ಇದು ಗುಂಡಿಗೆ ಅಂದರೆ.. ತನ್ನ ಹುಡುಗಿಯನ್ನು ನೋಡಲು ಪ್ರತಿದಿನ ಸಂಪೂರ್ಣ ಗ್ರಾಮದ ಕರೆಂಟ್ ತೆಗೆಯುತ್ತಿದ್ದ ಲೈನ್ ಮ್ಯಾನ್.. ಕೊನೆಗೆ ಸಿಕ್ಕಿಬಿದ್ದಾಗ ಗ್ರಾಮಸ್ಥರು ಮಾಡಿದ್ದೇ ಬೇರೆ..

0 views

ಪ್ರೀತಿಸುವ ಹುಡುಗಿಯನ್ನು ನೋಡಲು ಇಲ್ಲದ ಸಾಹಸಗಳನ್ನೆಲ್ಲಾ ಮಾಡೋದನ್ನು ನಾವುಗಳು ಸಿನಿಮಾದಲ್ಲಿ‌ ನೋಡಿರುತ್ತೇವೆ.. ರಾತ್ರಿ ಸಮಯದಲ್ಲಿ ನಾಯಕಿಯ ಮನೆಯ ಕಾಂಪೌಡ್ ನೆಗೆಯೋದು.. ಮಹಡಿ ಹತ್ತಿ ಹೋಗಿ ಹುಡುಗಿಯನ್ನು ಭೇಟಿ‌ ಮಾಡೋದು.. ಹೀಗೆ ಸಾಕಷ್ಟು ದೃಶ್ಯಗಳನ್ನು ಸಿನಿಮಾದಲ್ಲಿ ಸರ್ವೇ ಸಾಮಾನ್ಯವಾಗಿ ಕಂಡಿರುತ್ತೇವೆ.. ಆದರೆ ನಿಜ ಜೀವನದಲ್ಲಿ ಮಾತ್ರ ಇಂತಹ ಘಟನೆಗಳು ನಡೆಯಒದು ಬಹುಶಃ ಕನಸಿನಲ್ಲಿ‌ ಮಾತ್ರ ಎಂದುಕೊಂಡಿರುತ್ತೇವೆ.. ಆದರೆ ಇಲ್ಲೊಬ್ಬ ಭೂಪ ತನ್ನ ಹುಡುಗಿಯನ್ನು ಭೇಟಿ‌ ಮಾಡಲು ಸಂಪೂರ್ಣ ಗ್ರಾಮದ ಕರೆಂಟ್ ಅನ್ನು ತೆಗೆಯುತ್ತುದ್ದ ಘಟನೆ ಬೆಳಕಿಗೆ ಬಂದಿದೆ.. ಬೆಳಕಿಗೆ ಬಂದದ್ದು ಮಾತ್ರವಲ್ಲ ಕೊನೆಗೆ ಗ್ರಾಮಸ್ಥರ ಕೈಗೆ ಸಿಕ್ಕು ಬಿದ್ದಿದ್ದೂ ಆಯ್ತು.. ಸತ್ಯ ತಿಳಿದ ಬಳಿಕ ಆ ಹಡುಗನಿಗೆ ಗ್ರಾಮಸ್ಥರು ಮಾಡಿದ ಕೆಲಸ ಏನು ಗೊತ್ತಾ.

ಹೌದು ಇಂತಹದೊಂದು ಘಟನೆ ಬಿಹಾರದ ಪುರ್ನಿಯಾದಲ್ಲಿ ನಡೆದಿದೆ.. ಪುರ್ನಿಯಾ ಜಿಲ್ಲೆಯ ಗಣೇಶ್ ಪುರ ಗ್ರಾಮದಲ್ಲಿಯೇ ಲೈನ್ ಮ್ಯಾನ್ ಒಬ್ಬ ಆಗಾಗ ತನ್ನ ಹುಡುಗಿಯನ್ನು ಭೇಟಿ‌ ಮಾಡುವ ಸಲುವಾಗಿ ಗ್ರಾಮದ ಕರೆಂಟ್ ಅನ್ನು ತೆಗೆಯುತ್ತಿದ್ದ.. ಗಣೇಶ್ ಪುರದ ಗ್ರಾಮಸ್ಥರು ಮಾತ್ರ ಅಕ್ಕ ಪಕ್ಕದ ಯಾವ ಗ್ರಾಮದಲ್ಲಿಯೂ ಕರೆಂಟ್ ಸಮಸ್ಯೆ ಇಲ್ಲ.. ಆದರೆ ನಮ್ಮ ಗ್ರಾಮದಲ್ಲಿ ಮಾತ್ರ ಯಾಕೀತರ ಎಂದು ಯೋಚನೆ ಮಾಡುತ್ತಿದ್ದರು.. ಹೇಗಾದರೂ ಈ ಸಮಸ್ಯೆಗೆ ಕಾರಣವೇನು ಎಂಬುದನ್ನು ಕಂಡುಹಿಡಿಯಬೇಕು ಎಂದು ಆಲೋಚಿಸಿದರು..

ಕೊನೆಗೆ ಗ್ರಾಮಸ್ಥರಿಗೆ ನಿಜವಾದ ವಿಚಾರ ಹೇಗೋ ತಿಳಿದಿದೆ.. ಲೈನ್ ಮ್ಯಾನ್ ಒಬ್ಬ ಕತ್ತಲಲ್ಲಿ ತನ್ನ ಪ್ರೇಯಸಿಯೊಬ್ಬಳನ್ನು ಭೇಟಿ ಆಗುವ ಸಲುವಾಗಿ ಈ ರೀತಿ ಆಗಾಗ ಕರೆಂಟ್ ಅನ್ನು ತೆಗೆಯುತ್ತಿದ್ದ ಎನ್ನುವ ವಿಚಾರ ತಿಳಿದಿದೆ.. ಹೇಗಾದರೂ ಮಾಡಿ ಅವನನ್ನು ನೇರವಾಗಿ ಹಿಡಿದು ಹಾಕಬೇಕೆಂದು ತೀರ್ಮಾನ ಮಾಡಿದರು.. ಎಲ್ಲರೂ ಸೇರಿ ಪ್ಲಾನ್ ಮಾಡಿಕೊಂಡರು..

