ನೇರವಾಗಿಯೇ ಬೈದು ಕಚ್ಚಾಡಿಕೊಂಡ ಬಿಗ್ ಬಾಸ್ ನ ಇಬ್ಬರು ಮಹಿಳಾ ಸ್ಪರ್ಧಿಗಳು.. ನಿಜಕ್ಕೂ ನಡೆದದ್ದಾದರು ಏನು ಗೊತ್ತಾ?

0 views

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಜಡೆ ಜಗಳಗಳು ಕಡಿಮೆ ಎಂದುಕೊಳ್ಳುವಷ್ಟರಲ್ಲಿಯೇ ಇದೀಗ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಹೆಣ್ ಮಕ್ಕಳ ನಡುವೆ ಗಲಾಟೆ ಶುರುವಾಗಿದ್ದು ನೇರವಾಗಿಯೇ ಸ್ಟುಪಿಡ್ ಎಂದು ಬೈಯುವ ಹಂತಕ್ಕೆ ಬಂದು ನಿಂತಿದೆ.. ಹೌದು ಬಿಗ್ ಬಾಸ್ ಮನೆಯಲ್ಲಿ ಮನಸ್ತಾಪಗಳು ಜಗಳಗಳು ಸರ್ವೇ ಸಾಮಾನ್ಯ.ಮ್ ಆದರೆ ಇಷ್ಟು ದಿನ ಟಾಸ್ಕ್ ಸಮಯದಲ್ಲಿ ಎದುರು ಬದುರಿನ ಟೀಮ್ ನಡುವೆ ಜಗಳಗಳು ಆಗುತ್ತಿದ್ದವು.. ಅದರಲ್ಲೂ ಬಹುತೇಕ ಪುರುಷ ಸದಸ್ಯರ ಜೊತೆಯೇ ಅದರಲ್ಲೂ ಪ್ರಶಾಂತ್ ಸಂಬರ್ಗಿ ಶಮಂತ್ ಮಂಜು ಪಾವಗಡ ಅರವಿಂದ್ ಹೀಗೆ ಇಂತವರ ನಡುವೆ ನಡೆಯುತಿತ್ತು.. ಆದರೀಗ ಒಂದೆಜ್ಜೆ ಮುಂದೆ ಸಾಗಿ ಎರಡು ಜಡೆಗಳ ನಡುವೆ ಜಗಳ ಶುರುವಾಗಿದೆ‌..

ಹೌದು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದ ಪ್ರಿಯಾಂಕ ಹಾಗೂ ನಿಧಿ ಸುಬ್ಬಯ್ಯ ಅವರ ನಡುವೆ ಕಿರಿಕ್ ಆಗಿದ್ದು ಮಾತಿಗೆ ಮಾತು ಬೆಳೆದು ಒಬ್ಬರಿಗೊಬ್ಬರು ಬೈದುಕೊಂಡಿದ್ದಾರೆ.. ಕೊನೆಗೆ ವಿವಾದ ಚಕ್ರವರ್ತಿ ಚಂದ್ರಚೂಡ ಅವರ ಅಂಗಳಕ್ಕೆ ಹೋಗಿದ್ದು ಅಲ್ಲಿ ಪ್ರಿಯಾಂಕ ತಿಮ್ಮೇಶ್ ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ..

