ನನ್ನಮ್ಮ ಸೂಪರ್ ಸ್ಟಾರ್ ಶೋಗೆ ಬಂದಿರುವ ಇವರು ನಿಜಕ್ಕೂ ಯಾರು ಗೊತ್ತಾ.. ಪುನೀತ್ ಅವರಿಗೆ ಇವರು ಏನಾಗಬೇಕು ಗೊತ್ತಾ..

0 views

ಕಳೆದ ವಾರಾಂತ್ಯ ದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾದ ನನ್ನಮ್ಮ ಸೂಪರ್ ಸ್ಟಾರ್ ಶೋ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಯಿತು.. ತಾಯಿ ಹಾಗೂ ಮಕ್ಕಳ ಈ‌ ರಿಯಾಲಿಟಿ ಶೋ ನಲ್ಲಿ ಹನ್ನೆರೆಡು ತಾಯಿ ಮಕ್ಕಳ ಜೋಡಿಗಳು ಭಾಗವಹಿಸುತ್ತಿದ್ದು ಮಕ್ಕಳ ಜೊತೆಗೆ ದೊಡ್ಡವರಿಗೂ ಸಹ ಬಹಳಷ್ಟು ಮನರಂಜನೆ ದೊರಕಲಿದೆ ಎಂಬ ನಿರೀಕ್ಷೆಯಿದೆ.. ಇನ್ನು ಕಳೆದ ಶನಿವಾರ ಗ್ರ್ಯಾಂಡ್ ಓಪನಿಂಗ್ ನಡೆದ ಶೋನಲ್ಲಿ ರಾಜಾ ರಾಣಿ ಜಡ್ಜಸ್ ಗಳಾದ ತಾರಮ್ಮ ಹಾಗೂ ಸೃಜನ್ ಅವರೇ ಈ ಶೋಗಳಲ್ಲಿಯೂ ಜಡ್ಜ್ ಆಗಿದ್ದು ಎಂದಿನಂತೆ ತಮ್ಮ ಮಾತಿನ ಮೂಲಕ ಮೋಡಿ ಮಾಡಲಿದ್ದಾರೆ.. ಇವರುಗಳ ಜೊತೆಗೆ ನಟಿ ಅನು ಪ್ರಭಾಕರ್ ಅವರೂ ಸಹ ಜಡ್ಜ್ ಆಗಿದ್ದು ಮಕ್ಕಳ ರಿಯಾಲಿಟಿ ಶೋ ಕಳೆಕಟ್ಟಿದೆ..

ಇನ್ನು ಸ್ಪರ್ಧಿಗಳ ವಿಚಾರಕ್ಕೆ ಬಂದರೆ ಅದಾಗಲೇ ಮಾಸ್ಟರ್ ಆನಂದ್ ಮಗಳು ವಂಶಿಕಾ ತನ್ನ ಪುಟ್ಟ ಪುಟ್ಟ ಮಾತುಗಳಿಂದ ಪ್ರೇಕ್ಷಕರನ್ನು ಮೋಡಿ ಮಾಡಿದ್ದು ವಂಶಿಕಾಳ ಮಾತಿನ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದು ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ.. ಪುಟಾಣಿ ಕಂದನ ಮುಗ್ಧ ಮಾತುಗಳಿಗೆ ಜನರು ಮನಸೋತಿದ್ದಾರೆ.. ಇನ್ನು ಮನರಂಜನೆಯನ್ನು ಹೊರತು ಪಡಿಸಿ ಸಾಕಷ್ಟು ಮನಮುಟ್ಟುವ ಕತೆಗಳು ಸಹ ಸ್ಪರ್ಧೆಗೆ ಬಂದಿರುವ ತಾಂಯಂದಿರ ನಿಜ ಜೀವನದಲ್ಲಿ ನಡೆದಿದೆ.. ಹೌದು ಕಣ್ಣು ಕಾಣದ ಅಪ್ಪ ಅಮ್ಮನನ್ನು ನೋಡಿಕೊಂಡು ಸಿಂಗಲ್ ಪೇರೆಂಟ್ ಆಗಿ ಮಗುವನ್ನೂ ಸಹ ನಿಭಾಯಿಸಿಕೊಂಡು ಕೆಲಸಕ್ಕೂ ಸಹ ಹೋಗುತ್ತಿರುವ ತಾಯಿ ಒಂದು ಕಡೆಯಾದರೆ ಮಕ್ಕಳಲ್ಲಿಯೇ ತಮ್ಮೆಲ್ಲಾ ನೋವನ್ನು ಮರೆಯುತ್ತಿರುವ ಮತ್ತಷ್ಟು ತಾಯಂದಿರು ಮತ್ತೊಂದು ಕಡೆ.. ಒಟ್ಟಿನಲ್ಲಿ ಮಕ್ಕಳಿಗಾಗಿ ಮಾತ್ರವಲ್ಲ ಈ ಶೋ ದೊಡ್ಡವರಿಗೂ ಸಹ ಇಷ್ಟವಾಗಬಹುದು ಎನ್ನಲಾಗಿದೆ..