ತಮ್ಮ ಪ್ಲಾನ್ ನಂತೆಯೇ ಆ ಹುಡುಗ ಕರೆಂಟ್ ತೆಗೆದು ಹುಡುಗಿಯನ್ನು ಭೇಟಿ ಮಾಡಲು ಬಂದ.. ಆದರೆ ಅದಾಗಲೇ ಹೊಂಚು ಹಾಕಿ ಕೂತಿದ್ದ ಗ್ರಾಮಸ್ಥರು ಅದೇ ಕತ್ತಲೆಯಲ್ಲಿ ಅವನನ್ನು ಹಿಡಿದು ಚೆನ್ನಾಗಿ ಕೊಟ್ಟಿದ್ದಾರೆ.. ಅಷ್ಟೇ ಅಲ್ಲದೇ ಆತನನ್ನು ಸಂಪೂರ್ಣ ಗ್ರಾಮದಲ್ಲಿ ಮೆರವಣಿಗೆ ಮಾಡಿಸಿದ್ದಾರೆ.. ನಂತರ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಪಂಚಾಯಿತಿ‌ ನಡೆಸಲಾಗಿದ್ದು ಅದೇ ಹುಡುಗಿಯನ್ನು ಲೈನ್‌ಮ್ಯಾನ್ ಮದುವೆಯಾಗುವಂತೆ ಪಂಚಾಯಿತಿಯಲ್ಲಿ ನಿರ್ಧಾರ ಮಾಡಲಾಗಿದೆ.. ಅದಕ್ಕೊಪ್ಪಿದ ಲೈನ್ ಮ್ಯಾನ್ ಪ್ರೇಯಸಿಯನ್ನು ಗ್ರಾಮಸ್ಥರ ಸಮ್ಮುಖದಲ್ಲಿಯೇ ಮದುವೆಯಾಗಿದ್ದಾನೆ..

ಪ್ರೇಯಸಿಯನ್ನು‌ ನೋಡಲು ಹೀರೋ ರೀತಿ ಕರೆಂಟ್ ತೆಗೆದು ಬರುತ್ತಿದ್ದ ಲೈನ್ ಮ್ಯಾನ್ ಕೊನೆಗೆ ಎಲ್ಲರ ಬಳಿ ಪೆಟ್ಟು ತಿಂದು ಒಂದು ರೂಪಾಯಿಯೂ‌ ಖರ್ಚಿಲ್ಲದೇ ಜೊತೆಗೆ ತಮ್ಮ ಪ್ರೀತಿಯನ್ನು ಮಮೆಯವರ ಬಳಿ‌ಒಪ್ಪಿಸುವ ಕಷ್ಟವಿಲ್ಲದೇ ಗ್ರಾಮಸ್ಥರೇ ಮುಂದೆ ನಿಂತು ಮದುವೆ ಮಾಡಿಸುವಂತಾಯಿತು.. ಇನ್ನು ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದಂತೆ ಆ ಲೈನ್‌ಮ್ಯಾನ್ ನ ಧೈರ್ಯ‌ ಕಂಡು ನಿಬ್ಬೆರಗಾಗಿದ್ದಾರೆ.. ಪ್ರೇಯಸಿಯ ನೋಡಲು ಕರೆಂಟ್ ತೆಗೆಯುತ್ತಿದ್ದ ಭೂಪನ ಪ್ರೀತಿಗೆ ಕೆಲವರು ಫಿದಾ ಆದರೆ ಮತ್ತೆ ಕೆಲವರು ಟ್ರೋಲ್ ಮಾಡಿದ್ದಾರೆ..

ಇನ್ನು ಅತ್ತ ಪದೇ ಪದೇ ತಮ್ಮ ಗ್ರಾಮಕ್ಕೆ ಕರೆಂಟ್ ತೆಗೆದು ತೊ‌ಂದರೆ ಕೊಟ್ಟಿದ್ದರೂ ಸಹ ಆ ಲೈನ್ ಮ್ಯಾನ್ ಮೇಲೆ ಗ್ರಾಮಸ್ಥರು ಯಾವುದೇ ದೂರು ದಾಖಲಿಸಿಲ್ಲ.. ಬದಲಿಗೆ ಈಗ ಆತ ನಮ್ಮೂರ ಅಳಿಯ ಎಂದು ಸಂತೋಷವಾಗಿ ಬರಮಾಡಿಕೊಂಡಿದ್ದಾರೆ.. ಸಂಭ್ರಮ ಪಟ್ಟಿದ್ದಾರೆ.. ಇತ್ತ ಪೋಲೀಸರು ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಸುಮ್ಮನೆ ಯಾರ ಮೇಲೆಯೂ ಕ್ರಮ ಕೈಗೊಳ್ಳಲು ಆಗುವುದಿಲ್ಲ.. ಯಾರಾದರೂ ದೂರು ಕೊಟ್ಟರೆ ಆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.. ಒಟ್ಟಿನಲ್ಲಿ ಲೈನ್ ಮ್ಯಾನ್ ಹಾಗೂ ಹುಡುಗಿಯ ಲವ್ ಕಹಾನಿ ಯಾವ ಸಿನಿಮಾಗೂ ಕಡಿಮೆ ಇಲ್ಲ ಎನ್ನುವಂತಾಗಿದೆ..