ಪ್ರಶಾಂತ್ ಸಂಬರ್ಗಿಗೆ ಫೋನ್‌ ಮಾಡಿ ಗ್ರಹಚಾರ ಬಿಡಿಸಿದ ಮಹಿಳೆ.. ಕೈಮುಗಿದ ಪ್ರಶಾಂತ್.. ಮಹಿಳೆ ಮಾತನಾಡಿದ ರೀತಿಗೆ ಮನೆಮಂದಿಯೆಲ್ಲಾ ಶಾಕ್.. ಆಕೆ ಯಾರು ಗೊತ್ತಾ?

0 views

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಆಗಮಿಸಿ ತಮ್ಮದೇ ರೀತಿಯಲ್ಲಿ ಕಿರಿಕ್ ಗಳ ಜೊತೆ ಮನರಂಜನೆ ನೀಡುತ್ತಾ ವಾರಕೊಮ್ಮೆಯಾದರೂ ಜಗಳವಾಡುತ್ತಾ ಯಶಸ್ವಿಯಾಗಿ ಎಂಟು ವಾರಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ ಪ್ರಶಾಂತ್ ಸಂಬರ್ಗಿ ಅವರಿಗೆ ಅದ್ಯಾಕೋ ಈ ವಾರ ಕೊಂಚ ರಾಶಿಫಲ ಸರಿ ಇಲ್ಲವೆನ್ನುವಂತೆ ಕಾಣುತ್ತಿದೆ.. ಸಾಲು ಸಾಲು ಮನಸ್ತಾಪಗಳು ಬಿಗ್ ಬಾಸ್ ಮನೆಯಲ್ಲಿ ನಡೆದವು.. ಆದರೆ ಪ್ರಶಾಂತ್ ಸಂಬರ್ಗಿ ಅದ್ಯಾವುದಕ್ಕೂ ಜಗ್ಗುವ ಮಗನಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆ.. ಆದರೆ ಇಂದು ಮಹಿಳೆಯೊಬ್ಬರು ಫೋನ್ ಮಾಡಿ ನೇರ ನೇರವಾಗಿಯೇ ಪ್ರಶಾಂತ್ ಅವರಿಗೆ ಗ್ರಹಚಾರ ಬಿಡಿಸಿದ್ದಾರೆ..

ಹೌದು ಪ್ರಶಾಂತ್ ಸಂಬರ್ಗಿ ಅವರು ಈ ವಾರ ಮನೆಯಲ್ಲಿ ಮೊಟ್ಟೆಯ ವಿಚಾರಕ್ಕೆ ಹಾಗೂ ನಿನ್ನೆ ಕ್ಯಾಪ್ಟನ್ಸಿ ಟಾಸ್ಕಿನಲ್ಲಿ ರಘುಗೆ ಹೂಗಳನ್ನು ನೀಡಿ ರಾಜೀವನ ಜೊತೆ ಜಗಳವಾಡಿದ್ದರು.. ನಿಜ ಹೇಳಬೇಕೆಂದರೆ ಎರಡೂ ವಿಚಾರದಲ್ಲಿಯೂ ಪ್ರಶಾಂತ್ ಅವರದ್ದು ಯಾವುದೇ ತಪ್ಪಿರಲಿಲ್ಲ.. ಬದಲಿಗೆ ಮನಸ್ತಾಪದ ನಂತರದ ಚರ್ಚೆ ಹಾಗೂ ವಾದವಿವಾದಗಳಲ್ಲಿ ಮಾತಿನ ಬರದಲ್ಲಿ ನಾಲಿಗೆಯಿಂದ ಹೊರ ಬಂದ ಕೆಲ ಪದಗಳಿಂದ ಪ್ರಶಾಂತ್ ಸಿಕ್ಕಿ ಹಾಕಿಕೊಳ್ಳುವಂತಾಯ್ತು.. ನಂತರ ಅವರದ್ದೇ ತಪ್ಪು ಎನ್ನುವಂತಾಯ್ತು.. ಅದೇ ಕಾರಣಕ್ಕೆ ಇಂದು ಮಹಿಳೆ ಫೋನ್ ಮೂಲಕ ಪ್ರಶಾಂತ್ ಅವರಿಗೆ ಗ್ರಹಚಾರ ಬಿಡಿಸಿದ್ದಾರೆ.. ಅಷ್ಟಕ್ಕೂ ಆ ಮಹಿಳೆ ಯಾರು ಇಲ್ಲಿದೆ ನೋಡಿ..

