ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕಿರುತೆರೆಯ ಮತ್ತೊಬ್ಬ ಖ್ಯಾತ ನಟಿ..

0 views

ಕಳೆದ ವರ್ಷ ಕೊರೊನಾ ವಿಚಾರಕ್ಕೆ ಸಂಬಂಧಪಟ್ಟ ಸುದ್ದಿ ಹೆಚ್ಚು ಸದ್ದು ಮಾಡಿದಂತೆ ಕನ್ನಡ ಕಿರುತೆರೆಯ ಕಲಾವಿದರ ಮದುವೆ ವಿಚಾರವೂ ಸುದ್ದಿಯಾಗಿತ್ತು.. ಸಾಲು ಸಾಲು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಇದೀಗ ಕನ್ನಡ ಕಿರುತೆರೆಯ ಮತ್ತೊಬ್ಬ ಖ್ಯಾತ ನಟಿ ಹಸೆಮಣೆ ಏರಲು ಸಜ್ಜಾಗಿದ್ದು ಪ್ರೇಮಿಗಳ ದಿನದಂದೇ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಲಿದೆ..

ಹೌದು ಕಳೆದ ವರ್ಷ ಚಂದನ್ ನಿವೇದಿತಾ.. ನಿಖಿಲ್ ರೇವತಿ.. ಮಯೂರಿ ಅರುಣ್.. ಶಿಲ್ಪಾ ದರ್ಶಕ್.. ನಟ ಅಜಯ್ ರಾವ್.. ಹೀಗೆ ಇನ್ನೂ ಅನೇಕ ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು 2020 ರಲ್ಲಿ ನೂತನ ಜೀವನ ಆರಂಭಿಸಿ ಅದಾಗಲೇ ಕೆಲವರು ಮಗುವಿನ ಸಿಹಿ ಸುದ್ದಿಯನ್ನೂ ಸಹ ನೀಡಿದ್ದಾರೆ.. ಇನ್ನು ಇದೀಗ ಕನ್ನಡದ ಖ್ಯಾತ ಧಾರಾವಾಹಿ ನಟಿ ಅಮೇರಿಕಾದ ಬ್ಯಾಂಕ್ ವೊಂದರ ಅಧ್ಯಕ್ಷನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಸಂತೋಷದ ಸುದ್ದಿ ಹಂಚಿಕೊಂಡಿದ್ದಾರೆ..

ಹೌದು ಹರಹರ ಮಹಾದೇವ ಧಾರಾವಾಹಿಯ ನಾಯಕ ನಟಿ.. ಸದ್ಯ ಮನಸಾರೆ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ನಟಿ ಪ್ರಿಯಾಂಕಾ ಚಿಂಚೋಳಿ ಹೊಸ ಬಾಳಿಗೆ ಕಾಲಿಡುತ್ತಿದ್ದು ತಾವು ಮದುವೆಯಾಗುವ ಹುಡುಗನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ..

ಮೂಲತಃ ಉತ್ತರ ಕರ್ನಾಟಕದವರಾದ ಪ್ರಿಯಾಂಕ.. ಉತ್ತರ ಭಾರತ ಮೂಲದ ಹುಡುಗನ ಜೊತೆ ಹಸೆಮಣೆ ಏರುತ್ತಿದ್ದಾರೆ.. ಇದೇ ಫೆಬ್ರವರಿ 14 ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಲಿದೆ.. ತಮ್ಮ ಹುಡುಗನ ಬಗ್ಗೆ ಮಾತನಾಡಿರುವ ಪ್ರಿಯಾಂಕ ಅವರು “ನಾನು ಮದುವೆಯಾಗುತ್ತಿರುವ ಹುಡುಗ ತುಂಬಾನೆ ಒಳ್ಳೆಯವರು.. ನನ್ನನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.. ಅವರು ಈ ಮುನ್ನ ಲಂಡನ್‌ನಲ್ಲಿ ಇದ್ದರು.. ಆ ಸಮಯದಲ್ಲಿ ಅವರು ನನ್ನ ಧಾರಾವಾಹಿಯನ್ನು ನೋಡುತ್ತಿದ್ದರು.. ನಾನು ಮನಸಾರೆ ಧಾರಾವಾಹಿಯಲ್ಲಿ ಬಹಳ ಅಳ್ತೀನಿ ಅನ್ನೋ ಕಾರಣಕ್ಕೆ ಇತ್ತೀಚೆಗೆ ಅವರು ನನ್ನ ಧಾರಾವಾಹಿ ನೋಡೋದಿಲ್ಲ.. ಇದೇ ಫೆಬ್ರವರಿ 14ನೇ ತಾರೀಕು ಪ್ರೇಮಿಗಳ ದಿನದಂದು ನಿಶ್ಚಿತಾರ್ಥ ನಡೆಯಲಿದೆ.. ಆ ದಿನ ವಿಶೇಷವಾಗಿರುವುದರಿಂದ ನಿಶ್ಚಿತಾರ್ಥಕ್ಕೆ ಸ್ಥಳ ಸಿಗೋದು ಕಷ್ಟ ಆಗಿದೆ.. ಸ್ಥಳದ ಹುಡುಕಾಟ ನಡೆಯುತ್ತಿದೆ ಎಂದಿದ್ದಾರೆ.. ಅಷ್ಟೇ ಅಲ್ಲದೇ

