ತನ್ನ ಲವರ್ ಯಾರೆಂದು ಹೇಳಿಕೊಂಡ ಖ್ಯಾತ ನಟಿ ಪ್ರೇಮ..

0 views

ಸ್ಯಾಂಡಲ್ವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಇಪ್ಪತ್ತು ಮೂವತ್ತು ವರ್ಷದ ಹಿಂದೆ ನಾಯಕ ನಟಿಯರಾಗಿ ಕನ್ನಡ ಇಂಡಸ್ಟ್ರಿಯಲ್ಲಿ ಸುಧೀರ್ಘವಾಗಿ ಮಿಂಚಿದ ಅನೇಕ ಸ್ಟಾರ್ ನಟಿಯರು ಬರುಬರುತ್ತಾ ಮರೆಯಾಗಿ ಹೋದರು.. ಇತ್ತೀಚಿನ ದಿನಗಳಲ್ಲಿ ಹೀರೋಯಿನ್ ಗಳು ನಾಲ್ಕೈದು ಸಿನಿಮಾ ಮಾಡೋದು ಹೆಚ್ಚು ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ಹತ್ತರ ಗಡಿ ದಾಟುವರು. ಆದರೆ ಇಪ್ಪತ್ತು ವರ್ಷದ ಹಿಂದಿನ ಸಿನಿಮಾ ಇಂಡಸ್ಟ್ರಿಯೇ ಬೇರೆಯಾಗಿತ್ತು.‌. ಎರಡನೇ ತಲೆಮಾರಿನ ನಾಯಕ ನಟಿಯರು ಇಪ್ಪತ್ತು ಮೂವತ್ತು ಸಿನಿಮಾಗಳಲ್ಲಿ ಅಭಿನಯಿಸಿದರೂ ಸಹ ಅವರ ಸ್ಟಾರ್ ಗಿರಿ ಮಾತ್ರ ಕಡಿಮೆಯಾಗುತ್ತಿರಲಿಲ್ಲ..ಮಾಲಾಶ್ರೀ ಅವರು ಶೃತಿ ಅವರು ಅನು ಪ್ರಭಾಕರ್ ಅವರು ಸುಧಾರಾಣಿ ಅವರು ರಂಭಾ ಅವರು ಪ್ರೇಮ ಅವರು ಹೀಗೆ ಸಾಕಷ್ಟು ನಟಿಯರು ಈಗಲೂ ಸಹ ಎಂಭತ್ತು ತೊಂಭತ್ತರ ದಶಕದ ಜನರೇಷನ್ ಅವರಿಗೆ ಅಚ್ಚುಮೆಚ್ಚೆನ್ನಬಹುದು..

ಅಂತಹ ನಟಿಯರಲ್ಲಿ ಕೆಲವರು ಈಗಲೂ ಸಿ‌ನಿಮಾಗಳಲ್ಲಿ‌ ಪೋಷಕ ನಟಿಯರಾಗಿ ಸಹ ಕಲಾವಿದರಾಗಿ ಅಭಿನಯಿಸುತ್ತಿದ್ದರೆ ಮತ್ತೆ ಕೆಲವರು ಮದುವೆ ಮಕ್ಕಳು ಕುಟುಂಬ ಅಂತ ಬ್ಯುಸಿಯಾಗಿ ಚಿತ್ರರಂಗದಿಂದ ದೂರ ಉಳಿದರು.. ಇನ್ನೂ ಕೆಲವರು ವ್ಯಯಕ್ಯಿಕ ಕಾರಣಗಳಿಗಾಗಿ ಚಿತ್ರರಂಗದಿಂದ ದೂರ ಹೋಗಿ ಮತ್ತೆ ಕಂಬ್ಯಾಕ್ ಮಾಡಿ ಸಿನಿಮಾರಂಗದಲ್ಲಿಯೇ ಬದುಕು ಕಟ್ಟಿಕೊಂಡವರು ಇದ್ದಾರೆ.. ಇನ್ನೂ ಅಂತಹ ಕಲಾವಿದರಲ್ಲಿ ಒಬ್ಬರು ನಟಿ ಪ್ರೇಮ ಅವರು.. ಹೌದು ಓಂ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ನಟಿ ಪ್ರೇಮ ಅವರು ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆದರು.. ಆಗ ಹೀರೋಗಳಿಗಿಂತ ಹೆಚ್ಚು ಸಿನಿಮಾಗಳಲ್ಲಿ ಪ್ರೇಮ ಅವರು ಬ್ಯುಸಿ ಆಗಿದ್ದಾರೆ ಎನ್ನುವ ಮಾತು ಸಹ ಕೇಳಿ ಬರುತ್ತಿತ್ತು.. ಅದರಲ್ಲೂ ಪ್ರೇಮ ಅವರು ಅಭಿನಯಿಸಿದ ಸಾಲು ಸಾಲು ಸಿನಿಮಾಗಳು ಸೂಪರ್ ಹಿಟ್ ಆದವು..

