ಲೈವ್ ನಲ್ಲಿಯೇ ಬಿಗ್ ಬಾಸ್ ಸದಸ್ಯರ ನಿಜಬಣ್ಣ ಬಯಲು ಮಾಡಿದ ಪ್ರಶಾಂತ್ ಸಂಬರ್ಗಿ.. ಇದು ಧೈರ್ಯ ಅಂದ್ರೆ..

0 views

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಪ್ರಶಾಂತ್ ಸಂಬರ್ಗಿ ಮೊದಮೊದಲು ಮನೆ ಮಂದಿಗೆ ಹಾಗೂ ಪ್ರೇಕ್ಷಕರಿಗೆ ಕೊಂಚ ಕಿರಿಕಿರಿಯನ್ನುಂಟು ಮಾಡಿದ್ದರೂ ಸಹ ಬರುಬರುತ್ತಾ ಕೆಲ ಪ್ರೇಕ್ಷಕರಿಗೆ ಅವರು ಬಹಳ ಇಷ್ಟವಾದರೆನಬಹುದು.. ಅದೇ ಕಾರಣಕ್ಕೆ ಬಿಗ್ ಅವರು ಪ್ರತಿ ವಾರ ನಾಮಿನೇಟ್ ಆದರೂ ಸಹ ಸೇಫ್ ಆಗುತ್ತಾ ಬಂದರು.. ಹೀಗೆ ಮುಂದುವರೆದಿದ್ದರೆ ಟಾಪ್ ಐವರಲ್ಲಿ ಒಬ್ಬರಾಗುತ್ತಿದ್ದದ್ದೂ ಸತ್ಯ.. ಇನ್ನು ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಪ್ರಶಾಂತ್ ಸಂಬರ್ಗಿ ಅವರು ಹೆಚ್ಚು ಸುದ್ದಿಯಾಗಿದ್ದೇ ಜಗಳಗಳಿಂದ.. ಬಿಗ್ ಬಾಸ್ ಮನೆಯ ಬಹುತೇಕ ಎಲ್ಲಾ ಸ್ಪರ್ಧಿಗಳ ಜೊತೆಯೂ ಪ್ರಶಾಂತ್ ಸಂಬರ್ಗಿ ಅವರು ಜಗಳ ಮಾಡಿಕೊಂಡಿದ್ದಾರೆನ್ನಬಹುದು..

ಇನ್ನು ಮಂಜು ಅರವಿಂದ್ ಶಮಂತ್ ಜೊತೆ ಒಂದು ಕೈ ಹೆಚ್ಚೇ ಎನ್ನಬೇಕು.. ಮನೆಯಲ್ಲಿ ಇನ್ನೇನು ಮಾರ್ಷಲ್ ಗಳ ಆಗಮನವಾಗಿಬಿಡುತ್ತದೆ ಎನ್ನುವಷ್ಟರ ಮಟ್ಟಕ್ಕೆ ಸಂದರ್ಭಗಳು ಸೃಷ್ಟಿಯಾಗಿ ನಂತರ ತಿಖಿಯಾಗುತಿತ್ತು.. ಇನ್ನು ಮನೆಯ ಇತರ ಸ್ಪರ್ಧಿಗಳಿಗೂ ಪ್ರಶಾಂತ್ ಅವರ ಕಂಡರೆ ಅಷ್ಟಕಷ್ಟೇ ಎನ್ನಬೇಕು‌.. ಯಾರಿಗೂ ಸಹ ಪ್ರಶಾಂತ್ ಅವರೆಂದರೆ ಇಷ್ಟವಿರಲಿಲ್ಲ.. ಇನ್ನು ವೈಲ್ಡ್ ಕಾರ್ಡ್ ಮೂಲಕ ಆಗಮಿಸಿದ ಚಕ್ರವರ್ತಿ ಚಂದ್ರಚೂಡ ಅವರು ಪ್ರಶಾಂತ್ ಅವರ ಸ್ನೇಹಿತರೇ ಆಗಿದ್ದರೂ ಸಹ ಅನೇಕ ಬಾರಿ ಇತರರೊಂದಿಗೆ ಪ್ರಶಾಂತ್ ಬಗ್ಗೆಯೇ ಹೆಚ್ಚು ಮಾತನಾಡಿದ್ದರು.. ಇನ್ನು ಬಿಗ್ ಬಾಸ್ ಸೀಸನ್ ಎಂಟು ಅರ್ಧಕ್ಕೆ ನಿಂತಿತ್ತು.. ಕೊರೊನಾ ಕಾರಣದಿಂದಾಗಿ ಮನೆಯ ಎಲ್ಲಾ ಸ್ಪರ್ಧಿಗಳು ಹೊರ ಬಂದರು.. ಬಿಗ್ ಬಾಸ್ ಈ ಸೀಸನ್ ಗೆಲ್ಲುವೆನೆಂಬ ವಿಶ್ವಾಸವಿದ್ದ ಕೆಲ ಸ್ಪರ್ಧಿಗಳು ಬಿಗ್ ಬಾಸ್ ಅರ್ಧಕ್ಕೆ ಮುಕ್ತಾಯ ಮಾಡಿದ್ದಕ್ಕೆ ಬೇಸರವನ್ನೂ ಸಹ ವ್ಯಕ್ತ ಪಡಿಸಿದ್ದರು..

