ನೂರಾರು ಕನಸು ಕಂಡು ಮದುವೆಯಾದಳು.. ಆದರೆ ಮದುವೆಯಾದ ನಾಲ್ಕೇ ದಿನಕ್ಕೆ ಏನಾಗಿ ಹೋಯ್ತು ನೋಡಿ.. ಈಕೆ ನಿಜಕ್ಕೂ ಯಾರು ಗೊತ್ತಾ.. ಮನಕಲಕುತ್ತದೆ..

0 views

ಈ ಕೊರೊನಾ ಎರಡನೇ‌ ಅಲೆಯ ನಡುವೆಯೂ ಸಾಕಷ್ಟು ಮದುವೆ ಸಮಾರಂಭಗಳು ನೆರವೇರುತ್ತಿದೆ.. ಕುಟುಂಬ ದವರೇ ಸೆರಿಕೊಂಡು ಮನೆಗಳಲ್ಲಿಯೇ ಸರಳವಾಗಿ ಮದುವೆಗಳನ್ನು ಮಾಡಿ ಮುಗಿಸುತ್ತಿದ್ದಾರೆ..‌ ಬಹಳಷ್ಟು ಮಂದಿ ಲಾಕ್ ಡೌನ್ ಸಮಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ತಮ್ಮ ಮುಂದಿನ ಜೀವನ ಕಟ್ಟಿಕೊಂಡಿದ್ದಾರೆ.. ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಲಾಕ್ ಡೌನ್ ನಲ್ಲಿ ಇನ್ನೂಹದಿನೆಂಟು ತುಂಬದ ಹೆಣ್ಣು‌ಮಕ್ಕಳ‌ ಮದುವೆ ಹೆಚ್ಚಾಗಿ ನಡೆಯುತ್ತಿರುವ ಪ್ರಕರಣಗಳು ಸಹ ಬೆಳಕಿಗೆ ಬರುತ್ತಿದ್ದು ಒಟ್ಟಿನಲ್ಲಿ ಹೆಣ್ಣೆತ್ತವರಿಗೆ ಈ ಲಾಕ್ ಡೌನ್ ಮದುವೆ ಅನುಕೂಲ ಎಂಬ ಕಾರಣಕ್ಕೆ ಇನ್ನೂ ಸಹ ಹದಿನೆಂಟು ತುಂಬದ ಮಕ್ಕಳನ್ನೆಲ್ಲಾ ಮದುವೆ ಮಾಡಿ ಕಳುಹಿಸುತ್ತಿದ್ದು ಸಾಕಷ್ಟು ಮದುವೆಗಳನ್ನು ಪೊಲಿಸರು ನಿಲ್ಲಿಸಿದ್ದಾರೆ.. ಇನ್ನು ಇತ್ತ ಶಿವಮೊಗ್ಗದಲ್ಲಿಯೂ ನಾಲ್ಕು ದಿನದ ಹಿಂದೆ ಮದುವೆಯೊಂದು ನೆರವೇರಿತ್ತು.. ಆದರೆ ಕೇವಲ‌ ನಾಲ್ಕೇ ದಿನಕ್ಕೆ ಏನಾಯಿತು ಎಂಬ ವಿಚಾರ ತಿಳಿದರೆ ನಿಜಕ್ಕೂ ಮನಸ್ಸು ಭಾರವಾಗುತ್ತದೆ..

