ನಟ ಸುಚೇಂದ್ರ ಪ್ರಸಾದ್ ರಿಂದ ದೂರಾಗಿ ತೆಲುಗಿನ ಖ್ಯಾತ ನಟನ ಜೊತೆ ಮದುವೆಯಾದ ನಟಿ ಪವಿತ್ರಾ ಲೋಕೇಶ್.. ನಿಜಕ್ಕೂ ನಡೆದದ್ದೇನು ಗೊತ್ತಾ..

0 views

ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಗಳು ಸೆಲಿಬ್ರೆಟಿ ಜೋಡಿಗಳು ತೆರೆ ಮೇಲಿನ ವಿಚಾರಗಳಿಗೆ ಎಷ್ಟು ಸುದ್ದಿಯಾಗುವರೋ ಅದಕ್ಕಿಂತ ಹೆಚ್ಚಾಗಿ ತೆರೆಯ ಹಿಂದಿನ ತಮ್ಮ ವ್ಯಯಕ್ತಿಕ ಜೀವನದ ವಿಚಾರಗಳಿಗೂ ಸಹ ಸದ್ದು ಮಾಡುತ್ತಿರುತ್ತಾರೆ.. ಇನ್ನು ಸ್ಟಾರ್ ಜೋಡಿಗಳು ಮದುವೆಯಾಗಿ ದೂರಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯದ ವಿಚಾರವಾಗಿ ಹೋಗಿದೆ.. ಕಳೆದ ವರ್ಷದಿಂದಲೇ ಸಮಂತಾ ನಾಗಚೈತನ್ಯ.. ಧನುಶ್ ಐಶ್ವರ್ಯಾ ಸೇರಿದಂತೆ ಇನ್ನು ಅನೇಕ ಜೋಡಿಗಳು ದೂರಾಗಿ ತಮ್ಮ ಜೀವನ ನೋಡಿಕೊಂಡರು.. ಇದೀಗ ಕನ್ನಡದ ಮತ್ತೊಂದು ಸ್ಟಾರ್ ಜೋಡಿಯ ದಾಂಪತ್ಯದಲ್ಲಿ ಬಿರುಕಾಗಿದ್ದು ಇದೀಗ ಇಬ್ಬರೂ ಸಹ ದೂರಾಗಿದ್ದು ನಟಿ ಮತ್ತೊಂದು ಮದುವೆಯನ್ನೂ ಸಹ ಆಗಿದ್ದಾರೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ..

ಹೌದು ಸ್ಯಾಂಡಲ್ವುಡ್ ನ ಸ್ಟಾರ್ ಜೋಡಿಗಳಲ್ಲಿ ಒಂದಾಗಿದ್ದ ನಟ ಸುಚೇಂದ್ರ ಪ್ರಸಾದ್ ಹಾಗೂ ನಟಿ ಪವಿತ್ರಾ ಲೋಕೇಶ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಇದೀಗ ತೆಲುಗಿನ ಖ್ಯಾತ ನಟನ ಜೊತೆ ಪವಿತ್ರ ಲೋಕೇಶ್ ಮದುವೆಯಾಗಲು ಸಜ್ಜಾಗುತ್ತಿದ್ದಾರೆ.. ಹೌದು ಪವಿತ್ರಾ ಲೋಕೇಶ್ ಅವರು ಸಾಕಷ್ಟು ವರ್ಷಗಳಿಂದಲೂ ಸ್ಯಾಂಡಲ್ವುಡ್ ನಲ್ಲಿ ಗುರುತಿಸಿಕೊಂಡಿದ್ದರೂ ಸಹ ಕನ್ನಡಕ್ಕಿಂತ ಹೆಚ್ಚಾಗಿ ಅವರಿಗೆ ತೆಲುಗಿನಲ್ಲಿ‌ ಒಳ್ಳೊಳ್ಳೆ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶ ದೊರಕಿತ್ತು.. ತೆಲುಗಿನ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಪವಿತ್ರಾ ಲೋಕೇಶ್ ಅವರು ಅಭಿನಯಿಸಿದ್ದು ಕನ್ನಡ ಚಿತ್ರರಂಗದಲ್ಲಿ ಗೌರವಯುತ ಪಾತ್ರಗಳು ಅಷ್ಟಾಗಿ ಸಿಗದ ಕಾರಣ ತೆಲುಗಿನ ನೆಲದಲ್ಲಿಯೇ ಪವಿತ್ರಾ ಲೋಕೇಶ್ ಅವರು ನೆಲೆಸಲು ನಿರ್ಧರಿಸಿದರು..

ಇನ್ನು ಇತ್ತ ನಟ ಸುಚೇಂದ್ರ ಪ್ರಸಾದ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಹೆಸರು ಮಾಡಿದ್ದು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.. ಇನ್ನು ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿರುವ ಈ ಇಬ್ಬರೂ ಕಲಾವಿದರು ನಿಜ ಜೀವನದಲ್ಲಿ ಅಂದರೆ ತಮ್ಮ ದಾಂಪತ್ಯ ಜೀವನದಲ್ಲಿ ಯಶಸ್ವಿಯಾಗಲು ಸೋತು ಬಿಟ್ಟರು.. ಹೌದು ಕಳೆದ ಹದಿನೈದು ವರ್ಷಗಳ ಹಿಂದೆ ನಟ ಸುಚೇಂದ್ರ ಪ್ರಸಾದ್ ಹಾಗೂ ನಟಿ ಪವಿತ್ರಾ ಲೋಕೇಶ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ಇಬ್ಬರೂ ಸಹ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿ ಆಗಿದ್ದರು..

