ಪುನೀತ್ ಅವರನ್ನು ನಿಜಕ್ಕೂ ಮೋದಿ ರಾಜಕೀಯಕ್ಕೆ ಕರೆದಿದ್ರಾ? ಅಸಲಿ ಕತೆ ಬೇರೆಯೇ ಇದೆ.. ಸತ್ಯ ಬಿಚ್ವಿಟ್ಟ ಪುನೀತ್ ಮ್ಯಾನೇಜರ್ ಕುಮಾರ್..

0 views

ನಾಡಿನ ಮನೆ ಮಗ ಪುನೀತ್ ರಾಜ್ ಕುಮಾರ್ ಅವರು ಅಗಲಿದ ಬಳಿಕ ಅವರ ಕುರಿತು ಸಾಕಷ್ಟು ವಿಚಾರಗಳು ಹೊರ ಬರುತ್ತಿವೆ.. ಅವರು ಇದ್ದಷ್ಟು ದಿನ ಅದರಲ್ಲೂ ಕಳೆದ ಇಪ್ಪತ್ತು ವರ್ಷಗಳಿಂದ ಮಾಡಿದ ದಾನ ಧರ್ಮ ಯಾವುದೂ ಸಹ ಅವರಿದ್ದಾಗ ಹೊರ ಬಾರದಂತೆ ನೋಡಿಕೊಂಡಿದ್ದರು.. ಆದರೆ ಅವರು ಅಕಾಲಿಕವಾಗಿ ನಮ್ಮನ್ನು ಅಗಲಿ ಹೋಗುತ್ತಿದ್ದಂತೆ ಅವರಿಂದ ಸಹಾಯ ಪಡೆದಿದ್ದ ಸಾವಿರಾರು ಜನರಲ್ಲಿ ಸಾಕಷ್ಟು ಮಂದಿ ತಾವೇ ಹೊರ ಬಂದು ಅಪ್ಪು ಮಾಡಿದ್ದ ಸಹಾಯವನ್ನು ನೆನೆದು ಕಣ್ಣೀರಿಟ್ಟಿದ್ದರು.. ಇನ್ನು ಇಪ್ಪತ್ತಾರು ದಿನಗಳ ನಂತರ ಇದೀಗ ರಾಜಕೀಯ ವಿಚಾರವಾಗಿಯೂ ಸಾಕಷ್ಟು ಸುದ್ದಿ ಹರಿದಾಡುತ್ತಿದೆ.. ಹೌದು ಪ್ರಧಾನಿ ನರೇಂದ್ರ ಮೋದಿ ಅವರು ಅಪ್ಪು ಅವರನ್ನು ರಾಜಕೀಯಕ್ಕೆ ಆಹ್ವಾನಿಸಿದ್ದರು ಎಂಬ ಸುದ್ದಿ ಹರಿದಾಡಿದ್ದು ಅನೇಕರು ಇದು ಸತ್ಯ ಎಂದರೆ ಮತ್ತಷ್ಟು ಜನ ಇದು ಸತ್ಯವಲ್ಲ ಎಂದಿದ್ದರು.. ಆದರೆ ಇದರ ಹಿಂದೆ ಅಸಲಿ ಕತೆ ಬೇರೆಯೇ ಇದೆ.ಮ್ ಹೌದು ಪುನೀತ್ ಅವರ ಜೊತೆ ಕಳೆದ ಮೂವತ್ತು ವರ್ಷಗಳಿಂದ ಜೊತೆಯಲ್ಲಿರುವ ಅವರ ಮ್ಯಾನೇಜರ್ ಕುಮಾರ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ..

