ಸತ್ಯವಾಗ್ಲೂ ನನಗೆ ಆ ವಿಚಾರ ಗೊತ್ತಿಲ್ಲ ಎಂದ ಶಿವಣ್ಣ..

0 views

ಪ್ರಪಂಚಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆದರೂ ಸಹ ಕನ್ನಡ ನಾಡಿಗೆ ಕನ್ನಡಿಗರಿಗೆ ಅವರೆಂದೂ ಪ್ರೀತಿಯ ಅಪ್ಪುವೇ ಆಗಿದ್ದರು.. ಸಣ್ಣ ಮಕ್ಕಳಿಗೂ ಅವರು ಅಪ್ಪು ಯುವಜನತೆಗೂ ಅಪ್ಪು.. ವಯಸ್ಸಾದ ವೃದ್ಧರಿಗೂ ಅದೇ ಅಪ್ಪು.. ನನ್ನ ತಮ್ಮ ರಾಯಲ್ ಆಗಿ ಹುಟ್ಟಿದ್ದಾನೆ.. ರಾಯಲ್ ಆಗಿಯೇ ಇರ್ತಾನೆ ಅಂತ ಕೆಲವೇ ದಿನಗಳ ಹಿಂದೆ ಶಿವಣ್ಣ ಮನತುಂಬಿ ತಮ್ಮನ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದರು.. ಆದರೆ ದೊಡ್ಡಮನೆಯಲ್ಲಿ ಅದರಲ್ಲೂ ದೊಡ್ಡ ಸ್ಟಾರ್ ನಟನ ಮಗನಾಗಿ ಹುಟ್ಟಿದರೂ ಕೂಡ ಅಪ್ಪು ಎಂದೂ ಸಹ ಸಣ್ಣ ಅಹಂಕಾರವನ್ನೂ ತೋರಿದವರಲ್ಲ.. ಅದರಲ್ಲೂ ದೊಡ್ಡವರ ಕಂಡರೆ ಅವರಿಗಿದ್ದ ಗೌರವ.. ಸಣ್ಣ ಮಕ್ಕಳ ಕಂಡರೆ ತೋರುತ್ತಿದ್ದ ಪ್ರೀತಿ.. ಅವರು ಕೋಟಿ ಕೋಟಿ ಒಡೆಯನಾಗಿದ್ದರು.. ಆದರೆ ಅವರು ನಿಜಕ್ಕೂ ತಮ್ಮ ಜೀವನದಲ್ಲಿ ಗಳಿಸಿದ್ದು ಏನು ಎಂದು ಅವರ ಅಂತಿಮ ದರ್ಶನ ಮಾಡಲು ಬಂದ ಲಕ್ಷಾಂತರ ಜನರನ್ನು ನೋಡಿದಾಗ ನಿಜವಾಗಿ ಅವರು ಜೀವನದಲ್ಲಿ ಗಳಿಸಿದ್ದೇನು ಎಂಬುದು ಪ್ರತಿಯೊಬ್ಬರಿಗೂ ಅರ್ಥವಾಯಿತು..

