ಪ್ರಶಾಂತ್ ಸಂಬರ್ಗಿಯ ಮುಖಕ್ಕೆ ಉಗಿದ ದಿವ್ಯಾ ಉರುಡುಗ.. ನಾನು ಅರವಿಂದ್ ನ ಹೆಂಡತಿ ಆದ್ರೆ ನಿನಗೇನು?

0 views

ಬಿಗ್ ಬಾಸ್ ಕನ್ನಡ ಸೀಸನ್ ಎಂಟರಲ್ಲಿ ಒಬ್ಬರಿಗಿಂತ ಒಬ್ಬರು ಹೆಚ್ಚು ಎನ್ನುವಂತ ಸ್ಪರ್ಧಿಗಳಿದ್ದು ಮನೆಯ ಸದಸ್ಯರ ನಡುವೆ ಆಗಾಗ ದೊಡ್ಡ ದೊಡ್ಡ ಗಲಾಟೆಗಳು ನಡೆಯುತ್ತಲೇ ಇವೆ‌‌.. ಅದರಲ್ಲೂ ಪ್ರಶಾಂತ್ ಸಂಬರ್ಗಿ ಅವರು ವಾರಕೊಬ್ಬರ ಜೊತೆ ಕಿರಿಕ್ ಮಾಡಿಕೊಳ್ಳುತ್ತಲೇ ಇದ್ದು ನಿನ್ನೆ ಅರವಿಂದ್ ಹಾಗೂ ಪ್ರಶಾಂತ್ ನಡುವೆ ನನ್ನ್ ಮಗನೆ ಎನ್ನುವ ಮಟ್ಟಕ್ಕೆ ವಾಗ್ವಾದ ನಡೆದು ಕೊನೆಗೆ ದಿವ್ಯಾ ಉರುಡುಗ ಮಧ್ಯ ಪ್ರವೇಶಿಸಿ ಪ್ರಶಾಂತ್ ಸಂಬರ್ಗಿ ಅವರಿಗೆ ಮುಖಕ್ಕೆ ಹೊಡೆದಂತೆ ಏಕವಚನದಲ್ಲಿಯೇ ಮಾತನಾಡಿದ್ದಾರೆ..

ಹೌದು ನಿನ್ನೆಯಷ್ಟೇ ವೈಷ್ಣವಿ ಹಾಗೂ ದಿವ್ಯಾ ಸುರೇಶ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಟಾಸ್ಕ್ ಗಾಗಿ ಕೂತಿರುವ ಸಮಯದಲ್ಲಿ ಶಂಕರ್ ಅಶ್ವತ್ಥ್ ಅವರು ನೀರಿಗೆ ಬಿದ್ದು ವೈಷ್ಣವಿ ಅವರನ್ನು ತಳ್ಳಿದ್ದು ಶಂಕರ್ ಅಶ್ವತ್ಥ್ ಅವರ ನಡೆ ಮನೆಯಲ್ಲಿ ವಿವಾದಕ್ಕೆ ಕಾರಣವಾಗಿತ್ತು.. ಎಲ್ಲರೂ ಶಂಕರ್ ಅಶ್ವತ್ಥ್ ಅವರು ನಡೆದುಕೊಂಡ ರೀತಿಗೆ ವಿರೋಧ ವ್ಯಕ್ತ ಪಡಿಸಿದ್ದರು‌‌.. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಕಿರಿಕ್ ಆಗಿದೆ.. ಹೌದು ಪ್ರಶಾಂತ್ ಹಾಗೂ ಅರವಿಂದ್ ನಡುವೆ ಮಾತಿನ ಚಕಮಕಿ ನಡೆದಿದ್ದು ಈ ಸಮಯದಲ್ಲಿ ನನ್ ಮಗನೆ ಎನ್ನುವ ಮಟ್ಟಕ್ಕೆ ಮಾತು ನಡೆದಿದೆ.. ಹೌದು ಅರವಿಂದ್ ಹಾಗೂ ಪ್ರಶಾಂತ್ ಸಂಬರ್ಗಿ ನಡುವೆ ಜಗಳ ನಡೆದು ಅರವಿಂದ್ ಅವರು “ಅಧಿಕ ಪ್ರಸಂಗ ಮಾಡುದ್ರೆ ನನ್ನ್ ಮಗನೆ ನಿನ್ನ ಅಲ್ಲೇ” ಎಂದು ಪ್ರಶಾಂತ್ ಗೆ ವಾರ್ನಿಂಗ್ ನೀಡಿದ್ದಾರೆ..

