ರಾಜಾರಾಣಿ ಶೋನಲ್ಲಿ ಭಾಗವಸಿರುವ ಪವನ್ ಅವರ ತಂದೆ ಯಾರು ಗೊತ್ತಾ.. ನಿಜಕ್ಕೂ ಶಾಕಿಂಗ್..

0 views

ಕನ್ನಡದ ಕಿರುತೆರೆಯಲ್ಲಿ ವಿಭಿನ್ನವಾದ ಪ್ರಯತ್ನದ ಮೂಲಕ ಯಶಸ್ವಿಯಾಗಿರುವ ರಾಜಾ ರಾಣಿ ಶೋ ಅನೇಕ ವಿಚಾರಗಳಿಗೆ ಗಮನ ಸೆಳೆಯುತ್ತಿದೆ.. ಸೆಲಿಬ್ರೆಟಿ ಜೋಡಿಗಳ ನಡುವಿನ ಹೊಂದಾಣಿಕೆ.. ಟಾಸ್ಕ್ ಹಾಗೂ ಸಿಕ್ಕಾಪಟ್ಟೆ ಮನರಂಜನೆ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಶೋ ರಾಜಾ ರಾಣಿ.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ರಾಜಾ ರಾಣಿ ಶೋ ನಲ್ಲಿ ಸಧ್ಯ ಬಿಗ್ ಬಾಸ್ ನಂತೆಯೇ ಸೆಲಿಬ್ರೆಟಿ ಜೋಡಿಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆದವರಿಗೂ ಅವಕಾಶ ನೀಡಲಾಗಿದ್ದು ಪವನ್ ದಂಪತಿ ಗಮನ ಸೆಳೆಯುತ್ತಿದ್ದಾರೆ.. ಹೌದು ಕಳೆದ ವರ್ಷ ಕೊರೊನಾ ಲಾಲ್ ಡೌನ್ ಸಮಯದಿಂದ ಸಾಮಾಜಿಕ ಜಾಲತಾಣದ ಮೂಲಕ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ.. ಅದರಲ್ಲೂ ಒಳ್ಳೊಳ್ಳೆ ಉದ್ಯೋಗ ದಲ್ಲಿದ್ದವರೂ ಸಹ ಕೆಲಸ ಕಳೆದುಕೊಂಡಾಗ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ಕೆಲಸ ಮಾಡಿ ವೀಡಿಯೋ ಕ್ರಿಯೇಟ್ ಮಾಡಿ, ಜನರಿಗೆ ಮನರಂಜನೆ ನೀಡುವ ಮೂಲಕ ಅಥವಾ ಮತ್ತಿನೇನೋ ಕೆಲಸದ ಮೂಲಕ ಜೀವನ ಕಟ್ಟಿಕೊಂಡದ್ದಷ್ಟೇ ಅಲ್ಲದೇ ಮನೆ ಮಾತೂ ಸಹ ಆಗಿದ್ದಾರೆ..

ಅದೇ ರೀತಿ ಖ್ಯಾತಿ ಗಳಿಸಿದವರು ರಘು.. ಇದನ್ನು ಗಮನಿಸಿದ ವಾಹಿನಿ ರಘು ಅವರಿಗೆ ಬಿಗ್ ಬಾಸ್ ನಲ್ಲಿ ಅವಕಾಶ ನೀಡಿದರಾದರೂ ರಘು ಅಷ್ಟಾಗಿ ಬಿಗ್ ಬಾಸ್ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳಲಿಲ್ಲ ಎಂಬ ಮಾತಿದೆ.. ಅತಿ ಹೆಚ್ಚು ಮನರಂಜನೆಯನ್ನು ರಘು ಅವರಿಂದ ನಿರೀಕ್ಷಿಸಲಾಗಿತ್ತು ಆದರೆ ಅದಾಗಲೇ ಮೊದಲ ವಾರದಿಂದಲೇ ಮಂಜು ಒಆವಗಡ ಹಾಗೂ ಮತ್ತಿತರರು ರಘು ಅವರನ್ನು ಹಿಂದಿಕ್ಕಿ ಬಹಳ ದೂರ ಸಾಗಿದ್ದರು.. ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ‌ ಕೊಂಚ ಚೇತರಿಕೆ ಕಂಡಿದ್ದರೂ ಸಹ ಎರಡೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬರುವಂತಾಯಿತು.. ಆದರೆ ಸಾಮಾಜಿಕ ಜಾಲತಾಣದ ಮೂಲಕ ಬಿಗ್ ಬಾಸ್ ಅವಕಾಶ ಪಡೆದದ್ದು ನಿಜಕ್ಕೂ ಮೆಚ್ಚುವ ವಿಚಾರವೇ ಸರಿ..

ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಅನೇಕ ಪ್ರತಿಭೆಗಳು ಯಾವುದೇ ಹೊರಗಿನ ಬೆಂಬಲವಿಲ್ಲದೇ ತಮ್ಮ ಪ್ರತಿಭೆ ಮೂಲಕವೇ ಮನೆ ಮಾತಾದ ಅದೆಷ್ಟೋ ಕಲಾವಿದರಿದ್ದಾರೆ.. ಅಂತವರಲ್ಲಿ‌ ಒಬ್ಬರು ಪವನ್.. ಹೌದು ಕಾಮಿಡಿ ವೀಡಿಯೋಗಳ ಮೂಲಕ ಜನರನ್ನು ಮನರಂಜಿಸುವ ಪವನ್ ಅವರಿಗೆ ರಾಜಾ ರಾಣಿ‌ ಶೋನಲ್ಲಿ ಅವಕಾಶ ದೊರೆಯಿತು.. ದಂಪತಿ ಸಮೇತ ಆಗಮಿಸಿರುವ ಪವನ್ ಜೋಡಿ ತಮ್ಮ ಕಾಮಿಡಿ ಪಂಚ್ ಗಳ ಮೂಲಕ ಮನರಂಜನೆ ನೀಡುತ್ತಾ ಬಂದಿದ್ದಾರೆ.. ಅಷ್ಟೇ ಅಲ್ಲದೇ ತಮ್ಮ ಲವ್ ಸ್ಟೋರಿ ಹಾಗೂ ಮದುವೆ ಸ್ಟೋರಿಯನ್ನು ತಮ್ಮದೇ ಶೈಲಿಯಲ್ಲಿ ಹೇಳುತ್ತಾ ಪ್ರೇಕ್ಷಕರ ಮುಖದಲ್ಲಿ ನಗು ತರಿಸುತ್ತಿರುವ ಪವನ್ ಅವರು ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ‌ನಬಹುದು.. ಆದರೆ ಇಷ್ಟು ದಿನ ಕೇವಲ ಕಾಮಿಡಿಯನ್ ಆಗಿ ಹಾಗೂ ತಮ್ಮ ಲವ್ ಸ್ಟೋರಿ ಮೂಲಕ‌ ಮಾತ್ರ ಜನರಿಗೆ ತಿಳಿದಿದ್ದ ಪವನ್ ನಿಜಕ್ಕೂ ಯಾರೆಂಬ ವಿಚಾರ ಜನರಲ್ಲಿ ಆಶ್ಚರ್ಯ ಮೂಡಿಸಿದೆ..

ಹೌದು ಪವನ್ ಮತ್ಯಾರೂ ಅಲ್ಲ ಕನ್ನಡದ ಖ್ಯಾತ ನಟನ ಮಗ ಎಂಬ ವಿಚಾರ ಬಹಳಷ್ಟು ಜನರಿಗೆ ತಿಳಿದಿಲ್ಲ.. ಹೌದು ಕನ್ನಡದಲ್ಲಿ ಅನೇಕ ಸಿನಿಮಾಗಳು ಹಾಗೂ ಸಾಕಷ್ಟು ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದ ನಟ ವೇಣು ಅವರ ಮಗನೇ ಈ ಪವನ್.. ಹೌದು ಇಷ್ಟು ದಿನ ನಗು ಮುಖದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಒಅವನ್ ಈ ವಾರದ ಸಂಚಿಕೆಯಲ್ಲಿ ವೇದಿಕೆ ಮೇಲೆ ತಮ್ಮ ತಂದೆಯನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.. ಹೌದು ಒಬ್ಬ ಹಿರಿಯ ಕಲಾವಿದನಾದರೂ ತನ್ನ ತಂದೆ ವೇಣು ಅವರು ಪಟ್ಟ ಕಷ್ಟಗಳನ್ನು ನೆನೆದು ಪವನ್ ಭಾವುಕರಾದರು.. ಅಷ್ಟೇ ಅಲ್ಲದೇ ಈಗ ವೇಣು ಅವರಿಲ್ಲ.. ವರ್ಷಗಳ ಹಿಂದೆಯೇ ವೇಣು ಅವರು ಇಹಲೋಕ ತ್ಯಜಿಸಿದ್ದು ಅದರಲ್ಲೂ ಒಅವನ್ ಅವರ ಕೈ ಮೇಲೆಯೇ ಮಲಗಿ ತಮ್ಮ ಕೊನೆಯುಸಿರೆಳೆದರು ಎಂಬ ವಿಚಾರ ತಿಳಿಸಿ ಕಣ್ಣೀರಿಟ್ಟರು ಪವನ್..