ಇಷ್ಟೆಲ್ಲಾ ಜನರ ಪ್ರೀತಿ ಸಂಪಾದಿಸಿದ್ದ ಪ್ರೀತಿಗ ಅಪ್ಪು ಕೇವಲ ನಲವತ್ತಾರು ವರ್ಷಕ್ಕೆ ಇಲ್ಲವಾಗಿ ಹೋಗ್ತಾರೆ ಎಂದರೆ ನಿಜಕೂ ಈ ಭೂಮಿ‌ ಮೇಲೆ ಬದುಕಲು ಎಂತವರು ಅರ್ಹರು ಎಂಬ ಪ್ರಶ್ನೆ ಮೂಡುತ್ತದೆ.. ಹೌದು ಕಳೆದ ವಾರವಷ್ಟೇ ಭಜರಂಗಿ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತೋಷವಾಗಿ ಯಶ್ ಹಾಗೂ ಶಿವಣ್ಣನ ಜೊತೆ ಡ್ಯಾನ್ಸ್ ಮಾಡಿದವರು ಯಶ್ ರನ್ನು ಪ್ರೀತಿಯಿಂದ ಅಪ್ಪಿಕೊಂಡವರು.. ನಗುನಗುತ್ತಾ ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಕೊನೆಯ ಮಾತನಾಡಿ ಹೋದವರು ಕೇವಲ ಎರಡೇ ದಿನಗಳು ಆದ ಬಳಿಕ ಇಲ್ಲವಾದರು ಎಂದರೆ ಯಾರಿಗೆ ತಾನೆ ಅರಗಿಸಿಕೊಳ್ಳಲು ಸಾಧ್ಯ.. ಹೊರ ರಾಜ್ಯದಲ್ಲಿನ ತೆಲುಗು ನಟರುಗಳು ಅಲ್ಲು ಅರ್ಜುನ್ ವಿಜಯ್ ದೇವರಕೊಂಡ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಒಂದು ಕ್ಷಣದಲ್ಲಿ ಪುನೀತ್ ಇಲ್ಲ ಎಂದಾಗ ಆ ಶಾಕ್ ನಿಂದ ನಿಜವಾಗ್ಲೂ ಈಗಲೂ ಹೊರ ಬರಲು ಸಾಧ್ಯವಾಗುತ್ತಾ ಇಲ್ಲ ಎಂದು ನೋವು ಹೊರ ಹಾಕಿದರು.. ನಿಜಕ್ಕೂ ಅಪ್ಪು ಇಲ್ಲ ಎನ್ನುವ ಮಾತು ಕೆಲವರಿಗೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೇ ಶಾಕ್ ಆಗಿ ಹೋಗಿದೆ..

ಹೋಗುವ ಹಿಂದಿನ ದಿನ ರಾತ್ರಿ ಗುರುಕಿರಣ್ ಅವರ ಮನೆಯ ಕಾರ್ಯಕ್ರಮದಲ್ಲಿ ನಗುನಗುತ್ತಾ ಅನಿರುದ್ಧ್ ಅವರ ಜೊತೆ ಸೈಕ್ಲಿಂಗ್ ಬಗ್ಗೆ ಮಾತನಾಡಿದ್ದು ಹನ್ನೊಂದು ನಲವತ್ತರ ಸಮಯದಲ್ಲಿ ಅವರು ಅಲ್ಲಿಂದ ಹೊರಟಿದ್ದು ಅದಾದ ಹನ್ನೆರೆಡು ಗಂಟೆಗಳಲ್ಲಿ ಅಪ್ಪು ಇಲ್ಲ ಎಂದರೆ ನಿಜಕ್ಕೂ ಆ ಭಗವಂತನದ್ದು ಕಲ್ಲು ಮನಸೆನ್ನಿಸಿಬಿಡುತ್ತದೆ.. ಅಪ್ಪುವಿನ ವಿಚಾರ ಕೇಳಿ ಇದುವರೆಗೂ ರಾಜ್ಯಾದ್ಯಂತ ಎಂಟು ಜನ ಅಭಿಮಾನಿಗಳು ಜೀವ ಕಳೆದುಕೊಂಡು ಅಪ್ಪುವಿನ ಜೊತೆಯೇ ಹೊರಟಿದ್ದು ನಿಜಕ್ಕೂ ಮತ್ತಷ್ಟು ಬೇಸರವನ್ನುಂಟು ಮಾಡುತ್ತಿದೆ.. ಇನ್ನು ಅಪ್ಪು ಹೋದ ಬಳಿಕ ತಮ್ಮ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದು ನಾಲ್ವರು ಜನರ ಬಾಳಿಗೆ ಬೆಳಕಾಗಿದ್ದಾರೆ.. ಹೌದು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪುನೀತ್ ಅವರ ಕಣ್ಣುಗಳನ್ನು ಮುಂದಿನ ಪದರ ಹಾಗೂ ರೆಟಿನಾಗಳನ್ನು ಬೇರ್ಪಡಿಸಿ ಒಂದಲ್ಲಾ ಎರಡಲ್ಲಾ ಒಟ್ಟು ನಾಲ್ಕು ಜನರಿಗೆ ಕಣ್ಣುಗಳ ಜೋಡಣೆ ಮಾಡಿದ್ದಾರೆ..

