ಬಿಗ್ ಬಾಸ್ ಸೀಸನ್ ಎಂಟರಲ್ಲಿ ಪ್ರಶಾಂತ್ ಸಂಬರ್ಗಿ ಒಂದು ರೀತಿ ನೇರ ದಿಟ್ಟ ನಿರಂತರ ಎನ್ನುವಂತಿದ್ದು ಮೊದಮೊದಲು ಪ್ರೇಕ್ಷಕರಿಗೆ ಸಾಕಷ್ಟು ಕಿರಿಕಿರಿಯನ್ನುಂಟು ಮಾಡಿದ್ದರು.. ಆದರೆ ಅವರನ್ನೂ ಸಹ ಬಹಳಷ್ಟು ಮಂದಿ ಇಷ್ಟ ಪಡುತ್ತಿದ್ದು ಎಲಿಮಿನೇಟ್ ಆಗದೆ ಯಶಸ್ವಿಯಾಗಿ ಎಂಟು ವಾರಗಳ ಬಿಗ್ ಬಾಸ್ ಜರ್ನಿ ಮುಗಿಸಿರುವುದೇ ಅದಕ್ಕೆ ಸಾಕ್ಷಿ ಎನ್ನಬಹುದು.. ಇನ್ನು ಕೆಲವೊಮ್ಮೆ ಅವರೇ ಮನೆಯಲ್ಲಿ ಕಿರಿಕ್ ಗಳನ್ನು ಶುರು ಮಾಡಿದರೂ ಸಹ.. ಒಮ್ಮೊಮ್ಮೆ ಮತ್ಯಾರದ್ದೋ ತಪ್ಪಿದ್ದರೂ ಪ್ರಶಾಂತ್ ಅವರನ್ನೇ ಹೊಣೆ ಮಾಡುತ್ತಿರುವುದು ಸುಳ್ಳಲ್ಲ.. ಇನ್ನು ಬಿಗ್ ಬಾಸ್ ನಲ್ಲಿ ಎಂದಿನಂತೆ ಈ ಸೀಸನ್ ನಲ್ಲಿಯೂ ಸ್ಮೋಕಿಂಗ್ ಏರಿಯಾ ಇದ್ದು ಗಂಡಸರ ಕೆಲವೊಂದು ವ್ಯಯಕ್ತಿಕ ವಿಚಾರಗಳು ದಮ್ ಹೊಡೆಯುತ್ತಾ ಅಲ್ಲಿ ಚರ್ಚೆಯಾಗುತ್ತಿವೆ..

ಇನ್ನು ಪ್ರಶಾಂತ್ ಸಂಬರ್ಗಿ ಮಂಜು ಪಾವಗಡ ರಘು ಅರವಿಂದ್ ಶಮಂತ್ ಚಕ್ರವರ್ತಿ ಯಾರೂ ಸಹ ಅದರಿಂದ ಹೊರತಾಗಿಲ್ಲ.. ಎಲ್ಲರಿಗೂ ಸಹ ಅದು ಬೇಕೆ ಬೇಕಾಗಿದ್ದು ಬಿಗ್ ಬಾಸ್ ಸಹ ಆಗಾಗ ಅವರಿಗಾಗಿ ಕಳುಹಿಸಿಕೊಡುತ್ತಿರುತ್ತಾರೆ.. ಇನ್ನು ಇದೀಗ ಪ್ರಶಾಂತ್ ಸಂಬರ್ಗಿ ಅವರು ಆ ಏರಿಯಾದಲ್ಲಿ ಧಮ್ ಎಳೆಯುತ್ತಾ ನಿಧಿ ಸುಬ್ಬಯ್ಯ ಅವರ ಬಗ್ಗೆ ಚರ್ಚೆ ಮಾಡಿದ್ದಾರೆ.. ಹೌದು ಶಮಂತ್ ಚಕ್ರವರ್ತಿ ಚಂದ್ರಚೂಡ ಹಾಗೂ ಪ್ರಶಾಂತ್ ಸಂಬರ್ಗಿ ಮೂವರೂ ಸ್ಮೋಕಿಂಗ್ ಏರಿಯಾದಲ್ಲಿ ಇದ್ದ ಸಮಯದಲ್ಲಿ ಪ್ರಶಾಂತ್ ಸಂಬರ್ಗಿ ನಿಧಿ ಅವರ ಬಣ್ಣದ ವಿಚಾರವನ್ನೂ ಸಹ ಮಾತನಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ..