ಹೌದು ಈ ಕುಮಾರ್ ಎಂಬುವವರು ಸದಾ ಅಪ್ಪು ಜೊತೆಯೇ ಇರುತ್ತಿದ್ದವರು.. ಬೆಳಿಗ್ಗೆ ಎದ್ದಾಗ ಅಪ್ಪು ಜೊತೆಗೆ ದಿನ ಶುರು ಮಾಡುತ್ತಿದ್ದ ಕುಮಾರ್ ಅವರು ರಾತ್ರಿ ಅಪ್ಪು ಅವರ ಎಲ್ಲಾ ಕೆಲಸ ಮುಗಿದ ಬಳಿಕವಷ್ಟೇ ಅವರ ದಿನವೂ ಮುಗಿಯುತ್ತಿದ್ದದ್ದು.. ಇನ್ನು ಇವರಿಗೆ ವಜ್ರೇಶ್ವರಿ ಕುಮಾರ್ ಎಂಬ ಹೆಸರಿನಿಂದಲೇ ಗಾಂಧಿ‌ನಗರದ ಮಂದಿ ಕರೆಯುತ್ತಾರೆ.. ಅಪ್ಪುವಿನ ಎಲ್ಲಾ ವಿಚಾರಗಳು ಈ ಕುಮಾರ್ ಅವರಿಗೆ ತಿಳಿದಿತ್ತು.. ಅಪ್ಪು ಅಗಲಿದ ದಿನದಿಂದ ಕುಗ್ಗಿ ಹೋಗಿದ್ದ ಕುಮಾರ್ ಅವರು ಯಾವುದೇ ಮಾದ್ಯಮದ ಮುಂದೆ ಬಂದಿರಲಿಲ್ಲ.. ಆದರೀಗ ರಾಜಕೀಯದ ವಿಚಾರವಾಗಿ ಸುದ್ದೊ ಹರಿದಾಡಿದ ಕಾರಣ ಆ ಬಗ್ಗೆ ಸಂಪೂರ್ಣ ಸತ್ಯವನ್ನು ಕುಮಾರ್ ಅವರು ತಿಳಿಸಿದ್ದಾರೆ.. “ಎಲೆಕ್ಷನ್ ಗೂ ಮುಂಚೆ ನಿರ್ಮಾಪಕರಾದ ಎಸ್ ಪಿ ಬಾಬು ಅವರು ನನಗೆ ಫೋನ್ ಮಾಡಿದ್ರು.. ಕುಮಾರ್ ನಿಮ್ಮನ್ನು ಭೇಟಿ ಮಾಡ್ಬೇಕು ಎಂದರು.. ನಾನು ಬಹುಶಃ ಕಾಲ್ ಶೀಟ್ ಕೇಳೊದಕ್ಕೆ ಎಂದುಕೊಂಡೆ.. ಸರಿ ಎಂದು ಹೋಗಿದ್ದೆ.. ಅವರ ಜೊತೆ ಸೋಮು ವೀರ ರಾಜು ಅಂತ ಆಂಧ್ರ ಪ್ರದೇಶದಲ್ಲಿ ಬಿಜೆಪಿ ನಾಯಕರಾಗಿದ್ದರು.. ಹಾಗೂ ಶರ್ಮಾ ಅಂತ ಮೂರು ಜನರೂ ನನ್ನನ್ನು ಭೇಟಿ ಆದ್ರು..

ನಾನು ಇದೇನು ಕಾಲ್ ಶೀಟ್ ಕೇಳ್ತಾರೆ ಅಂದುಕೊಂಡ್ರೆ ಇವರೆಲ್ಲಾ ಬಂದಿದ್ದಾರೆ ಎಂದುಕೊಂಡೆ.. ಆಗ ಅವರು ಇಲ್ಲ ಕುಮಾರ್ ಹೀಗೆ ಎಲೆಕ್ಷನ್ ಬರ್ತಾ ಇದೆ.. ಪುನೀತ್ ಅವರಿಗೆ ಆಸಕ್ತಿ ಇದಿಯಾ ರಾಜಕೀಯದಲ್ಲಿ ಅಂತ ಕೇಳಿದ್ರು.. ನಾನು ತಕ್ಷಣ ಹೇಳಿದೆ.. ಇಲ್ಲ ಅವರಿಗೆ ಆಸಕ್ತಿ ಇಲ್ಲ ಅವರು ರಾಜಕೀಯಕ್ಕೆ ಬರೋದು ಇಲ್ಲ ಎಂದೆ.. ಆಗ ಇಲ್ಲ ಒಂದ್ ಸಾರಿ ಅವರನ್ನ ಭೇಟಿ ಮಾಡಿಸಿ ಅಂದ್ರು.. ರಾಜಕೀಯ ಅಂತ ಹೇಳಿದ್ರೆ ಅವರು ಡೇಟ್ ಕೂಡ ಕೊಡಲ್ಲ ಭೇಟಿ ಸಹ ಆಗಲ್ಲ ಅಂದ್ರು.. ಇಲ್ಲ ಇಲ್ಲ ಜೆನರಲ್ ಆಗಿ ಒಂದ್ ಸಾರಿ ಭೇಟಿ‌ ಮಾಡ್ಸಿ ಅಂತ ಕೇಳಿದ್ರು.. ಜೆನರಲ್ ಆಗಿ ಆದ್ರೆ ಬಂದು ಭೇಟಿಯಾಗಿ ತೊಂದರೆ ಇಲ್ಲ ಅಂದೆ.. ಅದೇ ತರ ಅವರು ಬಂದ್ರು ಭೇಟಿ ಆದ್ರು.. ನಾನ್ ಹೇಳಿದ್ದೆ ಬಾಸ್ ಈತರ ರಾಜಕೀಯಕ್ಕೆ ಕೇಳ್ತಿದ್ರು.. ನಿಮಗೇನಾದ್ರೂ ಆಸಕ್ತಿ ಇದಿಯಾ ಅಂದೆ.. ನಿನಗೆ ಗೊತ್ತಿಲ್ವಾ ಕುಮಾರ್.. ನನಗೆ ರಾಜಕೀಯ ಎಲ್ಲಾ ಬೇಡ.. ಅಪ್ಪಾಜಿ ತರ ಇರಬೇಕು ಎಂದಿದ್ದರು..

