ಕೆಜಿಎಫ್ ಸಿನಿಮಾದ ಮಾಂತ್ರಿಕ ಪ್ರಶಾಂತ್ ನೀಲ್ ನಿಜಕ್ಕೂ ಯಾರ ಮೊಮ್ಮಗ ಗೊತ್ತಾ.. ಶಾಕ್ ಆಗ್ತೀರಾ..

0 views

ಕೆಜಿಎಫ್ ಸಧ್ಯ ಸ್ಯಾಂಡಲ್ವುಡ್ ಬಾಲಿವುಡ್ ಕಾಲಿವುಡ್ ಟಾಲಿವುಡ್ ಮಾತ್ರವಲ್ಲ ವರ್ಲ್ಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಸೆನ್ಸೇಷನ್ ಮೂಡಿಸಿರುವ ಸಿನಿಮಾ.. ಮೊದಲ ದಿನವೇ ಭಾರತದಲ್ಲಿ 156 ಕೋಟಿ ಗಳಿಕೆ ಕಂಡು ದಾಖಲೆ ಬರೆದಿದ್ದು ಕನ್ನಡ ಮಳಯಾಳಂ ಹಾಗೂ ಬಾಲಿವುಡ್ ನಲ್ಲಿ ಕೆಜಿಎಫ್ 2 ಅತಿ ಹೆಚ್ಚು ಗಳಿಕೆ ಕಂಡ ಮೊದಲ ಸಿನಿಮಾ ಇದಾಗಿದೆ.. ಇನ್ನು ಇತ್ತ ಕಳೆದ ಎಂಟು ವರ್ಷದ ಪರಿಶ್ರಮಕ್ಕೆ ಸಂಪೂರ್ಣ ಕೆಜಿಎಫ್ ತಂಡಕ್ಕೆ ಅದ್ಭುತ ಫಲ ದೊರೆತಿದ್ದು ಇದೀಗ ಬಾಕ್ಸ್ ಆಫೀಸಿನಲ್ಲಿ ಹೊಸ ದಾಖಲೆಗಳ ಸುರಿಮಳೆಯಾಗುತ್ತಿದೆ..

ಇನ್ನು ಇತ್ತ ಕೆಜಿಎಫ್ ವಿಚಾರದಲ್ಲಿ ಮೆಚ್ಚುವ ವಿಚಾರ ಎಂದರೆ ಅದು ಕಲಾವಿದರು ಮಾತ್ರವಲ್ಲ ಸಿನಿಮಾದ ತಂತ್ರಜ್ಞರು ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿ ಈ ಸಿನಿಮಾದಿಂದ ಗುರುತಿಸಿಕೊಂಡಿದ್ದು ಯಶಸ್ಸು ಪಡೆದಿದ್ದಾರೆ.. ಇನ್ನು ಸಿನಿಮಾದ ನಾವಿಕ ಪ್ರಶಾಂತ್ ನೀಲ್ ಬಗ್ಗೆ ಎಲ್ಲರಿಗೂ ತಿಳಿದೇ ಇದೆ.. ಉಗ್ರಂ ಸಿನಿಮಾ ನಂತರ ಮಾಡಿದ್ದೇ ಕೆಜಿಎಫ್ ಸಿನಿಮಾ.. ಇದೀಗ ಕೆಜಿಎಫ್ 2.. ಕೇವಲ‌ ಮೂರೇ ಸಿನಿಮಾಗೆ ಇಷ್ಟು ದೊಡ್ಡ ಸಕ್ಸಸ್ ಪಡೆಯುವುದೆಂದರೆ ಅದರ ಹಿಂದಿನ ಪರಿಶ್ರಮವೂ ಕೂಡ ಅಷ್ಟೇ ದೊಡ್ಡದಾಗಿರುತ್ತದೆ.. ಅಷ್ಟಕ್ಕೂ ಈ ಪ್ರಶಾಂತ್ ನೀಲ್ ಯಾರು.. ಯಾರ ಮೊಮ್ಮಗ ಎಂದು ತಿಳಿದರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ..

