ಇದಕ್ಕೆ ಹಣೆಬರಹ ಅನ್ನೋದು.. ಅಪ್ಪನನ್ನು ನೋಡಲು ಅಮೆರಿಕಾದಿಂದ ಬರುತ್ತಿದ್ದ ಮಗಳು ಧೃತಿ.. ಆದರೆ ಏನಾಗಿದೆ ನೋಡಿ..

0 views

ಆತ ನಮ್ಮ ಸಂಬಂಧಿಕ ಅಲ್ಲ ಸ್ನೇಹಿತನೂ ಅಲ್ಲ.. ಆಪ್ತನಂತೂ ಅಲ್ಲವೇ ಅಲ್ಲ.. ನಮ್ಮಲ್ಲಿ ಕೋಟ್ಯಾಂತರ ಜನರು ಆತನನ್ನು ನಿಜವಾಗಿ ನೋಡಿದ್ದೂ ಸಹ ಇಲ್ಲ.. ಕೇವಲ ತೆರೆ ಮೇಲಷ್ಟೇ ಕಂಡಿದ್ದು.. ಕಾರ್ಯಕ್ರಗಳಲ್ಲಿಯಷ್ಟೇ ಆತನ ಗುಣ ನೋಡಿದ್ದು.. ಆದರೂ ನಿನ್ನೆ ರಾತ್ರಿ ಪೂರ್ತಿ ನಿದ್ರೆ ಇಲ್ಲದೇ ಅಪ್ಪುವಿನ ಅಗಲಿಕೆಗೆ ಸಂಕಟ ಅನುಭವಿಸಿದ್ದು ಮಾತ್ರ ನನ್ನನ್ನೂ ಸೇರಿ ಕೋಟ್ಯಾಂತರ ಜನ ಅನ್ನೋದು ಅಕ್ಷರಶಃ ಸತ್ಯದ ಮಾತು.. ಅತ್ತ ಒಂದು ಕಡೆ ಕಂಠೀರವ ಸ್ಟುಡಿಯೋ ಮುಂಭಾಗದಲ್ಲಿ ಜನ ಸಾಗರ ಸೇರಿದೆ.. ಅಪ್ಪುವನ್ನು ಕೊನೆಯದಾಗಿ ಕಾಣಲು ಹೆಂಗಸರು ಮಕ್ಕಳು ಎಲ್ಲರೂ ಸಹ ರಾತ್ರಿ ಪೂರ್ತಿ ಸರತಿ ಸಾಲಿನಲ್ಲಿ ನಿಂತು ಕಣ್ಣೀರಿಟ್ಟು ಅಪ್ಪುವನ್ನು ಕಂಡು ಸಂಕಟ ಪಟ್ಟಿದ್ದು ನಿಜಕ್ಕೂ ಕುಸಿದು ಬೀಳುವಂತೆ ಮಾಡುತ್ತಿದೆ..

ಇನ್ನು ಇತ್ತ ತಮ್ಮನನ್ನು ಕಳೆದುಕೊಂಡ ಶಿವಣ್ಣ ದಿಕ್ಕು ದೋಚದಂತೆ ಪುನೀತ್ ಅವರ ಪಕ್ಕದಲ್ಲಿ ತಬ್ಬಿಬ್ಬಾಗಿ ನಿಂತದ್ದು ಮತ್ತಷ್ಟು ನೋವನ್ನುಂಟು ಮಾಡಿದರೆ.. ಅತ್ತ ಅಶ್ವಿನಿ ಅವರು ಹಾಗೂ ಎರಡನೇ ಮಗಳು ಅಪ್ಪುಗಾಗಿ ಕಣ್ಣೀರಿಡುತ್ತಿದ್ದದ್ದು ನೋಡಲಾಗದು.. ಯಾವ ಶತ್ರುವಿಗೂ ಇಂತಹ ಸ್ಥಿತಿ ಬಾರದಿರಲಿ.. ಕೋಟ್ಯಾಂತರ ಜನರ ಮನ ಗೆದ್ದವ.. ಸದಾ ಮೊದಲು ನಿಮ್ಮ ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ ಎನ್ನುತ್ತಿದ್ದ ಸಹೃದಯಿಯ ಹೃದಯಕ್ಕೆ ಇಂತಹ ದೊಡ್ಡ ಶಿಕ್ಷೆ ಕೊಟ್ಟು ಆ ಸುಂದರ ಕುಟುಂಬ ಹಾಗೂ ನಾಡಿನ ಜನತೆಗೆ ಇಷ್ಟೇಕೆ ನೋವ ಕೊಟ್ಟ ಆ ಭಗವಂತ ನಿಜಕ್ಕೂ ತಿಳಿಯದು..

