ಬಿಗ್‌ ಬಾಸ್‌ ಮನೆಯಲ್ಲಿ ಕೀಳು ಬುದ್ದಿ ತೋರಿದ ತುಕಾಲಿ‌ ಸಂತೋಷ್.. ನಿಜಕ್ಕೂ ಅವ ತುಕಾಲಿನೇ..

0 views

ಯಾರೇ ಆಗಲಿ ಮನುಷ್ಯ ಜೀವನದಲ್ಲಿ ತಪ್ಪು ಮಾಡೋದು ಸಹಜ.. ಆ ರೀತಿ ತಪ್ಪು ಮಾಡಿದಾಗ ಜನರು ಆತನ್ನು ಆತನ ತಪ್ಪುಗಳನ್ನು ಟೀಕಿಸೋದು ಅವನ ಕಾಲೆಳೆಯೋದು ಇತ್ತೀಚಿನ ದಿನಗಳ ಭಾಷೆಯಲ್ಲಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡೋದು ಎಲ್ಲವೂ ಸಹಜ ನಿಜ.. ಆದರೆ ಆತ ತಪ್ಪು ಮಾಡಿ ವರ್ಷಗಳು ಕಳೆದಿದೆ.. ಈಗ ಎಲ್ಲವೂ ಮಾಸಿದೆ.. ಆತನಿಗೂ ಬದುಕಲು ಮತ್ತೊಂದು ಅವಕಾಶ ಬೇಕಿದೆ.. ಸಮಾಜದಲ್ಲಿ ಮತ್ತೆ ಆತನಿಗೆ ಗೌರವ ಬೇಕೆನಿಸಿದೆ. ಅದೇ ಪ್ರಯತ್ನದಲ್ಲಿ ಆತನಿದ್ದಾನೆ.. ಆದರೆ ಇಂತಹ ಸಮಯದಲ್ಲಿ ಆತನ ಹಳೆಯ ತಪ್ಪುಗಳನ್ನು ಇಟ್ಟುಕೊಂಡು ತುಕಾಲಿ ಬುದ್ಧಿ ತೋರುವವರನ್ನು ಏನೆನ್ನಬೇಕು ಹೇಳಿ.. ಸಂಶಯವೇ ಇಲ್ಲ ನಿಜಕ್ಕೂ ಆತ ತುಕಾಲಿಯೇ ಸರಿ.. ವಿಚಾರ ಯಾರ ಬಗ್ಗೆ ಅನ್ನೋದು ಎಲ್ಲರಿಗೂ ತಿಳಿದಿದೆ.. ಬಿಗ್‌ ಬಾಸ್‌ ಸೀಸನ್‌ ಹತ್ತು ಒಂದು ರೀತಿ ವಿಭಿನ್ನಸ್ಪರ್ಧಿಗಳ ಆಯ್ಕೆಯಿಂದ ಜನರಿಗೆ ಕನೆಕ್ಟ್‌ ಆಗುತ್ತಿರೋದು ನಿಜ.. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್‌ ಗಳಾದ ಒಂದಿಷ್ಟು ಜನರು ಸಹ ಬಿಗ್‌ ಬಾಸ್‌ ಮನೆಯೊಳಗೆ ಇದ್ದಾರೆ..

