ಪುನೀತ್ ಹನ್ನೊಂದನೇ ದಿನದ ಕಾರ್ಯದಲ್ಲಿ ವಿನೋದ್ ರಾಜ್ ಮಾಡಿರುವ ಕೆಲಸ ನೋಡಿ.. ಶಾಸ್ತ್ರದ ಪ್ರಕಾರ ಮುಡಿ ಕೊಟ್ಟಿದ್ದು ಯಾರು ಗೊತ್ತಾ..

0 views

ಕಳೆದ ಹನ್ನೊಂದು ದಿನದ ಹಿಂದೆ ನಾಡಿನ ಮಗ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕವಾಗಿ ಕೊನೆಯುಸಿರೆಳೆದರು ಎಂಬ ವಿಷಯ ಸಂಪೂರ್ಣ ರಾಜ್ಯವನ್ನೇ ಸೂತಕದ ಮನೆಯನ್ನಾಗಿ‌ ಮಾಡಿ ಬಿಟ್ಟಿತು.. ರಾಜ್ಯದ ಪ್ರತಿಯೊಂದು ಮನೆಯಲ್ಲಿಯೂ ಅಪ್ಪುಗಾಗಿ ಕಂಬನಿ ಮಿಡಿದರು.. ದೇಶ ವಿದೇಶದಲ್ಲಿನ ಅಭಿಮಾನಿಗಳು ಕಣ್ಣೀರಿಟ್ಟರು.. ರಾಜ್ಯದ ಜನತೆಯ ನೋವು ಒಂದು ಕಡೆಯಾದರೆ ಅತ್ತ ಕುಟುಂಬದ ನೋವು ಹೇಳತೀರದಾಗಿತ್ತು.. ಅದಾಗಲೇ ಒಮ್ಮೆ ರಾಜ್ ಕುಮಾರ್ ಅವರು ಅಗಲಿದ ಸಮಯದಲ್ಲಿ ನಡೆದ ಘಟನೆಯಿಂದ ಎಂಟು ಮಂದಿ ಜೀವ ಕಳೆದುಕೊಂಡ ಘಟನೆಯಿಂದ ನೊಂದಿದ್ದ ಕುಟುಂಬ ಈ ಬಾರಿ ಎಷ್ಟೇ ನೋವಿದ್ದರೂ ಆ ನೋವನ್ನು ತಮ್ಮ ಮನಸ್ಸಿನಲ್ಲಿಯೇ ಅಡಗಿಸಿ ಇಟ್ಟುಕೊಂಡು ಜನರ ಮುಂದೆ ಸಂಪೂರ್ಣ ಕುಟುಂಬ ಗಟ್ಟಿಯಾಗಿ ಕಾಣಿಸಿಕೊಂಡಿತ್ತು..

ನಮ್ಮ ಕಣ್ಣೀರು ನೋಡಿದರೆ ಜನರು ಕುಗ್ಗಬಹುದೆಂದು ಅಪ್ಪುವನ್ನು ಸಂತೋಷದಿಂದ ಕಳುಹಿಸಿಕೊಡಿ ಎಂದು ಮನವಿ ಮಾಡಿಕೊಂಡರು.. ಸರ್ಕಾರ ಹಾಗೂ ಪೊಲೀಸರ ಸಹಕಾರದಿಂದ ಯಾವುದೇ ಘಟನೆ ನಡೆಯದೇ ಅಪ್ಪುವಿನ ಅಂತ್ಯ ಸಂಸ್ಕಾರ ನೆರವೇರಿತು.. ನಾಡಿನ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಜನರು ಪುಣ್ಯಾತ್ಮ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆದರು.. ವಾರದ ಹಿಂದೆ ರಾಘಣ್ಣ ಮಾದ್ಯಮದ ಜೊತೆ ಮಾತನಾಡುವಾಗ ಹೇಳಿದಂತೆ ಅಪ್ಪು ಹೋಗಿ ಐದು ದಿನವಾಯಿತು.. ಹನ್ನೊಂದು ದಿನವೂ ಆಗುತ್ತದೇ ವರ್ಷವೂ ಆಗುತ್ತದೆ.. ಈ ನೋವು ಮರೆಯುವಂತದ್ದೂ ಅಲ್ಲ.. ಕಡಿಮೆಯಾಗುವಂತದ್ದೂ ಅಲ್ಲ.. ಆದರೆ ಆ ನೋವಿನ ಜೊತೆಯೇ ಜೀವನ ಸಾಗಬೇಕು.. ನಾವು ಇರುವವರೆಗೂ ಆ ನೋವು ಇದ್ದೇ ಇರುತ್ತದೆ ಎಂದಿದ್ದರು.. ಕುಟುಂಬಕ್ಕೆ ಮಾತ್ರವಲ್ಲ ಸಂಪೂರ್ಣ ನಾಡಿನ ಜನತೆಗೆ ಅಪ್ಪು ಇಲ್ಲದ ನೋವು ಸದಾ ಕಾಲ ಇದ್ದೇ ಇರುತ್ತದೆ ಎಂಬುದು ಅಷ್ಟೇ ಸತ್ಯದ ಮಾತು..