ಆದರೆ ಬೇರೆ ದಾರಿಯೇ ಇಲ್ಲದೇ ವಾಸ್ತವ ಒಪ್ಪಿಕೊಳ್ಳಲೇ ಬೇಕಷ್ಟೇ.. ಇತ್ತ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಗೆ ಸಂಪೂರ್ಣ ಕರ್ನಾಟಕ ಕಂಬನಿ‌ ಮಿಡಿದಿದೆ.. ಸರ್ಕಾರ ಸಂತಾಪ ಸೂಚಿಸಿದೆ.. ದೇಶದಾದ್ಯಂತ ಗಣ್ಯರು ಸಂತಾಪ ಸೂಚಿಸಿದ್ದಾರೆ.. ಇನ್ನು ಪುನೀತ್ ರಾಜ್ ಕುಮಾರ್ ಅವರ ಅಂತಿಮ ಸಂಸ್ಕಾರವನ್ನು ನಾಳೆ ಬೆಳಿಗ್ಗೆ ಕಂಠೀರವ ಸ್ಟೇಡಿಯಂ ನಲ್ಲಿ ನೆರವೇರಿಸಲು ನಿರ್ಧರಿಸಲಾಗಿತ್ತು.. ಈ ಬಗ್ಗೆ ಆದೇಶ ಸಹ ಹೊರಡಿಸಲಾಗಿದೆ.. ಅತ್ತ ಪುನೀತ್ ಅವರ ದೊಡ್ಡ ಮಗಳು ಧೃತಿ ಅಮೇರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದು ಆಕೆಯ ಬರುವಿಕೆಗಾಗಿ ಕುಟುಂಬದವರು ಕಾಯುತ್ತಿದ್ದರು.. ಅತ್ತ ಅಪ್ಪನ ವಿಚಾರ ಕೇಳಿ ಮಗಳು ಕಣ್ಣೀರಿಟ್ಟು ಅಪ್ಪನನ್ನು ಕೊನೆ ಬಾರಿ ಕಾಣುವ ತವಕದ ಸಂಕಟ ನಿಜಕ್ಕೂ ಯಾರಿಂದಲೂ ಊಹಿಸಲೂ ಸಾಧ್ಯವಿಲ್ಲ..

ಅಮೇರಿಕಾದಿಂದ ಆ ತಕ್ಷಣವೇ ಧೃತಿ ಹೊರಟಿದ್ದರು.. ಆದರೆ ಹಣೆಬರಹ ಅನ್ನೋದು ಇದಕ್ಕೇ.. ಹೌದು ಧೃತಿ ಅದಾಗಲೇ ನಿನ್ನೆ ಹೊರಟು ಇಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ಬೆಂಗಳೂರಿಗೆ ತಲುಪಬೇಕಿತ್ತು.. ಆದರೆ ಗ್ರಹಚಾರ ಧೃತಿ ಬರುತ್ತಿದ್ದ ವಿಮಾನ ಆರು ಗಂಟೆಗಳ ಕಾಲ ತಡವಾಗಿದೆ.. ಹೌದು ಒಂದು ಕಡೆ ನಿನ್ನೆ ಮೊನ್ನೆಯಷ್ಟೇ ಅಪ್ಪನೊಟ್ಟಿಗೆ ಮಾತನಾಡಿದ್ದ ಧೃತಿಗೆ ಇಂದು ಅಪ್ಪನಿಲ್ಲ ಎಂಬುದನ್ನೇ ಅರಗಿಸಿಕೊಳ್ಳಲಾಗದ ಸಂಕಟ.. ಅಪ್ಪನನ್ನು ಆದಷ್ಟು ಬೇಗ ಕಾಣಬೇಕೆಂದು ಹೊರಟಿದ್ದ ಧೃತಿಗೆ ಇದೀಗ ವಿಮಾನ ತಡವಾಗಲಿದೆ ಎಂದು ತಿಳಿದು ಅಲ್ಲಿಯೇ ಕೂತು ನೋವು ಪಡುವಂತಾಗಿದೆ..