ಮನಸಾರೆ ಧಾರಾವಾಹಿಯಲ್ಲಿ ನನ್ನ ತಾಯಿ‌ ಪಾತ್ರ ಮಾಡುತ್ತಿರುವ ಸ್ವಾತಿ ಅವರು ನಿಜ ಜೀವನದಲ್ಲಿಯೂ ನನಗೆ ಬಹಳ ಹತ್ತಿರವಾಗಿದ್ದು ಖುದ್ದು ಅವರೇ ನಿಶ್ಚಿತಾರ್ಥದ ಸ್ಥಳ ಹುಡುಕಾಟ ಮಾಡುತ್ತಿದ್ದಾರೆ.. ಧಾರಾವಾಹಿ‌ ಮಾತ್ರವಲ್ಲ ನಿಜ ಜೀವನದಲ್ಲಿಯೂ ತಾಯಿಯಾಗಿದ್ದಾರೆ.. ಇನ್ನು ನಿಶ್ಚಿತಾರ್ಥದ ವಿಚಾರಕ್ಕೆ ಬಂದರೆ ಬಹಳ ವಿಶೇಷವಾಗಿ ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಎಂಬ ಕನಸಿದೆ..

ಫೆಬ್ರವರಿ 14 ರಂದು ಬೆಳಿಗ್ಗೆ ನಿಶ್ಚಿತಾರ್ಥ.. ರಾತ್ರಿ‌ ಒಂದು ಪಾರ್ಟಿ ನಡೆಯಲಿದೆ.. ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿ ನಿಶ್ಚಿತಾರ್ಥ ನಡೆಯಬೇಕು ಅನ್ನೋ ಆಸೆ ಇದೆ.. ಸಮಾರಂಭಕ್ಕೆ ಬರುವ ಎಲ್ಲಾ ಸ್ನೇಹಿತೆಯರು ಕೆಂಪು ಬಣ್ಣದ ಬಟ್ಟೆ ಹಾಕಬೇಕು.. ನಾನು ಕೂಡ ರೆಡ್ ಗೌನ್ ಹಾಕಲಿರುವೆ.. ಹುಡುಗರೆಲ್ಲಾ ಬಿಳಿ ಬಣ್ಣದ ಬಟ್ಟೆ ತೊಡಬೇಕು ಎಂಬ ಯೋಜನೆ ಇದೆ.. ಇದಕ್ಕೆಲ್ಲಾ ತಯಾರಿ ನಡೆಯುತ್ತಿದೆ ಎಂದಿದ್ದಾರೆ..

ಇನ್ನು ಹುಡುಗನ ಬಗ್ಗೆ ಮಾತನಾಡಿ ಹುಡುಗ ಅಮೇರಿಕಾದ ಬ್ಯಾಂಕ್ ಒಂದರ ಉಪಾಧ್ಯಕ್ಷರಾಗಿದ್ದಾರೆ.. ಸದ್ಯ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.. ನಾವು ಎರಡು ಮೂರು ವರ್ಷ ಇಲ್ಲಿಯೇ ಇರಲಿದ್ದೇವೆ.. ನನ್ನ ಕಲಾವೃತ್ತಿಗೆ ಅವರು ಬಹಳ ಪ್ರೋತ್ಸಾಹ ನೀಡುತ್ತಾರೆ.. ನನ್ನ ಕೆಲಸದ ಮೇಲೆ ಅವರಿಗೂ ಗೌರವ ಇದೆ.. ಮದುವೆಯ ನಂತರವೂ ನಾನು ನಟನೆಯನ್ನು ಮುಂದುವರೆಸುತ್ತೇನೆ.. ಇದೇ ವರ್ಷ ಮದುವೆಯೂ ಸಹ ನೆರವೇರಲಿದೆ.. ಎರಡು ಮೂರು ವರ್ಷದ ನಂತರ ಎಲ್ಲಿ ಸೆಟಲ್ ಆಗಬೇಕು ಎಂಬುದರ ಬಗ್ಗೆ ಆಲೋಚನೆ ಮಾಡುವೆವು ಎಂದಿದ್ದಾರೆ.. ಒಟ್ಟಿನಲ್ಲಿ ಹರಹರ ಮಹಾದೇವ ಧಾರಾವಾಹಿ ಮೂಲಕ ಜನರ ಮನಗೆದ್ದಿದ್ದ ಪ್ರಿಯಾಂಕ ಚಿಂಚೋಳಿ ಅವರು ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಅಭಿಮಾನಿಗಳು ಶುಭ ಹಾರೈಸಿದ್ದಾರೆ..