ಇನ್ನು ಇದೆಲ್ಲವನ್ನೂ ಹೊರತು ಪಡಿಸಿ ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧೆ ಸ್ಪರ್ಧಿಯೊಬ್ಬರು ಬಂದಿದ್ದಾರೆ.. ಹೌದು ಬಾಡಿ ಬಿಲ್ಡಿಂಗ್ ಮಾಡಿಕೊಂಡು ಸಿಕ್ಸ್ ಪ್ಯಾಕ್ ಇರುವ ತಾಯಿ ಬಹುಶಃ ನಾವು ಕಂಡಂತೆ ಇವರೇ ಮೊದಲು.. ಆದರೆ ಇವರು ನಿಜಕ್ಕೂ ಯಾರು.. ನಟ ಪುನೀತ್ ಅವರಿಗೂ ಇವರಿಗು ಏನು ಸಂಬಂಧ ಈ ಎಲ್ಲಾ ವಿಚಾರ ತಿಳಿದರೆ ನಿಜಕ್ಕೂ ಒಂದು ಕಡೆ ನೋವಾದರೂ ಮತ್ತೊಂದು ಕಡೆ ಸಂತೋಷವಾಗುತ್ತದೆ.. ಹೌದು ಇವರ ಹೆಸರು ಮಮತಾ.. ಬಸವನ ಪುರದವರು.. ಇವರಿಗೆ ಇಪ್ಪತ್ತ ಮೂರು ವರ್ಷ ವಯಸ್ಸಿದ್ದಾಗ ಮಗು ಹುಟ್ಟಿತು.. ನಂತರದಲ್ಲಿ ಬಾಣಂತನದ ಆರೈಕೆಯಲ್ಲೊ ಬಹಳ ದಪ್ಪಗಾಗಿದ್ದರು.. ತಮ್ಮ ಇಪ್ಪತ್ತೈದನೇ ವಯಸ್ಸಿನಲ್ಲಿ ತೊಂಭತ್ತೈದು ಕೆಜಿ ತೂಕ‌ ಇದ್ದ ಮಮತಾ ತೂಕ ಇಳಿಸುವ ಸಲುವಾಗಿ ಜಿಮ್ ಸೇರಿಕೊಂಡರು.. ಹೇಗೋ ಎಪ್ಪತ್ತೈದಕ್ಕೆ ಬಂದು ನಿಂತರು.. ಆಗ ಫಿಟ್ನೆಸ್ ಬಾಡಿ ಬಿಲ್ಡಿಂಗ್ ಬಗ್ಗೆ ಒಲವು ಮೂಡಿತು.. ತರಬೇತುದಾರರ ಸಲಹೆ ಪಡೆದು ಬಾಡಿ ಬಿಲ್ಡ್ ಮಾಡಲು ಶುರು ಮಾಡಿದರು..

