ಇಷ್ಟು ಮುದ್ದಾದ ಹೆಣ್ಣು ಮಗಳು.. ಆದರೆ ದಯವಿಟ್ಟು ಯಾರೂ ಇಂತಹ ಕೆಲಸ ಮಾತ್ರ ಮಾಡಬೇಡಿ..

0 views

ಮಕ್ಕಳ ಮನಸ್ಸು ಸೂಕ್ಷ್ಮ ನಿಜ.. ವಯಸ್ಸು ಹದಿನೆಂಟು ತುಂಬುವ ಮುನ್ನವೇ ಆಕರ್ಷಣೆಗಳನ್ನೇ ಪ್ರೀತಿ ಎಂದುಕೊಂಡು ದುಡುಕಿನ ನಿರ್ಧಾರಗಳನ್ನು ತೆಗೆದುಕೊಂಡು ವಯಸ್ಸಿಗೆ ಮುಂಚೆಯೇ ಬೇರೆ ಆಸೆಗಳನ್ನು ತೀರಿಸಿಕೊಂಡು ಕೊನೆಗೆ ಜೀವನದಲ್ಲಿ ಸರಿಯಾಗಿ ಒಂದು ನೆಲೆಯೂರದೇ ಜೀವನ ಬೀದಿಗೆ ಬಿದ್ದ ಅನೇಕ ಘಟನೆಗಳನ್ನು ನೋಡಿರುತ್ತೇವೆ.. ಇನ್ನೂ ಕೆಲವರು ಇದರಿಂದಾಗಿ ಜೀವವನ್ನೇ ಕಳೆದುಕೊಂಡ ಸುದ್ದಿಯನ್ನೂ ಸಹ ನೋಡಿರುತ್ತೇವೆ.. ಆದರೆ ಫೋಟೋದಲ್ಲಿರುವ ಹೆಣ್ಣುಮಗಳ ಕತೆಯೇ ಬೇರೆಯಾಗಿದೆ.‌ ಹೌದು ನಿಜಕ್ಕೂ ಈಕೆ ಮಾಡಿರುವ ಕೆಲಸಕ್ಕೆ ಕಂಬನಿ ಮಿಡಿಯಬೇಕೋ ಅಥವಾ ಇಂತಹ ಕೆಲಸ ಮಾಡಿಕೊಂಡಳಲ್ಲಾ ಬುದ್ದಿ ಇಲ್ಲದ ಹುಡಿಗಿ ಎಂದು ಕೊರಗಬೇಕೋ ಒಂದೂ ತಿಳಿಯದು.. ಆದರೆ ಈಕೆ ಮಾಡಿದ ಕೆಲಸ ಮಾತ್ರ ಯಾರೂ ಮಾಡಬೇಡಿ..

ಹೌದು ಈಕೆಯ ಹೆಸರು ಪೂಜಾ ನೋಡಲು ಎಷ್ಟು ಮುದ್ದಾಗಿರುವಳೋ ಅಷ್ಟೇ ಬುದ್ಧಿವಂತೆ ಸಹ.. ವಿದ್ಯಾವಂತೆ.. ಈಕೆಯ ವಯಸ್ಸು ಇನ್ನೂ ಇಪ್ಪತ್ತ ನಾಲ್ಕು.. ಹೊಸಪೇಟೆಯ ಕೊಟ್ಟೂರು ತಾಲೂಕಿನ ಉಜ್ಜನಿ ಗ್ರಾಮದ ನಿವಾಸಿ ನಾಗರಾಜ್ ಎಂಬುವವರ ಮಗಳು.. ಮಗಳು ಚೆನ್ನಾಗಿ ಓದಲಿ ಎಂದು ತಂದೆಯೂ ಸಹ ಚೆನ್ನಾಗಿ ಓದಿಸಿದರು.. ಆಕೆಯೂ ತಂದೆಯ ಆಸೆಯಂತೆ ಮೊದಲು ಎಂ ಎಸ್ ಸಿ ಮಾಡಿದಳು ನಂತರ ಬಿಎಡ್ ಮಾಡಬೇಕೆಂದು ಅದನ್ನೂ ಸಹ ಮುಗಿಸಿದಳು.. ಓದನ್ನು ಎಷ್ಟು ಸರಾಗವಾಗಿ ಮುಗಿಸಿದಳೋ ಅಷ್ಟೇ ಸರಾಗವಾಗಿ ತನ್ನ ಜೀವನವನ್ನೂ ಸಹ ಮುಗಿಸಿ ಬಿಟ್ಟಿದ್ದಾಳೆ.. ಹೌದು ಪೂಜಾ ತನ್ನ ಇಪ್ಪತ್ತ ನಾಲ್ಕು ವರ್ಷಕ್ಕೆ ಜೀವ ಕಳೆದುಕೊಂಡಿದ್ದು ಮಗಳ ಸ್ಥಿತಿಯನ್ನು ನೋಡಿ ತಂದೆ ನಾಗರಾಜ್ ಬೆಚ್ಚಿಬಿದ್ದಿದ್ದಾರೆ.. ಹೌದು ಮಗಳು ಹುಟ್ಟಿ ಇಷ್ಟು ಬೇಗ ದೊಡ್ಡವಳಾಗಿದ್ದು ತಿಳಿಯಲೇ ಇಲ್ಲ ಎನ್ನುತ್ತಿದ್ದ ಅಪ್ಪನಿಗೆ ಆಕೆ ಇಷ್ಟು ಬೇಗ ಜೀವ ಕಳೆದುಕೊಂಡದ್ದೂ ಸಹ ತಿಳಿಯಲೇ ಇಲ್ಲ..

