ಮಧ್ಯ ರಾತ್ರಿ ದಾರಿ ತಪ್ಪಿ ಆಸ್ಟ್ರಿಯಾದಲ್ಲಿ ರಾತ್ರಿ ಪೂರ್ತಿ ರಸ್ತೆಯಲ್ಲಿಯೇ ಕೂತಿದ್ದ ಪುನೀತ್ ಅವರನ್ನು ದೇವರಂತೆ ಬಂದು ಕಾಪಾಡಿದ್ದ ಆ ವ್ಯಕ್ತಿ ಯಾರು ಗೊತ್ತಾ..

0 views

ಪುನೀತ್ ರಾಜ್ ಕುಮಾರ್ ಅವರಿಗೆ ಪ್ರವಾಸಗಳೆಂದರೆ ಎಷ್ಟು ಇಷ್ಟ ಎಂಬುದು ಎಲ್ಲರಿಗೂ ತಿಳಿದಿದೆ.. ಅದರಲ್ಲೂ ದೇಶ ವಿದೇಶಗಳನ್ನು ಸುತ್ತಬೇಕು.. ಎಲ್ಲಾ ಕಡೆ ಆ ಆ ಜಾಗದಲ್ಲಿನ ಸಂಸ್ಕೃತಿ ಅಲ್ಲಿನ ಪರಿಸರ ಅಲ್ಲಿನ ಆಹಾರ ಎಲ್ಲವನ್ನೂ ಸವಿಯ ಬೇಕು ಎಂಬುದು ಅಪ್ಪು ಅವರ ಆಸೆಯಾಗಿತ್ತು.. ಅದೇ ರೀತಿ ಅದೆಷ್ಟೇ ಕೆಲಸ ಇದ್ದರೂ ಪ್ರತಿ ವರ್ಷ ತಪ್ಪದೇ ಬಿಡುವು ಮಾಡಿಕೊಂಡು ತಮ್ಮ ಕುಟುಂಬವನ್ನು ವಿದೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದರು.. ಅಶ್ವಿನಿ ಅವರು ಧೃತಿ ಹಾಗೂ ವಂದಿತಾ ಜೊತೆಗೆ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಆಗಿ ಹೋಗುತ್ತಿದ್ದ ಪುನೀತ್ ಅವರು ಯಾವುದೇ ಸಹಾಯಕರನ್ನು ಕರೆದುಕೊಂಡು ಹೋಗುತ್ತಿರಲಿಲ್ಲ.. ಮಕ್ಕಳು ಹಾಗೂ ಪತ್ನಿ ಕೈಯಲ್ಲಿ ಯಾವುದೇ ಲಗೇಜ್ ಕೊಡದೇ ಸಂಪೂರ್ಣ ತಾವೇ ಹದಿನೈದು ದಿನ ಗಳಿಗಾಗುವಷ್ಟು ಲಗೇಜ್ ಎಲ್ಲವನ್ನೂ ಹೊರುತ್ತಿದ್ದರು.. ಈ ಬಗ್ಗೆ ಮಜಾ ಟಾಕೀಸಿನಲ್ಲಿಯೂ ಸಹ ಒಮ್ಮೆ ಹೇಳಿಕೊಂಡಿದ್ದರು..

