ಮತ್ತೊಬ್ಬರ ಜೀವ ಉಳಿಸಲು ಅಶ್ವಿನಿ ಪುನೀತ್ ಮಾಡಿರೋ ಕೆಲಸ ನೋಡಿ.. ಇದು ದೊಡ್ಡತನ ಅಂದರೆ..

0 views

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಧ್ಯ ತಮ್ಮ ಜೀವನದ ಅತ್ಯಂತ ನೋವಿನ ದಿನಗಳನ್ನು ಕಳೆಯುತ್ತಿದ್ದು ಹೇಳಲಾಗದಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.. ಆದರೆ ಇಂತಹ ಸಮಯದಲ್ಲಿ ಇಂತಹ ಕಷ್ಟದ ಸಮಯದಲ್ಲಿಯೂ ಸಹ ಅಶ್ವಿನಿ ಅವರು ಮತ್ತೊಬ್ಬರ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.. ನಿಜಕ್ಕೂ ಪುನೀತ್ ಅವರು ನಡೆದು ಬಂದ ಹಾದಿಯಲ್ಲಿಯೇ ಅಶ್ವಿನಿ ಅವರೂ ಸಹ ನಡೆದುಕೊಳ್ಳುತ್ತಿದ್ದು ಅವರ ದೊಡ್ಡಗುಣವನ್ನು ತೋರುತ್ತಿದೆ..

ಹೌದು ಮೊದಲಿನಿಂದಲೂ ಅಶ್ವಿನಿ ಅವರದ್ದು ಸರಳ ಸ್ವಭಾವ.. ಆದರೆ ಪುನೀತ್ ಅವರ ಪ್ರತಿಯೊಂದು ಕೆಲಸಗಳಿಗೂ ಬೆನ್ನೆಲುಬಾಗಿ ನಿಂತಿದ್ದ ಗಟ್ಟಿಗಿತ್ತಿ ಅಶ್ವಿನಿ ಅವರು.. ಆದರೆ ಎಂದೂ ಸಹ ವೇದಿಕೆ ಮೇಲೆಯಾಗಲಿ ಅಥವಾ ಗಂಡ ದೊಡ್ಡ ಸ್ಟಾರ್ ಎಂದಾಗಲಿ ಪ್ರಚಾರ ಪಡೆದವರಲ್ಲ.. ಸ್ವಲ್ಪ ಹೆಸರು ಮಾಡಿದರೂ ಸಹ ತಲೆಯಲ್ಲಿಯೇ ನಡೆಯುವ ಅನೇಕರ ನಡುವೆ ದೊಡ್ಮನೆ ಸೊಸೆಯಾದರೂ ಸಹ ದೊಡ್ಡ ಸ್ಟಾರ್ ನಟನ ಪತ್ನಿಯಾದರೂ ಸಹ ಅದಕ್ಕೂ ಮೀರಿ ಒಂದು ದೊಡ್ಡ ನಿರ್ಮಾಣ‌ ಸಂಸ್ಥೆಯ ಒಡತಿಯಾಗಿದ್ದರೂ ಸಹ ಅಶ್ವಿನಿ ಅವರು ಮಾತ್ರ ಎಂದೂ ಕ್ಯಾಮರಾ ಮುಂದೆ ಬಂದವರಲ್ಲ.. ಮಾತನಾಡಿದವರಲ್ಲ.. ಪ್ರಚಾರ ಪಡೆದವರಲ್ಲ..

ಆದರೆ ಈಗ ಕಾಲ ಬದಲಾಗಿದೆ.. ಅಶ್ವಿನಿ ಅವರೇ ಕೆಲವೊಂದು ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ.. ಇಂತಹ ಸಮಯದಲ್ಲಿಯೂ ತನ್ನ ಜವಾಬ್ದಾರಿ ಅರಿತು ಅಶ್ವಿನಿ ಅವರೂ ಸಹ ಇಂತಹ ಕೆಲಸ ಮಾಡುತ್ತಿರುವುದು ನಿಜಕ್ಕೂ ಮೆಚ್ಚುವ ವಿಚಾರ.. ಹೌದು ಎಲ್ಲರಿಗೂ ತಿಳಿದಿರುವಂತೆ ಪುನೀತ್ ರಾಜ್ ಕುಮಾರ್ ಅವರು ಸರ್ಕಾರದ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.. ರಸ್ತೆ ಸುರಕ್ಷತೆಯ ಬಗ್ಗೆ.. ಬಿಎಂಟಿಸಿ ಯಲ್ಲಿ ಮಹಿಳೆಯರಿಗೆ ಸುರಕ್ಷತೆಯ ಬಗ್ಗೆ.. ನಂದಿನಿ ಹಾಲಿನ ಬಗ್ಗೆ.. ಹೀಗೆ ಸಾಕಷ್ಟು ಜಾಹೀರಾತುಗಳಲ್ಲಿ ಪುನೀತ್ ಅವರು ಕಾಣಿಸಿಕೊಳ್ಳುತ್ತಿದ್ದರು.. ಕಾಣಿಸಿಕೊಳ್ಳೋದು ಮಾತ್ರವಲ್ಲ ಅಂತಹ ಯಾವ ಜಾಹೀರಾತುಗಳಿಗೂ ಸಹ ಒಂದು ರೂಪಾಯಿ ಸಂಭಾವನೆಯನ್ನೂ ಸಹ ಅಪ್ಪು ಪಡೆಯುತ್ತಿರಲಿಲ್ಲ..

