಡೆವು.. ಆದರೀಗ ಕೊರೊನಾ ನಂತರ ರೂಪಾಂತರ ತಳಿ ಎಂದು ಅದಾಗಲೇ ಕೆಲವೊಂದು ವೈರಸ್ ಗಳು ಕಾಲಿಟ್ಟಿದೆ.. ಅದರಲ್ಲೂ ಓಮ್ರಿಕಾನ್ ಎಂಬ ಹೊಸ ತಳಿ ಕೊರೊನಾಗಿಂತ ಐದು ಪಟ್ಟು ಹೆಚ್ಚು ಸಾಂಕ್ರಾಮಿಕ ಎಂದು ಆರೋಗ್ಯ ಇಲಾಖೆ ತಿಳಿಸಿದೆ.. ಅದರಲ್ಲೂ ಈ ಓಮ್ರಿಕಾನ್ ನಮ್ಮ ರಾಜ್ಯದಲ್ಲಿಯೇ ಪತ್ತೆಯಾಗಿರುವುದು ನಿನಕ್ಕೂ ಆತಂಕವನ್ನುಂಟು ಮಾಡಿದೆ..

ಹೌದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಓಮಿಕ್ರಾನ್ ಸಧ್ಯ ವಿಶ್ವದ 29 ದೇಶಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ಒಟ್ಟು 373 ಮಂದಿ ಸೋಂಕಿಗೆ ಗುರಿಯಾಗಿದ್ದಾರೆ.. ಭಾರತದಲ್ಲಿ ಈವರೆಗೆ ಎರಡು ಪ್ರಕರಣಗಳು ಪತ್ತೆಯಾಗಿದ್ದು ಎರಡೂ ಪ್ರಕರಣ ಸಹ ನಮ್ಮ ಕರ್ನಾಟಕದಲ್ಲಿಯೇ ಕಾಣಿಸಿಕೊಂಡಿದೆ..ಹೌದು ಕೇಂದ್ರ ಸರ್ಕಾರ ಇಂದು ನೀಡಿರುವ ಮಾಹಿತಿ ಪ್ರಕಾರ ಇಬ್ಬರು ಸೋಂಕಿತರೂ ಸಹ ಬೆಂಗಳೂರಿನ ನಿವಾಸಿಗಳಾಗಿದ್ದಾರೆ.. ಒಬ್ಬರಿಗೆ ನಲವತ್ತಾರು ವರ್ಷ ಮತ್ತೊಬ್ಬರಿಗೆ ಅರವತ್ತಾರು ವರ್ಷ ವಯಸ್ಸಾಗಿದ್ದು ಇಬ್ಬರೂ ಸಹ ಕೆಲ ದಿನಗಳ ಹಿಂದಷ್ಟೇ ಆಫ್ರಿಕಾದಿಂದ ಕರ್ನಾಟಕಕ್ಕೆ ಮರಳಿದ್ದರು..

ವಿಮಾನ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿ ನಲವತ್ತಾರು ವರ್ಷದವರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು.. ಆದರೆ ಮೂರು ದಿನದ ಬಳಿಕ ನೆಗಟಿವ್ ಬಂದ ಕಾರಣ ಅವರು ಕ್ವಾರಂಟೈನ್ ನಿಂದ ಹೊರ ಬಂದು ಕಾರ್ಯಕ್ರಮದಲ್ಲಿಯೂ ಸಹ ಭಾಗಿಯಾಗಿದ್ದರು‌.. ಇನ್ನು ಮತ್ತೊಬ್ಬ 66 ವರ್ಷದ ವ್ಯಕ್ತಿಗೆ ಡೆಲ್ಟಾ ತಳಿ ಸೋಂಕು ಪತ್ತೆಯಾಗಿತ್ತು.. ಆದರೆ ಇಬ್ಬರ ಲ್ಯಾಬ್ ಸ್ಯಾಂಪಲ್ ಗಳನ್ನು ಜೆನೋಮ್ ಸೀಕ್ವೆನ್ಸಿಂಗ್ ಮಾಡಲಾಗಿದ್ದು ಇಬ್ಬರಿಗೂ ಓಮಿಕ್ರಾನ್ ಇರುವುದು ಧೃಡವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.. ಅದಾಗಲೇ ಈ ಇಬ್ಬರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದ್ದು ಪರೀಕ್ಷೆಗೆ ಒಳಪಡಿಸಲಾಗಿದೆ..

