ಕೊರೊನಾದಿಂದ ಕುಟುಂಬದವರ ಜೀವ ಕಳೆದುಕೊಂಡ ಜನರ ನೋವು ನಿಜಕ್ಕೂ ಅನುಭವಿಸಿದವರಿಗಷ್ಟೇ ಗೊತ್ತು.. ಅಮ್ಮನನ್ನು ಕಳೆದುಕೊಂಡ ಮಕ್ಕಳು.. ಮಕ್ಕಳನ್ನು ಕಳೆದುಕೊಂಡ ಪೋಷಕರು.. ಅಕ್ಕನನ್ನು ಕಳೆದುಕೊಂಡ ತಮ್ಮ.. ಅಣ್ಣನನ್ನು ಕಳೆದುಕೊಂಡ ತಂಗಿ.. ಗಂಡನನ್ನು ಕಳೆದುಕೊಂಡ ಹೆಂಡತಿ.. ಮದುವೆಯಾಗಿ ಎರಡು ದಿನದಲ್ಲಿ ಇಲ್ಲವಾದ ಪತ್ನಿ.. ಹೀಗೆ ಒಂದೊಂದು ಜೀವಗಳು ಇನ್ನಿಲ್ಲವಾದ ಸುದ್ದಿಗಳು ಅದರಲ್ಲಿಯೂ ಆ ಕುಟುಂಬದ ಕರುಣಾಜನಕ ಕತೆಗಳನ್ನು ನೋಡಿದರೆ ಎಂತಹ ಪರಿಸ್ಥಿತಿ ಬಂದುಬಿಟ್ಟಿತು.. ಎರಡು ವರ್ಷದ ಹಿಂದೆ ನೆಮ್ಮದಿಯಾಗಿದ್ದ ಎಲ್ಲರ ಜೀವನ ನಡು ನೀರಿನಲ್ಲಿ ಬಂದು ನಿಂತಿದೆ.. ನಿಜಕ್ಕೂ ಈ ಎಲ್ಲಾ ಸಂಕಷ್ಟಗಳನ್ನು ದಾಟಿ ದಡವನ್ನು ತಲುಪುತ್ತೇವೆಯೋ.. ಅಥವ ದಡವೆಂಬುದು ನಿಜಕ್ಕೂ ಇದೆಯೋ ಎಂಬ ಪ್ರಶ್ನೆ ಮೂಡುತ್ತದೆ.. ಆದರೆ ಇದೆಲ್ಲಕ್ಕೂ ಮೀರಿ ಮೈಸೂರಿನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ.. ಹೌದು ಈ ಮಕ್ಕಳ ಪರಿಸ್ಥಿತಿ ಯಾವ ಶತ್ರುವಿಗೂ ಬಾರದಿರಲಿ ಎಂದೆನಿಸುತ್ತಿದೆ..

ಈ ಪುಟ್ಟ ಹುಡುಗನ ಹೆಸರು ಹರ್ಷ.. ವಯಸ್ಸಿನ್ನೂ ಕೇವಲ ಹದಿನಾಲ್ಕು.. ಆತನ ತಂಗಿಯ ಹೆಸರು ನಯನ.. ವಯಸ್ಸು ಕೇವಲ ಹನ್ನೆರೆಡು.. ಆದರೆ ಈ ವಯಸ್ಸಿನಲ್ಲಿಯೇ ಈ ಪುಟ್ಟ ಜೀವಗಳು ಪಡುತ್ತಿರುವ ನೋವು ಭಗವಂತನನ್ನೂ ಶಪಿಸುವಂತೆ ಮಾಡುತ್ತಿದೆ.. ಹೌದು ಈ ಮಕ್ಕಳು ತಮ್ಮ ತಾಯಿ ಕೊರೊನಾ ದಿಂದ ಜೀವ ಕಳೆದುಕೊಂಡಿದ್ದು ಅಮ್ಮನ ಹನ್ನೊಂದನೇ ದಿನದ ಕಾರ್ಯ ಮಾಡುವ ವೇಳೆ ಅರ್ಧಕ್ಕೆ ಪೂಜೆಯನ್ನು ನಿಲ್ಲಿಸಿ ಬೆಚ್ಚಿಬಿದ್ದಿದ್ದಾರೆ.. ಹೌದು ಈ ಮಕ್ಕಳು ಮೈಸೂರಿನ ನಿವಾಸಿಗಳು.. ಈ ಮಕ್ಕಳ ಅಪ್ಪನ ಹೆಸರು ಡಿ ಪ್ರಸನ್ನ.. ವಯಸ್ಸು ನಲವತ್ತ ನಾಲ್ಕು.. ಪ್ರಸನ್ನ ಅವರು ಮೈಸೂರು ವಿಶ್ವವಿದ್ಯಾನಿಲಯದ ತೋಟಗಾರಿಕೆ ವಿಭಾಗದಲ್ಲಿ ತಾತ್ಕಾಲಿಕ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದರು.. ಆ ಮಕ್ಕಳ ತಾಯಿಯ ಹೆಸರು ಸುಷ್ಮಾ.. ಮೂವತ್ತೇಳು ವರ್ಷ ವಯಸ್ಸು.. ಇವರು ಹಾಸನದ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು.. ಇಬ್ಬರು ಪುಟ್ಟ ಮಕ್ಕಳು ಅದೊಂದು ಚೆಂದದ ಸಂಸಾರವಾಗಿತ್ತು..

