ನಾಳೆ ಅಪ್ಪುವಿನ ಹಾಲು ತುಪ್ಪ ಕಾರ್ಯ.. ಆದರೆ ಇಂದು ರಾಘಣ್ಣ ಮಾಡಿರುವ ಕೆಲಸ ನೋಡಿ.. ಮನಕಲಕುತ್ತದೆ..

0 views

ಕೆಲವೊಬ್ಬರ ಅಗಲಿಕೆ ಬಹಳ ಡಿಸ್ಟರ್ಬ್ ಮಾಡಿ ಬಿಡುತ್ತದೆ ಎನ್ನುವ ಮಾತನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ.. ಅದರಲ್ಲೂ ಸೆಲಿಬ್ರೆಟಿಗಳು ಹಾಗೂ ಸ್ಟಾರ್ ಗಳು ಅಗಲಿದರೆ ಕಂಬನಿ ಮಿಡಿದು ಒಂದು ಅಥವಾ ಎರಡು ದಿನಕ್ಕೆ ಎಂದಿನಂತೆ ನಮ್ಮ ದೈನಂದಿನ ಜೀವನಕ್ಕೆ ಮರಳುತ್ತೇವೆ.. ಆದರೆ ಬಹುಶಃ ಕನ್ನಡಿಗರನ್ನು ಯಾರ ಸಾವೂ ಕೂಡ ಇಷ್ಟೊಂದು ಡಿಸ್ಟರ್ಬ್ ಮಾಡಿರಲಿಲ್ಲ ಎನಿಸುತ್ತದೆ.. ಹೌದು ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ನಾಲ್ಕು ದಿನಗಳು ಕಳೆದವು.. ಆದರೂ ಸಹ ಇನ್ನೂ ಆ ನೋವಿನಿಂದ ಹೊರ ಬರಲಾಗುತ್ತಿಲ್ಲ.. ನೋವಿರಲಿ.. ಆ ವಿಚಾರವನ್ನು ಅರಗಿಸಿಕೊಳ್ಳುವುದಕ್ಕೇ ಇನ್ನೂ ಸಹ ಸಾಧ್ಯವಾಗುತ್ತಿಲ್ಲ.. ನಾಲ್ಕು ದಿನದ ಹಿಂದಷ್ಟೇ ನಗುನಗುತ್ತಾ ಮಾತನಾಡಿದ ನಮ್ಮ ಅಪ್ಪು ಈಗ ಇಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ..

ನಿಜ ಹೇಳಬೇಕೆಂದರೆ ಅಪ್ಪು ಇಲ್ಲ ಎಂದು ಬರೆಯಲು ಸಹ ಇದು ಭ್ರಮೆಯೋ ಅಥವಾ ಸತ್ಯವೋ.. ನಾನು ಭ್ರಮೆಯಲ್ಲೆನಾದರೂ ಬರೆಯುತ್ತಿದ್ದೇನಾ ಎನಿಸುತ್ತಿದೆ.. ಆದರೆ ಸಾಮಾಜಿಕ ಜಾಲತಾಣ ತೆರೆದು ಮೋಡಿದಾಗ ಇದು ವಾಸ್ತವವೆಂಬ ಅರಿವಾಗಿ ಮತ್ತೆ ಕಣ್ಣಂಚಲ್ಲಿ ನೀರು ತುಂಬುತ್ತಿದೆ.. ಹೌದು ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಅನ್ನುವ ಮಾತಿಲ್ಲಿ ಬಾರದು.. ಬದಲಿಗೆ ಕೋಟ್ಯಾಂತರ ಕನ್ನಡಿಗರು ಪ್ರತಿಯೊಬ್ಬರು ತಮ್ಮ ಮನೆ ಮಗನನ್ನು ಕಳೆದುಕೊಂಡಷ್ಟು ಸಂಕಟ ಪಡುತ್ತಿರುವುದ ನೋಡಿದರೆ ಬದುಕಿದರೆ ಅಪ್ಪುವಿನ ರೀತಿ ಬದುಕಬೇಕೆನಿಸುತ್ತದೆ.. ಆದರೆ ಅಷ್ಟೆಲ್ಲಾ ಜನರ ಪ್ರೀತಿಗೆ ಪಾತ್ರನಾಗಿದ್ದ ಅಜಾತಶತ್ರುವಾಗಿದ್ದ ಅವರನ್ನು ಇಷ್ಟಪಡದ ವ್ಯಕ್ತಿಯನ್ನು ಹುಡುಕಿದರೂ ಸಹ ಸಿಗದ ವ್ಯಕ್ತಿತ್ವವುಳ್ಳ ಪುನೀತ್ ಅವರನ್ನೇಕೆ ಇಷ್ಟು ಬೇಗ ಆ ದೇವರು ಕರೆದುಕೊಂಡ ಎಂಬುದೇ ಈಗಲೂ ಉತ್ತರವಿಲ್ಲದ ಕನ್ನಡಿಗರ ಮನಸ್ಸಿನಲ್ಲಿರುವ ಪ್ರಶ್ನೆ..

