ಪತ್ನಿ ಪ್ರೇರಣಾ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ಕೊಟ್ಟ ಧೃವ ಸರ್ಜಾ.. ಆದರೆ ಮೇಘನಾ ಅವರು ಹೇಳಿದ್ದೇನು ಗೊತ್ತಾ?

0 views

ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಇಂದು ಪತ್ನಿಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.‌ ಹೌದು ಇಂದು ಧೃವ ಸರ್ಜಾರ ಮಡದಿ ಪ್ರೇರಣಾ ಸರ್ಜಾ ಅವರ ಹುಟ್ಟುಹಬ್ಬವಿದ್ದು ಸ್ನೇಹಿತರು ಆಪ್ತರು ಕುಟುಂಬದವರು ಧೃವ ಸರ್ಜಾ ಅವರ ಅಭಿಮಾನಿಗಳು ಎಲ್ಲರೂ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಶುಭ ಹಾರೈಸಿದ್ದಾರೆ.. ಇನ್ನು ಧೃವ ಸರ್ಜಾ ಅವರೂ ಸಹ ಮಡದಿಯ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದು ಪತ್ನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ..

ಹೌದು ಧೃವ ಸರ್ಜಾ ಹಾಗೂ ಪ್ರೇರಣಾ ಸರ್ಜಾ ಕಳೆದ ವರ್ಷ ನವೆಂಬರ್ 24 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಬಾಲ್ಯದ ಗೆಳತಿಯಾಗಿದ್ದ ಪ್ರೇರಣಾ ಧೃವ ಸರ್ಜಾರ ಬಾಳ ಸಂಗಾತಿಯಾದರು.. ಬಹಳಷ್ಟು ವರ್ಷಗಳಿಂದಲೂ ಪ್ರೀತಿಸುತ್ತಿದ್ದ ಈ ಜೋಡಿ ಇಬ್ಬರೂ ಸಹ ಜೀವನದಲ್ಲಿ ಸೆಟಲ್ ಆದ ಬಳಿಕ ಮದುವೆಯ ನಿರ್ಧಾರ ಮಾಡಿದರು.. ಇತ್ತ ಧೃವ ಸರ್ಜಾ ತಮ್ಮ ಸಿನಿಮಾ ಕೆಲಸದಲ್ಲಿ ತೊಡಗಿಕೊಂಡರೆ ಅತ್ತ ಪ್ರೇರಣಾ ಸರ್ಜಾ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿದ್ದರು.. ಸರ್ಜಾ ಅವರದ್ದು ಕೂಡು ಕುಟುಂಬವಾದ್ದರಿಂದ ಕುಟುಂಬವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಪ್ರೇರಣಾ ಆ ಮನೆಗೆ ತಕ್ಕ ಸೊಸೆಯಾದರು.. ಮೇಘನಾಗೆ ಒಳ್ಳೆಯ ತಂಗಿಯಾದರು.. ಇನ್ನು ಚಿರು ಸರ್ಜಾ ಅವರು ಈ ಮುನ್ನ ಪ್ರೇರಣಾ ಅವರ ಬಗ್ಗೆ ಮಾತನಾಡಿ ನಮ್ಮ ಮನೆಗೆ ಪ್ರೇರಣಾ ಒಂದು ರೀತಿ ಪ್ರೊಫೆಸರ್ ಇದ್ದ ಹಾಗೆ.. ನಮ್ಮೆಲ್ಲರ ತಪ್ಪನ್ನು ತಿದ್ದಿ ಹೀಗಲ್ಲಾ ಹಾಗೆ ನಡೆದುಕೊಳ್ಳಬೇಕು ಎಂದು ತಿಳಿಸಿ ಹೇಳುತ್ತಾಳೆ.. ಅವಳಿಗೆ ನಮ್ಮ ಫ್ಯಾಮಿಲಿಗೆ ವೆಲ್ಕಮ್ ಎಂದಿದ್ದರು..