ಹೌದು ಈ ಹಿಂದೆ ರವಿಚಂದ್ರನ್ ಅವರು ಹೇಳಿದಂತೆ ನನಗೆ ನಮ್ಮ ಈಶ್ವರಿ ಸಂಸ್ಥೆಯ ಕಚೇರಿಯೇ ನನಗೆ ಫಿಲಂ ಇನ್ಸ್ಟಿಟ್ಯೂಟ್ ಆಗಿತ್ತು.. ಅಲ್ಲಿಗೆ ಎಲ್ಲಾ ಕಲಾವಿದರು ನಿರ್ದೇಶಕರುಗಳು ತಂತ್ರಜ್ಞರು ಬರುತ್ತಿದ್ದರು.. ನಾನು ಕಲಿತದ್ದೆಲ್ಲಾ ಅವರುಗಳನ್ನು ನೋಡಿಯೇ ಎಂದಿದ್ದರು.. ಅದೇ ರೀತಿ ಪ್ರಶಾಂತ್ ನೀಲ್ ಅವರ ಕತೆಯೂಸಹ ಇದೆ ಎಂದರೆ ನಂಬಲೇ ಬೇಕು.. ಹೌದು ಪ್ರಶಾಂತ್ ನೀಲ್ ಅವರು ಯಾವುದೇ ಸಿನಿಮಾ ತರಬೇರಿಯನ್ನು ಪಡೆದವರಲ್ಲ.. ಯಾವುದೇ ಫಿಲಂ ಇನ್ಸ್ಟಿಟ್ಯೂಟ್ ಗೆ ಹೋದವರಲ್ಲ.. ಆದರೂ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ನಿರ್ದೇಶನ ಮಾಡಿರುವುದು ನಿಜಕ್ಕೂ ಇತರ ಇಂಡಸ್ಟ್ರಿಯವರನ್ನು ದಂಗಾಗಿಸಿರೋದು ಸತ್ಯ..

ಇನ್ನು ಪ್ರಶಾಂತ್ ನೀಲ್ ಅವರು ಕನ್ನಡದ ನಟ ಶ್ರೀ ಮುರುಳಿ ಅವರ ಬಾಮೈದ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ.. ಪ್ರಶಾಂತ್ ನೀಲ್ ಅವರ ಸಹೋದರಿಯನ್ನೇ ಮುರುಳಿ‌ ಅವರು ಮದುವೆಯಾಗಿರುವುದು.. ಆದರೆ ಇದಕ್ಕೂ ಮೀರಿ ಪ್ರಶಾಂತ್ ನೀಲ್ ಅವರದ್ದು ಮತ್ತೊಂದು ಸಿನಿಮಾ ಸಂಬಂಧವಿದೆ.. ಹೌದು ಕೆಲ ದಶಕಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಕಾಲದಲ್ಲಿ ಬಹುತೇಕ ಕಲಾವಿದರುಗಳು ಚೆನ್ನೈ ಹಾಗೂ ಇನ್ನಿತರ ಕಡೆ ನೆಲೆಸಿದ್ದರು.. ಬೆಂಗಳೂರಿನಲ್ಲಿ ಚಿತ್ರೀಕರಣ ಅಥವಾ ಏನೇ ಸಿನಿಮಾ ಸಂಬಂಧ ಪಟ್ಟ ಕೆಲಸವಿದ್ದರೂ ಸಹ ಹೊಟೆಲ್ ನಲ್ಲಿ ಉಳಿದುಕೊಳ್ಳುತ್ತಿದ್ದರು.. ಅಷ್ಟೇ ಅಲ್ಲದೇ ಕತೆ ಬರೆಯುವಬರಿಗೆ ನಿರ್ದೇಶಕರಿಗೆ ಬೆಂಗಳೂರಿನ ಹೊಟೆಲ್ ಗಳಲ್ಲಿ ನಿರ್ಮಾಪಕರುಗಳು ರೂಂ ಮಾಡಿ ಕೊಡುತ್ತಿದ್ದರು..

