ನಾಳೆ ಪುನೀತ್ ಗಾಗಿ ಚಿತ್ರರಂಗದಿಂದ ಅತಿ ದೊಡ್ಡ ಕಾರ್ಯಕ್ರಮ.. ಆದರೆ ಆಯೋಜಕರಿಗೆ ನೋಟೀಸ್.. ಕೊಟ್ಟದ್ದು ಯಾರು ಗೊತ್ತಾ..

0 views

ಪುನೀತ್ ಅಗಲಿ ಹದಿನಾರು ದಿನಗಳ ಬಳಿಕ ನಾಳೆ ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ಅವರಿಗೆ ನಮನ ಸಲ್ಲಿಸುವ ಸಲುವಾಗಿ ಅತಿದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.. ಕನ್ನಡ ಮಾತ್ರವಲ್ಲದೇ ತಮಿಳು ತೆಲುಗು ಮಳಯಾಳಂ ಸೇರಿದಂತೆ ಸೌತ್ ಸಿನಿಮಾ ಇಂಡಸ್ಟ್ರಿಯ ಗಣ್ಯರು ಪಾಲ್ಗೊಂಡು ಪುನೀತ್ ಅವರಿಗೆ ನಮನ ಸಲ್ಲಿಸಲಿದ್ದಾರೆ.. ಅದಾಗಲೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅವರಿಂದ ಸಕಲ ತಯಾರಿ ನಡೆದಿದೆ.. ನಾಳೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರನ್ನು ಸೇರಿದಂತೆ ರಾಜಕೀಯ ಗಣ್ಯರು ಹಾಗೂ ಸಂಪೂರ್ಣ ಸ್ಯಾಂಡಲ್ವುಡ್ ಹಾಗೂ ಇತರ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಲಾಗಿದೆ.. ಆದರೆ ಈ ಸಮಯದಲ್ಲಿ ಆಯೋಜಕರಿಗೆ ನೋಟೀಸ್ ಒಂದು ಬಂದಿದೆ..

ಹೌದು ನಾಳೆ ನಡೆಯಲಿರುವ ಪುನೀತ್ ಗೀತ ನಮನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಅವಕಾಶ ವಿರುವುದಿಲ್ಲ.. ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು.. ತಂತ್ರಜ್ಞರು.. ಕಾರ್ಮಿಕರು.. ಎಲ್ಲರೂ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡಲಾಗಿದೆ.. ದಕ್ಷಿಣ ಭಾರತದ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಲಾಗಿದೆ.. ನಾಳೆ ಸಂಪೂರ್ಣ ಕನ್ನಡ ಚಿತ್ರರಂಗ ಸಿನಿಮಾ ಸಂಬಂಧಪಟ್ಟ ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ತಿಳಿಸಿದೆ..

ಸಿನಿಮಾ ಸಂಬಂಧಪಟ್ಟ ಎಲ್ಲಾ ಕೆಲಸಗಳಿಗೆ ರಜೆ ನೀಡಲಾಗಿದೆ‌‌.. ಕಾರ್ಯಕ್ರಮಕ್ಕೆ ದೊಡ್ಮನೆ ಕುಟುಂಬದ ಸದಸ್ಯರು ಪಾಲ್ಗೊಳ್ಳಲಿದ್ದಾರೆ.. ಪತ್ನಿ ಅಶ್ವಿನಿ ಅವರು ಭಾಗವಹಿಸಲಿದ್ದಾರೆ.. ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದ್ದು ಅದಾಗಲೇ ಎರಡು ಸಾವಿರ ವಿವಿಐಪಿ ಪಾಸ್ ಗಳನ್ನು ನೀಡಲಾಗಿದೆ.. ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್ ಹಾಗೂ ಗೀತರಚನೆ ಕಾರರಾದ ವಿ ನಾಗೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಗೀತ ನಮನ ಕಾರ್ಯಕ್ರಮ ನಡೆಯುತ್ತಿದೆ.‌ ತೆಲುಗಿನ ಚಿರಂಜೀವಿ.. ಅಲ್ಲು ಅರ್ಜುನ್.. ತಮಿಳಿನ ಸೂರ್ಯ ವಿಶಾಲ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಪರಭಾಷಾ ಕಲಾವಿದರು ಭಾಗಿಯಾಗಿ ಪುನೀತ್ ಗೆ ನಮನ ಸಲ್ಲಿಸಲಿದ್ದಾರೆ.. ನಾಳೆ ಮಧ್ಯಾಹ್ನ ಮೂರು ಗಂಟೆ ಸಮಯಕ್ಕೆ ಕಾರ್ಯಕ್ರಮ ಶುರುವಾಗಲಿದ್ದು ರಾತ್ರಿ ಹತ್ತರ ವರೆಗೆ ಕಾರ್ಯಕ್ರಮ ನಡೆಯಬಹುದು ಎನ್ನಲಾಗಿದೆ..