ಇನ್ನು ಕೆಲ ದಿನಗಳ ಹಿಂದಷ್ಟೇ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ಧೃವ ಹಾಗೂ ಪ್ರೇರಣಾ ಇದೀಗ ಪ್ರೇರಣಾರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ಸರ್ಪ್ರೈಸ್ ನೀಡಿದ್ದಾರೆ.‌. ಹೌದು ಕಳೆದ ವರ್ಷ ಮದುವೆಯಾಗಿ ಕೆಲವೇ ದಿನಗಳಾದ್ದರಿಂದ ಪತ್ನಿ ಪ್ರೇರಣಾ ಸರ್ಜಾ ಮ್ರ ಹುಟ್ಟುಹಬ್ಬಕ್ಕಾಗಿ ಕನಕಪುರ ರಸ್ತೆಯಲ್ಲಿ ಫಾರ್ಮ್ ಹೌಸ್ ಒಂದನ್ನು ಕೊಂಡುಕೊಂಡು ಅದನ್ನೇ ಉಡುಗೊರೆಯಾಗಿ ನೀಡಿದ್ದರು.. ಅದೇ ತೋಟದಲ್ಲಿ ಸತ್ಯ ನಾರಾಯಣ ಪೂಜೆ ಮಾಡಿಸಿ ಕುಟುಂಬದೊಂದಿಗೆ ಆಚರಿಸಿದ್ದರು.. ಆದರೆ ಈ ಬಾರಿ ಪರಿಸ್ಥಿತಿ ಬೇರೆಯೇ ಇದೆ.. ಕುಟುಂಬದೊಂದಿಗೆ ಆಚರಣೆಗೆ ಸಂದರ್ಭ ಸರಿಯಿಲ್ಲದ ಕಾರಣ ಪ್ರೇರಣಾ ಅವರನ್ನು ವಿಶೇಷ ಜಾಗವೊಂದಕ್ಕೆ ಕರೆದೊಯ್ದು ಆಚರಣೆ ಮಾಡಿದ್ದಾರೆ..

ಹೌದು ಬೀಚ್ ಒಂದಕ್ಕೆ ಪ್ರೇರಣಾರನ್ನು ಕರೆದೊಯ್ದಿರುವ ಧೃವ ಸರ್ಜಾ ಅಲ್ಲಿಯೇ ಸಂಪೂರ್ಣ ಸ್ಥಳಕ್ಕೆ ದೀಪಾಲಂಕಾರ ಮಾಡಿ ಪಟಾಕಿ ಸಿಡಿಸಿ ಮಡದಿಯ ಜೊತೆ ಸಮಯ ಕಳೆಯುವ ಮೂಲಕ ಹುಟ್ಟುಹಬ್ಬ ಆಚರಿಸಿ.. ನನ್ನ ಸ್ನೇಹಿತೆ… ನನ್ನ ಹೆಂಡತಿ.. ನನ್ನ ಪ್ರೀತಿ ಎಲ್ಲವೂ ನೀನೆ.. ಈಗ ಹಾಗೂ ಸದಾ ನಿನ್ನೊಂದಿಗೆ ಇರುವೆ.. ಹುಟ್ಟುಹಬ್ಬದ ಶುಭಾಶಯಗಳು ಮೈ ಲವ್.. ಎಂದು ಶುಭಾಶಯ ತಿಳಿಸಿದ್ದಾರೆ ಧೃವ ಸರ್ಜಾ..

ಆದರೆ ಮೇಘನಾ ಸರ್ಜಾ ಅವರು ತಂಗಿ ಪ್ರೇರಣಾ ರಿಗೆ ಭಾವನಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ಮೇಘನಾ ರಾಜ್ ಅವರು ಹುಟ್ಟುಹಬ್ಬದ ಶುಭಾಶಯಗಳು ಸಿಲ್.. ನೀನೊಂದು ಸುಂದರ ಆತ್ಮ.. ಎಂದು ಬರೆದು ಪ್ರೇರಣಾ ಒಟ್ಟಿಗಿನ ಫೋಟೋ ಹಂಚಿಕೊಂಡಿದ್ದಾರೆ.. ಇನ್ನು ಫೋಟೋಗೆ ಕಮೆಂಟ್ ಮೂಲಕ ಅಭಿಮಾನಿಗಳು ಸಹ ಪ್ರೇರಣಾರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.. ಪ್ರೇರಣಾ ಸರ್ಜಾ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿ ಧನ್ಯವಾದಗಳನ್ನು ತಿಳಿಸಿ ಹೃದಯದ ಎಮೋಜಿ ಹಾಕಿಂಡು ಥ್ಯಾಂಕ್ ಯು ಸಿಲ್ ಮಾ.. ಎಂದಿದ್ದಾರೆ..