ಸಹಾಯಕರು ಯಾರೂ ಇರಲ್ವಲ್ಲಾ ಏನು ಮಾಡ್ತೀರಾ ಅಪ್ಪು.. ಲಗೇಜ್ ಯಾರ್ ಹೊರ್ತಾರೆ ಎಂದು ಸೃಜನ್ ಕೇಳಿದಾಗ.. ಇನ್ಯಾರ್ ಹೊರ್ತಾರೆ ಎಲ್ಲವನ್ನು ನಾನೇ ಹೊರಬೇಕು ಎಂದು ಮಗುವಿನಂತೆ ಮುಗ್ಧವಾಗಿ ನಕ್ಕಿದ್ದರು.. ಇನ್ನು ಅವರಿಗೆ ಸೌತ್ ಅಮೇರಿಕಾಗೆ ಹೋಗಬೇಕೆಂದು ಬಹಳ ಆಸೆಯಿತ್ತು.. ಅವರ ಆಸೆಯಂತೆ ಎರಡು ವರ್ಷದ ಹಿಂದೆ ಅಶ್ವಿನಿ ಅವರು ಹಾಗೂ ಮಕ್ಕಳೊಟ್ಟಿಗೆ ತೆರಳಿ ಸಂತೋಷಪಟ್ಟಿದ್ದರು.. ಇನ್ನು ಪುನೀಯ್ ಅವರ ಕೊನೆಯ ವಿದೇಶ ಪ್ರವಾಸ ಎರಡು ವರ್ಷದ ಹಿಂದೆ ಕತಾರ್ ಗೆ ಕನ್ನಡ ಸಮ್ಮೇಳನಕ್ಕಾಗಿ ಸ್ನೇಹಿತರೊಟ್ಟಿಗೆ ಹೋದದ್ದು.. ಆನಂತರ ಕೊರೊನಾ ಬಂದಿತು.. ಈ ವರ್ಷ ಅಪ್ಪುವೇ ಇಲ್ಲವಾದರು ಅವರ ಪ್ರವಾಸವೂ ಅಲ್ಲಿಗೆ ನಿಂತು ಹೋಯಿತು.. ಆದರೆ ಇದ್ದಷ್ಟು ದಿನ ಪ್ರತಿಕ್ಷಣವನ್ನು ಸಂತೋಷದಿಂದ ಅನುಭವಿಸುತ್ತಿದ್ದ ಅಪ್ಪು ಒಮ್ಮೆ ಬೇರೆ ದೇಶವೊಂದರಲ್ಲಿ ಮಧ್ಯರಾತ್ರಿಯಲ್ಲಿ ದಾರಿ ತಪ್ಪಿದ್ದ ಘಟನೆ ನಿಜಕ್ಕೂ ಆ ಸಾಮಯದಲ್ಲಿಯೂ ಅಷ್ಟು ಸಂಯಮದಿಂದ ಇದ್ದರೆಂದರೆ ಅವರ ಗುಣ ಮೆಚ್ಚಲೇ ಬೇಕು.

ಹೌದು ಆಸ್ಟ್ರಿಯಾ ದೇಶಕ್ಕೆ ಚಿತ್ರೀಕರಣಕ್ಕೆಂದು ತೆರಳಿದ್ದರು.. ಚಿತ್ರೀಕರಣ ಮುಗಿದ ನಂತರ ಅಪ್ಪು ಅವರು ತಮ್ಮ ಮ್ಯಾನೇಜರ್ ಕುಮಾರ್ ಅವರನ್ನು ಕರೆದುಕೊಂಡು ಬನ್ನಿ‌ ಕುಮಾರ್ ಹೊರಗೆ ಊಟ ಮಾಡೋಣ ಎಂದು ರಾತ್ರಿ ಹೊಟೆಲ್ ನಿಂದ ಕರೆದುಕೊಂಡು ಹೋದರು.. ಊಟ ಎಲ್ಲಾ ಮುಗಿದಿದ್ದು ಹನ್ನೊಂದು ಮೂವತ್ತಾಯಿತು.. ಊಟ ಮುಗಿಸಿ ನಡೆದುಕೊಂಡು ಹೊಟೆಲ್ ಕಡೆಗೆ ಬರುತ್ತಿದ್ದರು.. ಆದರೆ ಬರ್ತಾ ಬರ್ತಾ ದಾರಿ ತಪ್ಪಿ ಹೋಗಿದ್ದರು.. ಸಮಯ ಒಂದು ಗಂಟೆಯಾಗಿತ್ತು.. ದಾರಿಯಲ್ಲಿ ಯಾರೊಬ್ಬರ ಸುಳಿವೂ ಇಲ್ಲ.. ಆಗೆಲ್ಲಾ ಹೊರ ದೇಶಕ್ಕೆ ಹೋದಾಗ ಅಲ್ಲಿ ಸಂಪೂರ್ಣ ಪ್ರೊಡಕ್ಷನ್ ನವರು ಒಂದು ಫೋನ್ ಮಾತ್ರ ಇಟ್ಟುಕೊಂಡು ಅದರಲ್ಲಿಯೇ ಎಲ್ಲರೂ ಕುಟುಂಬಗಳಿಗೆ ಫೋನ್ ಮಾಡಲು ಬಳಸುತ್ತಿದ್ದರು.. ಇವರಿಗೆ ಹೊಟೆಲ್ ಹೆಸರು ಬಿಟ್ಟರೆ ಅಲ್ಲಿ ಯಾವ ದಾರಿಯ ಹೆಸರೂ ಸಹ ಗೊತ್ತಿರಲಿಲ್ಲ..

