ವೇದಿಕೆ ಮೇಲೆ ಮಕ್ಕಳ ಜವಾಬ್ದಾರಿ ತಗೋತೀನಿ‌ ಎಂದಿದ್ದ ನಟ ವಿಶಾಲ್ ಈಗ ಮಾಡಿರುವ ಕೆಲಸ ನೋಡಿ..

0 views

ಪುನೀತ್ ರಾಜ್ ಕುಮಾರ್ ಅವರು ನಮ್ಮ ನಾಡಿನ ಜನತೆಯ ಪ್ರೀತಿಯನ್ನು ಮಾತ್ರವಲ್ಲ ದೇಶ ಹಾಗೂ ವಿದೇಶಗಳಲ್ಲಿದ್ದ ತಮ್ಮ ಸ್ನೇಹಿತರು ಹಾಗೂ ಅಭಿಮಾನಿಗಳಿಂದಲೂ ಅಷ್ಟೇ ಪ್ರೀತಿಯನ್ನು ಗಳಿಸಿದ್ದರು.. ಪರಭಾಷಾ ಕಲಾವಿದರೊಟ್ಟಿಗೂ ಒಳ್ಳೆಯ ಭಾಂದವ್ಯವಿಟ್ಟುಕೊಂಡಿದ್ದ ಪುನೀತ್ ಅವರು ಜೂನಿಯರ್ ಎನ್ ಟಿ ಆರ್, ಅಲ್ಲು ಅರ್ಜುನ್, ವಿಶಾಲ್ ಹಾಗೂ ಇನ್ನು ಅನೇಕ ಕಲಾವಿದರೊಟ್ಟಿಗೆ ಯಾವುದೇ ಅಹಂ ಇಲ್ಲದೇ ಬಹಳ ಸರಳವಾಗಿ ಸಹೋದರನಂತೆಯೇ ಇದ್ದರು..

ಅಪ್ಪು ಅಗಲಿಕೆ ನಮ್ಮಗಳಿಗೆ ಎಷ್ಟು ನೋವು ತಂದಿತೋ ಅದೇ ರೀತಿ ಪುನೀತ್ ಅವರು ಅಕಾಲಿಕವಾಗಿ ಅಗಲಿದ್ದು ಅವರುಗಳಿಗೂ ಶಾಕ್ ನೀಡಿತ್ತು.. ಅಪ್ಪು ಇಲ್ಲವಾದ ನಂತರ ಅವರಿದ್ದ ಜಾಗಗಳಲ್ಲಿಯೇ ಅಪ್ಪುಗಾಗಿ ಶ್ರದ್ಧಾಂಜಲಿ ಕಾರ್ಯಕ್ರಮ ಮಾಡಿ ಅಪ್ಪು ಬಗ್ಗೆ ಅವರ ಸರಳತೆಯ ಬಗ್ಗೆ ಮಾತನಾಡಿ ಅನೇಕ ಸ್ಟಾರ್ ಕಲಾವಿದರು ಕಂಬನಿ ಮಿಡಿದಿದ್ದರು.. ಜೀವನದಲ್ಲಿ ನಾವಂದುಕೊಂಡಂತೆ ಏನೂ ಇಲ್ಲ.. ಇದ್ದಷ್ಟು ದಿನ ಎಲ್ಲರೊಟ್ಟಿಗೆ ಸಂತೋಷವಾಗಿರಬೇಕೆಂದು ತೆಲುಗು ನಟರಾದ ಅಲ್ಲು ಅರ್ಜುನ್ ವಿಜಯ್ ದೇವರಕೊಂಡ ಹೇಳಿದರು..

ಇತ್ತ ತಮಿಳಿನ ವಿಶಾಲ್ ಅವರು ಸಹ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿ ನಾನು ಪುನೀತ್ ಅವರ ಸಹೋದರನಾಗಿ ಅವರು ಮಾಡುತ್ತಿದ್ದ ಸಮಾಜ ಸೇವೆಗಳಲ್ಲಿ ಒಂದಾದ ಸಾವಿರದ ಎಂಟನೂರು ವಿದ್ಯಾರ್ಥಿಗಳ ಹೊಣೆಯನ್ನು ಹೊತ್ತುಕೊಳ್ಳುವೆ ಎಂದಿದ್ದರು.. ನಾನು ಇರುವವರೆಗೂ ಆ ಮಕ್ಕಳ ಜವಾಬ್ದಾರಿ ನನ್ನದು ಎಂದಿದ್ದರು.. ವಿಶಾಲ್ ಅವರ ಮಾತಿಗೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.. ಎಲ್ಲರೂ ಸಹ ವಿಶಾಲ್ ಅವರ ನಡೆಯನ್ನು ಮೆಚ್ಚಿಕೊಂಡರು.. ವಿಶಾಲ್ ಅವರು ಮೊನ್ನೆ ಪುನೀತ್ ಅವರಿಗೆ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿಯೂ ಇದೇ ಮಾತನ್ನು ಹೇಳಿದ್ದರು.. ಆದರೆ ಈಗ ಮಾಡಿರುವ ಕೆಲಸ ನೋಡಿ..