ಇತ್ತ ಪ್ರಶಾಂತ್ ನೀನ್ ತುಂಬಾ ಪಂಟ್ರು.. ನಿನ್ನ್ ಗರ್ಲ್ ಫ್ರೆಂಡ್ ಕೈ ಇಟ್ಟಿದ್ದಕ್ಕ ಬೇಜಾರ್ ಆಗಿದ್ದು.. ಎಂದಿದ್ದಾರೆ.. ಇದಕ್ಕೆ ಕೋಪಗೊಂಡ ದಿವ್ಯಾ ಉರುಡುಗ “ಏಯ್ ಮಾತಾಡ್ತಾ ನೆಟ್ಟುಗ್ ಮಾತಾಡೋದಾದ್ರೆ ಮಾತಾಡಿ.. ನೀವ್ ಹೆಂಗ್ರಿ ನನ್ನ ಹೆಸರು ತಗಿತೀರಾ? ನಾನ್ ಅರವಿಂದ್ ಗರ್ಲ್ ಫ್ರೆಂಡ್ ಆಗಿರಬಹುದು.. ತಂಗಿ ಆಗಿರಬಹುದು.. ಹೆಂಡತಿ ಆಗಿರಬಹುದು.. ನೀವ್ ಹೆಂಗ್ರಿ ನನ್ನ್ ಹೆಸರನ್ನ ಮಧ್ಯ ತೆಗುದ್ರಿ? ಎಂದಿದ್ದಾರೆ..

ಇದಕ್ಕೆ ಉತ್ತರ ನೀಡಿರುವ ಪ್ರಶಾಂತ್ ಸಂಬರ್ಗಿ ಅವರು ” ಹೌದು ಗರ್ಲ್ ಫ್ರೆಂಡ್ ಅನ್ನೋದ್ರಲ್ಲಿ ತಪ್ಪೇನಿದೆ.. ನೀನು ಹುಡುಗಿ ಫ್ರೆಂಡು ಸೋ ಗರ್ಲ್ ಫ್ರೆಂಡ್ ಅಂದೆ ಎಂದಿದ್ದಾರೆ.. ಇದಕ್ಕೆ ಚಪ್ಪಾಳೆ ಮೂಲಕ ಪ್ರತಿಕ್ರಿಯೆ ಕೊಟ್ಟ ದಿವ್ಯಾ ಉರುಡುಗ ವಾವ್.. ಪ್ರಶಾಂತ್ ಸಂಬರ್ಗಿ.. ಎಂದು ಏಕವಚನದಲ್ಲಿಯೇ ಹೆಸರು ಕರೆದು ಮಾತು ಮುಗಿಸಿದ್ದಾರೆ.. ಇತ್ತ ಅರವಿಂದ್ ಅವರೂ ಸಹ ಅಧಿಕ ಪ್ರಸಂಗತನ ಮಾಡಬೇಡ ಎಂದು ಮತ್ತೊಮ್ಮೆ ವಾರ್ನಿಂಗ್ ನೀಡಿದ್ದಾರೆ.. ಒಟ್ಟಿನಲ್ಲಿ ಬಿಗ್ ಮನೆಯಲ್ಲಿ ಪದೇ ಪದೇ ಪ್ರಶಾಂತ್ ಹಾಗೂ ಸ್ಪರ್ಧಿಗಳ ನಡುವೆ ಮಾತಿನ ವಾಗ್ವಾದಗಳು ನಡೆಯುತ್ತಲೇ ಇದ್ದು ಕೋಪ ಹೆಚ್ಚಾಗಿ ಕೈ ಮಾಡುವ ಮಟ್ಟಕ್ಕೆ ಹೋದರೂ ಆಶ್ಚರ್ಯ ಪಡಬೇಕಿಲ್ಲ..