ವೇಣು ಅವರ ವಿಚಾರವನ್ನು ವೇದಿಕೆ ಮೇಲೆ ಪ್ರಸ್ತಾಪ ಮಾಡಿದ ಸೃಜನ್ ಅವರು ನಿಮ್ಮ ತಂದೆಯ ಕಲೆಯೇ ನಿನಗೆ ಬಂದಿರೋದು ಎಂದರು.. ಆಗ ಮಾತನಾಡಿದ ಪವನ್ ಒಬ್ಬ ಸೀನಿಯರ್ ನಟ ಆದರೂ ಸಹ ಅವರು ಪಟ್ಟ ಸಾಕಷ್ಟು ಕಷ್ಟಗಳನ್ನು ಆರ್ಥಿಕವಾಗಿ ಹಾಗೂ ಇನ್ನು ಅನೇಕ ರೀತಿಯಲ್ಲಿ ಅವರು ಕಷ್ಟ ಪಟ್ಟಿದ್ದನ್ನು ನಾನು ನೋಡಿದ್ದೇನೆ ಸರ್.. ನನ್ನ ಒಂದು ಕೈಯಲ್ಲಿ ಅವರು ಮಲಗಿದ್ದರು.. ಒಮ್ಮೆ ನನ್ನನು ನೋಡಿದರೆ ಮರು ಕ್ಷಣ ಅವರಿಲ್ಲ.‌ ಅವರು ಈಗ ಹೋಗಿದಿದ್ದರೆ ನನ್ನ ಬಗ್ಗೆ ಸಾಕಷ್ಟು ಹೆಮ್ಮೆಯನ್ನಾದರೂ ಪಡುತ್ತಿದ್ದರು.. ಆದರೆ ನಾನು ಅವರಿಗೆ ಆ ಅವಕಾಶವನ್ನೂ ಸಹ ನೀಡಲಿಲ್ಲ.. ಮಗ ಏನೂ ಸಾಧಿಸಲಿಲ್ಲ ಎಂಬ ಕೊರಗಲ್ಲೇ ಹೊರಟು ಹೋದರು‌. ಎಂದು ತಂದೆಯನ್ನು‌ ನೆನೆದು ಕಣ್ಣೀರಿಟ್ಟರು.. ಈ ರೀತಿ ಅದೆಷ್ಟೋ ಹಿರಿಯ ಕಲಾವಿದರು ಇನ್ನೂ ಸಹ ಒಂದು ಸರಿಯಾದ ನೆಲೆ ಕಾಣದೆ ಬಾಡಿಗೆ ಮನೆಗಳಲ್ಲಿ‌ ಕಷ್ಟ ಪಡುತ್ತಿರುವ ಸಾಕಷ್ಟು ಉದಾಹರಣೆಗಳಿವೆ..

ಈಗಿನ ದಿನಗಳಲ್ಲಿ‌ ಒಂದೆರೆಡು ಸಿನಿಮಾ ಮಾಡಿದರೂ ಸಹ ಕೈ ತುಂಬಾ ಸಂಭಾವನೆ ದೊರೆಯುತ್ತದೆ.. ಆದರೆ ಆಗಿನ ಕಾಲದಲ್ಲಿ ನೂರಾರು ಸಿನಿಮಾ ಮಾಡಿದವರೂ ಸಹ ಅನೇಕ ಕಲಾವಿದರು ಇಂದು ಮತ್ತೊಬ್ಬರ ಸಹಾಯದಿಂದಲೇ ಬದುಕುವಂತಾಗಿದೆ.. ಮೊನ್ನೆ‌ಮೊನ್ನೆಯಷ್ಟೇ ಹಿರಿಯ ನಟಿಯರಾದ ಶೃತಿ ಸುಧಾರಾಣಿ ಹಾಗೂ ಮಾಳವಿಕ ಅವರು ಹಿರಿಯ ನಟಿ ಲಕ್ಷ್ಮೀ ದೇವಿ ಅವರನ್ನು ಭೇಟಿ‌ ಮಾಡಿ ಹಿರಿಯ ಕಲಾವಿದರನ್ನು ಗೌರವಿಸಬೇಕೆಂದು ಅವರಿಗೆ ಸನ್ಮಾನ ಮಾಡಿ ತಮ್ಮ ಕೈಲಾದಷ್ಟು ನೆರವನ್ನೂ ಸಹ ನೀಡಿ ಬಂದಿದ್ದರು.. ಅವರ ಈ ಕಾರ್ಯಕ್ಕೆ ಸಾಕಷ್ಟು ಮೆಚ್ವುಗೆಯೂ ವ್ಯಕ್ತವಾಗಿದ್ದನ್ನು ನಾವಿಲ್ಲಿ ನೆನೆಯಬಹುದು..