ನಾಲ್ಕೂ ಸಹ ಯಶಸ್ವಿಯಾಗಿದ್ದು ನಾಲ್ವರ ಮೂಲಕ ಪುನೀತ್ ಅವರು ಮತ್ತೊಮ್ಮೆ ಪ್ರಪಂಚವನ್ನು‌ ನೋಡುವಂತಾಗಿದೆ.. ಆದರೆ ಅಪ್ಪು ಹೋದ ನಂತರ ಅವರ ಬಗ್ಗೆ ಕುಟುಂಬಕ್ಕೇ ತಿಳಿಯದ ಸಾಕಷ್ಟು ವಿಚಾರಗಳು ಹೊರ ಬರುತ್ತಿದೆ.. ಹೌದು ಬಲಗೈಯಲ್ಲಿ ಕೊಟ್ಟಿದ್ದು ಯಡಗೈ ಗೆ ಗೊತ್ತಾಗಬಾರದು ಎನ್ನುವ ಮಾತಿದೆ.. ಆ ಮಾತಿನಂತೆಯೇ ಅಪ್ಪು ಅಕ್ಷರಶಃ ಜೀವಿಸಿದ್ದರು ಎಂಬುದು ಈಗ ಬೆಳಕಿಗೆ ಬರುತ್ತಿದೆ. ಹೌದು ಹತ್ತೊಂಭತ್ತು ಗೋಶಾಲೆ.. ಹದಿನಾರು ವೃದ್ಧಾಶ್ರಮಗಳು ನೂರಾರು ಶಾಲೆಗಳು.. ಸಾವರಿದ ಎಂಟನೂರಕ್ಕೂ ಹೆಚ್ಚು ಮಕ್ಕಳ ವಿಧ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತಿದ್ದ ಪುನೀತ್ ಅವರು ಈ ವಿಚಾರವನ್ನು ಎಲ್ಲಿಯೂ ಸಹ ಹೇಳಿಕೊಂಡಿರಲಿಲ್ಲ.. ಅಷ್ಟೇ ಅಲ್ಲದೇ ಕೋಟ್ಯಾಧಿಪತಿ ಶೋ ನಲ್ಲಿ ಸೋತ ಅದೆಷ್ಟೋ ಜನರಿಗೆ ತಾವು ದುಡ್ಡುಕೊಟ್ಟು ಕಳುಹಿಸುತ್ತಿದ್ದ ವಿಚಾರವೂ ಸಹ ಕಲರ್ಸ್ ಕನ್ನಡದ ಪರಮೇಶ್ವರ್ ಅವರು ನಿನ್ನೆ ಹಂಚಿಕೊಂಡು ಕಂಬನಿ ಮಿಡಿದಿದ್ದರು..

ಇಷ್ಟೇ ಅಲ್ಲ ಕೊರೊನಾ ಸಮಯದಲ್ಲಿ ಪುನೀತ್ ಅವರು‌ ಮಾಡಿರುವ ಸಹಾಯ ಲೆಕ್ಕವಿಲ್ಲದಷ್ಟು.. ಹತ್ತು ರೂಪಾಯಿ ಕೊಟ್ಟು ನೂರು ರೂಪಾಯಿಯ ಫೋಟೋ ಹಾಕಿಸಿಕೊಳ್ಳುವ ಜನರ ನಡುವೆ ಎಷ್ಟೇ ದಾನ ಧರ್ಮ ಮಾಡಿದರೂ ಸಹ ಪುನೀತ್ ಅವರು ಹೊರಗೆಲ್ಲೂ ಗೊತ್ತಾಗದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದದ್ದು ನಿಜಕ್ಕೂ ಅವರ ದೊಡ್ಡ ಗುಣವೇ ಸರಿ.. ಆದರೆ ಇದೆಲ್ಲದರ ನಡುವೆ ಶಾಕ್ ಆಗುವ ವಿಚಾರ ಎಂದರೆ ಅದು ಮತ್ತೊಂದಿದೆ.. ಹೌದು ಪುನೀತ್ ಅವರು ಇಷ್ಟೆಲ್ಲಾ ವೃದ್ಧಾಶ್ರಮಗಳಿಗೆ ಗೋಶಾಲೆಗಳಿಗೆ ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ನೆರವಾಗಿದ್ದರು ಎಂಬ ವಿಚಾರ ಸ್ವತಃ ಪುನೀತ್ ಅವರ ಅಣ್ಣ ಶಿವಣ್ಣನಿಗೆ ತಿಳಿದಿಲ್ಲ.. ಹೌದು ಈ ಬಗ್ಗೆ ಇಂದು ಮಾದ್ಯಮದವರ ಜೊತೆ ಮಾತನಾಡಿದ ಶಿವಣ್ಣ ಸತ್ಯವಾಗ್ಲೂ ಅವನು ಇಷ್ಟೆಲ್ಲಾ ಸಹಾಯ ಮಾಡಿತ್ತಿದ್ದಾನೆ ಎಂಬ ವಿಚಾರ ಗೊತ್ತಿರಲಿಲ್ಲ..