ಹೌದು ಮೊನ್ನೆಯಷ್ಟೇ ಒಂದು ಸಣ್ಣ ಮೊಟ್ಟೆ ವಿಚಾರಕ್ಕೆ ಮನೆಯಲ್ಲಿ ಪ್ರಶಾಂತ್ ಹಾಗೂ ನಿಧಿ ಸುಬ್ಬಯ್ಯ ಅವರ ನಡುವೆ ಮಾತಿಗೆ ಮಾತು ನಡೆದಿತ್ತು.. ಕೊನೆಗೆ ನಿನ್ನ ಹಳೆಯ ಚರಿತ್ರೆ ಎಲ್ಲವನ್ನೂ ಜನರ ಮುಂದೆ ಹೇಳಿ ಬಿಡ್ತೀನಿ.. ಹೇಳಾ? ಎಂದು ನಿಧಿ ಸುಬ್ಬಯ್ಯ ಅವರನ್ನು ಪ್ರಶ್ನೆ ಮಾಡಿದ್ದರು.. ಕೊನೆಗೆ ಕಣ್ಣೀರು ಇಟ್ಟ ನಿಧಿ ಸುಬ್ಬಯ್ಯ ಇವನ ಸಹವಾಸ ಸರಿ ಇಲ್ಲವೆಂದು ಸುಮ್ಮನಾದರು.. ಅತ್ತ ಶುಭ ಪೂಂಜಾ ಹಾಗೂ ಮತ್ತಿತರರು ಸರ್ ಇಲ್ಲಿ ನಡೆಯೋದು ಮಾತ್ರ ಮಾತನಾಡಿ ಪರ್ಸನಲ್ ವಿಚಾರಗಳು ಇಲ್ಲಿ ಬೇಡ ಎಂದು ಮನವಿ ಮಾಡಿಕೊಂಡಿದ್ದರು..

ಆದರೂ ಸಹ ಒಂದು ಸಣ್ಣ ಮೊಟ್ಟೆ ವಿಚಾರಕ್ಕೆ ನಿಧಿ ಅಷ್ಟೆಲ್ಲಾ ಪ್ರಶ್ನೆ ಮಾಡಿದ್ದನ್ನು ಅರಗಿಸಿಕೊಳ್ಳಲಾಗದೆ ಪ್ರಶಾಂತ್ ಸಂಬರ್ಗಿ ಅವರು ಆ ವಿಚಾರವನ್ನು ಪದೇ ಪದೇ ಮನೆಯಲ್ಲಿ ಇತರ ಸದಸ್ಯರ ಜೊತೆ ಚರ್ಚಿಸಿದ್ದಾರೆ.. ಅದೇ ರೀತಿ ಸ್ಮೋಕಿಂಗ್ ಏರಿಯಾದಲ್ಲಿಯೂ ಸಹ ಶಮಂತ್ ಜೊತೆ ಮಾತನಾಡಿದ ಪ್ರಶಾಂತ್ ಅವರು.. ನೀನ್ ಅವತ್ತು ನನಗೆ ಸಪೋರ್ಟ್ ಮಾಡಬೇಕಿತ್ತು.. ನಿನಗೂ ಗೊತ್ತಿತ್ತು.. ಅವತ್ತು ಹೊಡೆದು ಹೋಗಿದ್ದ ಮೊಟ್ಟೆಯನ್ನು ನಾನು ತಿಂದಿದ್ದು.. ಆದರೆ ಅವತ್ತು ನೀನ್ ಮಾತನಾಡ್ಲಿಲ್ಲ ಎಂದರು.. ಅದಕ್ಕೆ ಉತ್ತರ ನೀಡಿದ ಶಮಂತ್ ನಿಜವಾಗ್ಲು ನೀವ್ ಎರಡನೇ ಮೊಟ್ಟೆ ತಿಂತಿದ್ರಿ ಅನ್ನೋ ವಿಚಾರ ನನಗೆ ಗೊತ್ತಿರಲಿಲ್ಲ ಎಂದರು.. ಇನ್ನು ಅದೇ ಸಮಯಕ್ಕೆ ಬಂದ ಚಂದ್ರಚೂಡ ನಿನ್ನದು ಸಣ್ಣ ಮನಸ್ಥಿತಿ ಅಂತ ಹೇಳಿದ್ರು ಎಂದರು.. ಅದಕ್ಕೆ ಕೋಪಗೊಂಡ ಪ್ರಶಾಂತ್ ಅವಳೇನು ಮೇಲಿಂದ ಇಳಿದು ಬಂದಿದ್ದಾಳಾ? ಅವಳದ್ದೇನು ನೀಲಿ ಬಣ್ಣದ್ದಾ? ನನ್ನದು ಕೆಂಪೇ.. ಅವಳದ್ದೂ ಕೆಂಪೇ.. ಎಂದು ರಕ್ತದ ಬಣ್ಣದ ಬಗ್ಗೆ ಮಾತನಾಡಿ ಇಲ್ಲಿ ಎಲ್ಲರೂ ಒಂದೇ ಎಂದರು..

