ಸಾಕಷ್ಟು ನೊಂದಿದ್ದೇನೆ.. ಮತ್ತಷ್ಟು ನೋವು ಕೊಡಬೇಡಿ ಎಂದ ಅಶ್ವಿನಿ ಪುನೀತ್.. ಕಾರಣವೇನು ಗೊತ್ತಾ..

0 views

ಪುನೀತ್ ರಾಜ್ ಕುಮಾರ್ ಅವರು ಅಗಲಿ ಹತ್ತು ದಿನಗಳು ಕಳೆದು ಹೋದವು.. ಆದರೂ ಸಹ ಈಗಲೂ ಒಂದಿಷ್ಟು ನೋವು ಕೂಡ ಯಾರ ಮನಸ್ಸಿನಲ್ಲಿಯೂ ಕಡಿಮೆಯಾಗಿಲ್ಲ.. ಸಂಬಂಧವಿಲ್ಲದ ಸ್ನೇಹಿತರಲ್ಲದ ಕೇವಲ ತೆರೆ ಮೇಲೆ ಮಾತ್ರ ನೋಡಿ ಅವರ ಬಗ್ಗೆ ಬರುವ ಸುದ್ದಿಗಳನ್ನು ಮಾತ್ರ ಓದಿ ಅಭಿಮಾನ ಬೆಳೆಸಿಕೊಂಡ ನಮ್ಮಗಳಿಗೆ ಈ ನೋವು ಮರೆಯಲು ಸಾಧ್ಯವಾಗುತ್ತಿಲ್ಲ ಎಂದ ಮೇಲೆ ಆ ಕುಟುಂಬದ ನೋವನ್ನು ಪದಗಳಲ್ಲಿ ಹೇಳುವುದೂ ಕೂಡ ಅಸಾಧ್ಯ.. ಅದರಲ್ಲೂ ಶಿವಣ್ಣ ರಾಘಣ್ಣ ಪೂರ್ಣಿಮಾ ಅವರು ತಮ್ಮೆಲ್ಲರಗಿಂತ ಚಿಕ್ಕವನಾದ ಬದುಕಿ ಬಾಳಬೇಕಾದ ತಮ್ಮನನ್ನು ಕಳೆದುಕೊಂಡು ಸಾಕಷ್ಟು ನೊವಿನಲ್ಲಿದ್ದಾರೆ.. ಇತ್ತ ಮಡದಿ ಅಶ್ವಿನಿ ಅವರ ಪರಿಸ್ಥಿತಿ ನಿಜಕ್ಕೂ ಊಹಿಸಲಸಾಧ್ಯ..

ಆ ಎರಡು ಪುಟ್ಟ ಮಕ್ಕಳಿಗೆ ಇನ್ನು ಮುಂದೆ ತಂದೆ ತಾಯಿ ಇಬ್ಬರೂ ಆಗಿ ಜೀವನವನ್ನು ದಿಟ್ಟವಾಗಿ ಮುನ್ನಡೆಸಬೇಕಿದೆ.. ಇಂತಹ ಸಮಯದಲ್ಲಿ ಅಶ್ವಿನಿ ಅವರು ಈಗಾಗಲೇ ಸಾಕಷ್ಟು ನೊಂದಿದ್ದೇನೆ.. ಮತ್ತಷ್ಟು ನೋವು ಕೊಡಬೇಡಿ ಎನ್ನುವ ಮಾತುಗಳನ್ನು ಆಡಿದ್ದಾರೆ.. ಇದಕ್ಕೆ ಬಲವಾದ ಕಾರಣವೂ ಇದೆ.. ಹೌದು ಪುನೀತ್ ಅವರು ಅಗಲಿ ನಾಳೆಗೆ ಹನ್ನೊಂದು ದಿನಗಳು.. ನಾಳೆ ಸದಾಶಿವನಗರದ ಪುನೀತ್ ರಾಜ್ ಕುಮಾರ್ ಅವರ ನಿವಾಸದಲ್ಲಿ ಅಪ್ಪುವಿನ ಹನ್ನೊಂದನೇ ದಿನದ ಪುಣ್ಯ ಸ್ಮರಣೆ ಕಾರ್ಯವನ್ನು ಏರ್ಪಡಿಸಲಾಗಿದೆ.. ಸಂಬಂಧಿಕರು ನಾಳೆ ಪುನೀತ್ ಅವರ ನಿವಾಸದಲ್ಲಿ ಪೂಜೆ ಸಲ್ಲಿಸಿ ನಂತರ ಸಮಾಧಿ ಬಳಿ ತೆರಳಿ ಅಲ್ಲಿ ಎಡೆ ಇಟ್ಟು ಪೂಜೆ ಮಾಡಲಾಗುವುದು.. ಈಗಾಗಲೇ ಮಡಿಯಲ್ಲಿ ಕಾರ್ಯಕ್ಕೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ..

