ಹಾವೇರಿಯಲ್ಲಿ ಕೂಲಿ ಮಾಡುತ್ತಿದ್ದ ಹಳ್ಳಿ ಹುಡುಗ ಬೇರೆ ದೇಶಕ್ಕೆ ಹೋದ.. ಬರುವಾಗ ಹುಡುಗಿಯನ್ನೇ ಕರೆತಂದ.. ಆದರೆ ಕುಟುಂಬದವರು ಮಾಡಿದ್ದೇನು ಗೊತ್ತಾ..

0 views

ಪ್ರೀತಿ ಮಾಯೆ.. ಪ್ರೀತಿಗೆ ಕಣ್ಣಿಲ್ಲ.. ಪ್ರೀತಿ ಅಮರ.. ಪ್ರೀತಿ ಮಧುರ ಹೀಹೆ ಪ್ರೀತಿಯ ಬಗ್ಗೆ ಸಾಕಷ್ಟು ಮಾತುಗಳನ್ನು ಕೇಳುತ್ತೇವೆ.. ಆದರೂ ಸಹ ಈಗಿನ ದಿನಗಳಲ್ಲಿ ಬಹುತೇಕ ಪ್ರೀತಿಗಳು ಹಣಕಾಸಿನ ಮೇಲೆಯೇ ನಿಂತಿದೆ.. ಇದು ವಾಸ್ತವವೂ ಕೂಡ.. ಎಲ್ಲೋ ಅಲ್ಲೊಂದು ಇಲ್ಲೊಂದು ಮಾತ್ರ ನಿಜವಾದ ಪ್ರೀತಿ ಹಣ ಆಸ್ತಿಯನ್ನು ನೋಡದೇ ಬಂದ ಪ್ರೀತಿ ಕಾಣುತ್ತದೆ.. ಆದರೆ ಇದೆಲ್ಲದಕ್ಕೂ ಮೀರಿ ಇಲ್ಲೊಂದು ಪ್ರೀತಿ ಹುಟ್ಟಿದೆ.. ಹೌದು ಹಾವೇರಿಯ ಹಳ್ಳಿ ಹುಡುಗನೊಬ್ಬ ವಿಯೇಟ್ನಾಂ ದೇಶಕ್ಕೆ ಹೋಗಿ ಅಲ್ಲಿ ಮಾಡಿದ ಕೆಲಸವನ್ನು ನೋಡಿ ಸಧ್ಯ ಇದೀಗ ಆತನ ಹಳ್ಳಿ ಹಾಗೂ ಕುಟುಂಬದವರು ಆಶ್ಚರ್ಯಗೊಂಡು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ..

ಹೌದು ಕಳೆದ ಕೆಲ ದಿನಗಳ ಹಿಂದೆ ರಾಜಾ ರಾಣಿ ಶೋನಲ್ಲಿ ಸುಮನ್ ಹಾಗೂ ಪವನ್ ದಂಪತಿಯೊಂದು ಸ್ಪರ್ಧಿಸಿತ್ತು.. ಅವರಿಬ್ಬರದ್ದು ಎರಡು ದೇಶದ ನಡುವಿನ ಪ್ರೀತಿಯಾಗಿತ್ತು.. ಯೋಗ ಕೇಂದ್ರಕ್ಕೆ ಹೋಗಿದ್ದ ಪವನ್ ಅಲ್ಲಿಯೇ ಬೇರೆ ದೇಶದ ಸುಮನ್ ನನ್ನು ನೋಡಿ ಪ್ರೀತಿಸಿ ಅಲ್ಲಿಯೇ ಮದುವೆಯೂ ಸಹ ಆಗಿ ಬಂದಿದ್ದರು.. ಆದರೆ ಇಲ್ಲಿ ಅದೇ ರೀತಿ ಹಾವೇರಿಯ ಹಳ್ಳಿ ಹುಡುಗ ವಿಯೇಟ್ನಾಂ ದೇಶದ ಹುಡುಗಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದು ಆದರೆ ಕುಟುಂಬದವರು ಮಾಡಿದ ಕೆಲಸವೇ ಬೇರೆಯಾಗಿದೆ..