ಅಂತಹ ಹೊಟೆಲ್ ಗಳಲ್ಲಿ ಅತಿ ಪ್ರಮುಖವಾದ ಹೊಟೆಲ್ ಎಂದರೆ ಅದು ಹೈ ಲ್ಯಾಂಡ್ ಹೊಟೆಲ್.. ಹೌದು ಅಣ್ಣಾವ್ರಿಂದ ಹಿಡಿದು ಪ್ರತಿಯೊಬ್ಬ ಸ್ಟಾರ್ ಕಲಾವಿದರು ನಿರ್ಮಾಪಕ‌ ನಿರ್ದೇಶಕರುಗಳು ತಂತ್ರಜ್ಞರು ಉಳಿದುಕೊಳ್ಳುತ್ತಿದ್ದ ಹೊಟೆಲ್ ಹೈಲ್ಯಾಂಡ್.. ಪ್ರತಿದಿನ ಆ ಹೊಟೆಲ್ ಸಿನಿಮಾ ಮಂದಿಯಿಂದಲೇ ತುಂಬಿರುತಿತ್ತು.. ಕನ್ನಡದ ಅದೆಷ್ಟೋ ಸೂಪರ್ ಹಿಟ್ ಸಿನಿಮಾಗಳ ಕತೆಯೂ ಕೂಡ ಅದೇ ಹೊಟೆಲ್ ನ ರೂಮುಗಳಲ್ಲಿಯೇ ಹುಟ್ಟಿಕೊಂಡಿದ್ದು.. ಅಷ್ಟಕ್ಕೂ ಆ ಹೊಟೆಲ್ ಗೂ ಪ್ರಶಾಂತ್ ನೀಲ್ ಅವರ ಕತೆಗೂ ಏನು ಸಂಬಂಧ ಎನಿಸುವುದು.. ಆದರೆ ಸಂಬಂಧ ಇದೆ.. ಹೌದು ಪ್ರಶಾಂತ್ ನೀಲ್ ಅವರು ಮತ್ಯಾರೂ ಅಲ್ಲ..

ಹೊಟೆಲ್ ಹೈಲ್ಯಾಂಡ್ ನ ಮಾಲೀಕರ ಮೊಮ್ಮಗ.. ಹೌದು ಪ್ರಶಾಂತ್ ನೀಲ್ ಅವರು ತಮ್ಮ ಬಹುತೇಕ ದಿನಗಳನ್ನು ಅದೇ ಹೊಟೆಲ್ ನಲ್ಲಿ ಕಳೆದಿದ್ದು ಸಿನಿಮಾ ಮಂದಿಯನ್ನು ನೋಡಿ ನೋಡಿ ಸಿನಿಮಾ ಮೇಲೆ ಆಸಕ್ತಿ ಮೂಡಿತು.. ಆಸಕ್ತಿ ಮಾತ್ರವಲ್ಲ ಅದಕ್ಕೆ ತಕ್ಕಂತೆ ಪರಿಶ್ರಮವೂ ಹಾಕಿದರು.. ಹೈಲ್ಯಾಂಡ್ ಹೊಟೆಲ್ ಗೆ ಬರುತ್ತಿದ್ದ ಸಿನಿಮಾದವರನ್ನು ನೋಡಿ ಸಾಕಷ್ಟು ಕಲಿತಿದ್ದರು.. ಅಂದು ತನ್ನ ತಾತನ ಆ ಹೊಟೆಲ್ ನಲ್ಲಿ ಚಿಗುರಿದ ಕನಸೇ ಪ್ರಶಾಂತ್ ನೀಲ್ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.. ಸಧ್ಯ ಕೆಜಿಎಫ್ ತನ್ನ ದಾಖಲೆಗಳನ್ನು ಶುರು ಮಾಡಿದ್ದರೆ ಅತ್ತ ಪ್ರಭಾಸ್ ಅವರ ಸಲಾರ್ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ.. ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾ ಜರ್ನಿಗೆ ಶುಭವಾಗಲಿ..