ಬಿಗ್ ಬಾಸ್ ನಿಂದ ಹೊರ ಬಂದ ಪ್ರಿಯಾಂಕ ತಿಮ್ಮೇಶ್ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ..

0 views

ಬಿಗ್ ಬಾಸ್ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್ ಅದಾಗಲೇ ಶುರುವಾಗಿ ಮೂರು ವಾರಗಳು ಕಳೆದಿದ್ದು ಎರಡನೇ ಇನ್ನಿಂಗ್ಸ್ ನಲ್ಲಿ ಅದಾಗಲೇ ಮೂವರು ಸದಸ್ಯರು ಮನೆಯಿಂದ ಹೊರ ನಡೆದಿದ್ದಾರೆ. ಹೌದು ಈ ಸೀಸನ್ ನಲ್ಲಿ ಸ್ಪರ್ಧಿಗಳ ಆಯ್ಕೆ ಜನರಿಗೆ ಇಷ್ಟವಾಗಿದ್ದರೂ ಸಹ ಶುರುವಿನಲ್ಲಿ ನಿರೀಕ್ಷಿಸಿದಷ್ಟು ಅಷ್ಟಾಗಿ ಮನರಂಜನೆ ಸಿಗದ ಕಾರಣ ಬಿಗ್ ಬಾಸ್ ಶುರುವಿನಲ್ಲಿಯೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮೂವರು ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಯಿತು.. ಚಕ್ರವರ್ತಿ ಚಂದ್ರಚೂಡ, ವೈಯಜಯಂತಿ, ಪ್ರಿಯಾಂಕ ತಿಮ್ಮೇಶ್ ಆದರೆ ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ವಾರವೇ ಅದ್ಯಾಕೋ ವೈಜಯಂತಿ ಅವರು ಬಿಗ್ ಬಾಸ್ ಸಹವಾಸ ಸಾಕು ದಯವಿಟ್ಟು ನನ್ನನ್ನು ಮನೆಗೆ ಕಳುಹಿಸಿ ಎಂದು ಅಂಗಲಾಚಿಕೊಂಡು ಮೂರೇ ದಿನಕ್ಕೆ ಬಿಗ್ ಬಾಸ್ ನಿಂದ ಹೊರ ಬಂದರು..

ಆ ವಾರ ಎಲಿಮಿನೇಟ್ ಆಗಿದ್ದ ಶಮಂತ್ ಗೆ ವೈಜಯಂತಿ ಮೂಲಕ ಅದೃಷ್ಟ ಕೈಹಿಡಿದು ಮನೆಯಲ್ಲಿಯೇ ಉಳಿಯುವಂತಾಯಿತು.. ಇನ್ನೂ ಮೂರೇ ದಿನಕ್ಕೆ ಅವರೇ ಕೇಳಿಕೊಂಡು ಹೊರ ಬಂದ ವೈಜಯಂತಿ ಅವರಿಗೆ ಅಗ್ರಿಮೆಂಟ್ ಪ್ರಕಾರ ಯಾವುದೇ ಸಂಭಾವನೆ ಕೊಡಲು ಬರುವುದಿಲ್ಲ.. ಇನ್ನು ಉಳಿದಂತೆ ಚಕ್ರವರ್ತಿ ಚಂದ್ರಚೂಡ ಹಾಗೂ ಪ್ರಿಯಾಂಕ ಅವರಿಗೆ ಉಳೊದ ಸ್ಪರ್ಧಿಗಳಂತೆ ಇದ್ದಷ್ಟು ವಾರಗಳಿಗೆ ಸಂಭಾವನೆ ನೀಡಲಾಗುತ್ತಿದೆ. ಇನ್ನು ನಿನ್ನೆ ಎಲಿಮಿನೇಟ್ ಆದ ಪ್ರಿಯಾಂಕ ತಿಮ್ಮೇಶ್ ಅವರಿಗೂ ಸಹ ಒಳ್ಳೆಯ ಸಂಭಾವನೆಯೇ ದೊರೆತಿದೆ. ಹೌದು