ಇದೀಗ ಅಪ್ಪು ಇಲ್ಲ.. ಆದರೆ ಪುನೀತ್ ಅವರಿಂದ ಅದೆಷ್ಟೋ ಜೀವಗಳು ಉಳಿಯುತ್ತಿದ್ದವು.. ಅವರ ಮಾತಿನಿಂದ ಅದೆಷ್ಟೋ ಜನರಲ್ಲಿ ಅರಿವು ಮೂಡುತಿತ್ತು.. ಈಗ ಆ ಕೆಲಸವನ್ನು ಅಶ್ವಿನಿ ಅವರು ಮುಂದುವರೆಸುತ್ತಿದ್ದಾರೆ.. ಹೌದು ಅಪ್ಪು ಇಲ್ಲದ ನೋವಿನಲ್ಲಿಯೂ ಅಶ್ವಿನಿ ಅವರು ಬೆಂಗಳೂರು ನಗರ ಸಂಚಾರಿ ಪೊಲೀಸರು ಮಾಡುತ್ತಿರುವ ಹೆಲ್ಮೆಟ್ ಧರಿಸೋಣ ಪ್ರಾಣ ಉಳಿಸೋಣ ಅಭಿಯಾನದಲ್ಲಿ ಪಾಲ್ಗೊಂಡು ಜನರಲ್ಲಿ ಅರಿವು ಮೂಡಿಸಲು ನೆರವಾದರು..

ಹೌದು ಈ ಹಿಂದೆ ಅಪ್ಪು ಅವರು ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿದ್ದ ವೀಡಿಯೋವೊಂದನ್ನು ಪ್ಲೇ ಮಾಡುವ ಮೂಲಕ‌ ಮತ್ತೊಬ್ಬರ ಜೀವ ಉಳಿಸಲು ಗುಣಮಟ್ಟದ ಹೆಲ್ಮೆಟ್ ಬಳಸಿ ಎನ್ನುವ ಅಭಿಯಾನವನ್ನು ಅಶ್ವಿನಿ ಅವರು ಉದ್ಘಾಟನೆ ಮಾಡಿದರು.. ಇತ್ತ ನಾಳೆ ಅಪ್ಪು ಹುಟ್ಟುಹಬ್ಬ.. ಅಪ್ಪು ಇಲ್ಲದ ಮೊದಲ ಹುಟ್ಟುಹಬ್ಬ.. ಜೇಮ್ಸ್ ಸಿನಿಮಾ ಕೂಡ ಬಿಡುಗಡೆಯಾಗುತ್ತಿದ್ದು ಅಪ್ಪು ಇಲ್ಲದ ಮೊದಲ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ.. ಅದಾಗಲೇ ಅಶ್ವಿನಿ ಅವರು ಸಾಕಷ್ಟು ನೊಂದು ಮೊನ್ನೆಯೂ ಸಹ ದುಃಖ ತಡೆಯಲಾಗದೇ ಜೇಮ್ಸ್ ಸಿನಿಮಾದ ಕಾರ್ಯಕ್ರಮದಲ್ಲಿ ತಲೆ ಬಗ್ಗಿಸಿ ಕಣ್ಣೀರಿಡುತ್ತಿದ್ದರು..

ಇಂತಹ ಸಮಯದಲ್ಲಿ ಈ ರೀತಿ ಕಾರ್ಯಕ್ರಮಗಳಿಗೆ ಬರುವುದಿಲ್ಲ ಎನ್ನಬಹುದಿತ್ತು.. ಆದರೆ ನಮ್ಮಿಂದ ಒಂದಷ್ಟು ಜನರ ಪ್ರಾಣ ಉಳಿಯುವುದಾದರೆ ಬರ್ತೀನಿ ಎಂದು ಒಪ್ಪಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಿ ಅಪ್ಪು ಮಾಡಿದ್ದ ಅಭಿಯಾನವನ್ನು ಅಶ್ವಿನಿ ಅವರು‌ ಮುಂದುವರೆಸಿದ್ದು ನಿಜಕ್ಕೂ ಇದು ಅಶ್ವಿನಿ ಅವರ ದೊಡ್ಡತನ ಹಾಗೂ ದೊಡ್ಡಗುಣವೆನ್ನಬಹುದು.. ಅಶ್ವಿನಿ ಅವರಿಗೆ ದೇವರು ಮತ್ತಷ್ಟು ಗಟ್ಟಿಯಾಗಿಸುವಂತಾಗಲಿ.. ಧೈರ್ಯ ಆತ್ಮಸ್ಥೈರ್ಯ ಎಲ್ಲವನ್ನು ನೀಡಿ ಜೀವನ ಮುನ್ನಡೆಸುವಂತೆ ಆಶೀರ್ವದಿಸುವಂತಾಗಲಿ.. ‌ ಅಪ್ಪು ಎಲ್ಲೇ ಇದ್ದರೂ ಅಶ್ವಿನಿ ಅವರಿಗೆ ಶಕ್ತಿ ತುಂಬುವಂತಾಗಲಿ.. ಇದನ್ನು ಹೊರತುಪಡಿಸಿ, ಮನಸ್ಸಿನ ತುಂಬ ನೋವನ್ನೇ ತುಂಬಿಕೊಂಡಿರುವ ಆ ಹೆಣ್ಣು ಜೀವಕ್ಕೆ ಇನ್ನೇನು ಹೇಳಲಾಗದು‌‌..