ಮುದ್ದಾಗಿ ಸಾಕಿ ಬೆಳೆಸಿದ್ದ ಮನೆಯವರೆಲ್ಲಾ ಜೀವ ಎಂದುಕೊಂಡಿದ್ದ ಮಗಳನ್ನು ಕಳೆದುಕೊಂಡು ನಿಜಕ್ಕೂ ಆ ಕುಟುಂಬ ಅನುಭವಿಸುತ್ತಿರುವ ಆ ಸಂಕಟ ಯಾರಿಗೂ ಬೇಡ ಎನ್ನುವಂತಿದೆ.. ಅಷ್ಟಕ್ಕೂ ಪೂಜಾ ಮಾಡಿದ ಕೆಲಸವಾದರೂ ಏನು.. ಹೌದು ಪೂಜಾಳ ಈ ಕೆಲಸಕ್ಕೆ ಈ ದುಡುಕಿನ ನಿರ್ಧಾರಕ್ಕೆ ಯಾವುದೇ ಪ್ರೀತಿ ಪ್ರೇಮ ಕಾರಣವಲ್ಲ.. ಹೌದು ಓದುವ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದು ಜೀವನ ರೂಪಿಸಿಕೊಳ್ಳಲಾಗದೇ ಪೂಜಾ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ.. ಬದಲಿಗೆ ಈಕೆಯ ಈ ನಿರ್ಧಾರಕ್ಕೆ ಕಾರಣವಾಗಿದ್ದು ಆಕೆಯ ಓದಿನ ಆಸೆಯೇ ಎಂದರೆ ನಂಬಲೇಬೇಕು.. ಹೌದು ಸದಾ ಓದೋದೇ ಈಕೆಯ ಕೆಲಸವಾಗಿತ್ತು.. ಆ ಓದಿನ ಆಸೆಯೇ ಈಕೆ ಜೀವ ಕಳೆದುಕೊಳ್ಳುವಂತೆ ಮಾಡಿತ್ತು.. ಹೌದು ಪೂಜಾ ಎಂ ಎಸ್ ಸಿ ಮುಗಿಸಿದ ಬಳಿಕ ಅಪ್ಪನ ಬಳಿ ಹೋಗಿ ಬಿಎಡ್ ಮಾಡುವೆ ಎಂದಿದ್ದಾಳೆ..

