ಮದುವೆ ವಿಚಾರ ಹಂಚಿಕೊಂಡ ಪ್ರಥಮ್.. ಹುಡುಗಿ ಯಾರು ಗೊತ್ತಾ?

0 views

ಬಿಗ್ ಬಾಸ್ ಕನ್ನಡದಲ್ಲಿ ಏಳು ಸೀಸನ್ ಗಳು ಸಂಪೂರ್ಣಗೊಂಡು ಎಂಟನೇ ಸೀಸನ್ ನಡೆಯುತ್ತಿದೆ.. ಆದರೆ ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ಸಿಕ್ಕ ಮನರಂಜನೆ ಮತ್ಯಾವುದರಲ್ಲಿಯೂ ಸಿಗಲಿಲ್ಲ ಎಂಬ ಒಂದು ಮಾತು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕೇಳಿ ಬರುತ್ತಿರುತ್ತದೆ.. ಇದಕ್ಕೆ ಆ ಸೀಸನ್ ನ ಸ್ಪರ್ಧಿ ಒಳ್ಳೆ ಹುಡುಗ ಪ್ರಥಮ್ ಕೂಡ ಮುಖ್ಯ ಕಾರಣವೆನ್ನಬಹುದು‌‌.. ಸದ್ಯ ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ವಿಜೇತರಾದ ಪ್ರಥಮ್ ಬಂದ ಹಣವನ್ನು ಕೊಟ್ಟ ಮಾತಿನಂತೆ ಸಾಮಾಜಿಕ ಕಾರ್ಯಗಳಲ್ಲಿ ಬಳಕೆ ಮಾಡಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು..

ಇನ್ನು ಬಿಗ್ ಬಾಸ್ ನ ಅದೆಷ್ಟೋ ಸ್ಪರ್ಧಿಗಳು ಹೆಸರು ತಿಳಿಯದಂತೆ ಮಾಯವಾಗಿ ಹೋಗಿದ್ದಾರೆ.. ಆದರೆ ಬಿಗ್ ಬಾಸ್ ನಿಂದ ಬಂದ ಖ್ಯಾತಿ ಮತ್ತು ಹೆಸರನ್ನು ಸರಿಯಾಗಿ ಬಳಸಿಕೊಂಡ ಕೆಲವೇ ಸ್ಪರ್ಧಿಗಳಲ್ಲಿ ಪ್ರಥಮ್ ಕೂಡ ಒಬ್ಬರು.. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಬರೋಬ್ಬರಿ ಏಳು ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು ಸದ್ಯ ಕರ್ನಾಟಕದ ಅಳಿಯ ಸಿನಿಮಾದಲ್ಲಿ ನಾಯಕನ ಜೊತೆಗೆ ನಿರ್ದೇಶನವನ್ನೂ ಸಹ ಮಾಡುತ್ತಿದ್ದು ರಾಘವೇಂದ್ರ ರಾಜ್ ಕುಮಾರ್ ಅವರನ್ನು ಸೇರಿದಂತೆ ದೊಡ್ಡ ತಾರಾಬಳಗದ ಜೊತೆ ಕೆಲಸ ಮಾಡುತ್ತಿದ್ದಾರೆ…

ಇನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುವ ಪ್ರಥಮ್ ಅವರು ಸದ್ಯ ಮದುವೆ ವಿಚಾರವನ್ನು ಹಂಚಿಕೊಂಡಿದ್ದಾರೆ.. ಹೌದು ಈ ಹಿಂದೆಯೂ ಎರಡು ಮೂರು ಬಾರಿ ಪ್ರಥಮ್ ಅವರ ಮದುವೆ ವಿಚಾರ ಸದ್ದು ಮಾಡಿತ್ತಾದರೂ ಮತ್ತೆ ಆ ವಿಚಾರದ ಕುರಿತು ಯಾವ ಮಾಹಿತಿಯೂ ಹೊರ ಬರಲಿಲ್ಲ.. ಆದರೆ ಸದ್ಯ ಇದೀಗ ಮಗನಿಗೊಂದು ಜೋಡಿ ಹುಡುಕುವ ಕೆಲಸದಲ್ಲಿ ಪ್ರಥಮ್ ಅವರ ತಾಯಿ ತೊಡಗಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್ ಫೋಟೋ ಹಂಚಿಕೊಂಡಿದ್ದಾರೆ..

ಹೌದು ಪ್ರಥಮ್ ನ ನೇರವಂತಿಕೆಯ ಗುಣ ಎಲ್ಲರಿಗೂ ತಿಳಿದೇ ಇದೆ.. ಇಂತಹ ಹುಡುಗನನ್ನು ತಡೆದುಕೊಳ್ಳುವ ಹುಡುಗಿ ಆದಷ್ಟು ಬೇಗ ಸಿಗಲಿ ಎಂಬ ಕಾರಣಕ್ಕೋ ಏನೋ ಪ್ರಥಮ್ ಅವರ ತಾಯಿ ಪೂಜೆ ವ್ರತ ಎಂದು ತೊಡಗಿಕೊಂಡಿದ್ದಾರೆ.. ಹೌದು ಮಗನ ಮದುವೆಗಾಗಿ ವ್ರತ ಮಾಡುತ್ತಿದ್ದ ತಾಯಿಯ ಆಸೆಯನ್ನು ಇದೀಗ ಪ್ರಥಮ್ ಈಡೇರಿಸಿದ್ದು ವ್ರತ ಸಂಪೂರ್ಣ ಮಾಡಿದ್ದಾರೆ.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಮ್ಮನೊಟ್ಟಿಗೆ ಫೋಟೋ ಹಂಚಿಕೊಂಡಿರುವ ಪ್ರಥಮ್ ಅವರು

“ನಾನು ನಮ್ಮಮ್ಮ ಮಾತಾಡೋದು, ಸಿಗೋದು ಬಹಳ ಕಮ್ಮಿ.. ಸತತ 21 ವಾರದಿಂದ ಪ್ರತಿ ಭಾನುವಾರ ಬೆಂಗಳೂರಿನಿಂದ ಆಚೆ ತಾವರೆಕೆರೆ ಬಳಿ ಒಂದು ದೇವಸ್ಥಾನದಲ್ಲಿ ನನ್ನ ಮದುವೆ ವಿಚಾರದಲ್ಲಿ ಹರಕೆ ಕಟ್ಟಿಕೊಂಡು ಪ್ರತಿ ಭಾನುವಾರ ಬೆಳಿಗ್ಗೆಯೇ ಬಂದು ಪೂಜೆ ಮಾಡಿ ಊರಿಗೆ ಹೋಗ್ತಾರೆ.. ಇವತ್ತು 21 ನೇ ವಾರ.. ಅವರ ನಂಬಿಕೆ ಸುಳ್ಳಾಗದಿರಲಿ ಅಂತ ನಾನೇ ನಿಂತು ಹೋಮ ಮುಗಿಸಿದೆ.. ನನಗೂ ಸಮಾಧಾನವಾಯ್ತು..” ಎಂದು ಬರೆದು ಪೋಸ್ಟ್ ಮಾಡಿದ್ದು ಆದಷ್ಟು ಬೇಗ ಮದುವೆಯ ಸುದ್ದಿ ಹಂಚಿಕೊಳ್ಳುವ ಸೂಚನೆ ನೀಡಿದ್ದಾರೆನ್ನಬಹುದು‌‌..