ಇತ್ತ ಪುನೀತ್ ಅಗಲಿ ಇಂದಿಗೆ ಹನ್ನೊಂದು ದಿನ ಕಳೆದು ಹೋಯಿತು.. ಕುಟುಂಬದಿಂದ ಇಂದು ಪುನೀತ್ ರಾಜ್ ಕುಮಾರ್ ಅವರ ಹನ್ನೊಂದನೇ ದಿನದ ಕಾರ್ಯವನ್ನು ಸದಾಶಿವನಗರದ ಪುನೀತ್ ರಾಜ್ ಕುಮಾರ್ ಅವರ ಮನೆಯಲ್ಲಿ ಏರ್ಪಡಿಸಲಾಗಿತ್ತು.. ಸಂಬಂಧಿಕರು ಹಾಗೂ ಸಿನಿಮಾ ಮಂದಿಗೆ ಆಹ್ವಾನ ನೀಡಲಾಗಿತ್ತು.. ಇಂದು ಪುನೀತ್ ಅವರ ಮನೆಯಲ್ಲಿ ಕುಟುಂಬದವರು ಪೂಜೆ ಸಲ್ಲಿಸಿ ನಂತರ ಕಂಠೀರವ ಸ್ಟುಡಿಯೋದಲ್ಲಿನ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿ ಮನೆಗೆ ಆಗಮಿಸಿದರು.. ಅಪ್ಪುವಿಗೆ ಇಷ್ಟವಾದ ಊಟವನ್ನು ಎಡೆಯ ರೂಪದಲ್ಲಿ ಇಡುವಾಗ ಅಶ್ವಿನಿ ಅವರು ಕಣ್ಣೀರಿಟ್ಟಿದ್ದು ನಿಜಕ್ಕೂ ಮನಕಲಕುವಂತಿತ್ತು.. ಈಗಲೂ ಏನಾದರೂ ಪವಾಡ ನಡೆದು ಪುನೀತ್ ಬರಬಾರದ ಎನಿಸುವಂತಿತ್ತು..

ಆದರೆ ವಾಸ್ತವ ಅರಿತು ಮುಂದೆ ಸಾಗಲೇ ಬೇಕಿದೆ.. ಇನ್ನು ಇತ್ತ ಮನೆಯಲ್ಲಿ ಸಂಬಂಧಿಕರಿಗೆ ಹಾಗೂ ಸಿನಿಮಾ ಮಂದಿಗೆ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು.. ಅತ್ತ ಸಮಾಧಿ ಬಳಿ ಆಗಮಿಸಿದ ಅಭಿಮಾನಿಗಳಿಗೂ ಸಹ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.. ಇನ್ನು ಕುಟುಂಬ ಮಾತ್ರವಲ್ಲದೇ ನಾಡಿನಾದ್ಯಂತ ಹಲವಾರು ಕಡೆ ಪುನೀತ್ ರಾಜ್ ಕುಮಾರ್ ಅವರ ಪುಣ್ಯ ಕಾರ್ಯವನ್ನು ನೆರವೇರಿಸಲಾಗಿದೆ.. ಮೈಸೂರು ಬೆಂಗಳೂರು ಉತ್ತರ ಕರ್ನಾಟಕ ಹಾಗೂ ಎಲ್ಲಾ ಜಿಲ್ಲೆಗಳಲ್ಲಿಯೂ ರಸ್ತೆ ರಸ್ತೆಗಳಲ್ಲಿಯೂ ಪುನೀತ್ ಅವರ ಫೋಟೋಗೆ ಪೂಜೆ ಸಲ್ಲಿಸಿ ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದು ನಿಜಕ್ಕೂ ಪುನೀತ್ ಅವರು ಹೋಗುವಾಗ ಏನು ಪಡೆದು ಹೋದರೆಂಬುದಕ್ಕೆ ನಿದರ್ಶನದಂತೆ ಕಂಡಿತ್ತು..