ಹೌದು ಆಕೆಯ ಹೆಸರು ಪೂಜಾ ವಯಸ್ಸು ಇಪ್ಪತ್ತ ನಾಲ್ಕು..‌ ಶಿವಮೊಗ್ಗದ ಹೊರವಲಯದ ನಿದಿಗೆ ಟಿ ಇ ಎಸ್ ಕಾಲೋನಿಯ ನಿವಾಸಿ.. ಪೂಜಾಳ ವಿವಾಹ ಹರಿಗೆ ನಿವಾಸಿಯಾದ ಮಹೇಶ್ ಎಂಬುವವರ ಜೊತೆ ನಿಶ್ಚಯವಾಗಿತ್ತು.. ಲಾಕ್ ಡೌನ್ ಇರುವ ಕಾರಣ ಮದುವೆ ಮುಂದೂಡುವುದು ಸರಿಯಲ್ಲವೆಂದು ವಧುವಿನ ಮಮೆಯಲ್ಲಿಯೇ ಕಳೆದ ಸೋಮವಾರ ಮದುವೆ ಸಮಾರಂಭವನ್ನು ಮಾಡಲಾಗಿತ್ತು.. ಮದುವೆಗೆ ನಲವತ್ತು ಜನರು ಪಾಲ್ಗೊಳ್ಳಲು ಮಾತ್ರ ಅವಕಾಶ ಇದ್ದುದರಿಂದ ಮದುವೆ ಸರಳವಾಗಿಯೇ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತ್ತು.. ಆದರೆ ಆದರೆ ಮದುವೆಯಾದ ನಾಲ್ಕನೇ ದಿನ ನೂತನ ವಧು ಪೂಜಾ ಇನ್ನಿಲ್ಲವಾಗಿದ್ದು ಸಂಭ್ರಮದಲ್ಲಿದ್ದ ಮನೆ ಇಂದುಸೂ ತಕದ ಮನೆಯಾಗಿ ಹೋಯ್ತು.. ಹೌದು ಸೋಮವಾರ ಸಂತೋಷದಿಂದ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದ ಮಹೇಶ್ ಕುಟುಂಬ ಹಾಗೂ ಪೂಜಾಳ ಕುಟುಂಬದಲ್ಲಿ ಇದೀಗ ನೋವು ತುಂಬಿ ಹೋಗಿದೆ.. ಅದೇನಾಯಿತು ಎಂದು ಯೋಚಿಸುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿದೆ..

ಹೌದು ಸೋಮವಾರ ಮದುವೆಯಾಗಿ ಪತ್ನಿಯನ್ನು ಮಹೇಶ್ ತನ್ನ ಮನೆಗೆ ಕರೆದುಕೊಂಡು ಬಂದರು.. ಭವಿಷ್ಯದ ನೂರಾರು ಕನಸಿಗೆ ಜೊತೆಯಾಗಿ ಹೆಜ್ಜೆ ಇಡೋಣವೆಂದು ಮಹೇಶ್ ಹಾಗೂ ಪೂಜಾ ಒಟ್ಟಾಗಿ ಕನಸು ಕಂಡಿದ್ದರು.. ಆದರೆ ಮದುವೆಯಾದ ಎರಡೇ ದಿನಕ್ಕೆ ಅವರ ಮದುವೆಯ ಸಂಭ್ರಮವೆಲ್ಲಾ ಮಾಯವಾಗಿತ್ತು.. ಪೂಜಾಳಿಗೆ ಮಂಗಳವಾರ ಮೈ ಕೈ ನೋವು ಕಾಣಿಸಿಕೊಂಡಿತ್ತು.. ಬಹುಶಃ ಮದುವೆಯ ಆಯಾಸ ಇರಬಹುದು ಎಂದುಕೊಂಡು ಮೆಡಿಕಲ್ ಸ್ಟೋರ್ ನಲ್ಲಿ ಮಾತ್ರೆ ತೆಗೆದುಕೊಂಡಿದ್ದರು.. ಆದರೂ ಸಹ ಪೂಜಾಳ ಆರೋಗ್ಯ ಸ್ಥಿತಿ‌ ಇನ್ನಷ್ಟು ಹದಗೆಟ್ಟಿತ್ತು.. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು..