ಹೋಗ್ತಾ ಹೋಗ್ತಾ ಸಮಯ ಬೆಳಗ್ಗೆ ಮೂರು ಗಂಟೆ ಆಗಿ ಹೋಯ್ತು.. ಯಾರದ್ದಾದರೂ ಮನೆ ಬಾಗಿಲು ತಟ್ಟಿ ಹೊಟೆಲ್ ಹೆಸರು ಹೇಳಿ ಕೇಳೋಣ ಅಂದರೆ ಅವರು ನಮ್ಮನ್ನು ತಪ್ಪಾಗಿ ತಿಳಿದುಕೊಂಡು ಬಿಟ್ಟರೆ ಏನು ಮಾಡೊದು ಎಂದು ಸುಮ್ಮನಾಗಿ ಬಿಟ್ಟರು.. ಜೊತೆಗೆ ನಾವು ಬೇರೆ ಕತ್ತಲ್ಲಿ ಚೈನ್ ಹಾಕಿದ್ದೆವು.. ಎಂದು ಆ ದಿನ ಭಯಪಟ್ಟುಕೊಂಡಿದ್ದನ್ನು ಕುಮಾರ್ ಅವರು ನೆನಪಿಸಿಕೊಂಡರು.. ಆಗಲೂ ಸಹ ಆ ರಾತ್ರಿಯಲ್ಲಿ ದಾರಿ ತಪ್ಪಿ ಕೂತಿದ್ದರೂ ಸಹ ಪುನೀತ್ ಅವರು ಚಿತ್ರತಂಡದವರ ಬಗ್ಗೆಯೇ ಯೋಚಿಸಿ ನಾನು ಬೆಳಿಗ್ಗೆ ಚಿತ್ರೀಕರಣಕ್ಕೆ ಬೇಗ ಹೋಗ್ಬೇಕು.. ನನ್ನಿಂದ ಅವರಿಗೆ ತೊಂದರೆ ಆಗಬಾರದು ಎನ್ನುತ್ತಿದ್ದರಂತೆ..