ಈ ರೀತಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಪ್ರೇಮ ಅವರು ತಮ್ಮ ಮದುವೆಯ ವಿಚಾರವಾಗಿ ಬ್ರೇಕ್ ಪಡೆದುಕೊಂಡರು.. ಆನಂತರ ಸಿನಿಮಾವಾಗಲಿ ಮತ್ತಿನ್ನೆಲ್ಲೂ ಕಾಣಸಿಗಲಿಲ್ಲ.. ಈಗ ಸಾಮಾಜಿಕ ಜಾಲತಾಣಗಳು ಹೆಚ್ಚು ಬಳಕೆಯಲ್ಲಿರುವ ಕಾರಣ ಈಗಿನ ಹೀರೋಯಿನ್ ಗಳು ಮದುವೆಯಾದ ಬಳಿಕವೂ ಚಿತ್ರರಂಗದಿಂದ ಬ್ರೇಕ್ ಪಡೆದರೂ ಸಹ ಸದಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿಯೇ ಇದ್ದು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.. ಆದರೆ ಆಗ ಅವೆಲ್ಲವೂ ಇಲ್ಲದ ಕಾರಣ ಮದುವೆಯ ನಂತರ ಪ್ರೇಮ ಅವರು ನಾಪತ್ತೆಯೇ ಆಗಿ ಬಿಟ್ಟರು ಎನ್ನಬಹುದು.. ಮದುವೆಯ ಕಾರಣಕ್ಕೆ ಸಿನಿಮಾವನ್ನೇ ಬಿಟ್ಟು ಹೋಗಿದ್ದ ಪ್ರೇಮ ಅವರಿಗೆ ಅದ್ಯಾಕೋ ವ್ಯಯಕ್ತಿಕ ಜೀವನ ಸರಿ ಬಾರಲಿಲ್ಲ.. ಮದುವೆಯಾದ ಕೆಲವೇ ವರ್ಷಗಳಲ್ಲಿ ತಮ್ಮ ಪತಿಯಿಂದ ದೂರಾದರು..

ಆಗಲೂ ಸಹ ಪ್ರೇಮ ಅವರ ಬಗ್ಗೆ ಯಾವ ವಿಚಾರವೂ ತಿಳಿದು ಬಾರಲಿಲ್ಲ.. ಆದರೆ ಒಂದಷ್ಟು ಊಹಾಪೋಹದ ಸುದ್ದಿಗಳು ಹರಿದಾಡಿದ್ದವು.. ಪ್ರೇಮ ಅವರ ಆರೋಗ್ಯ ಸರಿ ಇಲ್ಲ.. ಅವರಿಗೆ ಯಾವುದೋ ಕಾಯಿಲೆ ಇದೆ.. ಅವರಿಗೆ ಇಬ್ಬರು ಮಕ್ಕಳಂತೆ.. ಹೀಗೆ ಸಾಕಷ್ಟು ವಿಚಾರಗಳು ಗಾಳಿ ಸುದ್ದಿಯಾಗಿ ಹೋಗಿದ್ದವು.. ಆದರೆ ಎಂದೂ ಸಹ ಈ ವಿಚಾರಗಳ ಬಗ್ಗೆ ಸ್ಪಷ್ಟನೆ ಕೊಡುವ ಸಲುವಾಗಿಯೀ ಅಥವಾ ಮತ್ತೊಂದು ವಿಚಾರವಾಗಿಯೋ ಅವರು ಮುಂದೆ ಬರಲಿಲ್ಲ. ಕೊನೆಗೆ ಕೆಲ ವರ್ಷದ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟಿ ಪ್ರೇಮ ಅವರನ್ನು ಕರೆಸಲಾಗಿತ್ತು.. ಆಗ ಪ್ರೇಮ ಅವರ ವ್ಯಯಕ್ತಿಕ ಜೀವನದ ಕುರಿತ ಒಂದಷ್ಟು ಸತ್ಯಗಳು ಹೊರ ಬಂದವು.. ಹೌದು ಪ್ರೇಮ ಅವರೇ ಹೇಳಿಕೊಂಡಂತೆ ನನಗೆ ಯಾವುದೇ ಕಾಯಿಲೆ ಇಲ್ಲ..

