ಬಿಗ್ ಶಾಕಿಂಗ್.. ‌ಬಾಬಾ ಕಾ ಡಾಬಾ ಹೊಟೆಲ್‌ ನ ತಾತ ಎಂತ ಕೆಲಸ ಮಾಡಿದ್ದಾರೆ ನೋಡಿ.. ಇಷ್ಟೇ ಜೀವನ..

0 views

ಬಾಬಾ ಕಾ ಡಾಬಾ.. ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಆದ ವಿಚಾರ.. ಹೌದು 80 ವರ್ಷದ ಕಾಂತ ಪ್ರಸಾದ್ ಎಂಬ ತಾತನ ಬಾಬಾ ಕಾ ಡಾಬಾ ಹೊಟೆಲ್ ನಲ್ಲಿ ಜನವಿಲ್ಲ.. ಯಾರೂ ಜನ ಹೋಗದೇ ಇದ್ದರೆ ನಮಗೆ ಊಟಕ್ಕೂ ಹಣವಿರುವುದಿಲ್ಲ ಎಂದ ಅಜ್ಜ ಅಜ್ಜಿ ಇಬ್ಬರೂ ಕಣ್ಣೀರಿಡುತ್ತಿರುವ ವೀಡಿಯೋ ವೊಂದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು..

ವೀಡಿಯೋ ವೈರಲ್ ಆಗುತ್ತಿದ್ದಂತೆ ಜನರು ನೂರಾರು ಸಂಖ್ಯೆಯಲ್ಲಿ ಹೊಟೆಲ್ ಗೆ ಆಗಮಿಸಿ ಊಟ ಮಾಡಿ ತಾತನಿಗೆ ಸಹಾಯ ಆಗುವಂತೆ ಮಾಡಿದರು.. ಇನ್ನು ದೆಹಲಿ ಇಂದ ದೂರವಿರುವ ಜನರು ವೀಡಿಯೀವನ್ನು ಶೇರ್ ಮಾಡುವ ಮೂಲಕ ಹತ್ತಿರದವರು ಹೋಗಿ ಅಲ್ಲಿ ಊಟ ಮಾಡಿ ಎಂದು ಮನವಿಯನ್ನು ಸಹ ಮಾಡಿಕೊಂಡಿದ್ದರು.. ಸ್ಟಾರ್ ಗಳು ಸಹ ಬಾಬಾ ಕಾ ಡಾಬಾ ಹೊಟೆಲ್ ಕುರಿತು ಮಾತನಾಡಿದ್ದರು..

ಅದರೆ ಇದೀಗ ಆ ಹೊಟೆಲ್ ಫೇಮಸ್ ಆಗಲು ಕಾರಣನಾದ ಮೊದಲು ವೀಡಿಯೋ ಮಾಡಿದ ಗೌರವ್ ವಾಸನ್ ವಿರುದ್ಧ ಬಾಬಾ ಕಾ ಡಾಬಾ ಹೋಟೆಲ್ ನ ತಾತ ಕಾಂತ ಪ್ರಸಾದ್ ದೂರು ದಾಖಲಿಸಿದ್ದಾರೆ.. ಹೌದು ನನ್ನ ಹೆಸರು ಹೇಳಿಕೊಂಡು ನಮಗೆ ಸಹಾಯ ಮಾಡಲೆಂದು ಜನರ ಬಳಿ ಸಾಕಷ್ಟು ಹಣವನ್ನು ಯೂಟ್ಯುಬರ್ ಗೌರವ್ ವಾಸನ್ ಸಂಗ್ರಹಿಸಿ ನಮಗೆ ಮೋಸ ಮಾಡಿದ್ದಾರೆ ಎಂದಿದ್ದಾರೆ.. ಅಷ್ಟೇ ಅಲ್ಲದೇ ಮೊದಲು ನನಗೆ ದಿನಕ್ಕೆ ಹತ್ತು ಸಾವಿರ ರೂಪಾಯಿ ವ್ಯಾಪಾರ ಆಗುತಿತ್ತು.. ಆದರೆ ಈಗ ಐದರಿಂದ ಆರು ಸಾವಿರ ರೂಪಾಯಿ ಮಾತ್ರ ವ್ಯಾಪಾರ ಆಗುತ್ತಿದೆ.. ಜನರು ಬಂದು ಊಟ ಮಾಡೋಕಿಂತ ಹೆಚ್ಚಾಗಿ ಸೆಲ್ಫಿ ತೆಗೆದುಕೊಂಡು ಹೋಗ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ..