ಇನ್ನು ಇತ್ತ ಇದೇ ದಿನ ಪುನೀತ್ ಅವರ ಪುಣ್ಯ ಕಾರ್ಯದ ದಿನ ಪುನೀತ್ ಅವರಿಗೆ ಶಾಂತಿ ಸಿಗಲೆಂದು ವಿನೋದ್ ರಾಜ್ ಅವರು ಬೇರೆಯದ್ದೇ ಕೆಲಸ ಸಹ ಮಾಡಿದ್ದಾರೆ.. ಹೌದು ಲೀಲಾವತಿ ಅವರು ಹಾಗೂ ಅವರ ಆಪ್ತ ಸಂಬಂಧಿಕರ ಜೊತೆ ವಿನೋದ್ ರಾಜ್ ಅವರು ಎರಡು ಕಾರ್ ಗಳಲ್ಲಿ ಶ್ರೀರಂಗಪಟ್ಟಣಕ್ಕೆ ತೆರಳಿದ್ದು ಅಲ್ಲಿ ಪುನೀತ್ ಅವರ ತರ್ಪಣ ಬಿಟ್ಟಿದ್ದಾರೆ.. ಹೌದು ಶ್ರೀರಂಗಪಟ್ಟಣದ ಪುರೋಹಿತರಾದ ದೇವರಾಜ್….. ಶರ್ಮಾ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ವಿನೋದ್ ರಾಜ್ ಅವರು ಗಂಜಾಂ ನಲ್ಲಿ ತರ್ಪಣ ಬಿಟ್ಟಿದ್ದಾರೆ.. ಜೊತೆಗೆ ಪುನೀತ್ ಅವರಿಗೆ ಮುಕ್ತಿ ದೊರಕಲೆಂದು ಆಶ್ಲೇಷ ಹಾಗೂ ನರಸಿಂಹಸ್ವಾಮಿ ಪೂಜೆ ಸಲ್ಲಿಸಿ ಮುಕ್ತಿ ದೊರಕುವಂತೆ ಪ್ರಾರ್ಥನೆ ಮಾಡಿದ್ದಾರೆ..

ಇನ್ನು ಇತ್ತ ಪುನೀತ್ ರಾಜ್ ಕುಮಾರ್ ಅವರ ಅಂತಿಮ ಸಂಸ್ಕಾರದ ದಿನ ಸಂಪ್ರದಾಯದ ಪ್ರಕಾರ ಮಗ ಮಾಡಬೇಕಾದ ಎಲ್ಲಾ ಕಾರ್ಯವನ್ನು ನೆರವೇರಿಸಿದ ರಾಘಣ್ಣನ ಮಗ ವಿನಯ್ ರಾಜ್ ಕುಮಾರ್ ಅವರು ಇದೀಗ ಹನ್ನೊಂದನೇ ದಿನದ ಕಾರ್ಯದಲ್ಲಿ ಮಾಡಬೇಕಾದ ಶಾಸ್ತ್ರದಂತೆ ಪಂಚ ಮುಡಿ ತೆಗೆಸಿಕೊಂಡಿದ್ದಾರೆ.. ಹೌದು ಸಂಪ್ರದಾಯದ ಪ್ರಕಾರ ನಿನ್ನೆ ತಮ್ಮ ಮನೆಯಲ್ಲಿಯೇ ಪೂಜೆ ಸಲ್ಲಿಸಿ ಕ್ಷೌರಿಕರನ್ನು ಮನೆಗೆ ಕರೆಸಿ ಅವರಿಗೆ ಶಾಸ್ತ್ರದ ಪ್ರಕಾರ ನೀಡಬೇಕಾದ ವಸ್ತುಗಳನ್ನು ಕೊಟ್ಟು ಪಂಚ ಮುಡಿ ಕೊಟ್ಟು ಚಿಕ್ಕಪ್ಪನಿಗೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡಿದ್ದಾರೆ..