ಮಗುವಿನ ಆಗಮನದ ಸಂಭ್ರಮ ಹಂಚಿಕೊಂಡ ಸ್ಯಾಂಡಲ್ವುಡ್ ನ ಮತ್ತೊಂದು ಸ್ಟಾರ್ ದಂಪತಿ..

0 views

ಸದ್ಯ ಮೊನ್ನೆ ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಎರಡನೇ ಮಗುವಿನ ನಾಮಕರಣದ ಸಮಾರಂಭ ನೆರವೇರಿಸಿ ಯಥರ್ವ್ ಯಶ್ ಎಂಬ ಹೆಸರನ್ನಿಟ್ಟು ಅಭಿಮಾನಿಗಳೊಂದಿಗೆ ಸಂತೋಷ ಹಂಚಿಕೊಂಡಿದ್ದರು.. ಇದೀಗ ಸ್ಯಾಂಡಲ್ವುಡ್ ನ ಮತ್ತೊಂದು ಸ್ಟಾರ್ ಜೋಡಿ ತಮ್ಮ‌ ಮನೆಗೆ ನೂತನ ಅತಿಥಿಯ ಆಗಮನವಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದು ಆಪ್ತರು ಶುಭಾಶಯಗಳನ್ನು ತಿಳಿಸಿದ್ದಾರೆ..

ಹೌದು ಗೂಗ್ಲಿ ರಣವಿಕ್ರಮ ಖ್ಯಾತಿಯ ಸ್ಯಾಂಡಲ್ವುಡ್ ಸ್ಟಾರ್ ನಿರ್ದೇಶಕ‌ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷ ಪುರೋಹಿತ್ ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದು ಇದೀಗ ಬೇಬಿ ಬಂಪ್ ಚಿತ್ರೀಕರಣ ಮಾಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಕಂದನ ಆಗಮನದ ನಿರೀಕ್ಷೆಯಲ್ಲಿ ಇರುವ ವಿಚಾರ ತಿಳಿಸಿದ್ದಾರೆ..

ಹೌದು ಪವನ್ ಒಡೆಯರ್ ಹಾಗೂ ಅಪೇಕ್ಷ ಪುರೋಹಿತ್ ಅವರು ಕಳೆದ ಎರಡು ವರ್ಷಗಳ ಹಿಂದೆ 2018 ರ ಆಗಸ್ಟ್ 20 ರಂದು ಬಾಗಲಕೋಟೆಯಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಒಅವನ್ ಒಡೆಯರ್ ಅವರು ಸ್ಯಾಂಡಲ್ವುಡ್ ನಲ್ಲಿ‌ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರೆ ಅತ್ತ ಅಪೇಕ್ಷಾ ಅವರು ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದರು.. ಜೊತೆಗೆ ಸೀತಾರಾಮ್ ಅವರ ಕಾಫಿ ತೋಟ ಸಿನಿಮಾ ಮೂಲಕ ಬೆಳ್ಳೆತೆರೆಗೂ ಕಾಲಿಟ್ಟಿದ್ದರು..

ಇದೀಗ ಈ ಸ್ಟಾರ್ ಜೋಡಿ ಮೊದಲ‌ ಮಗುವಿನ ನಿರೀಕ್ಷೆಯಲ್ಲಿದ್ದು ಸ್ನೇಹಿತರು ಆಪ್ತರು ಶುಭಾಶಯಗಳನ್ನು ತಿಳಿಸಿದ್ದಾರೆ.. ಅಷ್ಟೇ ಅಲ್ಲದೇ ಈ ಸಂಭ್ರಮದ ವಿಚಾರವನ್ನು ಮತ್ತಷ್ಟು ವಿಶೇಷವನ್ನಾಗಿಸಲು ಹಾಡೊಂದನ್ನು ಕಂಪೂಸ್ ಮಾಡಿದ್ದು ಸದ್ಯದಲ್ಲಿ ಬಿಡುಗಡೆ ಮಾಡುವುದಾಗಿ ಪವನ್ ಒಡೆಯರ್ ಅವರು ತಿಳಿಸಿದ್ದಾರೆ..