ಕರ್ನಾಟಕದ ಮೊಟ್ಟ ಮೊದಲ ಮಹಿಳಾ ಬಾಡಿಬಿಲ್ಡರ್ ಎಂದರೆ ಅದು ಮಮತಾ ಅವರೇ.. ರಾಷ್ಟೀಯ ಮಟ್ಟದಲ್ಲಿಯೂ ಸಾಕಷ್ಟು ಸ್ಪರ್ಧೆಗಳನ್ನು ಗೆದ್ದಿದ್ದಾರೆ.. ವಿವಿಧ ರಾಜ್ಯಗಳಲ್ಲಿಯೂ ಸ್ಪರ್ಧಿಸಿ ಪದಕ ಪಡೆದಿದ್ದಾರೆ.. ಅಷ್ಟೇ ಅಲ್ಲದೇ ದಕ್ಷಿಣ ಭಾರತಕ್ಕೆ ಐಎಫ್ ಬಿಬಿ ಪ್ರೋ ಕಾರ್ಡ್ ಹೋಲ್ಡರ್ ಕೂಡ ಆಗಿದ್ದಾರೆ.. ಒಟ್ಟಿನಲ್ಲಿ ಮಹಿಳೆ ಅಂದುಕೊಂಡರೆ ಯಾವ ಸಾಧನೆಯನ್ನಾದರೂ ಮಾಡಬಹುದು ಎನ್ನುವುದಕ್ಕೆ ಮಮತಾ ಅವರೇ ದೊಡ್ಡ ಉದಾಹರಣೆ.. ಮಮತಾ ಅವರನ್ನು ಈ ಹಿಂದೆ ಮಜಾ ಟಾಕೀಸ್ ಹಾಗೂ ಇನ್ನೂ ಕೆಲ ಶೋಗಳಿಗೆ ಕರೆಸಲಾಗಿತ್ತು.. ಇದೀಗ ತಮ್ಮ ಮಗಳ ಜೊತೆ ನಮ್ಮಮ್ಮ ಸೂಪರ್ ಸ್ಟಾರ್ ಗೆ ಎಂಟ್ರಿ ಕೊಟ್ಟಿದ್ದಾರೆ.. ಇನ್ನು ಬಾಡಿ ಬಿಲ್ಡರ್ ಮಮತಾಗೂ ಪುನೀತ್ ರಾಜ್ ಕುಮಾರ್ ಅವರಿಗೂ ಏನಿ ಸಂಬಂಧ.. ಹೌದು ಸಂಬಂಧ ಇದೆ..

ಮಮತಾ ಅವರು ತಮ್ಮ ಸಾಧನೆ ಮಾಡುವಾಗ ಸಾಕಷ್ಟು ನೋವುಗಳನ್ನು ಚುಚ್ಚು ಮಾತುಗಳನ್ನು ಎದುರಿಸಿದ್ದಾರೆ.. ಹೌದು ಹೀಗೆ ಒಮ್ಮೆ ಬಾಡಿ ಬಿಲ್ಡರ್ ಶೋ ನಲ್ಲೊ ಭಾಗವಹಿಸಬೇಕು ಎನ್ನುವುದಾದರೆ ಬಿಕನಿ ಹಾಕಬೇಕು ಎಂದು ಹೇಳಲಾಗಿತ್ತು.. ಆದರೆ ಅದಕ್ಕೆ ಮಮತಾ ಅವರ ತಂದೆ ತಾಯಿ ಹಾಗೂ ಮನೆಯವರು ಒಪ್ಪಿರಲಿಲ್ಲ.. ನಂತರ ಹೇಗೋ ಆ ಸ್ಪರ್ಧೆಯಲ್ಲಿ ಭಾಗವಹಿಸಿದರು.. ಇನ್ನು ಬಾಡಿ ಬಿಲ್ಡ್ ಮಾಡಿಕೊಂಡ ಮಮತಾ ಅವರ ದೇಹ ನೋಡಿ ಸಾಕಷ್ಟು ಮಂದಿ ಮಾತನಾಡುತ್ತಿದ್ದದ್ದೂ ಉಂಟು.. ಜೊತೆಗೆ ಬಾಡಿ ಬಿಲ್ಡ್ ಮಾಡುತ್ತಾ ಮಮತಾ ಅವರ ಧ್ವನಿ ಬದಲಾಗಿ ಗಡುಸಾಗಿದೆ.. ಇದನ್ನೂ ಸಹ ಸಾಕಷ್ಟು ಜನ ಅವಮಾನ ಮಾಡುತ್ತಿದ್ದರು.. ಅಂತಹ ಸಮಯದಲ್ಲಿ ಮಮತಾ ಅವರಿಗೆ ಸ್ಪೂರ್ತಿ ತುಂಬಿದವರೇ ಪುನೀತ್ ರಾಜ್ ಕುಮಾರ್..