ಆದರೆ ಇದೆಲ್ಲವನ್ನು ಮೀರಿ ಜೀವನ ಸಾಗಲೇ ಬೇಕಿದೆ. ನಮ್ಮಗಳಿಗೆ ಎಷ್ಟೇ ನೋವಿದ್ದರೂ ನಾವು ಇಂತಹ ಸಮಯದಲ್ಲಿ ಆ ಕುಟುಂಬಕ್ಕೆ ಧೈರ್ಯ ನೀಡಲೆಂದು ಆ ಕುಟುಂಬ ಈ ನೋವನ್ನು ತಡೆಯಲು ಶಕ್ತಿ ನೀಡೆಂದು ಆ ಸಂಪೂರ್ಣ ಕುಟುಂಬ ಗಟ್ಟಿಯಾಗಲೆಂದು ದೇವರನ್ನು ಪ್ರಾರ್ಥಿಸಲೇ ಬೇಕಿದೆ.. ಹೌದು ಮೊನ್ನೆ ಶಿವಣ್ಣ ಸುದೀಪ್ ಅವರನ್ನು ಅಪ್ಪಿಕೊಂಡು ಅವನು ನನಗಿಂತ ಹದಿಮೂರು ವರ್ಷ ಚಿಕ್ಕವನು ಸುದೀಪ್.. ನಾನೇ ಅವನನ್ನು ಎತ್ತಿ ಆಡಿಸಿದ್ದೇನೆ.. ಅವನು ಬೆಳೆಯುವುದನ್ನು ನೋಡಿದ್ದೇನೆ.. ಈಗ ಇದನ್ನು ನೋಡುತ್ತಾ ನಿಂತಿದ್ದೀನಿ ಎಂದು ಕಣ್ಣೀರು ಹಾಕಿದ್ದರು.. ಅವರಷ್ಟೇ ಅಲ್ಲದೇ ಅವರ ಪತ್ನಿ ಅಶ್ವಿನಿ ಅವರು ಮಕ್ಕಳು ರಾಘಣ್ಣ ಪ್ರತಿಯೊಬ್ಬರ ನೋವು ಸಹ ಹೇಳಲು ಅಸಾಧ್ಯವಾದದ್ದು.. ಅವರಿಗೆಲ್ಲಾ ಭಗವಂತ ಗಟ್ಟಿ ಮನಸ್ಸು ನೀಡಬಿಡಬೇಕಷ್ಟೇ..

