ಪುನೀತ್ ಬಗ್ಗೆ ಅಂದು ಮಾತನಾಡಿದವನು ಏನಾದ ನೋಡಿ..

0 views

ನಾಡಿಗೆ ನಾಡೇ ಮನೆ ಮಗನನ್ನು ಕಳೆದುಕೊಂಡ ನೋವಿನಲ್ಲಿದೆ.. ಐದು ದಿನಗಳಾದರೂ ಸಹ ಪುನೀತ್ ಅಗಲಿದ್ದಾರೆ ಅವರು ಇನ್ನು ಮುಂದೆ ಬರುವುದಿಲ್ಲ.. ಯಾವುದೇ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತು ಮಾತನಾಡುವುದಿಲ್ಲ.. ಮುಗ್ಧವಾಗಿ ನಗುವುದಿಲ್ಲ ಎನ್ನುವುದನ್ನು ನೆನಪಿಸಿಕೊಳ್ಳುವುದಕ್ಕೂ ಸಹ ಸಾಧ್ಯವಾಗದು.. ಅಂತಹುದರಲ್ಲಿ ಪುನೀತ್ ಅವರ ಅಗಲಿದ ದಿನ ಯುವಕನೊಬ್ಬ ತನ್ನ ಸನ್ಣತನ ತೋರಿ ನಮ್ಮ ಅಪ್ಪುವಿನ ಬಗ್ಗೆ ಮಾತನಾಡಿದ್ದನು.. ಆದರೆ ಈಗ ಆತನಿಗೆ ಸರಿಯಾದ ಸ್ಥಿತಿಯನ್ನು ನಮ್ಮ ಬೆಂಗಳೂರು ಪೊಲೀಸರು ಕಾಣಿಸಿದ್ದಾರೆ..

ಹೌದು ಅಂದು ಐದು ದಿನಗಳ ಹಿಂದೆ ಅಕ್ಟೋಬರ್ ಇಪ್ಪತ್ತೋಂಭತ್ತರಂದು ಇದ್ದಕಿದ್ದ ಹಾಗೆ ಬಾರದ ಲೋಕಕ್ಕೆ ಹೋದ ಪುನೀತ್ ರಾಜ್ ಕುಮಾರ್ ಸಂಪೂರ್ಣ ಕರ್ನಾಟಕಕ್ಕೆ ನೋವನ್ನು ಕೊಟ್ಟು ಹೊರಟು ಹೋದರು.. ಆ ದಿನವೇ ಜನಸಾಗರ ಬೆಂಗಳೂರಿನ ಕಡೆ ಹರಿದುಬಂದಿತ್ತು.. ಕೊನೆ ಕ್ಷಣದ ವರೆಗೂ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಜನರು ಪುನೀತ್ ಅವರ ಅಂತಿಮ ದರ್ಶನ ಪಡೆದಿದ್ದರು.. ಅಭಿಮಾನಿಗಳು ನೋವ ತಡೆಯಲು ಮ ದ್ಯದಮೊರೆ ಹೋಗಿ ಬೇರೆ ರೀತಿಯ ಘಟನೆ ನಡೆಯಬಾರದೆಂಬ ಕಾರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ಕೂಡಲೇ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಮಾರಾಟ ಮಾಡದಂತೆ ಆದೇಶ ಹೊರಡಿಸಿದ್ದರು..