ಮೈಸೂರಿನ ಗಂಗೋತ್ರಿ ಲೇಔಟ್ ನಲ್ಲಿ ವಾಸಿಸುತ್ತಿದ್ದರು.. ಆದರೆ ಈ ಚೆಂದದ ಕುಟುಂಬದ ಮೇಕೆ ಅದ್ಯಾವ ಕಣ್ಣು ಬಿತ್ತೋ ತಿಳಿಯದು.. ಕೊರೊನಾದಿಂದಾಗಿ ಇದೀಗ ಇಡೀ ಸಂಸಾರವೇ ದಿಕಾಪಾಲಾಗಿ ಹೋಗಿದೆ.. ಮಕ್ಕಳು ಬೀದಿಗೆ ಬೀಳುವಂತಾಗಿದೆ.. ಹೌದು ಕಳೆದ ತಿಂಗಳು ಪ್ರಸನ್ನ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.. ನಂತರ ಪತಿಯಿಂದ ಸುಷ್ಮಾ ಅವರಿಗೂ ಸಹ ಸೋಂಕು ತಗುಲಿತ್ತು.. ಇಬ್ಬರೂ ಸಹ ಮನೆಯಲ್ಲಿಯೇ ಕ್ವಾರಂಟೈನ್ ಆದರು.. ಆ ತಕ್ಷಣ ಮಕ್ಕಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದು ಬೇಡವೆಂದು ಅವರನ್ನು ಹುಣಸೂರಿನ ಮೈಲಾಂಬುರದಲ್ಲಿನ ತಾತನ ಮನೆಗೆ ಕಳುಹಿಸಿ ಬಿಟ್ಟರು.. ಇತ್ತ ಕ್ವಾರಂಟೈನ್ ನಲ್ಲಿದ್ದ ಸುಷ್ಮಾ ಅವರು ತಮ್ಮ ಬಗ್ಗೆ ಸರಿಯಾದ ಕಾಳಜಿ ಮಾಡಿಕೊಳ್ಳದೇ ಆರೋಗ್ಯ ತೀರಾ ಹದಗೆಟ್ಟಿ ಹೋಗಿತ್ತು.. ಪರಿಸ್ಥಿತಿ ಕೈ ಮೀರಿ ಮೇ ಹದಿನಾರರಂದು ಸುಷ್ಮಾ ಕೊನೆಯುಸಿರೆಳೆದು ಬಿಟ್ಟರು.. ನಂತರ ಪ್ರಸನ್ನ ಅವರನ್ನು ಮೇಟಗಳ್ಳಿಯ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು.. ಇನ್ನೂ ಚಿಕ್ಕ ವಯಸ್ಸಿನ ಮಕ್ಕಳು ಅಮ್ಮನನ್ನು ಕಳೆದುಕೊಂಡು ಅನಾಥರಾಗಿದ್ದರು.. ಇತ್ತ ಅಪ್ಪನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಕ್ಕಳು ತಾತನ ಮನೆಯಲ್ಲಿಯೇ ಉಳಿದಿದ್ದರು.. ಅಮ್ಮನಿಲ್ಲದ ಸಂಕಟದಲ್ಲಿದ್ದ ಮಕ್ಕಳಿಗೆ ಅಪ್ಪನೇ ಭರವಸೆಯಾಗಿದ್ದರು..