ಇಬ್ಬರನ್ನು ಪರೀಕ್ಷೆಗೆ ಒಳಪಡಿಸಿದಾಗ ಬೇರೆ ರೀತಿಯ ಗುಣಲಕ್ಷಣಗಳು ಕಂಡು ಬಂದ ಕಾರಣ ಅವರಿಬ್ಬರ ಪರೀಕ್ಷಾ ಮಾದರಿಗಳನ್ನು ಜೆನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಿದಾಗ ಇಂದು ವರದಿ ಕೈ ಸೇರಿದೆ.. ಈ ಬಗ್ಗೆ ಕೇಂದ್ರ ಸರ್ಕಾರವೇ ಖುದ್ದಾಗಿ ಮಾಹಿತಿ ನೀಡಿದೆ.. ಈ ಹಿಂದೆ ದೇಶದಲ್ಲಿಯೇ ಕೊರೊನಾ ವೈರಸ್ ನಿಂದ ಮೊದಲು ಜೀವ ಕಳೆದುಕೊಂಡ ಪ್ರಕರಣ ದಾಖಲಾಗಿದ್ದು ಕರ್ನಾಟಕದಲ್ಲಿಯೇ ಆಗಿದ್ದು ಇದೀಗ ದೇಶದಲ್ಲಿ ಓಮ್ರಿಕಾಮ್ ಪತ್ತೆಯಾಗಿರುವುದು ಸಹ ಕರ್ನಾಟಕದಲ್ಲಿ ಆಗಿದ್ದು ತಕ್ಷಣ ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಂಡು ಓಮ್ರಿಕಾನ್ ರಾಜ್ಯದಲ್ಲಿ ಹರಡದಂತೆ ನೋಡಿಕೊಳ್ಳಬೇಕೆಂದು ಜನರು ಅಭಿಪ್ರಾಯಪಟ್ಟಿದ್ದಾರೆ‌‌..

ಆದರೆ ನಮ್ಮ ರಾಜ್ಯದಲ್ಲಿ ಪತ್ತೆಯಾಗಿರುವ ಓಮ್ರಿಕಾನ್ ಅಷ್ಟೇನು ಅಪಾಯಕಾರಿಯಲ್ಲ.. ತಜ್ಞರ ಜೊತೆ ಮಾತನಾಡಿದ್ದೇನೆ.. ಎಂದು ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.. ಹೌದು ತಜ್ಞರು ಆತಂಕ ಪಡುವ ಅಗತ್ಯ ಇಲ್ಲ.. ಎಂದಿದ್ದಾರೆ.. ಅಗತ್ಯ ಬಿದ್ದರೆ ಮಾರ್ಗಸೂಚಿಗಳನ್ನು ಬದಲಿಸುತ್ತೇವೆ.. ಓಮ್ರಿಕಾನ್ ಚಿಕಿತ್ಸೆಗೆ ಸಕಲ ರೀತಿಯಲ್ಲಿ ಸಿದ್ಧರಾಗಿದ್ದೇವೆ.. ಓಮ್ರಿಕಾನ್ ಅಷ್ಟೇನೂ ಅಪಾಯವಿಲ್ಲ ಎನ್ನುವ ಮಾತುಗಳನ್ನು ಮುಖ್ಯಮಂತ್ರಿಗಳು ಆಡಿದ್ದು ನಿಟ್ಟುಸಿರು ಬಿಡುವಂತಾಗಿದೆ‌. ಆದರೂ ಸಹ ದಯವಿಟ್ಟು ಎಲ್ಲರೂ ಎಚ್ಚರವಾಗಿರಿ.. ಹೊರಗಡೆ ಹೋದಾಗ ಅನಾವಶ್ಯಕವಾಗಿ ಏನನ್ನೂ ಮುಟ್ಟದಿರಿ.. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವ್ಯವಹಾರಗಳನ್ನು ಮಾಡಿ..