ಆದರೂ ಸಹ ಕೆಲವರು ಉತ್ತರ ಭಾರತದಿಂದ ಬಂದು ನಮ್ಮ ನೆಲದಲ್ಲಿ ಅನ್ನಕ್ಕಾಗಿ ದುಡಿಯುತ್ತಿದ್ದರೂ ಸಹ ಕೊಂಚವೂ ಕೃತಜ್ಞತೆ ಇಲ್ಲದ ಕೆಲವರು ಆ ದಿನವೂ ಸಹ ಅದನ್ನು ಖರಿಇದಿಸುವಲ್ಲಿ ಯಶಸ್ವಿಯಾಗಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಪುನೀತ್ ಬಗ್ಗೆ ಬೇರೆ ರೀತಿಯಾಗಿ ಪೋಸ್ಟ್ ಮಾಡಿದ್ದರು.. “ಯಾವ ರಾಜಕುಮಾರ್ ಕೂಡ ನಮ್ಮನ್ನು ತಡೆಯಲು ಸಾಧ್ಯವಿಲ್ಲ.. ಅವನನ್ನು ನೆನಪಿಟ್ಟುಕೊಳ್ಳಿ ಮರೆಯಬೇಡಿ ಏಕೆಂದರೆ ನಾವು ಇದನ್ನು ಕುಡಿದ ನಂತರ ಅವನ ಮೇಲೆ ಮೂ ಮಾಡುತ್ತೇವೆ ಎಂದು ಬರೆದು ಪೋಸ್ಟ್ ಮಾಡಿದ್ದರು..

ಆತನ ಈ ಮಾತಿಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು.. ಅಷ್ಟೇ ಅಲ್ಲದೇ ಸುದೀಪ್ ಮಗಳು ಸಾನ್ವಿ ಸುದೀಪ್ ಆತನಿಗೆ ಗ್ರಹಚಾರ ಬಿಡಿಸಿದ್ದು ಬೆಂಗಳೂರು ಪೊಲೀಸರಲ್ಲಿ ಆತನಿಗೆ ಸರಿಯಾದ ಪಾಠ ಕಲಿಸುವಂತೆ ಮನವಿ ಮಾಡಿದ್ದರು.. ಇದೀಗ ನಮ್ಮ ಬೆಂಗಳೂರು ಪೊಲೀಸರು ಆತನಿಗೆ ಸರಿಯಾದ ಪಾಠವನ್ನೇ ಕಲಿಸಿದ್ದಾರೆ.. ಹೌದು ಆತನನ್ನು ಈಗಾಗಲೇ ಪೊಲೀಸರು ಹಿಡಿದಿದ್ದು ಸರಿಯಾಗಿಯೇ ಶಾಸ್ತಿ ಮಾಡುತ್ತಿದ್ದಾರೆ ಎನ್ನಲಾಗಿದೆ.. ಈ ಬಗ್ಗೆ ಖುದ್ದು ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರೇ ಸಾಮಾಜಿಕ ಜಾಲತಾಣದಲ್ಲಿ ವಿಚಾರ ತಿಳಿಸಿದ್ದು ಆತನನ್ನು ಹಿಡಿಯಲಾಗಿದ್ದು.. ಕಾನುನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.. ಅಷ್ಟಕ್ಕೂ ಆತ ಯಾರು..

ಆತನ ಹೆಸರು ರಿತ್ವಿಕ್ ಎಂದು ಆತ ಮೂಲತಃ ಉತ್ತರ ಭಾರತದವನಾಗಿದ್ದು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಸಧ್ಯ ಅನ್ನಕ್ಕಾಗಿ ನಮ್ಮ ನಾಡಿಗೆ ಬಂದು ನಮ್ಮ ಭಾವನೆಗಳ ಜೊತೆ ಆಟ ಆಡಿದವನಿಗೆ ನಮ್ಮದೇ ಪೊಲೀಸರು ಸರಿಯಾದ ಶಾಸ್ತಿ‌ ಮಾಡುತ್ತಿದ್ದು ಇನ್ನೆಂದೂ ನಮ್ಮ ನಾಡಿನ ವ್ಯಕ್ತಿಗಳ ಬಗ್ಗೆ ಮಾತನಾಡುವವರಿಗೆ ಸರಿಯಾದ ಪಾಠವಾಗಲಿದೆ.. ಧನ್ಯವಾದಗಳು ಬೆಂಗಳೂರು ಪೊಲೀಸರಿಗೆ..