ಹೌದು ಮಮತಾ ಅವರ ಸಾಧನೆ ನೋಡಿ ಗುರುತಿಸಿದ್ದ ಪುನೀತ್ ರಾಜ್ ಕುಮಾರ್ ಅವರು ಮಮತಾ ಅವರನ್ನು ಕರೆಸಿ ಅವರಿಗೆ ಅಭಿನಂದಿಸಿದ್ದರು.. ಹೇಗ್ರಿ ಇದೆಲ್ಲಾ ಸಾಧ್ಯ.. ನಿಜಕ್ಕೂ ನೀವು ಗ್ರೇಟ್ ಎಂದಿದ್ದರು.. ದೊಡ್ಡ ಸ್ಟಾರ್ ನಟನಾದರೂ ಸ್ವಲ್ಪವೂ ಅಹಂ ಇಲ್ಲದೇ ನಿಮ್ಮಂತವರ ಸಾಧನೆಗಳು ನಮಗೆಲ್ಲಾ ಸ್ಪೂರ್ತಿ ಎಂದಿದ್ದರು.. ಮಮತಾ ಅವರನ್ನು ಬಹಳ ಗೌರವದಿಂದ ಅಭಿನಂದಿಸಿದ್ದರು.. ಆ ಸಮಯದಲ್ಲಿ ಮಮತಾ ತಮಗೆ ಇದರಿಂದ ಆದ ಕೆಲ ನೋವುಗಳನ್ನು ಸಹ ಹಂಚಿಕೊಂಡಿದ್ದರು.. ಆಗ ಮಾತನಾಡಿಕೊಳ್ಳುವವರು ಯಾವತ್ತಿದ್ರೂ‌ ಮಾತನಾಡಿಕೊಳ್ತಾರೆ.. ಅವರೆಲ್ಲಾ ಮಾತಾಡ್ತಿದ್ದಾರೆ ಅಂದ್ರೆ ನೀವು ಸಾಧನೆ ಮಾಡ್ತಿದ್ದೀರಾ ಅಂತ ಅರ್ಥ.. ಅಂತವರ ಮಾತುಗಳನ್ನೆಲ್ಲಾ ತಲೆಗೆ ಹಾಕಿಕೊಳ್ಳಬೇಡಿ.. ನೀವು ಬಹಳಷ್ಟು ಜನರಿಗೆ ಸ್ಪೂರ್ತಿ ಎಂದಿದ್ದರಂತೆ.. ಮನಸ್ಪೂರ್ತಿಯಾಗಿ ಹಾರೈಸಿ ಮಮತಾ ಅವರನ್ನು ಕಳುಹಿಸಿಕೊಟ್ಟಿದ್ದರಂತೆ.. ನಿಜಕ್ಕೂ ಅಪ್ಪು ಗ್ರೇಟ್..