ಇನ್ನು ನಾಳೆಗೆ ಪುನೀತ್ ಅವರು ಅಗಲಿ ಐದು ದಿನಗಳು ಕಳೆಯುತ್ತದೆ.. ನಿನ್ನೆ ಮೂರನೇ ದಿನದಂದು ಅಂತ್ಯ ಸಂಸ್ಕಾರ ಮಾಡಿರುವ ಕಾರಣ ಐದನೇ ದಿನ ಹಾಲು ತುಪ್ಪದ ಕಾರ್ಯ ಮಾಡಲು ನಿರ್ಧರಿಸಲಾಗಿದೆ.. ನಾಳಿನ ಕಾರ್ಯದ ನಂತರ ಆ ಜಾಗದಲ್ಲಿ ಕೆಲ ವ್ಯವಸ್ಥೆಗಳನ್ನು ಮಾಡಿ ಆನಂತರ ಅಭಿಮಾನಿಗಳಿಗೆ ಪುನೀತ್ ಅವರ ಸಮಾಧಿ ಬಳಿ ತೆರಳಲು ಅವಕಾಶ ಮಾಡಿಕೊಡಲಾಗುವುದು.. ನಾಳೆ ಕುಟುಂಬದವರು ಕಾರ್ಯ ಮಾಡಬೇಕಾದ ಕಾರಣ ಎಲ್ಲಾ ನೋವನ್ನು ನುಂಗಿ ಕಾರ್ಯಕ್ಕೆ ನೋವಿನ ನಡುವೆಯೂ ತಯಾರಿ ಮಾಡಿಕೊಳ್ಳಲಾಗುತ್ತಿದೆ.. ನಿಜಕ್ಕೂ ಇದನ್ನೆಲ್ಲಾ ಪುನೀತ್ ಅವರಿಗೆ ಮಾಡುತ್ತಿದ್ದಾರಾ ಎಂದರೆ ಈಗಲೂ ಸಹ ಒಂದು ಕ್ಷಣ ಇದೆಲ್ಲಾ ಕನಸಾಗಬಾರದ ಎನಿಸುತ್ತಿದೆ.. ಆದರೆ ಇತ್ತ ರಾಘಣ್ಣ ಮಾಡುತ್ತಿರುವ ಕೆಲಸ ಮಾತ್ರ ಕಣ್ಣಂಚಲ್ಲಿ ನೀರು ತರಿಸುತ್ತಿದೆ..

ಹೌದು ಪುನೀತ್ ಅವರು ಅಗಲಿದಾಗ ಮನಸ್ಸಿನಲ್ಲಿ ಸಾಕಷ್ಟು ನೋವು ತುಂಬಿಕೊಂಡಿದ್ದರೂ ಸಹ ಜನರ ಮುಂದೆ ಜನರು ಇದರಿಂದ ಕುಗ್ಗಿ ಬೇರೆ ರೀತಿಯ ಘಟನೆಗಳು ನಡೆಯಬಾರದೆಂಬ ಕಾರಣಕ್ಕೆ ಪ್ರಭುದ್ಧವಾಗಿ ನಡೆದುಕೊಂಡು ದೊಡ್ಡಮನೆಯ ದೊಡ್ಡತನ ತೋರಿದ್ದರು.. ಪುನೀತ್ ನನ್ನು ಪ್ರೀತಿಯಾಗಿ ಕಳುಹಿಸಿಕೊಡಿ.. ನನಗೆ ಆಣೆ ಮಾಡಿ ಯಾರು ಸಹ ದುಡುಕಬಾರದು.. ಯಾರಿಗೂ ನೋವಾಗಬಾರದು.. ಅಪ್ಪಾಜಿ ಹೋದಾಗ ನಡೆದ ಘಟನೆಗಳಿಂದಲೇ ನಾವಿನ್ನು ಹೊರ ಬಂದಿಲ್ಲ.. ಈಗ ಮತ್ತೆ ಅಂತಹ ಘಟನೆಗಳು ನಡೆಯಬಾರದು ಆಣೆ ಮಾಡಿ ನನಗೆ ಎಂದಿದ್ದರು.. ನಂತರ ಅಪ್ಪುವಿನ ಮುಂದೆ ಸುಮ್ಮನೆ ಕೂತು ಅಭಿಮಾನಿಗಳ ನೋವ ಕಂಡು ನೋವು ಅನುಭವಿಸುತ್ತಿದ್ದರು. ಎಲ್ಲಿಯೂ ಸಹ ಜನರು ಯಾವುದೇ ರೀತಿ ದುಡುಕಬಾರದೆಂದು ಗಟ್ಟಿಯಾಗಿ ತೋರಿಕೊಳ್ಳುತ್ತಿದ್ದ ರಾಘಣ್ಣ ಇದೀಗ ಪುನೀತ್ ಅವರ ಅಂತ್ಯ ಸಂಸ್ಕಾರ ನಡೆದ ಬಳಿಕ ಮಾಡಿರುವ ಮಾಡುತ್ತಿರುವ ಕೆಲಸ ಮನಕಲಕುತ್ತದೆ..