ಇನ್ನು‌ ಸ್ಪರ್ಧಿಗಳು ಹೊರ ಬಂದ ಬಳಿಕ ಕೊರೊನಾ ಕಾರಣದಿಂದಾಗಿ ಹೆಚ್ಚು ಯಾವುದೇ ಸಂದರ್ಶನಗಳಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಕೆಲ ಮಾಧ್ಯಮದ ಪೇಜ್ ಗಳ ಮೂಲಕ ಲೈವ್ ಬಂದು ತಮ್ಮ ಬಿಗ್ ಬಾಸ್ ಅನುಭವವನ್ನು ಹಂಚಿಕೊಂಡಿದ್ದಾರೆ.. ಇನ್ನು ಬಿಗ್ ಬಾಸ್ ಮನೆಯಲ್ಲಿ ಕೊನೆಯದಾಗಿ ಉಳಿದಿದ್ದ ಪ್ರಶಾಂತ್ ಸಂಬರ್ಗಿ ಚಕ್ರವರ್ತಿ ಚಂದ್ರಚೂಡ್ ಪ್ರಿಯಾಂಕ ಶಮಂತ್ ರಘು ಶುಭಾ ಪೂಂಜಾ ವೈಷ್ಣವಿ ಮಂಜು ಪಾವಗಡ ಅರವಿಂದ್ ದಿವ್ಯಾ ಉರುಡುಗ ದಿವ್ಯಾ ಸುರೇಶ್ ನಿಧಿ ಸುಬ್ಬಯ್ಯ ಅವರು ಕಲರ್ಸ್ ಕನ್ನಡ ವಾಹಿನಿಯ ಪೇಸ್ಬುಕ್ ಪೇಜ್ ನಲ್ಲಿಯೇ ಲೈವ್ ಬಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.. ಆದರೆ ಪ್ರಶಾಂತ್ ಸಂಬರ್ಗಿ ಅವರು ಮಾತ್ರ ನೇರವಾಗಿ ಇದೀಗ ಎಲ್ಲರ ಬಣ್ಣವನ್ನು ಬಯಲು ಮಾಡಿದ್ದಾರೆ.. ಹೌದು ಬಿಗ್ ಬಾಸ್ ನ ಪ್ರತಿ ಸೀಸನ್ ನಲ್ಲಿಯೂ ಗುಂಪುಗಾರಿಕೆ ಮಾಡೋದು ಹೊಸದೇನೂ ಅಲ್ಲ.. ಈ ಸೀಸನ್ ನಲ್ಲಿಯೂ ಅದು ಹೊಸದಲ್ಲ.. ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಎಂಟ್ರಿಕೊಟ್ಟ ಮೊದಲ ವಾರದಿಂದಲೂ ಅಲ್ಲಲ್ಲಿ ಗುಂಪುಗಳಾದವು..

ಇತರ ಸ್ಪರ್ಧಿಗಳು ಪ್ರಶಾಂತ್ ಅವರನ್ನು ಕೊಂಚ ದೂರವೇ ಇಟ್ಟಿದ್ದರು.. ಆದರೆ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಈ ರೀತಿ ಮಾಡಬಾರದಿತ್ತು.. ಹೌದು ಬಿಗ್ ಬಾಸ್ ಮನೆಯೊಳಗೆ ಏನೇ ಮಮಸ್ತಾಪವಿರಲಿ ಸೀಸನ್ ಮುಗಿದ ಮೇಲೆ ಹೊರ ಬಂದ ನಂತರ ಎಲ್ಲರೂ ಸಹ ಒಂದಾಗುತ್ತಾರೆ.. ವಾಟ್ಸಪ್ ಗ್ರೂಪ್ ಮಾಡಿಕೊಂಡು ಒಬ್ಬರಿಗೊಬ್ಬರ ಸಂಪರ್ಕದಲ್ಲಿರುತ್ತಾರೆ.. ಈ ಸೀಸನ್ ನಲ್ಲಿಯೂಸಹ ಬಿಗ್ ಬಾಸ್ ಸ್ಪರ್ಧಿಗಳು ಹೊರ ಬಂದ ಬಳಿಕ ವಾಟ್ಸಪ್ ಗ್ರೂಪ್ ಒಂದು ಕ್ರಿಯೇಟ್ ಆಗಿದೆ.. ಆಗುಹೋಗುಗಳನ್ನು ಅಲ್ಲಿ ಚರ್ಚೆಯೂ ಮಾಡುತ್ತಾರೆ.. ಆದರೆ ಆ ಗ್ರೂಪ್ ನಲ್ಲಿ ಮೂವರಿಗೆ ಜಾಗವಿಲ್ಲ.. ಹೌದು ಪ್ರಶಾಂತ್ ಸಂಬರ್ಗಿ ಚಕ್ರವರ್ತಿ ಚಂದ್ರಚೂಡ ಹಾಗೂ ಪ್ರಿಯಾಂಕ ಅವರಿಗೆ ಬಿಗ್ ಬಾಸ್ ಸೀಸನ್ ಎಂಟರ ಗುಂಪಿನಲ್ಲಿ ಪ್ರವೇಶವಿಲ್ಲದಾಗಿದೆ..