ಆಗ ಇನ್ನೇನು ಮಾಡಲು ಸಾಧ್ಯವಿಲ್ಲ ಎಂದು ಬೆಳಿಗ್ಗೆ ಆಗೋವರೆಗೆ ಕಾದು ನೋಡೋಣ ಎಂದು ದಾರಿಯಲ್ಲಿಯೇ ಒಂದು ಕಡೆ ಕೂತು ಯಾವುದಾದರೂ ವಾಹನಗಳು ಬರಬಹುದೆಂದು ಕಾಯುತ್ತಿದ್ದರು.. ಆ ಸಮಯದಲ್ಲಿಯೂ ನನ್ನಿಂದ ಚಿತ್ರೀಕರಣಕ್ಕೆ ತೊಂದರೆಯಾಗುತ್ತದೆ ಎಂದು ಚಿಂತಿಸುತ್ತಲೇ ಇದ್ದರಂತೆ.. ಬಹುಶಃ ಪುನೀತ್ ಅವರ ಒಳ್ಳೆಯ ಗುಣಕ್ಕೋ ಏನೋ ದೇವರಂತೆ ಅದೇ ದಾರಿಯಲ್ಲಿ ಒಬ್ಬ ವ್ಯಕ್ತಿ ಬಂದ.. ಅದಾಗಲೇ ಸಮಯ ನಾಲ್ಕು ಗಂಟೆಯಾಗಿ ಹೋಗಿತ್ತು.. ಅದೃಷ್ಟ ಎಂದರೆ ಆತ ಕನ್ನಡದವನೇ ಆಗಿದ್ದನು.. ಆತನೇ ಪುನೀತ್ ಅವರನ್ನು ನೋಡಿ ಓಡಿ ಬಂದು ಸಾರ್ ನೀವೇನ್ ಇಲ್ಲಿ ಕೂತಿದ್ದೀರಾ ಏನಾಯ್ತು ಎಂದು ಕೇಳಿದ್ದಾನೆ.. ಆಗ ದಾರಿ ತಪ್ಪಿದ್ದೀವಿ ಎಂದು ಹೇಳಲು ಸಂಕೋಚದಿಂದಲೇ ಹೀಗೆ ಬಂದು ದಾರಿ ಮಿಸ್ ಆಗಿದೆ ಎಂದು ಹೊಟೆಲ್ ನ ಹೆಸರನ್ನು ಹೇಳಿದ್ದಾರೆ..

ಆಗ ಅಯ್ಯೋ ಸರ್ ನೀವು ನಿಮ್ ಹೊಟೆಲ್ ಇಂದ ಹದಿನೈದು ಕಿಲೋಮೀಟರ್ ದೂರದಲ್ಲಿದ್ದೀರಾ.. ಬನ್ನಿ ನಾನು ಕರೆದುಕೊಂಡು ಹೋಗ್ತೀನಿ ಎಂದು ಅಲ್ಲಿಯೇ ಪಕ್ಕದಲ್ಲಿದ್ದ ತನ್ನ ಮನೆಗೆ ಹೋಗಿ ಕಾರ್ ತಂದು ತಕ್ಷಣ ಪುನೊಇತ್ ಅವರನ್ನು ಹಾಗೂ ಕುಮಾರ್ ಅವರನ್ನು ಕೂರಿಸಿಕೊಂಡು ಬಂದು ಹೊಟೆಲ್ ಗೆ ಬಿಟ್ಟಿದ್ದಾರೆ.. ಆಗಲೂ ಸಹ ನಿಮ್ಮಿಂದ ಬಹಳ ಸಹಾಯ ಅಯಿತು.. ಚಿತ್ರೀಕರಣಕ್ಕೆ ಸರಿಯಾದ ಸಮಯಕ್ಕೆ ಹೋಗಬಹುದು ಎಂದು ಆತನಿಗೆ ಧನ್ಯವಾದಗಳನ್ನು ಹೇಳಿ.. ಮತ್ತೆ ವಿಶ್ರಾಂತಿಯನ್ನು ಪಡೆಯದೇ ತಕ್ಷಣ ರೆಡಿ ಆಗಿ ಚಿತ್ರೀಕರಣಕ್ಕೆ ತೆರಳಿದ್ದರಂತೆ.. ಕೆಲಸದ ಮೇಲೆ ಅಪ್ಪುಗಿದ್ದ ಶ್ರದ್ಧೆ ನಿಜಕ್ಕೂ ಮೆಚ್ಚಲೇ ಬೇಕು.. ತನ್ನಿಂದ ಯಾರಿಗೂ ತೊಂದರೆಯಾಗಬಾರದೆಂಬ ದೊಡ್ಡ ಗುಣ ಆ ಪುಣ್ಯಾತ್ಮನದ್ದು..