ಸಂತೋಷದ ಸುದ್ದಿ ಹಂಚಿಕೊಂಡ ದಿಯಾ ಆದಿ ಹಾಗೂ ಲವ್ ಮಾಕ್ಟೈಲ್ ನಿಧಿಮಾ ಜೋಡಿ..

0 views

2020 ರಲ್ಲಿ ಬಿಡುಗಡೆಯಾದ ಕೆಲವೇ ಸಿನಿಮಾಗಳ ಪೈಕಿ ವರ್ಷದಾರಂಭದಲ್ಲಿ ಬಿಡುಗಡೆಯಾದ ದಿಯಾ ಹಾಗೂ ಲವ್ ಮಾಕ್ಟೈಲ್ ಸಿನಿಮಾ ಜನಮೆಚ್ಚುಗೆ ಪಡೆದಿತ್ತು.. ಥಿಯೇಟರ್ ಗಳಲ್ಲಿ ಬಿಡುಗಡೆಯಾದಾಗ ಅಷ್ಟು ಜನ ಬಾರದಿದ್ದರೂ ಓಟಿಟಿಯಲ್ಲಿ ಬಿಡುಗಡೆಯಾದ ನಂತರ ಊಹೆಗೂ ಮೀರಿದಷ್ಟು ಯಶಸ್ಸು ಪಡೆದಿತ್ತು.. ಅದೆಷ್ಟೋ ಜನರು ಥಿಯೇಟರ್ ನಲ್ಲಿ ಈ ಸಿನಿಮಾಗಳನ್ನು ನೋಡದೇ ಇದ್ದದ್ದಕ್ಕೆ ಎರಡೂ ಸಿನಿಮಾದ ನಿರ್ಮಾಪಕರಿಗೆ ಹಣ ಕಳುಹಿಸಿಕೊಡುವುದಾಗಿ ಮನವಿ ಮಾಡಿದ್ದೂ ಉಂಟು.. ಇನ್ನು ಎರಡೂ ಸಿನಿಮಾಗಳ ಕಲಾವಿದರಿಗೆ ಒಳ್ಳೆಯ ಹೆಸರು ಬಂದದ್ದಷ್ಟೇ ಅಲ್ಲದೇ ಜನರ ಮನಸ್ಸಿನಲ್ಲಿ ಉಳಿಯುವಂತೆ ಅಭಿನಯಿಸಿದ್ದು ಮೆಚ್ಚುವ ವಿಚಾರ..

ಇನ್ನು ಇತ್ತ ದಿಯಾ ಸಿನಿಮಾದಲ್ಲಿ ತಮ್ಮ ಸಹಜ ನಟನೆಯ ಮೂಲಕ ಜನರ ಮನ ಗೆದ್ದ ಆದಿ ಹಾಗೂ ಇತ್ತ ಲವ್ ಮಾಕ್ಟೈಲ್ ನಲ್ಲಿ ಸಿಕ್ಕರೆ ಇಂತಹ ಹುಡುಗಿ ಸಿಗಬೇಕ್ ಗುರು ಎನ್ನವಂತೆ ಅಭಿನಯಿಸಿ‌ ಕೊನೆಗೆ ಕಣ್ಣಲ್ಲಿ‌ ನೀರು ಬರಿಸಿದ್ದ ನಿಧಿಮಾ ಇದೀಗ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಇತ್ತ ಕಳೆದ ಹತ್ತು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿದ್ದರೂ ಸಹ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆಯಲು ತಮ್ಮದೇ ನಿರ್ದೇಶನದ ಮೂಲಕ ಸ್ಯಾಂಡಲ್ವುಡ್ ಗೆ ನಿರ್ದೇಶಕನಾಗಿ ಎಂಟ್ರಿ ಕೊಡಬೇಕಾಯಿತು..‌