ಈ ನಡುವೆ ಅಶ್ವಿನಿ ಅವರು ಮುಂದಿನ ದಿನಗಳಲ್ಲಿ ಪುನೀತ್ ಅವರು ಮಾಡುತ್ತಿದ್ದ ಎಲ್ಲಾ ಸಮಾಜ ಸೇವೆಗಳನ್ನೂ ಸಹ ಮುಂದುವರೆಸಿಕೊಂಡು ಹೋಗುವ ನಿರ್ಧಾರ ಮಾಡಿದ್ದು ಅಪ್ಪು ಮನಸ್ಪೂರ್ತಿಯಾಗಿ ಮಾಡುತ್ತಿದ್ದ ಯಾವ ಕೆಲಸವೂ ನಿಲ್ಲುವುದಿಲ್ಲ ಎನ್ನುವ ಮಾತುಗಳನ್ನಾಡಿದ್ದಾರೆ.. ಇದೆಲ್ಲದರ ನಡುವೆ ನೋವಿನ ಮಾತುಗಳನ್ನಾಡಿದ್ದು ಈಗಾಗಲೇ ಸಾಕಷ್ಟು ನೋವಿನಲ್ಲಿದ್ದೇನೆ.. ಮತ್ತಷ್ಟು ನೋವು ಕೊಡಬೇಡಿ‌ ಎಂದಿದ್ದಾರೆ.. ಹೌದು ದೊಡ್ಡಮನೆ ಎನ್ನೋದು ಇದಕ್ಕೆ ಇರಬೇಕು..

ಹೌದು ಅಶ್ವಿನಿ ಅವರು ಈ ಮಾತುಗಳನ್ನು ಆಡಲು ಕಾರಣ ಕಳೆದ ಹತ್ತು ದಿನಗಳಿಂದ ಅಪ್ಪು ಅವರ ಕೆಲ ಅಭಿಮಾನಿಗಳು ನೋವು ತಾಳಲಾರದೇ ದುಡುಕಿನ ನಿರ್ಧಾರ ಮಾಡಿ ಜೀವ ಕಳೆದುಕೊಳ್ಳುತ್ತಿರುವುದು.. ಹೌದು ಈ ರೀತಿ ಅವರ ಅಭಿಮಾನಿಗಳು ಜೀವ ಕಳೆದುಕೊಂಡು ಆ ತಂದೆ ತಾಯಿಗಳಿಗೆ ನೋವು ನೀಡಿದರೆ ಈಗಾಗಲೇ ನೋವಿನಲ್ಲಿರುವ ನಮಗೆ ಮತ್ತಷ್ಟು ನೋವುಂಟಾಗಲಿದೆ.. ದಯವಿಟ್ಟು ಯಾರೂ ಸಹ ಈ ರೀತಿ ದುಡುಕಿ ನಿರ್ಧಾರ ಮಾಡಬೇಡಿ.. ನಿಮ್ಮ ನಿಮ್ಮ ತಂದೆ ತಾಯಿಗಳಿಗೆ ನೋವು ನೀಡಬೇಡಿ.. ಈಗಾಗಲೇ ನಾನು ಹಾಗೂ ಕುಟುಂಬ ಸಾಕಷ್ಟು ನೋವಿನಲ್ಲಿದ್ದೇವೆ.. ಇಂತಹ ಸಮಯದಲ್ಲಿ ಇಂತಹ ಘಟನೆಗಳ ಮೂಲಜ ಮತ್ತಷ್ಟು ನೋವು ನೀಡಬೇಡಿ.. ಎಂದು ಮನವಿ ಮಾಡಿಕೊಂಡಿದ್ದಾರೆ..

ಇತ್ತ ರಾಘಣ್ಣ ಕೂಡ ನಾಳೆ ತಮ್ಮನ ಹನ್ನೊಂದನೇ ದಿನದ ಕಾರ್ಯ ಇದ್ದರೂ ಸಹ ಇಂದು ರಾಮನಗರದ ಚೆನ್ನಪಟ್ಟಣದಲ್ಲಿ ಜೀವ ಕಳೆದುಕೊಂಡಿದ್ದ ಪುನೀತ್ ಅವರ ಅಭಿಮಾನಿ ವೆಂಕಟೇಶ್ ಎಂಬುವವರ ಮನೆಗೆ ತೆರಳಿ ಧೈರ್ಯ ತುಂಬಿ ಅರ್ಧ ಗಂಟೆಗೂ ಹೆಚ್ಚು ಸಮಯ ಅವರ ಮನೆಯಲ್ಲಿಯೇ ಇದ್ದು ಸಾಂತ್ವಾನ ಹೇಳಿ ಜನರ ಬಳಿ ಈ ರೀತಿ ಯಾರೂ ಸಹ ಮಾಡಬೇಡಿ.. ಇದು ಅಪ್ಪುಗೆ ಅಗೌರವ ತೋರಿದಂತಾಗುತ್ತದೆ.. ಒಬ್ಬೊಬ್ಬರೇ ಹೀಗೆ ಹೋಗುತ್ತಿದ್ದರೆ ಭೂಮಿ ಮೇಲೆ ಯಾರೂ ಸಹ ಉಳಿಯುವುದಿಲ್ಲ.. ದಯವಿಟ್ಟು ನಿಮ್ಮ ತಂದೆತಾಯಿಗಳಿಗೆ ನೋವು ಕೊಡಬೇಡಿ ಎಂದು ಕೇಳಿಕೊಂಡಿದ್ದಾರೆ..