ಆದರೆ ಈ ಸಮಯದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಕರಿಗೆ ನೋಟೀಸ್ ನೀಡಲಾಗಿದೆ.. ಹೌದು ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಭದ್ರತೆ ನೀಡುವಂತೆ ಆಯೋಜಕರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.. ಅದಾಗಲೇ ಪುನೀತ್ ಅವರ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರಕ್ಕೆ ಭದ್ರತೆ ನೀಡಿ ಯಾವುದೇ ರೀತಿಯ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ನೋಡಿಕೊಂಡಿತ್ತು.. ಅದೇ ಕಾರಣಕ್ಕೆ ಪುನೀತ್ ಅವರ ಪತ್ನಿ ಅಶ್ವಿನಿ ಅವರು ನೋವಿನ ನಡುವೆಯೂ ಪೊಲೀಸ್ ಇಲಾಖೆಗೆ ಖುದ್ದು ಧನ್ಯವಾದಗಳನ್ನು ಸಹ ಸಲ್ಲಿಸಿದ್ದರು..

ಅಂತಿಮ ದರ್ಶನಕ್ಕೆ ನಿಯೋಜನೆಗೊಂಡಿದ್ದ ಪೊಲೀಸರುಗಳು ಸಹ ಸಾಲಾಗಿ ಬಂದು ಪುನೀತ್ ಅವರ ದರ್ಶನ ಪಡೆದು ಕಣ್ಣೀರಿಟ್ಟಿದ್ದರು.. ಈಗಲೂ ಸಹ ಪುನೀತ್ ಅವರಿಗಾಗಿ ಮಾಡುತ್ತಿರುವ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದೆಂದು ಈ ನೋಟೀಸ್ ನೀಡಿದ್ದಾರೆ.. ಹೌದು “ಕಾರ್ಯಕ್ರಮಕ್ಕೆ ಅವಶ್ಯಕತೆ ಇರುವ ಬ್ಯಾರಿಕೇಡ್ ಹಾಗೂ ವೇದಿಕೆಯನ್ನು ಸಿದ್ಧ ಮಾಡಿಕೊಳ್ಳುವುದು ಆಯೋಜಕರ ಜವಾಬ್ದಾರಿಯಾಗಿರಲಿದೆ.. ಕಾರ್ಯಕ್ರಮಕ್ಕೆ ಬರುವ ಗಣ್ಯರಿಗೆ ಪಾಸ್ ಹಾಗೂ ಪ್ರತ್ಯೇಕ ಪ್ರವೇಶ ದ್ವಾರ.. ಹಾಗೂ ವಾಹನಗಳ ನಿಲುಗಡೆಗೆ ಸರಿಯಾದ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು..

ಬರುವ ಪ್ರತೊಯೊಬ್ಬರಿಗೂ ಹಾಲೋಗ್ರಾಮ್ ಇರುವ ಪಾಸ್ ಗಳನ್ನು ನೀಡಬೇಕು. ಒಂದು ಪಾಸ್ ಅನ್ನು ಒಬ್ಬರಿಗೆ ಮಾತ್ರ ಸೀಮಿತ ಮಾಡಬೇಕು.. ಪಾಸ್ ಗಳಿಗೆ ಅನುಗುಣವಾಗಿ ಆಸನದ ವ್ಯವಸ್ಥೆಯನ್ನು ಮಾಡಬೇಕು.. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಗಣ್ಯರ ವಿವರವನ್ನು ಮೊದಲೇ ಪೊಲೀಸರಿಗೆ ನೀಡಬೇಕು.. ಕಾರ್ಯಕ್ರಮದ ಪ್ರತಿಯೊಂದು ಜಾಗದಲ್ಲಿಯೂ ಸಿಸಿಟಿವಿ ಅಡವಳಿಕೆ ಕಡ್ಡಾಯ.. ಎಂದು ಪೊಲೀಸರು ಕಾರ್ಯಕ್ರಮದ ಆಯೋಜಕರು ಕರ್ನಾಟಕ ಚಲಮಚಿತ್ರ ವಾಣಿಜ್ಯ ಮಂಡಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.. ಭಗವಂತನ ಪಾದ ಸೇರಿದ ಬೆಟ್ಟದ ಹೂವಿಗೆ ನಾಳಿನ ಗೀತ ನಮನ ಕಾರ್ಯಕ್ರಮ ನಿಜಕ್ಕೂ ಅಭಿಮಾನಿಗಳನ್ನು ಭಾವುಕರನ್ನಾಗಿಸಲಿದೆ.. ಮತ್ತೆ ಹುಟ್ಟಿ ಬನ್ನಿ ಪುನೀತ್ ಸರ್.. ದಯವಿಟ್ಟು.. ದಯವಿಟ್ಟು..