ಅದಕ್ಕೆ ಆಯಿತು ಎಂದು ಒಪ್ಪಿಗೆ ನೀಡಿ ಪೂಜಾಳ ತಂದೆ ನಾಗರಾಜ್ ಓದಿಸಿದ್ದಾರೆ.. ನಂತರ ಬಿಎಡ್ ಮುಗಿಸಿ ಬಂದು ಪಿ ಹೆಚ್ ಡಿ ಮಾಡುವುದಾಗಿ ತಿಳಿಸಿದ್ದಾಳೆ.. ಆದರೆ ನಾಗರಾಜ್ ಅವರು ಈಗ ಸಧ್ಯಕ್ಕೆ ಬೇಡ ಎಂದಿದ್ದಾರೆ.. ಇಷ್ಟೇ.. ಮುಂದೆ ಆ ಮಗಳೇ ಇರಲಿಲ್ಲ.. ಹೌದು ಸೂಕ್ಷ್ಮ ಮನಸ್ಸಿನ ಪೂಜಾ ಅಪ್ಪ ಆ ರೀತಿ ಹೇಳಿದ ಕೂಡ ರೂಮಿಗೆ ತೆರಳಿ ಬಾಗಿಲು ಹಾಕಿಕೊಂಡಳು.. ಮತ್ತೆಂದೂ ಬಾಗಿಕು ತೆಗೆಯಲೇ ಇಲ್ಲ.. ಬಹಳ ಸಮಯ ಆದರೂ ಮಗಳು ಹೊರ ಬಾರದ ಕಾರಣ ನಾಗರಾಜ್ ಹಾಗೂ ಮನೆಯವರು ಬಾಗಿಲು ತೆಗೆದು ನೋಡಲಾಗಿ ಕಾಲ ಮಿಂಚಿ ಹೋಗಿತ್ತು.. ಮಗಳು ಅದಾಗಲೇ ಜೀವ ಕಳೆದುಕೊಂಡು ಬಿಟ್ಟಿದ್ದಳು.. ಒಂದು ಸಣ್ಣ ವಿಚಾರಕ್ಕೆ ಜೀವನದ ಅತಿ ದೊಡ್ಡ ನಿರ್ಧಾರ ತೆಗೆದುಕೊಂಡು ತನ್ನ ಜೀವನವನ್ನೇ ಅಂತ್ಯ ಮಾಡಿಕೊಂಡು ಬಿಟ್ಟಳು..

ನಿಜಕ್ಕೂ ಯಾರೂ ಸಹ ಇಂತಹ ಕೆಲಸ ಮಾಡಬೇಡಿ.. ವಿದ್ಯೆ ತಿಳುವಳಿಕೆಯನ್ನು ನೀಡುತ್ತದೆ ಎಂಬ ಮಾತಿದೆ ಆದರೆ ಪೂಜಾಳಿಗೆ ತಿಳುವಳಿಕೆ ಇಲ್ಲದೇ ದುಡುಕಿ ಇಂತಹ ದೊಡ್ಡ ನಿರ್ಧಾರ ತೆಗೆದುಕೊಂಡು ತನ್ನ ಇಡೀ ಕುಟುಂಬಕ್ಕೆ ಜೀವನ ಪೂರ್ತಿ ನೋವು ಕೊಟ್ಟು ಹೊರಟು ಹೋದಳು.. ಈ ಪುಣ್ಯಕ್ಕಾ ಆ ತಂದೆ ತಾಯಿ ಕಷ್ಟ ಪಟ್ಟು ಸಾಕಿದ್ದು ಕಷ್ಟ ಪಟ್ಟು ಇಷ್ಟು ಓದಿಸಿದ್ದೂ.. ಮಗಳು ಮಗಳು ಅಂತ ಮಗಳನ್ನೇ ಜೀವ ಎನ್ನುತ್ತಿದ್ದದ್ದು.. ಯಾವು ಪುಣ್ಯಕ್ಕೆ.. ದಯವಿಟ್ಟು ಯಾರೇ ಆಗಲಿ ಬದುಕಿನಲ್ಲಿ‌ ಇಂತಹ ನಿರ್ಧಾರಗಳನ್ನು ಕನಸಿನಲ್ಲಿಯೂ ಯೋಚಿಸಬೇಡಿ.. ಇರುವುದೊಂದು ಜೀವನ ಇದ್ದಷ್ಟು ದಿನ ನಮ್ಮವರಿಗಾಗಿ ನಮ್ಮ ಕುಟುಂಬಕ್ಕಾಗಿ ಬದುಕಬೇಕು.. ಅವರಿಗೆ ಸಂತೋಷ ನೀಡಲು ಸಾಧ್ಯವಾಗದಿದ್ದರೂ ನೋವನ್ನಂತೂ ನೀಡಬಾರದು.. ಆ ತಂದೆ ತಾಯಿಯ ಸಂಕಟ ನೋಡಿದರೆ ಮನಸ್ಸು ಹಾಗೆಯೇ ಕುಗ್ಗಿ ಹೋಗುವಂತಾಗುತಿತ್ತು.. ಈ ನೋವು ಅನುಭವಿಸಲು ಅವರೇನು ತಪ್ಪು ಮಾಡಿದರು ಎಂಬುದು ಮಾತ್ರ ಉತ್ತರವಿಲ್ಲದ ಪ್ರಶ್ನೆ..