ಇನ್ನು ಇವರೆಲ್ಲಾ ಜೆನರಲ್ ಆಗಿ ಭೇಟಿ ಮಾಡಿದ್ರು.. ಆಗಲೂ ಸಹ ರಾಜಕೀಯ ವಿಚಾರವನ್ನ ರಿಜೆಕ್ಟ್ ಮಾಡಿದ್ರು.. ಆನಂತರ ಸುಮ್ಮನೆ ಒಂದ್ ಸಾರಿ ಮೋದಿ ಅವರನ್ನ ಭೇಟಿ‌ ಮಾಡ್ಸಿ ಅಂತ ಕೇಳಿದ್ರು.. ಅದು ಹೇಗೆ ಆಗತ್ತೆ ಸರ್.. ಸುಮ್ಮನೆ ಭೇಟಿ ಆದ್ರೆ ಅದು ಸರಿ ಇರೋದಿಲ್ಲ.. ಬೇರೆ ರೀತಿ ಆಗಿಬಿಡತ್ತೆ ಬೇಡ ಅಂದ್ವಿ.. ಆಗ ಅವರು ಇಲ್ಲ‌ ಒಂದ್ ಸರಿ ಜೆನರಲ್ ಆಗಿ ಭೇಟಿ ಆಗಿ ಅಂತ ಕೇಳಿಕೊಂಡ್ರು.. ಆಗ ನಾವು ಅಪ್ಪಾಜಿ ಅವರ ಬುಕ್ ಒಂದನ್ನು ಮೋದಿ ಅವರಿಗೆ ಕೊಡಬೇಕು ಅನ್ನೋದು ಇತ್ತು.. ಅದಕ್ಕೆ ಭೇಟಿ ಆದಾಗ ಬುಕ್ ಕೊಡೋಣ ಅಂತ ಸರಿ ಆಯ್ತು ಅಂತ ಹೇಳಿದ್ವಿ.. ರಾಜಕೀಯದ ಲೀಡರ್ಸ್ ಯಾರು ಇಲ್ಲಾ ಅಂದ್ರೆ ನಾವ್ ಬೇಕಿದ್ರೆ ಸೆಪರೇಟ್ ಆಗಿ ಭೇಟಿ ಮಾಡೋಣ ಅಂದುಕೊಂಡ್ವಿ.. ಆ ಟೈಮಲಿ ಹೆಚ್ ಎ ಎಲ್ ಏರ್ಪೋರ್ಟ್ ನಲ್ಲಿ ಮೋದಿ ಅವರು ವಿಮಾನ ಬದಲಿಸಬೇಕಿತ್ತು.. ಆಗ ಅಲ್ಲಿ ಅಶ್ವಿನಿ‌ ಮೇಡಂ ಮತ್ತೆ ಬಾಸ್ ಭೇಟಿ ಆದ್ರು.. ಆಗ ಅಪ್ಪಾಜಿ ಅವರ ಬುಕ್ ಕೊಟ್ವಿ ಅವಾಗ ನಿಮ್ಮ ತಂದೆ ಒಳ್ಳೆ ಕಲಾವಿದರು ಅಂತೆಲ್ಲಾ ಹೇಳಿದ್ರು.. ಅಷ್ಟೇ ಅಲ್ಲಿಂದ ನಾವು ಹೊರಟು ಬಂದ್ವಿ..