ಇನ್ನು ಇಂದು ತಡರಾತ್ರಿ ಹನ್ನೆರೆಡು ಗಂಟೆಗೆ ಧೃತಿ ಬರಬಹಿದಾಗಿದ್ದು ನಾಳೆ ಬೆಳಿಗ್ಗೆ ಮಾಡಬೇಕಿದ್ದ ಪುನೀತ್ ಅವರ ಅಂತ್ಯ ಸಂಸ್ಕಾರವನ್ನು ನಾಳೆ ಮಧ್ಯಾಹ್ನದ ಮೇಲೆ ಮಾಡಬಹುದಾಗಿದೆ.. ಭಗವಂತ ನಿನಗ್ಯಾಕೆ ಇಷ್ಟು ಕಲ್ಲು ಮನಸ್ಸು.. ಭಗವಂತನ ಲೆಕ್ಕಾಚಾರ ತಪ್ಪುವುದಿಲ್ಲ ಅನ್ನೋ ಮಾತಿದೆ.. ಆದರೆ ನಿಜಕ್ಕೂ ನೀ ನಿನ್ನೆ ನಿನ್ನ ಲೆಕ್ಕವಾ ತಪ್ಪಿಬಿಟ್ಟಿ.. ಅದೆಷ್ಟೋ ಅನಾಥಾಶ್ರಮಗಳು.. ಅದೆಷ್ಟೋ ಗೋಶಾಲೆಗಳು.. ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ.. ಮಹಿಳೆಯರಿಗಾಗಿ ಶಕ್ತಿಧಾಮ.. ಇನ್ನು ಹೇಳುತ್ತಿದ್ದರೆ ಕಣ್ಣೀರು ತುಂಬುತ್ತದೆ.. ಇದನ್ನೆಲ್ಲಾ ಎಲ್ಲಿಯೂ ಹೇಳಿಕೊಳ್ಳದೆ ನಿಸ್ವಾರ್ಥವಾಗಿ ಮಾಡಿಕೊಂಡು ಬರುತ್ತಿದ್ದ ಆ ಮುಗ್ಧ ಜೀವವೇನು ತಪ್ಪು ಮಾಡಿತು.. ಆ ಪುಣ್ಯವಂತನಲ್ಲಿ ನಿನಗ್ಯಾವ ಪಾಪ ಕಂಡಿತು.. ನಿಜಕ್ಕೂ ಈ ವಿಚಾರದಲ್ಲಿ ಕರುನಾಡು ನಿನ್ನ ಎಂದೂ ಕ್ಷಮಿಸಲಾರದು ಭಗವಂತ.. ಅಪ್ಪು ಸರ್ ದಯವಿಟ್ಟು ಮತ್ತೆ ಇದೇ ನಾಡಿನಲ್ಲಿ ಅಪ್ಪು ಆಗಿಯೇ ಹುಟ್ಟಿಬನ್ನಿ..‌ ದಯವಿಟ್ಟು ಮರಳಿ ಬನ್ನಿ ಅಪ್ಪು ಸರ್..