ಮಲವಗೊಪ್ಪದ ಸಾಯಿ ಕ್ಲಿನಿಕ್ ನಲ್ಲಿ ನಿನ್ನೆ ಪೂಜಾರನ್ನು ದಾಖಲಿಸಲಾಗಿದೆ.. ಬಹಳ ಸುಸ್ತಾಗುತ್ತಿದ್ದ ಕಾರಣ ಅವರಿಗೆ ಗ್ಲೂಕೋಸ್ ಹಾಕಲಾಯಿತು.. ಆದರೂ ಸಹ ಪೂಜಾರ ಸ್ಥಿತಿ ಮತ್ತಷ್ಟು ಹದಗೆಟ್ಟ ಕಾರಣ ಆಕೆಯನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.. ಆದರೆ ಅಷ್ಟರಲ್ಲಾಗಲೇ ಪೂಜಾ ಕೊನೆಯುಸಿರೆಳೆದು ಬಿಟ್ಟಿದ್ದರು.. ಹೌದು ಪೂಜಾ ನಿನ್ನೆ ಶನಿವಾರ ಇಹಲೋಕ ತ್ಯಜಿಸಿದ್ದು ದಾಂಪತ್ಯ ಜೀವನದ ಕನಸು ಕಂಡಿದ್ದ ಮಹೇಶ್ ಮನೆಯಲ್ಲಿ ದುಃಖ ಮಡುಗಟ್ಟಿದ್ದರೆ.. ಇತ್ತ ಪೂಜಾಳ ಮನೆಯಲ್ಲಿ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.. ಅಷ್ಟಕ್ಕೂ ಪೂಜಾ ಕೊನೆಯುಸಿರೆಳೆಯಲು ಕಾರಣ ಕೊರೊನಾ..

ಹೌದು ನಿನ್ನೆ ಬೆಳಿಗ್ಗೆ ಪೂಜಾರಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು.. ಆದರೆ ವರದಿ ಕೈ ಸೇರುವ ಮುನ್ನವೇ ಪೂಜಾ ಕೊರೊನಾ ಕಾರಣದಿಂದಾಗಿ ಕೊನೆಯುಸಿರೆಳೆದಿದ್ದಾರೆ.. ನಂತರ ಬಂದ ರಿಪೋರ್ಟ್ ನಲ್ಲಿ ಪೂಜಾರಿಗೆ ಕೊರೊನಾ ಪಾಸಿಟಿವ್ ಇರುವುದು ತಿಳಿದು ಬಂದಿದೆ.. ಮದುವೆಯಾದ ನಾಲ್ಕೇ ದಿನಕ್ಕೆ ತನ್ನ ಬಾಳ ಪಯಣ ಮುಗಿಸಿದ ಪೂಜಾಳಿಗೆ ಸಂಬಂಧಿಕರು ಕಂಬನಿ ಮಿಡಿದಿದ್ದಾರೆ.. ಆದರೆ ಇತ್ತ ಅದಾಗಲೇ ಪೂಜಾರಿಗೆ ಗುಣಲಕ್ಷಣ ಕಾಣಿಸಿಕೊಳ್ಳದಿದ್ದರೂ ಕೊರೊನಾ ಸೋಂಕು ಇದ್ದ ಕಾರಣ ಮಹೇಶ್ ಕುಟುಂಬವೂ ಇದೀಗ ಹೋಮ್ ಐಸೋಲೇಟ್ ಆಗಿದೆ.. ಕೇವಲ 24 ವಯಸ್ಸಿಗೆ ಬಾಳ ಪಯಣ ಮುಗಿಸಿ ಹೊರಟು ಹೋದ ಪೂಜಾಳ ರೀತಿ ಅನೇಕ ಜೀವಗಳು ಈ ಕಾಣದ ಈ ಕೊರೊನಾ ಕಾರಣದಿಂದಾಗಿ ಹೊರಟು ಹೋಗಿವೆ.. ಅದರಲ್ಲಿಯೂ ಹೊಸದಾಗಿ ಮದುವೆಯಾದ ಸಾಕಷ್ಟು ಮಂದಿ ಕೊರೊನಾಗೆ ಗುರಿಯಾಗುತ್ತಿದ್ದು ದಯವಿಟ್ಟು ಇಂತಹ ಸಮಯದಲ್ಲಿ ಮದುವೆಯಾಗುತ್ತಿರುವವರು ಎಚ್ಚರವಾಗಿರಿ.. ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿ ಸಮರಾಂಭ ಮಾಡಿಕೊಳ್ಳಿ.. ಜೀವವಿದ್ದರೆ ಮುಂದೆ ಯಾವತ್ತಿದ್ದರೂ ಮದುವೆಯಾಗಬಹುದು.. ದಯವಿಟ್ಟು ಎಚ್ವರವಾಗಿರಿ..