ಅಷ್ಟೇ ಅಲ್ಲದೇ ಮನೆಯಿಂದ ಹೊರ ಬಂದ ಕೂಡಲೇ ಬಡ ಮಕ್ಕಳಿಗೆ ಹತ್ತು ಸಾವಿರ ಮೊಟ್ಟೆಯನ್ನು ಹಂಚುತ್ತೇನೆ ಇದು ನಾನು ಮಾಡುತ್ತಿರುವ ಶಪಥ.. ಇದಕ್ಕೆ ಈ ಬಿಗ್ ಬಾಸ್ ಮನೆಯೇ ಸಾಕ್ಷಿ.. ನನ್ನನ್ನೇ ಟಾರ್ಗೆಟ್ ಮಾಡ್ತಿದ್ದಾರೆ.. ನಾನು ಮಾಡಿದ್ರೆ ತಪ್ಪು.. ಅವರೆಲ್ಲಾ ತಿಂದ್ರೆ ತಪ್ಪಿಲ್ಲ.. ಸಣ್ಣ ಸಣ್ಣ ವಿಚಾರವನ್ನು ನನ್ನ ಬಗ್ಗೆ ಆದರೆ ಅದನ್ನು ದೊಡ್ಡದು ಮಾಡ್ತಾರೆ.. ಕನಿಷ್ಟ ಒಂದು ಮೊಟ್ಟೆ ತಿಂದಿದ್ದಕ್ಕೆ ಈ ರೀತಿ ಆಡ್ತಾರೆ.. ಮನೆಯಿಂದ ಹೊರ ಹೋದ್ಮೇಲೆ ನೋಡ್ಕೋ ಹತ್ತು ಸಾವಿರ ಮೊಟ್ಟೆಯನ್ನು ಉಚಿತವಾಗಿ ಹಂಚ್ತೀನಿ ಎಂದು ಕೋಪದ ಶಪಥ ಮಾಡಿದರು.. ಇನ್ನು ಪ್ರಶಾಂತ್ ಜೊತೆ ಮಾತನಾಡಿಕೊಂಡು ಹೊರ ಬರುತ್ತಿದ್ದಂತೆ ಶಮಂತ್ ನನ್ನು ಹತ್ತಿರ ಕರೆದ ನಿಧಿ ಸುಬ್ಬಯ್ಯ ನೀನು ನನ್ನ ತಮ್ಮನ ತರ.. ಅವರ ಮಾತುಗಳ್ಯಾವುದನ್ನೂ ನಂಬಬೇಡ.. ನಾನು ನಿನಗೆ ಸಪೋರ್ಟ್ ಮಾಡ್ತೀನಿ ಎಂದಿದ್ದಾರೆ.. ಒಟ್ಟಿನಲ್ಲಿ ಆಡಿಸುವ ಬಿಗ್ ಬಾಸ್ ನ ಕೈಗೊಂಬೆಗಳು ಇವರು ಅನ್ನೋದನ್ನು ಮರೆತು ಸುಮ್ಮನೆ ವ್ಯಯಕ್ತಿಕ ವಿಚಾರಗಳನ್ನೆಲ್ಲಾ ಬಹಿರಂಗ ಮಾಡಿಕೊಳ್ಳುತ್ತಿದ್ದಾರಷ್ಟೇ..