ಕೆಲ ಸುದ್ದಿಗಳು ಹರಿದಾಡಿದಂತೆ ಯಾವುದೂ ಇಲ್ಲ..‌ ವ್ಯಯಕ್ತಿಕ ಕಾರಣಗಳಿಂದ ಮದುವೆಯ ಜೀವನ ಸರಿ ಬಾರಲಿಲ್ಲ.. ಇದೀಗ ಸಿನಿಮಾ ಇಂಡಸ್ಟ್ರಿಗೆ ಮರಳುತ್ತಿದ್ದೇನೆ ಎಂದಿದ್ದರು.. ಈ ಮೂಲಕ‌ ಪ್ರೇಮ ಅವರ ಕುರಿತ ಎಲ್ಲಾ ವಿಚಾರಗಳಿಗೆ ತೆರೆ ಬಿದ್ದಿತ್ತು..ಇನ್ನು ಇತ್ತ ಇದೀಗ ಪ್ರೇಮ ಅವರೇ ತಮ್ಮ‌ ಲವರ್ ಯಾರು ಎಂಬ ವಿಚಾರವನ್ನು ತಿಳಿಸಿದ್ದಾರೆ.. ಹೌದು ಪ್ರೇಮ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರೂ ಸಹ ಹೇಳಿಕೊಳ್ಳುವ ದೊಡ್ಡ ಯಶಸ್ಸನ್ನು ಯಾವ ಚಿತ್ರವೂ ನೀಡಲಿಲ್ಲ.. ಆದರೂ ಸಹ ಪ್ರೇಮ ಅವರಿಗೆ ಸಾಲು ಸಾಲು ಅವಕಾಶಗಳು ಒದಗಿ ಬರುತ್ತಿದೆ.. ಹೌದು ಇದೀಗ ವೆಡ್ಡಿಂಗ್ ಗಿಫ್ಟ್ ಎನ್ನುವ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇದೇ ಸಿನಿಮಾದ ಕುರಿತು ಮಾತನಾಡುವಾಗ ತಮ್ಮ ನಿಜ ಜೀವನದ ಲವರ್ ಯಾರು ಎಂಬುದನ್ನೂ ಸಹ ಹೇಳಿಕೊಂಡಿದ್ದಾರೆ..

ಹೌದು “ನಾನು ಚಿತ್ರರಂಗದಿಂದ ರಿಟೈರ್ ಆಗಿಲ್ಲ.. ಬ್ರೇಕ್ ಪಡೆದಿದ್ದೆ ಅಷ್ಟೇ.. ಆನಂತರ ಒಳ್ಳೆ ಕತೆ ಸಿಕಿರಲಿಲ್ಲ.. ಆದರೆ ಈಗ ವೆಡ್ಡಿಂಗ್ ಗಿಫ್ಟ್ ಸಿನಿಮಾ ಒಪ್ಪಿಕೊಂಡಿದ್ದೀನಿ.. ಇದೊಂದು ವಿಭಿನ್ನ ಕತೆ ಇದೆ.. ನಾನು ಮಾಡೋದೇ ಆತರ.. ಪಾತ್ರಗಳು ನನಗೂ ಇಷ್ಟವಾಗಬೇಕು ಪ್ರೇಕ್ಷಕರಿಗೂ ಇಷ್ಟವಾಗಬೇಕು.. ಸಾಕಷ್ಟು ಜನ ಹಬ್ಬಿಸಿಕೊಂಡು ಬರ್ತಾ ಇದ್ದಾರೆ.. ಪ್ರೇಮ ಅವರು ಮಾಡಲ್ಲ.. ಸಿನಿಮಾ ಒಪ್ಪಿಕೊಳ್ಳಲ್ಲ ಅಂತ.. ಆದರೆ ಅದು ನಿಜ ಅಲ್ಲ.. ನನಗೆ ಆ ಪಾತ್ರದ ಬಗ್ಗೆ ತೃಪ್ತಿ ಇರಬೇಕು.. ಸಿನಿಮಾ ಮುಗಿದ ನಂತರ ನಾನು ಏನೋ ಒಂದು ಮಾಡಿ ಬಂದಿದ್ದೀನಿ ಅಂತ ಅನಿಸಬೇಕು.. ಸಿನಿಮಾ ಅನ್ನೋದು ಖುಷಿ ಇರಬೇಕು.. ಪಾತ್ರ ತೃಪ್ತಿ ತರಬೇಕು.. ಇವಳು ಏನೋ ಮಾಡುದ್ಳು ಅಂತ ಜನ ಹೇಳಬಾರದು ಅದೇ ನನ್ನ ಉದ್ದೇಶ.. ಇನ್ನು ನೀವೆಲ್ಲಾ ನನ್ನ ಲವರ್ ಯಾರು ಅಂತ ಕೇಳಬಹುದು.. ಆಗ ನಾನು ಹೇಳೋದೆ ನನ್ನ ಲವರ್ ಯಾವಗಲೂ ಕೂಡ ಕ್ಯಾಮರಾ.. ಹೌದು ಕ್ಯಾಮರಾನೇ ನನ್ನ ಲವರ್.. ಐ ಲವ್ ಕ್ಯಾಮರಾ.. ಕ್ಯಾಮರಾ ಮುಂದೆ ನಿಂತರೆ ಪ್ರೇಕ್ಷಕರು ನನ್ನನ್ನು ನೋಡ್ತಾ ಇದ್ದಾರೆ ಅಂತ ಅನಿಸ್ತಾ ಇರುತ್ತದೆ.. ಎಂದಿದ್ದಾರೆ..