ಎಲ್ಲರಿಗೂ ತಿಳಿದಿರುವಂತೆ ಕಿಚ್ಚ ಸುದೀಪ್ ಅವರಿಗೆ ಅನಾರೋಗ್ಯದ ಕಾರಣ ಎರಡು ವಾರಗಳಿಂದ ಬಿಗ್ ಬಾಸ್ ನ ವೀಕೆಂಡ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ.. ಬದಲಿಗೆ ಮನೆಯಲ್ಲಿತೇ ಸದಸ್ಯರಿಗೆ ವಿವಿಧ ಚಟುವಟಿಕೆಗಳನ್ನು ನೀಡಿ ಎಲಿಮಿನೇಷನ್ ಪ್ರಕ್ರಿಯೆಯನ್ನು ಸಹ ಮಾಡಿ ಮನೆಯಿಂದ ಒಬ್ಬ ಸದಸ್ಯರನ್ನು ಹೊರಗೆ ಕಳುಹಿಸಲಾಗುತ್ತಿದೆ.. ಜೊತೆಗೆ ಹೊರಗಿನ ಪ್ರೇಕ್ಷಕರೊಬ್ಬರಿಗೆ ಮನೆಯ ಸದಸ್ಯರೊಬ್ಬರ ಜೊತೆ ಮಾತನಾಡಲು ಅವಕಾಶ ನೀಡಲಾಗುತ್ತಿದೆ..

ಅದೇ ರೀತಿ ಈ ವಾರ ಬಿಗ್ ಬಾಸ್ ನ ಪ್ರೇಕ್ಷಕರಾಗಿರುವ ಮಹಿಳೆಯೊಬ್ಬರು ಬಿಗ್ ಬಾಸ್ ಮನೆಗೆ ಕಾಲ್ ಮಾಡಿದ್ದು ಪ್ರಶಾಂತ್ ಸಂಬರ್ಗಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.. “ಹಲೋ ನಮಸ್ಕಾರ.. ನನ್ನ ಪ್ರಶ್ನೆ ಪ್ರಶಾಂತ್ ಅವರಿಗೆ.. ನೀವು ಮೊಟ್ಟೆ ತಿಂದದ್ದು ತಪ್ಪಲ್ಲ.. ಆದರೆ ಅದಾದ ಬಳಿಕ ನೀವು ನಿಧಿ ಅವರ ಬಗ್ಗೆ ಮಾತನಾಡಿದ್ರಿ.. ಸಂಸ್ಕೃತಿ ಅಂತ ಮಾತನಾಡಿದ್ರಿ.. ಚರಿತ್ರೆ ಅಂತ ಮಾತನಾಡಿದ್ರಿ.. ಅವರು ಚೀಪ್ ಅಂದ್ರು ಅಂತ ನಾನು ಮಾತನಾಡಿದೆ ಅಂತ ಹೇಳಿದ್ರಿ.. ಆದರೆ ಚೀಪ್ ಅನ್ನೋ ಪದವನ್ನ ಮೊದಲು ಬಳಸಿದ್ದೇ ನೀವು‌‌.. ನೀವು ಹುಡುಗೀರನ್ನೇ ಟಾರ್ಗೆಟ್ ಮಾಡ್ತೀರಾ..‌ ಹುಡುಗರ ಜೊತೆ ಈ ರೀತಿ ಮಾತನಾಡಲ್ಲ.. ಜಗಳ ಆಡಲ್ಲ.. ಯಾಕೆ ಅವರುಗಳಂದರೆ ಭಯಾನಾ?” ಎಂದು ಖಾರವಾಗಿಯೇ ಪ್ರಶ್ನೆ ಮಾಡಿದ್ದಾರೆ..

ಇದಕ್ಕೆ ಉತ್ತರ ನೀಡಿದ ಪ್ರಶಾಂತ್ ಅವರು ನೀವು ನನಗೆ ಸ್ತ್ರೀ ವಿರೋಧಿ ಅನ್ನೋ ಪಟ್ಟ ಮಾತ್ರ ಕಟ್ಟಬೇಡಿ ಎಂದು ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಸ್ಪಷ್ಟನೆಯನ್ನುಇ ಸಹ ನೀಡಿದ್ದು ಇಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.. ಒಟ್ಟಿನಲ್ಲಿ ಸುದೀಪ್ ಅವರಿಲ್ಲದಿದ್ದರೂ ಹೊರಗಿನ ಮಹಿಳೆಯೊಬ್ಬರು ಬಿಗ್ ಬಾಸ್ ಮನೆಯ ಸದಸ್ಯರಿಗೆ ಗ್ರಹಚಾರ ಬಿಡಿಸುತ್ತಿರುವುದಂತೂ ಸತ್ಯ.. ಇನ್ನು ಇತ್ತ ಆ ಮಹಿಳೆ ನೇರವಾಗಿ ಮಾತನಾಡಿದ ರೀತಿಗೆ ಮನೆಮಂದಿಯೆಲ್ಲಾ ಶಾಕ್‌ ಆಗಿದ್ದು ತಬ್ಬಿಬ್ಬಾಗಿದ್ದಾರೆ.