ಹೌದು ಈ ಬಗ್ಗೆ ಲೈವ್ ನಲ್ಲಿಯೇ ತಿಳಿಸಿದ ಪ್ರಶಾಂತ್ ಸಂಭರ್ಗಿ ಅವರು ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ನನ್ನನ್ನು ನಿನ್ನನ್ನು ಒಂದು ಗ್ಯಾಂಗ್ ಮಾಡಿದ್ದಾರಪ್ಪಾ ಎಂದು ಚಕ್ರಚರ್ತಿ ಅವರಿಗೆ ತಿಳಿಸಿದ್ದಾರೆ.. ಅದೇಗೆ ಎಂದಾಗ ಬಿಗ್ ಬಾಸ್ ನಿಂದ ಹೊರ ಬಂದು ವಟ್ಸಪ್ ಗ್ರೂಪ್ ಮಾಡಿದ್ದಾರೆ.. ಆ ಗ್ರೂಪ್ ನಲ್ಲಿ ನಾನು ನೀನೆ ಇಲ್ಲ ಎಂದಿದ್ದಾರೆ.. ಇದಕ್ಕೆ ಅಲ್ಲೇ ಇದ್ದ ಪ್ರಿಯಾಂಕ ಪ್ರತಿಕ್ರಿಯೆ ನೀಡಿ.. ನಾನು ಸಹ ಇಲ್ಲ.. ನಾನು ಯಾವಾಗ್ಲೂ ಸಿಂಗಲ್ ಎಂದಿದ್ದಾರೆ.. ಇಲ್ಲಿಯೂ ಸಹ ಗುಂಪುಗಾರಿಕೆ ಬಿಟ್ಟಿಲ್ಲ ಎಂದು ಪ್ರಶಾಂತ್ ಬೇಸರ ವ್ಯಕ್ತ ಪಡಿಸಿದ್ದಾರೆ..

ಬಿಗ್ ಬಾಸ್ ಮನೆಯೊಳಗೆ ಅದೇನೆ ಇರಬಹುದು.. ಆದರೆ ಹೊರ ಬಂದ ನಂತರ ಎಲ್ಲರೂ ಚೆನ್ನಾಗಿರುವುದು ವಾಡಿಕೆ.. ಅದರಲ್ಲೂ ಈ ಸೀಸನ್ ನ ಕೊನೆಯ ವಾರಗಳಲ್ಲಿ ಮಂಜು ಅರವಿಂದ್ ಎಲ್ಲರೂ ಸಹ ಇನ್ನು ಮುಂದೆ ಚೆನ್ನಾಗಿರೋಣ.. ನಮ್ಮಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಪ್ರಶಾಂತ್ ಅವರನ್ನು ಅಪ್ಪಿಕೊಂಡು ಕ್ಷಮೆ ಕೇಳಿದ್ದರು.. ಆ ರೀತಿ ಎಲ್ಲಾ ಮಾಡಿದ ನಂತರ ಎಲ್ಲರೂ ಒಂದಾಗಬೇಕಿತ್ತು.. ಈ ರೀತಿ ಹೊರ ಬಂದ ಮೇಲೂ ಸಹ ಪ್ರಶಾಂತ್ ರನ್ನು ಗುಂಪಿನಿಂದ ದೂರ ಇಟ್ಟಿದ್ದು ಸಣ್ಣ ಮನಸ್ಥಿತಿ ಎಂದಿದ್ದಾರೆ.. ಕೊನೆ ಪಕ್ಷ ಬಿಗ್ ಬಾಸ್ ಅಂತ್ಯ ವಾಗೋದಕ್ಕೂ ಮುನ್ನ ಕೊನೆಯ ದಿನಗಳಲ್ಲಿ ಪ್ರಶಾಂತ್ ಜೊತೆ ಇದ್ದ ಮಂಜು ದಿವ್ಯಾ ಶುಭಾ ಅರವಿಂದ್ ಅವರಾದರೂ ಪ್ರಶಾಂತ್ ಅವರನ್ನು ವಾಟ್ಸಪ್ ಗ್ರೂಪಿಗೆ ಸೇರಿಸಿಕೊಳ್ಳಬಹುದಾಗಿತ್ತು…