ಅತ್ತ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಪವಿತ್ರಾ ಲೋಕೇಶ್ ಅವರು ಗುರುತಿಸಿಕೊಂಡು ದೊಡ್ಡ ಮಟ್ಟದಲ್ಲಿಯೇ ಹೆಸರು ಮಾಡಿದರು.. ಆದರೆ ಕೆಲ ವರ್ಷಗಳಿಂದ ಪವಿತ್ರಾ ಲೋಕೇಶ್ ಅವರು ಹಾಗೂ ಸುಚೇಂದ್ರ ಪ್ರಸಾದ್ ಅವರು ಇಬ್ಬರೂ ಸಹ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು.. ಇತ್ತ ಇಬ್ಬರ ನಡುವೆ ಸಾಕಷ್ಟು ವಿಚಾರಗಳಿಗೆ ಭಿನ್ನಾಭಿಪ್ರಾಯ ಮೂಡಿತ್ತು ಎಂದು ತಿಳಿದು ಬಂದಿದೆ.. ಹೌದು ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಲು ಸುಚೇಂದ್ರ ಪ್ರಸಾದ್ ಅವರ ಕೋಪವೇ ಕಾರಣ ಎನ್ನಲಾಗಿದೆ.. ಈ ದಂಪತಿಗೆ ಅದಾಗಲೇ ಇಬ್ಬರು ಮಕ್ಕಳಿದ್ದು ಮಕ್ಕಳು ತಾಯಿ ಪವಿತ್ರಾ ಲೋಕೇಶ್ ಅವರ ಜೊತೆಯೇ ಇದ್ದಾರೆ ಎನ್ನಲಾಗಿದೆ..

ಇನ್ನು ಇತ್ತ ಅದಾಗಲೇ ನಟಿ ಪವಿತ್ರಾ ಲೋಕೇಶ್ ಅವರು ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಅವರ ಅಣ್ಣ ಖ್ಯಾತ ನಟ ನರೇಶ್ ಅವರ ಜೊತೆ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.. ಹೌದು ಇಬ್ಬರೂ ಸಹ ಅದಾಗಲೇ ಮದುವೆಯಾಗಿದ್ದು ಒಟ್ಟಿಗೆ ಇದ್ದಾರೆ ಎಂದು ತಿಳಿದು ಬಂದಿದೆ.. ನರೇಶ್ ಕೋಟ್ಯಾಧೀಶ್ವರನಾಗಿದ್ದು ಆರು ಸಾವಿರ ಕೋಟಿ ರೂಪಾಯಿ ಆಸ್ತಿಯ ಒಡೆಯ ಎನ್ನಲಾಗಿದೆ‌.

ಇನ್ನು ನರೇಶ್ ಅವರು 64 ವರ್ಷ ವಯಸ್ಸಾಗಿದ್ದು ಇದು ನಾಲ್ಕನೇ ಮದುವೆಯಾಗಿದೆ.. ಅತ್ತ ಪವಿತ್ರಾ ಲೋಕೇಶ್ ಅವರಿಗೆ 43 ವರ್ಷ ವಯಸ್ಸಾಗಿದ್ದು ನರೇಶ್ ಅವರ ಜೊತೆ ಎರಡನೇ ಮದುವೆಯಾಗಿದ್ದಾರೆ.. ಅಷ್ಟೇ ಅಲ್ಲದೇ ಇಬ್ಬರೂ ಸಹ ಮಹಾಬಲೇಶ್ವರಕ್ಕೆ ತೆರಳಿ ಅಲ್ಲಿನ ಸ್ವಾಮೀಜಿಯ ಆಶೀರ್ವಾದವನ್ನೂ ಸಹ ಪಡೆದು ಬಂದಿದ್ದಾರೆ.. ಒಟ್ಟಿನಲ್ಲಿ ಸ್ಟಾರ್ ಜೋಡಿಗಳ ನಡುವೆ ಮನಸ್ತಾಪ ಮೂಡಿ ದೂರಾಗುವುದು ಹೊಸ ವಿಚಾರವಲ್ಲದಿದ್ದರೂ ಸಹ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ಒಳ್ಳೆಯ ರೀತಿ ಗುರುತಿಸಿಕೊಂಡಿದ್ದ ಈ ಜೋಡಿ ದೂರಾಗಿದ್ದು ನಿಜಕ್ಕೂ ಒಂದು ರೀತಿ ಶಾಕಿಂಗ್ ಎನಿಸಿದರೂ ಸಹ ಅವರವರ ವ್ಯಯಕ್ತಿಕ ಜೀವನ ಅವರುಗಳಿಗೆ ಎಲ್ಲಿ ನೆಮ್ಮದಿ ಸಂತೋಷ ಸಿಗುವುದೋ ಅಲ್ಲಿ ಚೆನ್ನಾಗಿರಲಿ ಎಂದು ನೆಟ್ಟಿಗರು ಹಾರೈಸಿದ್ದಾರೆ..