ಆಗ ಮತ್ತೆ ಅವರಿಂದ ಫೋನ್ ಬಂತು.. ಮೋದಿ ಅವರು ಸ್ವಲ್ಪ ಮಾತನಾಡಬೇಕಂತೆ ಅವರು ಕರೀತಿದಾರೆ ಅಂತ ಅಶ್ವಿನಿ ಅವರನ್ನ ಹಾಗೂ ಅಪ್ಪು ಅವರನ್ನ ಕರೆದ್ರು.. ಏಳು ನಿಮಿಷ ಇಬ್ಬರ ಜೊತೆ ಮಾತನಾಡಿದ್ರು.. ಮಾತನಾಡಿಕೊಂಡು ಬಂದ್ರು.. ಆಗ ಪುನೀತ್ ಅವರನ್ನ ನಿಮ್ಮಂತ ಯೂತ್ಸ್ ರಾಜಕೀಯಕ್ಕೆ ಬರ್ಬೇಕು.. ದೇಶಕ್ಕೆ ನಿಮ್ಮಂತ ಲೀಡರ್ಸ್ ಬೇಕು ಅಂತ ಹೇಳಿದ್ರು.. ನಾವು ಸುಮ್ಮನೆ ಬಂದುಬಿಟ್ವಿ ಎಂದ್ರು.. ಅವರಿಗೆ ರಾಜಕೀಯ ಆಸಕ್ತಿ ಇರಲಿಲ್ಲ.. ಅಶ್ವಿನಿ ಅವರಿಗೂ ಅಷ್ಟೇ ಮೋದಿ ಅವರನ್ನ ಭೇಟಿ‌ ಮಾಡಿ ಬುಕ್ ಕೊಡಬೇಕು ಅಂತ ಇತ್ತು.. ಆದರೆ ರಾಜಕೀಯದ ಆಸಕ್ತಿ ಇಲ್ಲ.. ಅದು ಬಿಟ್ಟರೆ ರಾಜಕೀಯದ ಕುರಿತು ಯಾವುದೇ ಬೇರೆ ವಿಚಾರ ಇಲ್ಲ ಸರ್..

ಬಾಸ್ ಗೆ ರಾಜಕೀಯ ಬಿಟ್ಟು ತಮ್ಮ ಕೈಲಾದ ಎಲ್ಲಾ ಸಹಾಯವನ್ನು‌ ಮಾಡ್ತಾ ಇದ್ರು.. ಸಿನಿಮಾ ಬ್ಯುಸಿನೆಸ್ ಹೀಗೆ ಈ ದಾರಿಯಲ್ಲಿ ಅವರ ಆಸಕ್ತಿ ಇತ್ತು.. ಬಹಳಷ್ಟು ಅಂತರಾಷ್ಟ್ರೀತ ಸಿನಿಮಾಗಳನ್ನು‌ ನೋಡ್ತಾ ಇದ್ರು.. ಬಹಳ ಕೋರಿಯನ್ ಸಿನಿಮಾಗಳನ್ನು ನೋಡ್ತಾ ಇದ್ರು.. ನಮ್ಮ ಇಂಡಸ್ಟ್ರಿಯಲ್ಲಿಯೂ ವಿಭಿನ್ನವಾದ ಸಿನಿಮಾಗಳನ್ನು ಮಾಡಬೇಕು ಅಂತ ಪಿ ಆರ್ ಕೆ ಪ್ರೊಡಕ್ಷನ್ಸ್ ತೆರೆದ್ರು.. ಸಾಕಷ್ಟು ಹೊಸ ಹೊಸ ರೀತಿ ಸಿನಿಮಾಗೆ ಅವಕಾಶ ಕೊಟ್ಟರು.. ಇನ್ನೂ ಬಹಳ‌ ಕನಸಿತ್ತು ಸರ್.. ಕನ್ನಡ ಸಿನಿಮಾಗಳನ್ನ ಬೇರೆ ಡಿಫರೆಂಟ್ ಆಗಿ ತಗೊಂಡ್ ಹೋಗ್ಬೇಕು ಅಂತ ತುಂಬಾ ಆಸೆಯಿತ್ತು.. ಅದಕ್ಕೆ ಬೇಕಾದ ತಯಾರಿಗಳನ್ನು ಸಹ ಮಾಡಿದ್ರು.. ಬೇರೆ ಏನೋ‌ ಮಾಡ್ಬೇಕು.. ಬೇರೆ ಏನೋ ಮಾಡ್ಬೇಕು ಅನ್ನೋ ಆಸೆ ಇತ್ತು.. ಆದರೆ ಹೀಗ್ ಆಯ್ತು.. ಅವರ ಪ್ರತಿ ಮಾತು ಸಿನಿಮಾ ಅಷ್ಟೇ ಸರ್.. ಹೊಸಬರಿಗೆ ಅವಕಾಶ ಕೊಡಬೇಕು ಅಂತ ಬಹಳ ಆಸೆ ಇತ್ತು.. ಇನ್ನು ಹತ್ತು ವರ್ಷ ಇದ್ದಿದ್ರೆ ನಿನಕ್ಕೂ ಏನೋ ಖಂಡಿತ ಮಾಡ್ತಾ ಇದ್ರು ಸರ್..‌ ಎಂದು ಕುಮಾರ್ ಅವರು ಅಪ್ಪು ಅವರ ಬಗ್ಗೆ ಇರೋ ವಿಚಾರವನ್ನು ಹಂಚಿಕೊಂಡಿದ್ದರು..