ಲವ್ ಮಾಕ್ಟೈಲ್ ಸಿನಿಮಾ ನಂತರ ಇದೀಗ ಲವ್ ಮಾಕ್ಟೈಲ್ ಸಿನಿಮಾದ ಎರಡನೇ ಭಾಗ ಕೂಡ ಸಿದ್ಧವಾಗುತ್ತಿದ್ದು ಅದರ ಜೊತೆಗೆ ಇನ್ನೂ ಎರಡು ಸಿನಿಮಾಗಳಲ್ಲಿ ಕೃಷ್ಣ ಬ್ಯುಸಿಯಾಗಿದ್ದಾರೆ.. ಅಷ್ಟೇ ಅಲ್ಲದೇ ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕೃಷ್ಣ ಹಾಗೂ ಮಿಲನ ಜೋಡಿ ಫೆಬ್ರವರಿ 14 ರಂದು ನೂತನ ಜೀವನಕ್ಕೆ ಕಾಲಿಡಲಿದ್ದು ಸಿನಿಮಾ ಕೆಲಸದ ಜೊತೆಗೆ ಮದುವೆಯ ತಯಾರಿಯೂ ಜೋರಾಗಿಯೇ ನಡೆಯುತ್ತಿದೆ..

ಇತ್ತ ಲವ್ ಮಾಕ್ಟೈಲ್ ಸಿನಿಮಾ ನಂತರ ಮಿಲನಾ ನಾಗರಾಜ್ ಅವರು ಸಹ ಕೆಲವು ಸಿನಿಮಾ ಒಪ್ಪಿಕೊಂಡಿದ್ದು ಇದೀಗ ದಿಯಾ ಸಿನಿಮಾದ ಆದಿ ಪಾತ್ರಧಾರಿ ಪೃಥ್ವಿ ಅಂಬಾರ್ ಜೊತೆಗೆ ಹೊಸ ಸಿನಿಮಾ ಒಪ್ಪಿಕೊಂಡಿದ್ದು ಇಂದು ಸಿನಿಮಾದ ಮುಹೂರ್ತ ನೆರವೇರಿದೆ..

ಹೌದು ಜೊತೆಜೊತೆಯಲಿ ಧಾರಾವಾಹಿಯಲ್ಲಿ ನೀಲ್ ಪಾತ್ರದ ಮೂಲಕ ಜನರ ಮನಗೆದ್ದ ಪೃಥ್ವಿ ಅಂಬಾರ್ ಅವರು ದಿಯಾ ಸಿನಿಮಾದಲ್ಲಿ ಆದಿಯಾಗಿ ಮೋಡಿ ಮಾಡಿದರೆನ್ನಬಹುದು.. ದಿಯಾ ಸಿನಿಮಾದಲ್ಲಿ ಪೃಥ್ವಿ ಅವರ ಅದ್ಭುತ ನಟನೆ ನೋಡಿ ಇದೀಗ ಸಾಲು ಸಾಲು ಸಿನಿಮಾದಲ್ಲಿ ಅವಕಾಶ ದೊರೆತಿದೆ.. ಹೌದು ಫಾರ್ ರಿಜಿಸ್ಟ್ರೇಷನ್ ಸಿನಿಮಾದ ಮುಹೂರ್ತ ಇಂದು ನಡೆದಿದ್ದು ಮಿಲನಾ ನಾಗರಾಜ್ ಪೃಥ್ವಿಗೆ ತೆರೆ ಮೇಲೆ ಜೋಡಿಯಾಗಲಿದ್ದಾರೆ.. ನಿಖಿಲ್ ಕುಮಾರಸ್ವಾಮಿ ಅವರು ಮುಹೂರ್ತದಲ್ಲಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ..

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ಪೃಥ್ವಿ ಅಂಬಾರ್ ಸಿನಿಮಾದ ಮುಹೂರ್ತ ಇಂದು ನೆರವೇರಿದೆ.. ಬಹಳ ಪ್ರತಿಭಾವಂತರಾದ ಮಿಲನ ನಾಗರಾಜ್ ಅವರ ಜೊತೆ ತೆರೆ ಹಂಚಿಕೊಳ್ಳಲು ಬಹಳ ಸಂತೀಷವಾಗಿದೆ.. ನಿಮ್ಮೆಲ್ಲರ ಪ್ರೀತಿ ಸದಾ ಇರಲಿ ಎಂದು ಮನವಿ ಮಾಡಿದ್ದಾರೆ..