ಹೌದು ಈತನ ಹೆಸರು ಪ್ರದೀಪ್ ಖಂಡನವರ.. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರಾಮತೀರ್ಥಹೊಸಕೊಪ್ಪ ಗ್ರಾಮದ ನಿವಾಸಿ.. ಈತ ಐಟಿಐ ಮುಗಿಸಿ ನಂತರ ಹಳ್ಳಿಯಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದ.. ಆದರೆ ಹೀಗೆ ಇದ್ದರೆ ಜೀವನದಲ್ಲಿ ಏನೂ ಮಾಡಲು ಆಗದು ಎಂದು ನಿರ್ಧರಿಸಿದ ಪ್ರದೀಪ್ ಯೋಗ ತರಬೇತಿ ಪಡೆದು ಯೋಗ ಶಿಕ್ಷಕನಾಗಿ ಪರಿಣಿತಿ ಪಡೆದ.. ನಂತರ ಸ್ನೇಹಿತರ ಜೊತೆಗೂಡಿ ವಿಯೇಟ್ನಾಂ ದೇಶಕ್ಕೆ ಹೋದ ಅಲ್ಲಿ ಯೋಗ ಶಿಕ್ಷಕನಾಗಿ ಕೆಲಸ ಶುರು ಮಾಡಿದ.. ಅಲ್ಲಿ ಯೋಗ ಕಲಿಸಲೆಂದೇ ಸಾಕಷ್ಟು ಕಂಪನಿಗಳು ಇದ್ದು ಭಾರತೀಯರಿಗೆ ಒಳ್ಳೆಯ ಬೆಲೆ ಇದೆ.. ಆ ಕಂಪನಿಯಲ್ಲಿ ಯೋಗ ಶಿಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡ.. ಕಳೆದ ಎಂಟು ವರ್ಷಗಳಿಂದಲೂ ಯೋಗ ಶಿಕ್ಷಕನಾಗಿ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ..

ಇನ್ನು ಅತ್ತ ಅದೇ ಕಂಪನಿಯಲ್ಲಿ ಕುಯಾನ್ ತ್ರಾಂಗ್ ಎಂಬ ಮಹಿಳೆಯೂ ಕೆಲಸ ಮಾಡುತ್ತಿದ್ದರು.. ಅವರಿಗೆ ನಮ್ಮ ಹಾವೇರಿ ಹೈದನ ಮೇಲೆ ಪ್ರೀತಿ ಮೂಡಿತು.. ನಂತರ ಇಬ್ಬರ ನಡುವೆ ಸ್ನೇಹ ಪರಸ್ಪರ ಪ್ರೀತಿಯಾಗಿ ಬದಲಾಯಿತು.. ಪ್ರದೀಪ್ ಹಾಗೂ ಕುಯಾನ್ ತ್ರಾಂಗ್ ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು.. ನಂತರ ಹೀಗೆ ಇದ್ದರೆ ಸರೊಬಾರದೆಂದು ತನ್ನ ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿದ ಪ್ರದೀಪ್ ಗೆ ಆಶ್ಚರ್ಯ ಕಾದಿತ್ತು.. ಹೌದು ಹಳ್ಳಿಗಳಲ್ಲಿ ಮೊದಲೇ ಪ್ರೀತಿ ಪ್ರೇಮ ಎಂದರೆ ಒಪ್ಪಲಾರರು.. ಅಂತಹುದರಲ್ಲಿ ಬೇರೆ ದೇಶದ ಹುಡುಗಿಯನ್ನು ಒಪ್ಪಿದ್ದಲ್ಲದೇ ಆಕೆಯ ಜೊತೆಗಿನ ಪ್ರೀತಿಯನ್ನೂ ಸಹ ಒಪ್ಪಿದರು.. ಹೌದು ಇಬ್ಬರ ಪ್ರೀತಿಯನ್ನು ಒಪ್ಪಿಕೊಂಡು ಗ್ರಾಮದಲ್ಲಿಯೇ ಮದುವೆ ಮಾಡುವುದಾಗಿ ತಿಳಿಸಿದರು.. ಅದಕ್ಕೊಪ್ಪಿದ ಪ್ರದೀಪ್ ವಿಯೇಟ್ನಾಂ ನಿಂದ ಬರುವಾಗ ಕುಯಾನ್ ತ್ರಾಂಗ್ ರನ್ನೂ ಜೊತೆಯಲ್ಲಿಯೇ ಕರೆತಂದನು..

