ಬಿಗ್ ಬಾಸ್ ಇತಿಹಾಸದಲ್ಲಿಯೇ ಮೊದಲು.. ಪ್ರಶಾಂತ್ ಸಂಬರ್ಗಿ ಮಾಡಿಕೊಂಡಿರುವ ಕೆಲಸ ನೋಡಿ..

0 views

ಬಿಗ್ ಬಾಸ್ ಆಟದಲ್ಲಿ ಒಂದೇ ರೀತಿಯ ಮನಸ್ಥಿತಿಯ ಮಂದಿ ಕಾಲಿಡುತ್ತಾರೆ ಅನ್ನೋದು ಅಕ್ಷರಶ ಸುಳ್ಳು.. ಒಬ್ಬೊಬ್ಬರದ್ದು ಒಂದೊಂದು ರೀತಿ‌ಯ ಮನೋಭಾವವಿರುತ್ತದೆ.. ಈ ಭಿನ್ನ ಭಿನ್ನ ಮನಸ್ಥಿತಿಗಳು ಹೇಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಅನುಸರಿಸಿಕೊಂಡು ಸಮಯ ಸಿಕ್ಕಾಗ ಮತ್ತೊಬ್ಬರ ಅಭಿಪ್ರಾಯಗಳನ್ನು ವಿರೋದಿಸುತ್ತಾ ಇದರ ಜೊತೆಗೆ ಮನರಂಜನೆಯನ್ನೂ ಸಹ ನೀಡುತ್ತಾ ಬಿಗ್ ಬಾಸ್ ಮನೆಯಲ್ಲಿ ದಿನ ದೂಡುತ್ತಾರೋ ಅಷ್ಟು ದಿವಸಗಳ ಕಾಲ ಬಿಗ್ ಬಾಸ್ ಮನೆ ವಾಸ ಖಾಯಂ ಎನ್ನಬಹುದು..

ಆದರೆ ಇಷ್ಟು ಸೀಸನ್ ಗಳಲ್ಲಿ ಯಾವ ಸದಸ್ಯರೂ ಸಹ ಮಾಡದಿರುವ ಕೆಲಸ ಈ ಸೀಸನ್ ನಲ್ಲಿ ಆಗಿದೆ.. ಹೌದು ಬಿಗ್ ಬಾಸ್ ಎಂಟರಲ್ಲಿ ಮನೆಗೆ ಬಂದಿರುವ ಪ್ರಶಾಂತ್ ಸಂಬರ್ಗಿ ಈ ವಾರ ಕಳಪೆ ಎಂದು ಬಿಗ್ ಬಾಸ್ ಮನೆಯಜೈ ಲುಸೇರುತ್ತಿದ್ದಂತೆ ಮಾಡಿರುವ ಕೆಲಸ ತನ್ನ ಅಸಮಾಧಾನವನ್ನು ಹೊರ ಹಾಕುತ್ತಿದೆ.. ಹೌದು ಮನೆಯ ಬಹುತೇಕ ಮಂದಿ ಪ್ರಶಾಂತ್ ಅವರನ್ನು ಕಳಪೆ ಎಂದು ಕರೆದ ಕಾರಣ ಈ ವಾರ ಪ್ರಶಾಂತ್ ಅವರಿಗೆ ಕಳಪೆಯ ಬೋರ್ಡ್ ಹಾಗುಯ್ ಜೈಲಿನಬಟ್ಟೆ ದೊರೆತು ಕಂಬಿ ಹಿಂದೆ ಹೋಗಿ ನಿಂತರು.. ಮೊದಲೇ ತಾನು ಕೊಂಚ ತೆರೆ ಮರೆ ಸರಿದರೂ ಏನಾದರೊಂದು ಪ್ಲಾನ್ ಮಾಡಿ ಧ್ವನಿ ಹೆಚ್ಚು ಮಾಡುವ ಪ್ರಶಾಂತ್ ಅವರು ಜೈಲುಸೇರಿದ್ದು ಅರಗಿಸಿಕೊಳ್ಳದಾಗಿ ಹೋಯ್ತು..