ಬಿಗ್ ಬಾಸ್ ಸೀಸನ್ ಎಂಟರ ಮೊದಲನೇ ಇನ್ನಿಂಗ್ಸ್ ನಲ್ಲಿ ಎಂಟು ಜನ ಸದಸ್ಯರು ಎಲಿಮಿನೇಟ್ ಆಗಿ ಮನೆಯಿಂದ ಹೊರ ನಡೆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಮೂವರು ಬಿಗ್ ಬಾಸ್ ಜರ್ನಿ ಮುಗಿಸಿದ್ದಾರೆ.. ಎರಡನೇ ಇನ್ನಿಂಗ್ಸ್ ನಲ್ಲಿ‌ ಮೊದಲು ನಿಧಿ‌ಸುಬ್ಬಯ್ಯ ಎರಡನೆಯದಾಗಿ ರಘು ಗೌಡ ಮನೆಯಿಂದ ಎಲಿಮಿನೇಟ್ ಆದರೆ ಇದೀಗ ಮೂರನೇ ಸ್ಪರ್ಧಿಯಾಗಿ ಪ್ರಿಯಾಂಕ ತಿಮ್ಮೇಶ್ ಹೊರ ನಡೆದಿದ್ದಾರೆ. ಇನ್ನು ಇವರ ಸಂಭಾವನೆ ವಿಚಾರಕ್ಕೆ ಬರುವುದಾದರೆ ಪ್ರಿಯಾಂಕ‌ ತಿಮ್ಮೇಶ್ ಸ್ಯಾಂಡಲ್ವುಡ್ ನಲ್ಲಿ ನಾಯಕನಟಿಯಾಗಿ ಗುರುತಿಸಿಕೊಂಡಿದ್ದು ಅದಾಗಲೇ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.. ಭೀಮಸೇನ ನಳಮಹಾರಾಜ ಸಿನಿಮಾ ಪ್ರಿಯಾಂಕ ಅವರಿಗೆ ಹೆಸರು ತಂದುಕೊಟ್ಟಿದ್ದು ಇನ್ನು ಕೆಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಈ ನಡುವೆ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದ ಪ್ರಿಯಾಂಕ ಅವರಿಗೆ ಉಳಿದ ಸ್ಪರ್ಧಿಗಳಂತೆ ವಾರದ ಸಂಭಾವನೆ ನಿಗಧಿಯಾಗಿತ್ತು.

ಹೌದು ಪ್ರಿಯಾಂಕ ಅವರಿಗೆ ವಾರಕ್ಕೆ ಇಪ್ಪತ್ತೈದು ಸಾವಿರ ರೂಪಾಯಿ ಸಂಭಾವನೆ ನಿಗಧಿಯಾಗಿದ್ದು ಇದೀಗ ಒಟ್ಟು ತೊಂಭತ್ತೈದು ದಿನ ಬಿಗ್ ಬಾಸ್ ಪ್ರಸಾರವಾಗಿದ್ದರೂ ಸಹ ಪ್ರಿಯಾಂಕ ವೈಲ್ಡ್ ಕಾರ್ಡ್ ಮೂಲಕ ಬಂದ ಕಾರಣ ಅವರು ಒಟ್ಟು ಐವತ್ತೈದು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು ಒಟ್ಟು ಎಂಟು ವಾರಗಳ ಬಿಗ್ ಬಾಸ್ ಜರ್ನಿ ಮುಗಿಸಿದ್ದಾರೆ.. ಹೌದು ಪ್ರಿಯಾಂಕ ಅವರು ಒಟ್ಟು ಎಂಟು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ‌ ಉಳಿಯಲು ಯಶಸ್ವಿಯಾಗಿದ್ದು ಅವರಿಗೆ ಒಟ್ಟು ಎರಡು ಲಕ್ಷ ರೂಪಾಯಿ ಸಂಭಾವನೆಯಾಗಿ ಕೈ ಸೇರಿದೆ.

ಇನ್ನುಳಿದಂತೆ ಮನೆಯಲ್ಲಿ ಒಟ್ಟು ಒಂಭತ್ತು ಸದಸ್ಯರಿದ್ದು ಬಿಗ್ ಬಾಸ್ ಜರ್ನಿ ಮುಂದುವರೆಸಿದ್ದಾರೆ. ಈ ಮೊದಲೆಲ್ಲಾ ತೊಂಭತ್ತೆಂಟು ದಿನಗಳ ಕಾಲ ಮಾತ್ರ ಬಿಗ್ ಬಾಸ್ ಪ್ರಸಾರವಾಗುತಿತ್ತು. ಆದರೆ ಈ ಬಾರಿ ಎರಡು ಇನ್ನಿಂಗ್ಸ್ ಮಾಡಿರುವ ಕಾರಣ ಇನ್ನೂ ಐದು ವಾರಗಳು ಅಂದರೆ ಒಟ್ಟು ನೂರ ಮೂವತ್ತು ದಿನಗಳ ಕಾಲ ಬಿಗ್ ಬಾಸ್ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮೊದಲ ಸೀಸನ್ ನಲ್ಲಿ ಮಂಜು ಪಾವಗಡ ಅರವಿಂದ್ ಗೆಲ್ಲುವ ಕುದುರೆಗಳು ಎನ್ನಲಾಗುತ್ತಿದ್ದರೂ ಸಹ ಇದೀಗ ಎರಡನೇ ಇನ್ನಿಂಗ್ಸ್ ನಲ್ಲಿ ಮತ್ತಷ್ಟು ಸ್ಪರ್ಧಿಗಳು ಗೆಲುವಿನ ಹಾದಿಯಲ್ಲಿಯೇ ಇದ್ದು ಬಿಗ್ ಬಾಸ್ ಸೀಸನ್ ಎಂಟರ ಟ್ರೋಫಿ ಯಾರ ಕೈ ಸೇರುವುದೋ ಕಾದು ನೋಡಬೇಕಿದೆಯಷ್ಟೇ..