ಹೌದು ಮೂರು ದಿನದ ಹಿಂದಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪುನೀತ್ ಅವರಿಗೆ ಗೀತನಮನ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಅದರಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಸಚಿವರುಗಖು ಚಿತ್ರರಂಗದ ಗಣ್ಯರು ದೊಡ್ಮನೆ ಕುಟುಂಬ ಹಾಗೂ ಚಿತ್ರರಂಗಕ್ಕೆ ಸಂಬಂಧಪಟ್ಟವರು ಭಾಗವಹಿಸಿದ್ದರು.. ಅದೇ ಕಾರ್ಯಕ್ರಮಕ್ಕೆ ವಿಶಾಲ್ ಅವರು ಸಹ ಆಗಮಿಸಿದ್ದರು.. ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಶಾಲ್ ಅವರು ಆಗಲೂ ಸಹ ವಿದ್ಯಾರ್ಥಿಗಳ ಜವಾಬ್ದಾರಿ ವಿಚಾರವನ್ನು ಪ್ರಸ್ತಾಪಿಸಿದರು.. ” ನಾನು ಪ್ರಚಾರಕ್ಕೋಸ್ಕರವೋ ಅಥವಾ ಮತ್ತೆ ಯಾವುದೇ ಸ್ವಾರ್ಥಕ್ಕೋ ಈ ಕೆಲಸ ಮಾಡುತ್ತಿಲ್ಲ ಶಿವಣ್ಣ.. ನಾನು ಮನಸ್ಪೂರ್ತಿಯಾಗಿ ಪುನೀತ್ ಅವರ ಒಬ್ಬ ಸಹೋದರನಾಗಿ ಅವರು ಮಾಡುತ್ತಿದ್ದ ಕೆಲಸದಲ್ಲಿ ಒಂದು ಭಾಗವನ್ನು ಮುಂದುವರೆಸಿಕೊಂಡು ಹೋಗುವ ನಿರ್ಧಾರ ಮಾಡಿದ್ದೇನೆ.. ಕೆಳಗಿನ ವೀಡಿಯೋ ನೋಡಿ..

ನಾನೇನು ದೊಡ್ಡ ಶ್ರೀಮಂತ ಅಥವಾ ನನ್ನ ಬಳಿ ಸಾಕಷ್ಟು ಹಣ ಇದೆ ಅಂತಲ್ಲಾ.. ನಿಜ ಹೇಳಬೇಕೆಂದರೆ ನನ್ನ ಬಳಿ ಈಗಲೂ ಒಂದು ಸ್ವಂತ ಮನೆಯಿಲ್ಲ.. ಅಪ್ಪ ಅಮ್ಮ ಕಟ್ಟಿಸಿರುವ ಮನೆಯಲ್ಲಿಯೇ ನಾನು ಇರೋದು.. ಆದರೆ ಮನೆ ಕಟ್ಟಲೆಂದು ಹಣ ಕೂಡಿಟ್ಟಿದ್ದೇನೆ.. ಅದೇ ಹಣದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಪಡೆಯುತ್ತೇನೆ.. ಮನೆಯನ್ನು ಮುಂದೆ ಯಾವಾಗಲಾದರೂ ಕಟ್ಟಬಹುದು.. ಆದರೆ ಪುನೀತ್ ಅವರು ಅಗಲಿದ ನಂತರ ಅವರಿದ್ದಾಗ ಮಾಡುತ್ತಿದ್ದ ಕೆಲಸಗಳು ಬೆಳಕಿಗೆ ಬಂದಾಗ ಸಾಕಷ್ಟು ಬೇಸರವಾಯಿತು.. ನಮ್ಮಿಂದ ಸಮಾಜಕ್ಕೆ ಏನಾದರು ಮಾಡಬೇಕು.. ಅವರ ಕನಸುಗಳು ಅವರ ಯಾವ ಕೆಲಸಗಳು ಸಹ ಅರ್ಧಕ್ಕೆ ನಿಲ್ಲಬಾರದು.. ನಮ್ಮ ನಮ್ಮ ಮನಸ್ಪೂರ್ತಿಯಾಗಿ ಆ ಕೆಲಸಗಳು ಮುಂದುವರೆಯಬೇಕು ಅದೇ ಕಾರಣಕ್ಕೆ ನನಗೆ ಅನುಮತಿ ಕೊಡಿ ನಾನು ಆ ಮಕ್ಕಳ ಜವಾಬ್ದಾರಿಯನ್ನು ಪಡೆದುಕೊಳ್ಳುತ್ತೇನೆ ಎಂದಿದ್ದರು..