ಅಪ್ಪಾಜಿ ಯಾವಾಗ್ಲೂ ಹೇಳ್ತಾ ಇದ್ರು ಬಲಗೈ ಅಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂದು ಅಪ್ಪು ಅದೇ ರೀತಿ‌ ನಡೆದುಕೊಂಡಿದ್ದಾನೆ.. ಅವನ ಬಗ್ಗೆ ಹೆಮ್ಮೆ ಇದೆ.. ಪ್ರತಿಯೊಬ್ಬರು ಸಹ ಮತ್ತೊಬ್ಬರಿಗೆ ನೆರವಾಗಿಯೇ ಬದುಕಬೇಕು ಅದೇ ನಿಜವಾದ ಜೀವನ ಎಂದಿದ್ದಾರೆ.. ಆದರೆ ಈಗ ಅಪ್ಪುವಿನ ಅಗಲಿಕೆಯ ನಂತರ ಸ್ಟಾರ್ ನಟ ಒಬ್ಬರು ಮಾಡಿರುವ ಕೆಲಸ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳುವಂತಿದೆ.. ಹೌದು ಅಪ್ಪುವಿನ ಆತ್ಮಕ್ಕೆ ಶಾಂತಿ ಸಿಗಲೆಂದು ಸ್ಟಾರ್ ನಟರೊಬ್ಬರು ಮಹತ್ತರದ ನಿರ್ಧಾರವನ್ನು ಕೈಗೊಂಡಿದ್ದಾರೆ.. ಹೌದು ಅಪ್ಪು ಹೋದ ನಂತರ ಅವರು ಸಹಾಯ ಮಾಡುತ್ತಿದ್ದ ಗೋಶಾಲೆಗಳು ಶಾಲೆಗಳು ವೃದ್ಧಾಶ್ರಮಗಳು ವಿದ್ಯಾರ್ಥಿಗಳ ಪರಿಸ್ಥಿತಿ ಏನು.. ಎಂದು ಪ್ರಶ್ನೆ ಮೂಡುತ್ತಿರುವಾಗಲೇ ಸ್ಟಾರ್ ನಟರೊಬ್ಬರು ದೊಡ್ಡತನ ತೋರಿದ್ದಾರೆ..

ಹೌದು ಅವರು ಮತ್ಯಾರೂ ಅಲ್ಲ ತಮಿಳಿನ ಖ್ಯಾತ ನಟ ವಿಶಾಲ್.. ಹೌದು ನಿನ್ನೆ ತಮಿಳು ನಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ವಿಶಾಲ್ ನಾನು ಪುನೀತ್ ರ ಸ್ನೇಹಿತನಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಅವರು ನೋಡಿಕೊಳ್ಳುತ್ತಿದ್ದ ಸಾವಿರದ ಎಂಟನೂರು ವಿದ್ಯಾರ್ಥಿಗಳನ್ನು ನಾನು ಇರುವವರೆಗೂ ಇನ್ನು ಮುಂದೆ ನಾನು ನೋಡಿಕೊಳ್ಳುತ್ತೇನೆ ಎಂದು ಮಾತು ನೀಡಿದ್ದಾರೆ.. ಇದು ನಾನು ನನ್ನ ಸ್ನೇಹಿತನಿಗೋಸ್ಕರ ಮಾಡುತ್ತಿರುವ ಕೆಲಸ ಎಂದಿದ್ದಾರೆ.. ವಿಶಾಲ್ ಅವರ ಈ ನಡೆ ಜನರಿಗೆ ಮಾತ್ರವಲ್ಲ ಬಹುಶಃ ಮೇಲಿರುವ ನಮ್ಮ ಅಪ್ಪುಗೂ ನೆಮ್ಮದಿ ತಂದಿರಬಹುದಾಗಿದೆ.. ವಿಶಾಲ್ ಅವರ ಈ ನಡೆಗೆ ಬೆಂಗಳೂರಿನಲ್ಲಿಯೇ ಇರುವ ವಿಶಾಲ್ ಅವರ ತಂದೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..