ಇನ್ನು ಅಮ್ಮನ ಹನ್ನೊಂದನೆ ದಿನದ ಕಾರ್ಯ ಮಾಡಬೇಕಾದ್ದರಿಂದ ಮಕ್ಕಳು ಮೈಸೂರಿಗೆ ಆಗಮಿಸಿದ್ದರು.. ಅಮ್ಮನ ಹನ್ನೊಂದನೇ ದಿನದ ಪೂಜೆ ಮಾಡುವ ಸಮಯದಲ್ಲಿಯೇ ಮಕ್ಕಳು ಪೂಜೆಯನ್ನು ನಿಲ್ಲಿಸಿ ಕುಸಿದು ಬಿದ್ದಿದ್ದಾರೆ.. ಹೌದು ಅದೇ ಸಮಯಕ್ಕೆ ಮಕ್ಕಳಿಗೆ ಅರಗಿಸಿಕೊಳ್ಳಲಾಗದ ಸುದ್ದಿಯೊಂದು ಬಂದಿದೆ.. ಹೌದು ಆ ಮಕ್ಕಳಿಗೆ ಆಧಾರವಾಗಿದ್ದ ಅಪ್ಪನೂ ಸಹ ಅಮ್ಮನ ಕಾರ್ಯದ ದಿನವೇ ಕೊರೊನಾದಿಂದ ಕೊನೆಯುಸಿರೆಳೆದು ಬಿಟ್ಟಿದ್ದಾರೆ.. ಇತ್ತ ಅಮ್ಮನ ತಿಥಿಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿ ತಾತ ತನ್ನ ಮೊಮ್ಮಕ್ಕಳನ್ನು ಊರಿಗೆ ವಾಪಸ್ ಕರೆದುಕೊಂಡು ಹೋಗಿದ್ದಾರೆ.. ಅತ್ತ ಅಪ್ಪ ಅಮ್ಮನ ಮುಖವನ್ನೂ ಸಹ ಕೊನೆಯದಾಗಿ ನೋಡಲಾಗದ ಮಕ್ಕಳು ತಾತನ ಮನೆಗೆ ಮರಳಿದ್ದಾರೆ.. ಅದಾಗಲೇ ಅಮ್ಮನನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದ ಮಕ್ಕಳು ಇದೀಗ ಅಪ್ಪನನ್ನು ಕಳೆದುಕೊಂಡು ಬೀದಿಗೆ ಬೀಖುವ ಸ್ಥಿತಿ ನಿರ್ಮಾಣಗೊಂಡಿದೆ..

ಹೌದು ಆರ್ಥಿಕವಾಗಿ ಅಷ್ಟು ಸಬಲರಾಗಿರದ ಕುಟುಂಬವದು.. ವಯಸ್ಸಾದ ತಾತನ ಆಶ್ರಯದಲ್ಲಿ ಸದ್ಯ ಮಕ್ಕಳಿದ್ದಾರೆ.. ಆದರೆ ಮುಂದೇನು ಎಂದು ದಿಕ್ಕು ತೋಚದೆ ಯೋಚನೆ ಮಾಡುವ ವಯಸ್ಸಿನಲ್ಲಿಯೂ ಇರದ ಮಕ್ಕಳು ದಿಕ್ಕು ತೋಚದೆ ನಿಂತಿದ್ದಾರೆ.. ಸದ್ಯ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ ಜಿ ಹೇಮಂತ್ ಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ವಿಚಾರ ತಿಳಿದು ನೋವಾಗಿದೆ.. ಲಾಕ್ ಡೌನ್ ಮುಗಿದ ಬಳಿಕ ಎಲ್ಲರ ಜೊತೆ ಚರ್ಚೆ ಮಾಡಿ ಮಕ್ಕಳ ಭವಿಷ್ಯಕ್ಕೆ ವಿಶ್ವವಿದ್ಯಾನಿಲಯದಿಂದ ಆಗುವ ನೆರವನ್ನು ನೀಡಲಾಗುವುದು ಎಂದು ತಿಳಿಸಿದ್ದು ಮಕ್ಕಳಿಗೆ ನೆರವಾಗಲು ಮುಂದೆ ಬಂದಿದ್ದಾರೆ.. ದಯವಿಟ್ಟು ಯಾರೂ ಸಹ ಕೊರೊನಾವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ.. ಆ ಮಕ್ಕಳ ಪರಿಸ್ಥಿತಿ ಬೇರೆ ಯಾವ ಕುಟುಂಬದ ಮಕ್ಕಳಿಗೂ ಬಾರದಿರಲಿ.. ದಯವಿಟ್ಟು ಎಚ್ಚರಿಕೆ ಇಂದಿರಿ..