ಕಾರ್ಯಕ್ರಮಗಳಲ್ಲಿ ಈ ರೀತಿಯ ಮಾತುಗಳು ಸಾಮಾನ್ಯ.. ಆದರೆ ಅದನ್ನು ಕಾರ್ಯರೂಪಕ್ಕೆ ತರುವವರು ಮಾತ್ರ ವಿರಳ.. ಆದರೆ ಈಗ ವಿಶಾಲ್ ಮಾಡಿರುವ ಕೆಲಸವೇ ಬೇರೆ.. ಹೌದು ಕೇವಲ ಮಾತಿಗೆ ಮಾತ್ರ ಸೀಮಿತವಾಗದ ವಿಶಾಲ್ ತಮ್ಮ ಈ ಕೆಲಸವನ್ನು ಅದಾಗಲೇ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.. ಹೌದು ಕಾರ್ಯಕ್ರಮ ಮುಗಿದ ಬಳಿಕ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿಯೇ ಉಳಿದ ವಿಶಾಲ್ ಅವರು ಮತ್ತೆ ಶಿವಣ್ಣನ ಮನೆಗೆ ಹಾಗೂ ಪುನೀತ್ ರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿ ಶಿವಣ್ಣ ಹಾಗೂ ಅಶ್ವಿನಿ ಪುನೀತ್ ಅವರ ಬಳಿ ಶಕ್ತಿಧಾಮದ ಮಕ್ಕಳಿಗೆ ನೆರವಾಗಲು ಅನುಮತಿಯನ್ನು ಕೇಳಿದ್ದಾರೆ..

ಹೌದು ಇದು ನಿಜಕ್ಕೂ ವಿಶಾಲ್ ಅವರ ದೊಡ್ಡಗುಣ.. ಮಕ್ಕಳಿಗೆ ಸಹಾಯ ಮಾಡಲು ಸಹ ಅನುಮತಿ ಪಡೆದು ತಮ್ಮ ಹೆಸರಿನಷ್ಟೇ ಅವರ ಮನಸ್ಸು ಸಹ ವಿಶಾಲವೆಂದು ತೋರಿದ್ದಾರೆ.. ಇತ್ತ ಅಶ್ವಿನಿ ಅವರು ಹಾಗೂ ಶಿವಣ್ಣ ಸಹ ವಿಶಾಲ್ ಅವರ ಜೊತೆ ಮಾತನಾಡಿದ್ದು.. ಕೆಲ ದಿನಗಳ ಸಮಯಾವಕಾಶ ಕೇಳಿದ್ದು ನಂತರ ಎಲ್ಲವನ್ನು ಪರಿಶೀಲಿಸಿ ಎಲ್ಲಿ ಅಗತ್ಯವಿದೆ ಎಂಬುದನ್ನು ತಿಳಿಸುವುದಾಗಿ ಹೇಳಿದ್ದಾರೆ.. ಒಟ್ಟಿನಲ್ಲಿ ಮಾತಿಗೆ ಮಾತ್ರ ಸೀಮಿತವಾಗದ ವಿಶಾಲ್ ಇದೀಗ ಆಡಿದ ಮಾತನ್ನು ನೆರವೇರಿಸಲು ಮುಂದಾಗಿರುವುದು ಆ ಹದಿನೆಂಟು ನೂರು ವಿದ್ಯಾರ್ಥಿಗಳ ಜೀವನದಲ್ಲಿ ಅವರ ಭವಿಷ್ಯ ಮತ್ತಷ್ಟು ಪ್ರಕಾಶಮಾನವಾಗಬಹುದಾಗಿದೆ..