ಇದೇ ಕಾರಣಕ್ಕೆ ಮನೆಯಲ್ಲಿ ಗುಂಪುಗಾರಿಕೆಯ ಕಾರಣ ನೀಡಿ ನಾನು ಉಪವಾಸ ಹಾಗೂ ಮೌನವ್ರತವನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ.. ಹೌದು ಜೈ ಲಿನಲ್ಲಿರುವ ಇಪ್ಪತ್ತ ನಾಲ್ಕು ಗಂಟೆಯೂ ಸಹ ನಾನು ಮಾತನಾಡುವುದಿಲ್ಲ ಏನನ್ನೂ ಸೇವಿಸುವುದಿಲ್ಲ ಎಂದು ಬಿಗ್ ಬಾಸ್ ಗೆ ತಿಳಿಸುವ ಮೂಲಕ ತಮ್ಮ ಹೊಟ್ಟೆಗೆ ತಾವೇ ಮೋಸ ಮಾಡಿಕೊಳ್ಳುತ್ತಿದ್ದಾರೆ.. ಯಾರೇ ಬಂದು ಮಾತನಾಡಿಸಿದರೂ ತುಟಿ ಬಿಚ್ಚಿಲ್ಲ.. ಇತ್ತ ಬಿಗ್ ಬಾಸ್ ಮನೆಯಲ್ಲಿ ಮಾತೇ ಬಂಡವಾಳ.‌. ಆದರೆ ಮೌನ ವಹಿಸಿರುವ ಪ್ರಶಾಂತ್ ಅವರ ನಡೆಗೆ ಇಂದು ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಏನು ಹೇಳುವರೋ ಕಾದು ನೋಡಬೇಕಿದೆ..

ಇದು ಬಿಗ್ ಬಾಸ್ ಇತಿಹಾಸದಲ್ಲಿಯೇ ಮೊದಲ ಪ್ರತಿರೋಧವಾಗಿದ್ದು ಊಟ ಮಾತು ಎರಡನ್ನೂ ಬಿಟ್ಟು ಪ್ರಶಾಂತ್ ಕೂತಿದ್ದಾರೆ.. ಈ ಹಿಂದೆ ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ಪ್ರಥಮ್ ಊಟವನ್ನು ಮಾತ್ರ ಬಿಟ್ಟು ಪ್ರತಿರೋಧ ಮಾಡಿದ್ದರು.. ಆದರೆ ಪ್ರಥಮ್ ತನ್ನ ಮಾತನ್ನು ಮಾತ್ರ ಎಂದೂ ಬಿಟ್ಟಿರಲಿಲ್ಲ.. ಇಲ್ಲಿ ಪ್ರಶಾಂತ್ ಅವರು ಊಟ ಮಾತು ಎರಡನ್ನು ಬಿಟ್ಟಿದ್ದು ಬಿಗ್ ಬಾಸ್ ಯಾವ ಸೂಚನೆ ನೀಡುವರೋ ಕಾದು ನೋಡಬೇಕಿದೆ..

ಜೊತೆಗೆ ಇತ್ತ ಮಂಜು ವಿರುದ್ಧ ಪ್ರಶಾಂತ್ ಅವರು ಮಿಕ್ಕ ಸದಸ್ಯರ ಬಳಿ ಮಾತನಾಡಿ ಎತ್ತಿಕಟ್ಟುತ್ತಿದ್ದ ದೃಶ್ಯಗಳು ಪ್ರಸಾರವಾಗಿದ್ದು ಪ್ರಶಾಂತ್ ಅವರ ಆಟಕ್ಕೆ ಟೀಕೆಗಳು ವ್ಯಕ್ತವಾಗಿದ್ದವು.. ಜೊತೆಗೆ ದಿವ್ಯಾ ಸುರೇಶ್ ಕೂಡ ಅಷ್ಟು ದಿನ ಮಂಜು ಮಂಜು ಎನ್ನುತ್ತಿದ್ದು ಇದೀಗ ಪ್ರಶಾಂತ್ ಅವರನ್ನು ಬೆಸ್ಟ್ ಪರ್ಫಾರ್ಮರ್ ಎಂದು ಬಿರುದು ಕೊಟ್ಟು.. ಇತ್ತ ಪ್ರಶಾಂತ್ ದಿವ್ಯಾ ಸುರೇಶ್ ಗೆ ಬೆಸ್ಟ್ ಎಂದು ಬಿರುದು ಕೊಟ್ಟದ್ದು ಎಲ್ಲವನ್ನೂ ನೋಡುತ್ತಿದ್ದ ಪ್ರೇಕ್ಷಕರಿಗೆ ನಗು ಮೂಡಿಸಿತ್ತು.. ಒಟ್ಟಿನಲ್ಲಿ ಬಿಗ್ ಬಾಸ್ ಇನ್ನು ಏನೇನು ಆಡಿಸುವನೋ ಕಾದು ನೋಡಬೇಕಷ್ಟೇ..