ಕುಟುಂಬದವರು ಹೇಳಿದಂತೆ ನಿನ್ನೆ ಹಾವೇರಿಯ ಹಾನಗಲ್ ತಾಲೂಕಿನ ರಾಮತೀರ್ಥಹೊಸಕೊಪ್ಪ ಗ್ರಾಮದಲ್ಲಿ ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆ ನೆರವೇರಿತು.. ಹೌದು ಪ್ರದೀಪ್ ಅವರ ಮನೆಯ ಮುಂದೆಯೇ ತೆಂಗಿನ ಗರಿಯ ಚಪ್ಪರ ಹಾಕಿ ಮದುವೆಯ ಎಲ್ಲಾ ಶಾಸ್ತ್ರ ಸಂಪ್ರದಾಯಗಳನ್ನೂ ಸಹ ಇಬ್ಬರಿಗೂ ನೆರವೇರಿಸಿ ಮದುವೆ ನಡೆಸಿದರು.. ಕುಯಾನ್ ತ್ರಾಂಗ್ ಹೆಸರು ನಮ್ಮವರಿಗೆ ಕಷ್ಟವಾದ ಕಾರಣ ಆಕೆಯ ಹೆಸರನ್ನು ಪ್ರೀತಿ ಎಂದು ಬದಲಿಸಿಕೊಂಡಿದ್ದು ಪ್ರದೀಪ್ ನ ಕುಟುಂಬದವರು ಮಗ ಪ್ರೀತಿಸಿದ ಹುಡುಗಿಯ‌ನ್ನು ಸೊಸೆ ಮಾಡಿಕೊಂಡು ಪ್ರೀತಿಯಿಂದ ಪ್ರೀತಿ ಎಂದು ಕರೆಯತೊಡಗಿದರು..

ಆದರೆ ಅತ್ತ ಕುಯಾನ್ ತ್ರಾಂಗ್ ಅವರ ಕುಟುಂಬದಿಂದ ಮದುವೆಗೆ ಯಾರೂ ಸಹ ಬಾರದೇ ಇದ್ದದ್ದು ಕೊಂಚ ಬೇಸರವನ್ನೂ ಸಹ ತಂದಿತ್ತು.. ಆದರೆ ಪ್ರದೀಪ್ ಹಾಗೂ ಕುಯಾನ್ ತ್ರಾಂಗ್ ಮದುವೆಗೆ ಆಕೆಯ ಮನೆಯವರೂ ಸಹ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.. ಹೌದು ಕುಯಾನ್ ಗೆ ಅಮ್ಮ ಹಾಗೂ ಒಬ್ಬಳು ಅಕ್ಕ ಇದ್ದು.. ಕೆಲ ದಿನಗಳ ಹಿಂದಷ್ಟೇ ಅಕ್ಕನಿಗೆ ಹೆರಿಗೆಯಾದ ಕಾರಣ ಅವರ ತಾಯಿ ಅಕ್ಕನನ್ನು ನೋಡಿಕೊಳ್ಳುತ್ತಿದ್ದ ಕಾರಣ ಅವರು ಬರಲಾಗಲಿಲ್ಲ ಎಂದಿದ್ದಾರೆ.. ಒಟ್ಟಿನಲ್ಲಿ ಎರಡು ದೇಶದ ನಡುವಿನ ಪ್ರೀತಿ ಇದೀಗ ನಮ್ಮ ಮಣ್ಣಿನ ಅಂಗಳದಲ್ಲಿ ಸಂಪ್ರದಾಯಬದ್ಧವಾಗಿ ಮದುವೆ ಮೂಲಕ ಸಂಪನ್ನವಾಯಿತೆನ್ನಬಹುದು..