ಅದೇ ರೀತಿ ವರ್ಷಗಳ ಹಿಂದೆ ಡ್ರೋನ್‌ ವಿಚಾರದಲ್ಲಿ ಒಂದಿಷ್ಟು ಸುಳ್ಳು ಹೇಳಿ ಸಾಕಷ್ಟು ಸುದ್ದಿಯಾಗಿ ಈಗ ಕೆಲ ತಿಂಗಳ ಹಿಂದೆ ಒಂದಷ್ಟು ಬಂಡವಾಳ ಹಾಕಿ ತನ್ನದೇ ಆದ ಉದ್ಯಮ ಆರಂಬಹಿಸಿ ಮತ್ತೆ ಅದೇ ಸಮಾಜದಲ್ಲಿ ಗೌರವದ ನಿರೀಕ್ಷೆಯಲ್ಲಿದ್ದ ಡ್ರೋನ್‌ ಪ್ರತಾಪ್‌ ಕೂಡ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದು ಒಂದು ರೀತಿ ಆ ಹುಡುಗನಿಗೆ ತನ್ನ ತಪ್ಪುಗಳನ್ನು ಅರಿತುಕೊಂಡು ಮುಂದೆ ಹೊಸ ಬದುಕು ಕಟ್ಟಿಕೊಳ್ಳಲು ಇದು ಉತ್ತಮ ಅವಕಾಶ ಎನ್ನಬಹುದು.. ಆದರೆ ಬಿಗ್‌ ಬಾಸ್‌ ಮನೆಯಲ್ಲಿ ಅವನನ್ನೇ ಟಾರಗೆಟ್‌ ಮಾಡಿಕೊಂಡು ತಮ್ಮಬೇಳೆ ಬೇಯಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.. ಹೌದು ತುಕಾಲಿ ಸಂತೋಷ್‌ ತಾನೇನೋ ದೊಡ್ಡ ಎಂಟರ್ಟೈನರ್‌ ಎಂದು ತನಗೆ ತಾನೇ ತಿಳಿದುಕೊಂಡು ದೊಡ್ಡ ಪುಡಾಂಗಿನ ರೀತಿ ಆಡುತ್ತಿರುವುದು ಪ್ರೇಕ್ಷಕರಿಗೆ ಸಹಜವಾಗಿ ಪಿತ್ತ ನೆತ್ತಿಗೇರುವಂತೆ ಮಾಡಿರೋದು ಸುಳ್ಳಲ್ಲ.. ತಾನು ಮನೆಯಲ್ಲಿ ಉಳಿಯಲು ಮತ್ತೊಬ್ಬರನ್ನು ಹೀಯಾಳಿಸಿಕೊಂಡು ಬಿಗ್‌ ಬಾಸ್‌ ನಲ್ಲಿ ಹಲ್ಲು ಕಿಸಿಯುತ್ತಿರುವ ತುಕಾಳಿ ಸಂತೋಷ್‌ ದಿನೇ ದಿನೇ ಪ್ರತಾಪ್‌ ನನ್ನೇ ಟಾರ್ಗೆಟ್‌ ಮಾಡುತ್ತಿದ್ದು ಇಂದು ಆತನ ಮಾತುಗಳು ಅತಿರೇಕಕ್ಕೆ ಹೋಗಿದೆ.. ಆತನ ಜೊತೆಗೆ ಹರಹರ ಮಹಾದೇವ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ನಟ ವಿನಯ್‌ ಕೂಡ ಸೇರಿಕೊಂಡಿದ್ದು ಡ್ರೋನ್‌ ನ ರೆಕ್ಕೆ ಪುಕ್ಕಗಳನ್ನು ಕಟ್‌ ಮಾಡುವೆ ಎನ್ನುವ ಮಾತುಗಳನ್ನಾಡಿದ್ದು ಅವರುಗಳ ದುರಹಂಕಾರ ಎದ್ದು ಕಾಣುತ್ತಿದೆ..

ಡ್ರೋನ್‌ ಪ್ರತಾಪ್‌ ಬಿಗ್‌ ಬಾಸ್‌ ಮನೆಗೆ ಕಾಲಿಡುವಾಗ ಅಸಮರ್ಥ ಸದಸ್ಯರ ಪೈಕಿ ಒಬ್ಬರಾಗಿಯೇ ಬಿಗ್‌ ಬಾಸ್‌ ಮನೆಯೊಳಗೆ ಹೋಗಿದ್ದು ಶುರುವಿನಲ್ಲಿ ಎಲ್ಲರ ಜೊತೆ ಬೆರೆಯುವುದು ಆತನಿಗೆ ಕಷ್ಟ ಆಗಿರೋದು ನಿಜ.. ಆದರೆ ಅದನ್ನೇ ಕಾಯುತ್ತಿಒದ್ದ ತುಕಾಲಿ ಆತನ ಹೆಸರು ಬಳಸಿಕೊಂಡು ಆತನನ್ನು ಮನೆಯವರ ಜೊತೆ ಬೆರೆಯಲು ನಾನು ತಯಾರು ಮಾಡುತ್ತಿದ್ದೇನೆ ಎನ್ನುವ ರೀತಿ ಬಿಂಬಿಸಿ ಪ್ರತಾಪ್‌ ಮಾಡೋದೆಲ್ಲಾ ತಪ್ಪು ಎನ್ನುವಂತೆ ನಾಟಕ ಆಡುತ್ತಿರುವ ತುಕಾಲಿ ತಾನು ಸುಪೀರಿಯರ್‌ ಎಂದು ತನಗೆ ತಾನೆ ಭಾವಿಸಿಕೊಂಡಿದ್ದಾನೆ.. ಆದರೆ ಬಿಗ್‌ ಬಾಸ್‌ ಮನೆಯಿಂದ ಹೊರಗೆ ಟಿವಿಗಳಲ್ಲಿ ನೋಡುತ್ತಿರುವ ಪೊಒರೇಕ್ಷಕರಿಗೆ ಮಾತ್ರ ತುಕಾಲಿಯ ಆಟ ತಿಳಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಅದಾಗಲೇ ಸಾಕಷ್ಟು ಟೀಕಿಸಿರೋದು ಉಂಟು.. ಬಿಗ್‌ ಬಾಸ್‌ ಮನೆಯೊಳಗೆ ಅಸಮರ್ಥ ಸದಸ್ಯರೇ ಅಡುಗೆ ಮಾಡಬೇಕಾಗಿದ್ದು, ಹಾಗೆಯೇ ಸಮರ್ಥ ಸದಸ್ಯರು ಹೇಳುವ ಎಲ್ಲಾ ಕೆಲಸವನ್ನು ಮಾಡಬೇಕಿದೆ.. ಅದೇ ರೀತಿ ಡ್ರೋನ್‌ ಪ್ರತಾಪ್‌ ಕೂಡ ಮಧ್ಯ ರಾತ್ರಿಯಲ್ಲಿ ಮನೆಯ ಸದಸ್ಯರೊಬ್ಬರು ಕೇಳಿದರೆಂದು ಚಪಾತಿ ಮಾಡಿಕೊಟ್ಟಿದ್ದು ನಂತರ ನಾನು ಕೇಳೆ ಇಲ್ಲ ಎಂದಿದ್ದಾರೆ.. ಇತ್ತ ಡ್ರೋನ್‌ ಪ್ರತಾಪ್‌ ಚಪಾತಿ ಮಾಡಿದ್ದಾನೆ ಎಂದು ಒಂದಿಷ್ಟು ಸದಸ್ಯರು ಆತನ ಮೇಲೆರಗಿದ್ದು ಅದರಲ್ಲೂ ವಿನಯ್‌ ಹಾಗೂ ತುಕಾಳಿ ಒಂದೆಜ್ಜೆ ಮುಂದೆಯೇ ಹೋಗಿದ್ದಾರೆ..