ಇನ್ನು ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.. ಈ ಬಗ್ಗೆ ಇದೀಗ ಪ್ರತಿಕ್ರಿಯೆ ನೀಡಿರುವ ಯೂಟ್ಯೂಬರ್ ಗೌರವ್ ವಾಸನ್ ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.. ತಾತನಿಗೆ ಯಾರೂ ಮೋಸ ಮಾಡಬಾರದೆಂಬ ಕಾರಣಕ್ಕೆ ನಾನು ನನ್ನ ಬ್ಯಾಂಕ್ ಅಕೌಂಟ್ ನಂಬರ್ ಅನ್ನು ಕೊಟ್ಟೆ.. ಅದರಂತೆ ಅಕ್ಟೋಬರ್ 27ನೇ ತಾರೀಕಿನಿಂದ ಮೂರು ದಿನಗಳಲ್ಲಿ ಮೂರುವರೆ ಲಕ್ಷ ಹಣ ಸಂಗ್ರಹವಾಗಿತ್ತು.. ಅದನ್ನು ಸಂಪೂರ್ಣವಾಗಿ ತಾತನ ಅಕೌಂಟ್ ಗೆ ಟ್ರಾನ್ಸ್ಫರ್ ಮಾಡಿದ್ದೇನೆ ಎಂದು ತಮ್ಮ ಬ್ಯಾಂಕ್ ನ ಸ್ಟೇಟ್ಮೆಂಟ್ ಅನ್ನು ಸಂಪೂರ್ಣವಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ..

ಇನ್ನು ಈ ಬಗ್ಗೆ ತಾತನನ್ನು ಕೇಳಿದ್ದಕ್ಕೆ ನನಗೆ 2 ಲಕ್ಷದ ಚೆಕ್‌ ಮಾತ್ರ ನೀಡಿದ್ದಾರೆ ಇನ್ನು ಉಳಿದದ್ದು ನೀಡಿಲ್ಲ ಎಂದಿದ್ದಾರೆ.. ಆದರೆ ವಾಸನ್ ಸಂಪೂರ್ಣ ಮೂರುವರೆ ಲಕ್ಷ ಹಣವನ್ನು ಟ್ರಾನ್ಸ್ಫರ್ ಮಾಡಿರುವ ದಾಖಲೆಯನ್ನು ನೀಡಿದ್ದಾರೆ.. ಆ ದಾಖಕೆಯನ್ನು ತಾತನಿಗೆ ತೋರಿಸಿ ಕೇಳಿದ್ದಕ್ಕೆ.. ಇನ್ನು ಮಿಕ್ಕಿದ ಹಣ ವರ್ಗಾವಣೆ ಆದ ಮೇಲೆ ನಾನು ಬ್ಯಾಂಕ್ ನಲ್ಲಿ ಚೆಕ್ ಮಾಡಿಲ್ಲ.. ನಾನು ಫೋನ್ ಕೂಡ ಚೆಕ್ ಮಾಡಿಲ್ಲ ಎಂಬ ಮಾತುಗಳನ್ನು ಆಡಿದ್ದಾರೆ..

ಒಟ್ಟಿನಲ್ಲಿ ಕಷ್ಟ ಅಂತ ಸಹಾಯ ಮಾಡಲು ಮುಂದಾದರೆ ಕೊನೆಗೆ ಸಹಾಯ ಮಾಡಿಸಿಕೊಂಡವರೇ ಸಹಾಯ ಆಗಲು ಕಾರಣರಾದವರ ಮೇಲೆಯೇ ದೂರು ನೀಡುವಂತಾಯ್ತು.. ಅದಕ್ಕೇ ಇರಬೇಕು ಅತಿಯಾದ ಒಳ್ಳೆಯತನವೂ ಒಳ್ಳೆಯದಲ್ಲವೆನ್ನುವುದು ಎನ್ನುತ್ತಿದ್ದಾರೆ ನೆಟ್ಟಿಗರು.. ಅಷ್ಟೇ ಅಲ್ಲದೇ ಈ ಮೊದಲು ಹತ್ತು ಸಾವಿರ ರೂಪಾಯಿ ವ್ಯಾಪಾರ ಆಗುತ್ತಿದ್ದರೆ ಕಷ್ಟ ಅಂತ ಯಾಕೆ ಅಂದು ಕಣ್ಣೀರಿಡಬೇಕಿತ್ತು ಎಂಬ ಪ್ರಶ್ನೆಯನ್ನು ಸಹ ಕೇಳಿದ್ದಾರೆ..