ಹೌದು ಪುನೀತ್ ಅವರನ್ನು ನಿನ್ನೆ ಬೆಳಿಗ್ಗೆ ಅಂತ್ಯ ಸಂಸ್ಕಾರ ಮಾಡಿ ಎಲ್ಲರೂ ಮನೆಗೆ ತೆರಳಿದ್ದರು.. ಆದರೆ ಮಧ್ಯಾಹ್ನದ ಹೊತ್ತಿಗೆ ರಾಘಣ್ಣ ಮರಳಿ ಅಪ್ಪುವಿನ ಬಳಿ ಬಂದು ಬಿಟ್ಟಿದ್ದರು.. ಹೌದು ಅಪ್ಪುವನ್ನು ಆ ರೀತಿ ಮಲಗಿಸಿ ಹೋಗಲು ಅವರಿಗೂ ಮನಸ್ಸು ಬಾರದಾಯಿತೋ.. ಅಥವಾ ಅಪ್ಪು ಇಲ್ಲದ ಸತ್ಯ ಅರಗಿಸಿಕೊಳ್ಳಲು ಸಾಧ್ಯವಾಗದೇ ಮರಳಿ ಆ ಜಾಗಕ್ಕೆ ಬಂದ ರಾಘಣ್ಣ ಜನರಿಲ್ಲದ ಆ ಸಮಯದಲ್ಲಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರು..ಅಷ್ಟೇ ಅಲ್ಲದೇ ನಿನ್ನೆ ತಡರಾತ್ರಿಯವರೆಗೂ ರಾಘಣ್ಣ ಅದೇ ಜಾಗದಲ್ಲಿದ್ದು ತಡರಾತ್ರಿಯಲ್ಲಿ ಸಹಾಯಕರು ಅವರನ್ನು ಮರಳಿ ಮನೆಗೆ ಕರೆದುಕೊಂಡು ಹೋದರು..

ಅಷ್ಟೇ ಅಲ್ಲದೇ ಇಂದು ಬೆಳಿಗ್ಗೆ ಮತ್ತೆ ಬೆಳಗಿನ ಜಾವ ರಾಘಣ್ಣ ಮರಳಿ ತಮ್ಮನ ಬಳಿ ಬಂದಿದ್ದು ಅಲ್ಲಿದ್ದವರಿಗೆ ಹಾಗೂ ಮಾದ್ಯಮದ ಕೆಲ ಸಿಬ್ಬಂಧಿಗಳು ಅಲ್ಲಿಗೆ ತೆರಳಿದಾಗ ರಾಘಣ್ಣನ ಪರಿಸ್ಥಿತಿ ನೋಡಿ ಕಣ್ಣಂಚಲ್ಲಿ ನೀರು ಜಾರಿತು.. ಅತ್ತ ಪ್ರೀತಿಯ ತಮ್ಮನಿಲ್ಲ ಎನ್ನುವ ವಾಸ್ತವ ಅರಿತಿದ್ದರೂ ಸಹ ಯಾಕೆ ಹೀಗೆಲ್ಲಾ ಆಗಿ ಹೋಯ್ತು ಎಂದು ಒಬ್ಬರೇ ಪುನೀತ್ ಅವರ ಮುಂದೆ ಕೂತು ಕಣ್ಣೀರು ಇಡುತ್ತಿದ್ದದ್ದು ಮನಕಲಕುವಂತಿತ್ತು.. ಹೌದು ತಮ್ಮನನ್ನು ಬಿಟ್ಟು ಹೋಗಲು ಮನಸ್ಸಾಗದ ರಾಘಣ್ಣ ಅದೇ ಜಾಗದಲ್ಲಿ ಸಮಯ ಕಳೆಯುತ್ತಿದ್ದು ದೇವರು ಹೀಗ್ಯಾಕೆ ಮಾಡಿಬಿಟ್ಟ ಎನಿಸುವಂತೆ ಮಾಡಿದೆ..