ಇಡೀ ಪ್ರಪಂಚದ ಸುದ್ದಿ ಮಾದ್ಯಮಗಳಿಗೆ ಹೂ ಮುಡಿಸಿರೋನು ಅವನು ಎಂದು ಡ್ರೋನ್‌ ಪ್ರತಾಪನ ಬಗ್ಗೆ ತುಕಾಲಿ ಹಲೆಯ ವಿಚಾರಗಳನ್ನು ಕೆದಕಿ ಕೆಣಕಿದ್ದಾನೆ.. ಇತ್ತ ವಿನಯ್‌ ಕೂಡ ಮತ್ತೊಂದು ವಿಚಾರಕ್ಕೆ ಡ್ರೋನ್‌ ಪ್ರತಾಪನ ರೆಕ್ಕೆ ಕತ್ತರಿಸುವುದಾಗಿ ಹೇಳಿದ್ದು ಅವರ ದುರಹಂಕಾರವನ್ನು ತೋರುತ್ತಿದೆ.. ಒಟ್ಟಿನಲ್ಲಿ ಇವರ ಲೆಕ್ಕದಲ್ಲಿ ಜೀವನದಲ್ಲಿ ಮನುಷ್ಯ ಒಮ್ಮೆ ತಪ್ಪು ಮಾಡಿದ್ರೆ ಆತನ ಸಂಪೂರ್ಣ ಜೀವನವೇ ಮುಗಿದಂಗೆ.. ಇಷ್ಟೆಲ್ಲಾ ಆ ಹುಡುಗನ್ನ ಕೀಳು ಮಟ್ಟದಲ್ಲಿ ನಡೆಸಿಕೊಳ್ಳುತ್ತಿರುವ ಈ ಮಹಾಶಯ ತುಕಾಲಿಗಳು ಜೀವನದಲ್ಲಿ ತಪ್ಪೇ ಮಾಡಿಲ್ವಾ? ಇವರ ತಪ್ಪುಗಳು ಅವರಿಗೆ ಮಾತ್ರವೇ ಗೊತ್ತಿರತ್ತೆ.. ಆದರೆ ಡ್ರೋನ್‌ ಪ್ರಾತಾಪ್‌ ಮಾಡಿದ ತಪ್ಪು ಸಮಾಜಕ್ಕೆ ತಿಳಿದು ಆತನನ್ನು ಅದಾಗಲೈ ಬೈದು ಬುದ್ದಿ ಕಲಿಸಿದ್ದು ಆಗಿದೆ.. ಬದುಕೋಕೆ ಮತ್ತೊಂದು ಅವಕಾಶ ಬಯಸಿ ಬಂದವರಿಗೆ ಅವಕಾಶ ಕೊಟ್ಟು ನೋಡಬೇಕು.. ಇಂತವರು ಒಂದಿಬ್ಬರು ತಪ್ಪು ಮಾಡಿದವರ ಸುತ್ತ ಮುತ್ತ ಇದ್ದರೆ ಬಹುಶ ಅವರನ್ನು ಉಳಿಯೋಕೆ ಬಿಡೋದಿಲ್ಲ ಎನಿಸುತ್ತದೆ.. ಇನ್ನು ಇಂದಿನ ಸಂಚಿಕೆಯಲ್ಲಿ ಈ ಎಲ್ಲಾ ಘಟನೆಗಳು ಪ್ರಸಾರವಾಗಲಿದ್ದು ನಾಳೆ ಶನಿವಾರ ವಾರದ ಕತೆಯಲಲಿ ಸುದೀಪ್‌ ಅವರು ಈ ವಿಚಾರದ ಬಗ್ಗೆ ಮಾತನಾಡಿ ತುಕಾಲಿಗೆ ಗ್ರಹಚಾರ ಬಿಡಿಸುವಂತಾಗಲಿ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.