ಹೌದು ಹಾಸ್ಟೆಲ್ ಟಾಸ್ಕ್ ವೇಳೆಯೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗಿದ್ದು ಪ್ರೇಮ ಪತ್ರ ನೀಡುವ ವಿಚಾರಕ್ಕೆ ನಿಧಿ ಸುಬ್ಬಯ್ಯ ಪ್ರಿಯಾಂಕ ತಿಮ್ಮೇಶ್ ಅವರನ್ನು ಸ್ಟುಪಿಡ್ ಎಂದು ಬೈದಿದ್ದರು.‌ ಇನ್ನು ಅಷ್ಟಕ್ಕೇ ನಿಲ್ಲದ ಇಬ್ಬರ ಜಗಳ ಮತ್ತೊಂದು ಟಾಸ್ಕ್ ವೇಳೆ ದೊಡ್ಡದಾಗಿದೆ.. ಹೌದು ಮತ್ತೊಂದು ಟಾಸ್ಕ್ ನಡೆಯುವ ಸಮಯದಲ್ಲಿ ನಾನು ಸಹ ಟಾಸ್ಕ್ ಮಾಡ್ತೀನಿ ಎಂದ ಪ್ರಿಯಾಂಕ ತಿಮ್ಮೇಶ್ ಅವರಿಗೆ ಅವಕಾಶ ನೀಡದ ನಿಧಿ ಬೇರೆಯವರನ್ನು ಆಯ್ಕೆ ಮಾಡಿದ್ದಾರೆ.. ಹಾಗಾದರೆ ನಾವು ಸ್ಟ್ರಾಂಗ್ ಇಲ್ವಾ ಎಂದು ನೇರವಾಗಿ ಕೇಳಿರುವ ಪ್ರಿಯಾಂಕ ತಿಮ್ಮೇಶ್ ಅವರು ಆಟ ಆಡೋಕೆ ಮುಂದೆ ಬಂದಿಲ್ಲ ಅಂದರೆ ಆಸಕ್ತಿ‌ ಇಲ್ಲ ಅಂತೀರಾ.. ಮುಂದೆ ಬಂದ್ರೆ ನೀವ್ ನೀವುಗಳೇ ಆಟ ಆಡ್ತೀರಾ.. ಹಾಗಾದ್ರೆ ನಾವೆಲ್ಲಾ ಯಾಕೆ ಎಂದಿದ್ದಾರೆ..

ಇನ್ನು ಇತ್ತ ಈ ಬಗ್ಗೆ ಚಂದ್ರಚೂಡ ಅವರ ಬಳಿಯೂ ಮಾತನಾಡಿರುವ ಪ್ರಿಯಾಂಕ ಅವರು ನಡೆದಿದ್ದನ್ನು ವಿವರಿಸಿದ್ದಾರೆ.. ನಾವೆಲ್ಲಾ ಆಟ ಆಡೋಕೆ ಬಂದಿಲ್ವಾ.. ಯಾವುದಾದರು ಟಾಸ್ಕ್ ಅಂತ ಬಂದ ಕೂಡಲೇ ದಿವ್ಯಾ ಹಾಗೂ ಇತರರು ನಾನು ನಾನು ಅಂತಾರೆ.. ಅವರೇ ಸ್ಟ್ರಾಂಗ್ ಅನ್ನೋ ರೀತಿ ಆಡ್ತಾರೆ.. ಹಾಗಾದರೆ ನಾನು ಸ್ಟ್ರಾಂಗ್ ಇಲ್ವಾ? ನಾವು ಆಟ ಆಡೋಕೆ ಹೋಗಿಲ್ಲ ಅಂದ್ರೆ ಅವರಿಗೆ ಆಸಕ್ತಿ ಇಲ್ಲ ಅಂತ ಕಳಪೆ ಕೊಡ್ತಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ..

ಇನ್ನು ಇತ್ತ ನಿಧಿ ಕೂಡ ಈ ಬಗ್ಗೆ ಚರ್ಚೆ ಮಾಡಿದ್ದು ಈ ವೈಲ್ಡ್ ಕಾರ್ಡ್ ಮೂಲಕ ಬರೋದೆ ಇವರುಗಳು ನಮ್ಮ ಜೊತೆ ಜಗಳ ಆಡೋಕೆ.. ಅಷ್ಟೇ ಅವರ ಉದ್ದೇಶ.. ವೈಲ್ಡ್ ಕಾರ್ಡ್ ಗೆ ಅದರದ್ದೇ ಆದ ಒಂದು ಉದ್ದೇಶ ಇರತ್ತೆ ಎಂದು ದಿವ್ಯಾ ಜೊತೆ ಮಾತನಾಡಿದ್ದಾರೆ.. ಇನ್ನು ಇಬ್ಬರ ಜಡೆ ಜಗಳ ಇಷ್ಟಕ್ಕೆ ನಿಲ್ಲಿವಂತೆ ಕಾಣುತ್ತಿಲ್ಲ ಟಾಸ್ಕ್ ವೇಳೆ ಒಟ್ಟಾಗಿಯೇ ಮಾಡಬೇಕಿರುವುದರಿಂದ ಮತ್ತೆ ಇನ್ನೇನಾದರು ಕಿರಿಕ್ ಶುರುವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.. ಇನ್ನು ಇಬ್ಬರ ಮನಸ್ತಾಪದ ವಿಚಾರ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಅವರ ಜೊತೆ ಚರ್ಚೆ ಆಗೋದಂತೂ ಸತ್ಯ..